228 ರನ್​ಗಳ ಗುರಿ ಬೆನ್ನಟ್ಟಿ ಹೊಸ ಇತಿಹಾಸ ನಿರ್ಮಿಸಿದ ಆರ್​ಸಿಬಿ; ತವರಿಗೂ ಹೊರಗೂ ಗೆಲುವಿನಲ್ಲಿ ದಾಖಲೆ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  228 ರನ್​ಗಳ ಗುರಿ ಬೆನ್ನಟ್ಟಿ ಹೊಸ ಇತಿಹಾಸ ನಿರ್ಮಿಸಿದ ಆರ್​ಸಿಬಿ; ತವರಿಗೂ ಹೊರಗೂ ಗೆಲುವಿನಲ್ಲಿ ದಾಖಲೆ

228 ರನ್​ಗಳ ಗುರಿ ಬೆನ್ನಟ್ಟಿ ಹೊಸ ಇತಿಹಾಸ ನಿರ್ಮಿಸಿದ ಆರ್​ಸಿಬಿ; ತವರಿಗೂ ಹೊರಗೂ ಗೆಲುವಿನಲ್ಲಿ ದಾಖಲೆ

ಇಂಡಿಯನ್ ಪ್ರೀಮಿಯರ್ ಲೀಗ್​​ನ 70ನೇ ಹಾಗೂ ಕೊನೆಯ ಲೀಗ್ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ಗೆದ್ದು ವಿಶೇಷ ದಾಖಲೆ ನಿರ್ಮಿಸಿದೆ.

ಏಕನಾ ಕ್ರೀಡಾಂಗಣದಲ್ಲಿ ಮೇ 27ರಂದು ಲಕ್ನೋ ಸೂಪರ್ ಜೈಂಟ್ಸ್​    228 ರನ್​​ಗಳ ಗುರಿ ಬೆನ್ನಟ್ಟುವ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ಐಪಿಎಲ್ ಇತಿಹಾಸದಲ್ಲಿ ನೂತನ ದಾಖಲೆ ನಿರ್ಮಿಸಿದೆ.
icon

(1 / 10)

ಆರ್​ಸಿಬಿ ಐಪಿಎಲ್​​ನಲ್ಲಿ ದೊಡ್ಡ ರನ್ ಚೇಸ್​ ಮಾಡುವ ಮೂಲಕ ದಾಖಲೆ ನಿರ್ಮಿಸಿದೆ. ಆರ್​​​ಸಿಬಿ, ಐಪಿಎಲ್​​​ನಲ್ಲಿ 3ನೇ ಬಾರಿಗೆ 200 ಅಥವಾ ಅದಕ್ಕಿಂತ ಹೆಚ್ಚಿನ ರನ್ ಬೆನ್ನಟ್ಟುವಲ್ಲಿ ಯಶಸ್ವಿಯಾಗಿದೆ.
icon

(2 / 10)

2010ರಲ್ಲಿ ಬೆಂಗಳೂರಿನ ಚಿನ್ನಸ್ವಾಮಿ ಕ್ರಿಕೆಟ್ ಮೈದಾನದಲ್ಲಿ ಪಂಜಾಬ್ ಕಿಂಗ್ಸ್​ 204 ರನ್​ಗಳ ಗುರಿ ಬೆನ್ನಟ್ಟಿತ್ತು. ಇದು ಆರ್​​ಸಿಬಿ ತಂಡದ ಇದುವರೆಗಿನ ಗರಿಷ್ಠ ರನ್ ಚೇಸ್ ಆಗಿತ್ತು.
icon

(3 / 10)

ಕಳೆದ ವರ್ಷ ಅಹ್ಮದಾಬಾದ್​​​ನಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ 201 ರನ್​​ ಗುರಿ ಬೆನ್ನಟ್ಟಿತ್ತು. ಇದೀಗ 228 ರನ್ ಗುರಿ ಬೆನ್ನಟ್ಟಿ ದಾಳಲೆ ಬರೆದಿದೆ. ಐಪಿಎಲ್​ನಲ್ಲೂ ಇದು 3ನೇ ಅತಿ ದೊಡ್ಡ ರನ್ ಚೇಸ್ ಆಗಿದೆ.
icon

(4 / 10)

