ಸುರೇಶ್‌ ರೈನಾ ಸಾರ್ವಕಾಲಿಕ ದಾಖಲೆ ಮುರಿದ ವಿರಾಟ್‌ ಕೊಹ್ಲಿ; ಆದರೆ ಇದು ಬ್ಯಾಟಿಂಗ್‌ನಲ್ಲಿ ಅಲ್ಲ-rcb batter virat kohli becomes indian player with most catches in t20 cricket beat suresh raina ipl 2024 jra ,ಫೋಟೋ ಗ್ಯಾಲರಿ ಸುದ್ದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಸುರೇಶ್‌ ರೈನಾ ಸಾರ್ವಕಾಲಿಕ ದಾಖಲೆ ಮುರಿದ ವಿರಾಟ್‌ ಕೊಹ್ಲಿ; ಆದರೆ ಇದು ಬ್ಯಾಟಿಂಗ್‌ನಲ್ಲಿ ಅಲ್ಲ

ಸುರೇಶ್‌ ರೈನಾ ಸಾರ್ವಕಾಲಿಕ ದಾಖಲೆ ಮುರಿದ ವಿರಾಟ್‌ ಕೊಹ್ಲಿ; ಆದರೆ ಇದು ಬ್ಯಾಟಿಂಗ್‌ನಲ್ಲಿ ಅಲ್ಲ

  • ದಾಖಲೆಗಳ ಸರದಾರ ವಿರಾಟ್‌ ಕೊಹ್ಲಿ ಮತ್ತೊಂದು ರೆಕಾರ್ಡ್‌ ಮಾಡಿದ್ದಾರೆ. ಈ ಬಾರಿ ಅವರ ದಾಖಲೆ ಸೃಷ್ಟಿಯಾಗಿರುವುದು ಬ್ಯಾಟಿಂಗ್‌ನಲ್ಲಿ ಅಲ್ಲ. ಬದಲಿಗೆ ಫೀಲ್ಡಿಂಗ್‌ನಲ್ಲಿ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಪಂದ್ಯದ ವೇಳೆ ಆರ್‌ಸಿಬಿ ಆಟಗಾರ ಇತಿಹಾಸ ಸೃಷ್ಟಿಸಿದ್ದಾರೆ. ಇದರೊಂದಿಗೆ ಮಾಜಿ ಕ್ರಿಕೆಟಿಗ ಸುರೇಶ್ ರೈನಾ ದಾಖಲೆಯನ್ನು ಮುರಿದಿದ್ದಾರೆ.

ಮಾರ್ಚ್ 25ರ ಸೋಮವಾರ ಬೆಂಗಳೂರಿನಲ್ಲಿ ನಡೆದ ಐಪಿಎಲ್‌ ಪಂದ್ಯದಲ್ಲಿ  ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ಮುಖಾಮುಖಿಯಾದವು. ಈ ವೇಳೆ ಕೊಹ್ಲಿ ಹೊಸ ದಾಖಲೆ ಬರೆದಿದ್ದಾರೆ.
icon

(1 / 7)

ಮಾರ್ಚ್ 25ರ ಸೋಮವಾರ ಬೆಂಗಳೂರಿನಲ್ಲಿ ನಡೆದ ಐಪಿಎಲ್‌ ಪಂದ್ಯದಲ್ಲಿ  ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ಮುಖಾಮುಖಿಯಾದವು. ಈ ವೇಳೆ ಕೊಹ್ಲಿ ಹೊಸ ದಾಖಲೆ ಬರೆದಿದ್ದಾರೆ.(ANI )

