ಟಾರ್ಗೆಟ್ 500, 400, 250, 100; ಇಂಗ್ಲೆಂಡ್ ವಿರುದ್ಧ 7 ವಿಕೆಟ್ ಪಡೆದರೆ ಅಶ್ವಿನ್ ಹೆಸರಿಗೆ ಹಲವು ಮೈಲಿಗಲ್ಲು
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಟಾರ್ಗೆಟ್ 500, 400, 250, 100; ಇಂಗ್ಲೆಂಡ್ ವಿರುದ್ಧ 7 ವಿಕೆಟ್ ಪಡೆದರೆ ಅಶ್ವಿನ್ ಹೆಸರಿಗೆ ಹಲವು ಮೈಲಿಗಲ್ಲು

ಟಾರ್ಗೆಟ್ 500, 400, 250, 100; ಇಂಗ್ಲೆಂಡ್ ವಿರುದ್ಧ 7 ವಿಕೆಟ್ ಪಡೆದರೆ ಅಶ್ವಿನ್ ಹೆಸರಿಗೆ ಹಲವು ಮೈಲಿಗಲ್ಲು

  • Ravichandran Ashwin : ಭಾರತ ತಂಡದ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್​ ಪಂದ್ಯದಲ್ಲಿ 7 ವಿಕೆಟ್ ಪಡೆದರೆ 500 ವಿಕೆಟ್​ಗಳ ಕ್ಲಬ್ ಸೇರುವುದರ ಜೊತೆಗೆ ಹಲವು ಮೈಲಿಗಲ್ಲನ್ನು ತಲುಪಲಿದ್ದಾರೆ.

ವಿಶಾಖಪಟ್ಟಣಂನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಸರಣಿಯ ಎರಡನೇ ಟೆಸ್ಟ್ ಪಂದ್ಯದಲ್ಲಿ ಗೆದ್ದು ತಿರುಗೇಟು ನೀಡುವ ಲೆಕ್ಕಾಚಾರದಲ್ಲಿದೆ. ಆದರೆ ಭಾರತದ ಪ್ರದರ್ಶನದ ಹೊರತಾಗಿ, ಎಲ್ಲರ ಕಣ್ಣುಗಳು ಸ್ಟಾರ್ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಮೇಲೆ ಬಿದ್ದಿವೆ.
icon

(1 / 9)

96 ಟೆಸ್ಟ್​ ಪಂದ್ಯಗಳಲ್ಲಿ 496 ವಿಕೆಟ್ ಉರುಳಿಸಿರುವ ಭಾರತದ ಹಿರಿಯ ಸ್ಪಿನ್ನರ್,​ ಈಗ ಹೊಸ ಇತಿಹಾಸ ನಿರ್ಮಿಸಲು ಸಜ್ಜಾಗಿದ್ದಾರೆ. ನಾಲ್ಕು ವಿಕೆಟ್ ಪಡೆದರೆ, ದೀರ್ಘ ಸ್ವರೂಪದ ಕ್ರಿಕೆಟ್​ನಲ್ಲಿ 500 ವಿಕೆಟ್‌ಗಳ ಕ್ಲಬ್‌ಗೆ ಪ್ರವೇಶಿಸಿದ ಭಾರತದ 2ನೇ ಬೌಲರ್ ಆಗಲಿದ್ದಾರೆ.
icon

(2 / 9)

ಹಲವು ವರ್ಷಗಳಿಂದ ಭಾರತ ಟೆಸ್ಟ್ ತಂಡದ ಆಧಾರಸ್ತಂಭ ಅಶ್ವಿನ್, ಅತ್ಯಂತ ಯಶಸ್ವಿ ಬೌಲರ್‌ಗಳಲ್ಲಿ ಒಬ್ಬರಾಗಿದ್ದಾರೆ. ಅನುಭವಿ ಆಫ್ ಸ್ಪಿನ್ನರ್ 500 ಟೆಸ್ಟ್ ವಿಕೆಟ್ ಮೈಲಿಗಲ್ಲಿನ ತುದಿಯಲ್ಲಿ ನಿಂತಿರುವ ಅಶ್ವಿನ್, ಎರಡನೇ ಟೆಸ್ಟ್​ನಲ್ಲೇ ಈ ಸಾಧನೆ ಮಾಡಲು ಸಜ್ಜಾಗಿದ್ದಾರೆ. ಈ ಪಂದ್ಯದಲ್ಲಿ 7 ವಿಕೆಟ್ ಪಡೆದರೆ ಹಲವು ಮೈಲಿಗಲ್ಲು ತಲುಪಲಿದ್ದಾರೆ.
icon

(3 / 9)

ಈ ಮೈಲಿಗಲ್ಲು ಮುಟ್ಟಿದ ಎರಡನೇ ಭಾರತೀಯ ಬೌಲರ್ ಆಗಿ ಅನಿಲ್ ಕುಂಬ್ಳೆ ಅವರ ಸಾಲಿಗೆ ಸೇರುತ್ತಾರೆ. ಅಲ್ಲದೆ, ಕ್ರಿಕೆಟ್ ಇತಿಹಾಸದಲ್ಲಿ 5ನೇ ಸ್ಪಿನ್ನರ್ ಆಗಿ ಈ ಸಾಧನೆ ಮಾಡಲಿದ್ದಾರೆ. ಇದಕ್ಕೂ ಮುನ್ನ ಮುತ್ತಯ್ಯ ಮುರಳೀಧರನ್ (ಶ್ರೀಲಂಕಾ) 800 ವಿಕೆಟ್ ಪಡೆದಿದ್ದರು.
icon

