ಸುರೇಶ್ ರೈನಾ ಸಾರ್ವಕಾಲಿಕ ದಾಖಲೆ ಮುರಿದ ವಿರಾಟ್ ಕೊಹ್ಲಿ; ಆದರೆ ಇದು ಬ್ಯಾಟಿಂಗ್‌ನಲ್ಲಿ ಅಲ್ಲ
- ದಾಖಲೆಗಳ ಸರದಾರ ವಿರಾಟ್ ಕೊಹ್ಲಿ ಮತ್ತೊಂದು ರೆಕಾರ್ಡ್ ಮಾಡಿದ್ದಾರೆ. ಈ ಬಾರಿ ಅವರ ದಾಖಲೆ ಸೃಷ್ಟಿಯಾಗಿರುವುದು ಬ್ಯಾಟಿಂಗ್‌ನಲ್ಲಿ ಅಲ್ಲ. ಬದಲಿಗೆ ಫೀಲ್ಡಿಂಗ್‌ನಲ್ಲಿ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಪಂದ್ಯದ ವೇಳೆ ಆರ್‌ಸಿಬಿ ಆಟಗಾರ ಇತಿಹಾಸ ಸೃಷ್ಟಿಸಿದ್ದಾರೆ. ಇದರೊಂದಿಗೆ ಮಾಜಿ ಕ್ರಿಕೆಟಿಗ ಸುರೇಶ್ ರೈನಾ ದಾಖಲೆಯನ್ನು ಮುರಿದಿದ್ದಾರೆ.

(1 / 7)
ಮಾರ್ಚ್ 25ರ ಸೋಮವಾರ ಬೆಂಗಳೂರಿನಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ಮುಖಾಮುಖಿಯಾದವು. ಈ ವೇಳೆ ಕೊಹ್ಲಿ ಹೊಸ ದಾಖಲೆ ಬರೆದಿದ್ದಾರೆ.(ANI )
(2 / 7)
ಪಂದ್ಯದಲ್ಲಿ ಮೊದಲು ಬೌಲಿಂಗ್ ನಡೆಸಿದ ಆರ್‌ಸಿಬಿ ಪರ, ಮೊಹಮ್ಮದ್ ಸಿರಾಜ್ ಎದುರಾಳಿ ತಂಡದ ಜಾನಿ ಬೇರ್‌ಸ್ಟೋ ವಿಕೆಟ್ ಪಡೆದರು. ಇಂಗ್ಲೆಂಡ್ ಬ್ಯಾಟರ್ ಕೇವಲ ಎಂಟು ರನ್ ಗಳಿಸಿ ವಿರಾಟ್ ಕೊಹ್ಲಿಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಆ ಮೂಲಕ ವಿರಾಟ್ ದಾಖಲೆ ನಿರ್ಮಾಣವಾಯ್ತು.(ANI )
(3 / 7)
ಬೇರ್‌ಸ್ಟೋ ಅವರ ಕ್ಯಾಚ್‌ನೊಂದಿಗೆ ಟಿ20 ಕ್ರಿಕೆಟ್ ಇತಿಹಾಸದಲ್ಲಿ ಅತಿ ಹೆಚ್ಚು ಕ್ಯಾಚ್‌ಗಳನ್ನು ಪಡೆದ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ವಿರಾಟ್ ಪಾತ್ರರಾಗಿದ್ದಾರೆ.(AP)
(4 / 7)
ಪಂದ್ಯದಲ್ಲಿ ವಿರಾಟ್ ಮತ್ತೊಂದು ಕ್ಯಾಚ್ ಪಡೆದರು. ಪಂಜಾಬ್ ನಾಯಕ ಶಿಖರ್ ಧವನ್ ಕ್ಯಾಚ್ ಹಿಡಿದು ತಂಡಕ್ಕೆ ಮೇಲುಗೈ ತಂದುಕೊಟ್ಟರು.(AP)
(5 / 7)
ಇದರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಮತ್ತು ಐಪಿಎಲ್ ಪಂದ್ಯಗಳು ಸೇರಿವೆ. ಈವರೆಗೆ ಈ ದಾಖಲೆ ಸುರೇಶ್ ರೈನಾ ಹೆಸಲ್ಲಿತ್ತು. ಒಟ್ಟು 172 ಕ್ಯಾಚ್‌ಗಳೊಂದಿಗೆ ರೈನಾ ದೀರ್ಘಾವಧಿಯ ದಾಖಲೆ ಕಾಯ್ದುಕೊಂಡಿದ್ದರು. ಇದೀಗ ಅವರು ಎರಡನೇ ಸ್ಥಾನಕ್ಕೆ ಇಳಿದಿದ್ದಾರೆ. 173 ಕ್ಯಾಚ್‌ಗಳನ್ನು ಪಡೆದಿರುವ ವಿರಾಟ್ ಅಗ್ರಸ್ಥಾನದಲ್ಲಿದ್ದಾರೆ.(CSK Twitter)
(6 / 7)
ಇದೇ ವೇಳೆ ಮುಂಬೈ ಇಂಡಿಯನ್ಸ್ ಆಟಗಾರ ಹಾಗೂ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ 167 ಕ್ಯಾಚ್‌ಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ.(ANI)
ಇತರ ಗ್ಯಾಲರಿಗಳು