ಪಂದ್ಯದಲ್ಲಿ ಮೊದಲು ಬೌಲಿಂಗ್ ನಡೆಸಿದ ಆರ್‌ಸಿಬಿ ಪರ, ಮೊಹಮ್ಮದ್ ಸಿರಾಜ್ ಎದುರಾಳಿ ತಂಡದ ಜಾನಿ ಬೇರ್‌ಸ್ಟೋ ವಿಕೆಟ್ ಪಡೆದರು. ಇಂಗ್ಲೆಂಡ್ ಬ್ಯಾಟರ್ ಕೇವಲ ಎಂಟು ರನ್‌ ಗಳಿಸಿ ವಿರಾಟ್‌ ಕೊಹ್ಲಿಗೆ ಕ್ಯಾಚ್‌ ನೀಡಿ ನಿರ್ಗಮಿಸಿದರು. ಆ ಮೂಲಕ ವಿರಾಟ್‌ ದಾಖಲೆ ನಿರ್ಮಾಣವಾಯ್ತು.
icon

(2 / 7)

ಪಂದ್ಯದಲ್ಲಿ ಮೊದಲು ಬೌಲಿಂಗ್ ನಡೆಸಿದ ಆರ್‌ಸಿಬಿ ಪರ, ಮೊಹಮ್ಮದ್ ಸಿರಾಜ್ ಎದುರಾಳಿ ತಂಡದ ಜಾನಿ ಬೇರ್‌ಸ್ಟೋ ವಿಕೆಟ್ ಪಡೆದರು. ಇಂಗ್ಲೆಂಡ್ ಬ್ಯಾಟರ್ ಕೇವಲ ಎಂಟು ರನ್‌ ಗಳಿಸಿ ವಿರಾಟ್‌ ಕೊಹ್ಲಿಗೆ ಕ್ಯಾಚ್‌ ನೀಡಿ ನಿರ್ಗಮಿಸಿದರು. ಆ ಮೂಲಕ ವಿರಾಟ್‌ ದಾಖಲೆ ನಿರ್ಮಾಣವಾಯ್ತು.(ANI )

ಬೇರ್‌ಸ್ಟೋ ಅವರ ಕ್ಯಾಚ್‌ನೊಂದಿಗೆ ಟಿ20 ಕ್ರಿಕೆಟ್ ಇತಿಹಾಸದಲ್ಲಿ ಅತಿ ಹೆಚ್ಚು ಕ್ಯಾಚ್‌ಗಳನ್ನು ಪಡೆದ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ವಿರಾಟ್‌ ಪಾತ್ರರಾಗಿದ್ದಾರೆ.
icon

(3 / 7)

ಬೇರ್‌ಸ್ಟೋ ಅವರ ಕ್ಯಾಚ್‌ನೊಂದಿಗೆ ಟಿ20 ಕ್ರಿಕೆಟ್ ಇತಿಹಾಸದಲ್ಲಿ ಅತಿ ಹೆಚ್ಚು ಕ್ಯಾಚ್‌ಗಳನ್ನು ಪಡೆದ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ವಿರಾಟ್‌ ಪಾತ್ರರಾಗಿದ್ದಾರೆ.(AP)

ಪಂದ್ಯದಲ್ಲಿ ವಿರಾಟ್‌ ಮತ್ತೊಂದು ಕ್ಯಾಚ್‌ ಪಡೆದರು. ಪಂಜಾಬ್‌ ನಾಯಕ ಶಿಖರ್‌ ಧವನ್‌ ಕ್ಯಾಚ್‌ ಹಿಡಿದು ತಂಡಕ್ಕೆ ಮೇಲುಗೈ ತಂದುಕೊಟ್ಟರು.
icon

(4 / 7)

ಪಂದ್ಯದಲ್ಲಿ ವಿರಾಟ್‌ ಮತ್ತೊಂದು ಕ್ಯಾಚ್‌ ಪಡೆದರು. ಪಂಜಾಬ್‌ ನಾಯಕ ಶಿಖರ್‌ ಧವನ್‌ ಕ್ಯಾಚ್‌ ಹಿಡಿದು ತಂಡಕ್ಕೆ ಮೇಲುಗೈ ತಂದುಕೊಟ್ಟರು.(AP)

ಇದರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಮತ್ತು ಐಪಿಎಲ್ ಪಂದ್ಯಗಳು ಸೇರಿವೆ. ಈವರೆಗೆ ಈ ದಾಖಲೆ ಸುರೇಶ್‌ ರೈನಾ ಹೆಸಲ್ಲಿತ್ತು. ಒಟ್ಟು 172 ಕ್ಯಾಚ್‌ಗಳೊಂದಿಗೆ ರೈನಾ ದೀರ್ಘಾವಧಿಯ ದಾಖಲೆ ಕಾಯ್ದುಕೊಂಡಿದ್ದರು. ಇದೀಗ ಅವರು ಎರಡನೇ ಸ್ಥಾನಕ್ಕೆ ಇಳಿದಿದ್ದಾರೆ. 173 ಕ್ಯಾಚ್‌ಗಳನ್ನು ಪಡೆದಿರುವ ವಿರಾಟ್‌ ಅಗ್ರಸ್ಥಾನದಲ್ಲಿದ್ದಾರೆ.
icon

(5 / 7)

ಇದರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಮತ್ತು ಐಪಿಎಲ್ ಪಂದ್ಯಗಳು ಸೇರಿವೆ. ಈವರೆಗೆ ಈ ದಾಖಲೆ ಸುರೇಶ್‌ ರೈನಾ ಹೆಸಲ್ಲಿತ್ತು. ಒಟ್ಟು 172 ಕ್ಯಾಚ್‌ಗಳೊಂದಿಗೆ ರೈನಾ ದೀರ್ಘಾವಧಿಯ ದಾಖಲೆ ಕಾಯ್ದುಕೊಂಡಿದ್ದರು. ಇದೀಗ ಅವರು ಎರಡನೇ ಸ್ಥಾನಕ್ಕೆ ಇಳಿದಿದ್ದಾರೆ. 173 ಕ್ಯಾಚ್‌ಗಳನ್ನು ಪಡೆದಿರುವ ವಿರಾಟ್‌ ಅಗ್ರಸ್ಥಾನದಲ್ಲಿದ್ದಾರೆ.(CSK Twitter)

ಇದೇ ವೇಳೆ ಮುಂಬೈ ಇಂಡಿಯನ್ಸ್‌ ಆಟಗಾರ ಹಾಗೂ ಟೀಮ್‌ ಇಂಡಿಯಾ ನಾಯಕ ರೋಹಿತ್ ಶರ್ಮಾ 167 ಕ್ಯಾಚ್‌ಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ.
icon

(6 / 7)

ಇದೇ ವೇಳೆ ಮುಂಬೈ ಇಂಡಿಯನ್ಸ್‌ ಆಟಗಾರ ಹಾಗೂ ಟೀಮ್‌ ಇಂಡಿಯಾ ನಾಯಕ ರೋಹಿತ್ ಶರ್ಮಾ 167 ಕ್ಯಾಚ್‌ಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ.(ANI)

146 ಕ್ಯಾಚ್‌ ಪಡೆದಿರುವ ಕನ್ನಡಿಗ ಮನೀಶ ಪಾಂಡೆ ನಾಲ್ಕನೇ ಸ್ಥಾನದಲ್ಲಿದ್ದರೆ, ಸೂರ್ಯಕುಮಾರ್‌ ಯಾದವ್‌ 136 ಕ್ಯಾಚ್‌ಗಳೊಂದಿಗೆ ಐದನೇ ಸ್ಥಾನ ಪಡೆದಿದ್ದಾರೆ.
icon

(7 / 7)

146 ಕ್ಯಾಚ್‌ ಪಡೆದಿರುವ ಕನ್ನಡಿಗ ಮನೀಶ ಪಾಂಡೆ ನಾಲ್ಕನೇ ಸ್ಥಾನದಲ್ಲಿದ್ದರೆ, ಸೂರ್ಯಕುಮಾರ್‌ ಯಾದವ್‌ 136 ಕ್ಯಾಚ್‌ಗಳೊಂದಿಗೆ ಐದನೇ ಸ್ಥಾನ ಪಡೆದಿದ್ದಾರೆ.


ಇತರ ಗ್ಯಾಲರಿಗಳು