(4 / 9)

ಅಲ್ಲದೆ, ಶೇನ್ ವಾರ್ನ್ (ಆಸ್ಟ್ರೇಲಿಯಾ) 708 ವಿಕೆಟ್ ಪಡೆದಿದ್ದರು. ಅನಿಲ್ ಕುಂಬ್ಳೆ (ಭಾರತ) 619 ವಿಕೆಟ್ ಪಡೆದರು. ನಾಥನ್ ಲಿಯಾನ್ (ಆಸ್ಟ್ರೇಲಿಯಾ) 517 ವಿಕೆಟ್‌ಗಳನ್ನು ಕಲೆಹಾಕಿದ್ದಾರೆ. ಇದೀಗ ಈ ಸಾಲಿಗೆ ಸೇರಲು ಅಶ್ವಿನ್​ಗೆ ನಾಲ್ಕೇ (4 ವಿಕೆಟ್) ಹೆಜ್ಜೆ ಬಾಕಿ ಇದೆ.
icon

(5 / 9)

ಇಂಗ್ಲೆಂಡ್ ವಿರುದ್ಧ 100 ವಿಕೆಟ್​ ಪಡೆದ ಭಾರತದ ಮೊದಲ ಆಟಗಾರ ಎನಿಸಲು ಅಶ್ವಿನ್​ಗೆ 7 ವಿಕೆಟ್​ಗಳ ಅಗತ್ಯ ಇದೆ. ಟೆಸ್ಟ್​ಗಳಲ್ಲಿ ಇಂಗ್ಲೆಂಡ್ ವಿರುದ್ಧ 93 ವಿಕೆಟ್ ಉರುಳಿಸಿದ್ದಾರೆ. ಹಾಗೆಯೇ ಆಂಗ್ಲರ ವಿರುದ್ಧ ಅಧಿಕ ವಿಕೆಟ್ ಪಡೆದ ಹೆಗ್ಗಳಿಕೆಗೆ ಪಾತ್ರರಾಗಲು 3 ವಿಕೆಟ್ ಬೇಕಿದೆ. ಚಂದ್ರಶೇಖರ್ (95 ವಿಕೆಟ್) ಮೊದಲ ಸ್ಥಾನದಲ್ಲಿದ್ದಾರೆ.
icon

(6 / 9)

ತವರು ನೆಲದಲ್ಲಿ 350 ಟೆಸ್ಟ್ ವಿಕೆಟ್‌ಗಳ ಗಡಿ ತಲುಪಲು 7 ವಿಕೆಟ್ ಬೇಕಿದೆ. ಆ ಮೂಲಕ ಭಾರತದ 2ನೇ ಬೌಲರ್ ಎನಿಸಲಿದ್ದಾರೆ. ಮೊದಲ ಸ್ಥಾನದಲ್ಲಿ ಅನಿಲ್ ಕುಂಬ್ಳೆ ಭಾರತದ ನೆಲದಲ್ಲಿ 350 ವಿಕೆಟ್‌ ಪಡೆದ ಮೈಲಿಗಲ್ಲು ಮುಟ್ಟಿದ್ದರು. ಈ ದಾಖಲೆ ಮುರಿಯುವ ಅಶ್ವಿನ್​ಗೆ (343) ಸಿಕ್ಕಿದೆ.
icon

(7 / 9)

ಕೇವಲ ಏಳು ವಿಕೆಟ್‌ ಕಬಳಿಸಿದರೆ ಅಶ್ವಿನ್ ಏಷ್ಯಾದಲ್ಲಿ ಆಡಿದ ಟೆಸ್ಟ್‌ಗಳಲ್ಲಿ 400+ ವಿಕೆಟ್‌ ಮೈಲಿಗಲ್ಲನ್ನು ತಲುಪುತ್ತಾರೆ. ಭಾರತದ ನೆಲದಲ್ಲಿ 343 ವಿಕೆಟ್‌ ಜೊತೆಗೆ, ಅಶ್ವಿನ್ ಶ್ರೀಲಂಕಾದಲ್ಲಿ ಆರು ಟೆಸ್ಟ್‌ಗಳಲ್ಲಿ 38 ವಿಕೆಟ್‌ ಪಡೆದಿದ್ದಾರೆ. ಬಾಂಗ್ಲಾದೇಶದಲ್ಲಿ ಮೂರು ಪಂದ್ಯಗಳಲ್ಲಿ 12 ವಿಕೆಟ್​​ಗಳನ್ನು ಕಬಳಿಸಿದ್ದಾರೆ.
icon

(8 / 9)

ಕ್ಷಣ ಕ್ಷಣದ ಅಪ್ಡೇಟ್ಸ್​ಗಾಗಿ ಹಿಂದೂಸ್ತಾನ್ ಟೈಮ್ಸ್ ಕನ್ನಡ ಓದಿ.
icon

(9 / 9)

ಇತರ ಗ್ಯಾಲರಿಗಳು