2024ರಲ್ಲಿ ಕೆಕೆಆರ್ ವಿರುದ್ಧ 262 ರನ್ ಗುರಿ, ಇದೇ ವರ್ಷ ಪಂಜಾಬ್ ವಿರುದ್ಧ ಎಸ್​ಆರ್​ಹೆಚ್​ 246 ರನ್ ಗಳಿಸಿ ಮೊದಲ ಎರಡು ಸ್ಥಾನ ಪಡೆದಿವೆ. ಈ ಮೂಲಕ ಆರ್​ಸಿಬಿ 228 ರನ್​​ಗಳ ಗುರಿ ಬೆನ್ನತ್ತಿ ಮೂರನೇ ಸ್ಥಾನಕ್ಕೇರಿತು.
icon

(5 / 10)

ಇದರ ಜೊತೆಗೆ ಆರ್​ಸಿಬಿ ಮತ್ತೊಂದು ದಾಖಲೆ ನಿರ್ಮಿಸಿದೆ. ಐಪಿಎಲ್​ ಇತಿಹಾಸದಲ್ಲಿ ಒಂದು ಋತುವಿನಲ್ಲಿ ಎಲ್ಲಾ ಲೀಗ್ ಹಂತದ ಹೊರಗಿನ (ಅವೇ) ಪಂದ್ಯ ಗೆದ್ದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
icon

(6 / 10)

ಲಕ್ನೋದ ಏಕಾನಾದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಸೋಲಿಸುವ ಮೂಲಕ ಆರ್​​ಸಿಬಿ ಐಪಿಎಲ್ ಇತಿಹಾಸದಲ್ಲಿ ಒಂದು ಋತುವಿನಲ್ಲಿ ತವರಿನ ಹೊರಗೆ ಆಡಿದ 7ಕ್ಕೆ ಏಳೂ ಪಂದ್ಯಗಳನ್ನು ಗೆದ್ದುಕೊಂಡಿದೆ.
icon

(7 / 10)

(AFP)

ಕೋಲ್ಕತಾ ನೈಟ್ ರೈಡರ್ಸ್ ಮತ್ತು ಮುಂಬೈ ಇಂಡಿಯನ್ಸ್ ಈ ಹಿಂದೆ ತವರಿನ ಹೊರಗೆ ಆಡಿದ್ದ 8 ಪಂದ್ಯಗಳಲ್ಲಿ 7ರಲ್ಲಿ ಗೆಲುವು ಸಾಧಿಸಿದೆ. ಉಭಯ ತಂಡಗಳು 2012ರಲ್ಲಿ ಈ ದಾಖಲೆ ನಿರ್ಮಿಸಿದ್ದವು.
icon

(8 / 10)

ಐಪಿಎಲ್ 2025ರ ಕೊನೆಯ ಲೀಗ್ ಹಂತದ ಪಂದ್ಯದಲ್ಲಿ ಎಲ್​ಎಸ್​ಜಿ ವಿರುದ್ಧ 6 ವಿಕೆಟ್​ಗಳ ಜಯದೊಂದಿಗೆ ಆರ್​​ಸಿಬಿ ಅಂಕ ಪಟ್ಟಿಯಲ್ಲಿ 2ನೇ ಸ್ಥಾನ ಪಡೆದಿದೆ. ಕ್ವಾಲಿಫೈಯರ್-1 ಪಂದ್ಯವನ್ನು ಆಡಲಿದ್ದಾರೆ.
icon

(9 / 10)

ಮುಲ್ಲನ್​ಪುರದಲ್ಲಿ ನಡೆಯಲಿರುವ ಮೊದಲ ಕ್ವಾಲಿಫೈಯರ್​​-1ನಲ್ಲಿ ಅಗ್ರಸ್ಥಾನದಲ್ಲಿರುವ ಪಂಜಾಬ್ ಕಿಂಗ್ಸ್ ತಂಡವನ್ನು ಎದುರಿಸಲಿದ್ದಾರೆ.
icon

(10 / 10)

ಮುಲ್ಲನ್​ಪುರದಲ್ಲಿ ನಡೆಯಲಿರುವ ಮೊದಲ ಕ್ವಾಲಿಫೈಯರ್​​-1ನಲ್ಲಿ ಅಗ್ರಸ್ಥಾನದಲ್ಲಿರುವ ಪಂಜಾಬ್ ಕಿಂಗ್ಸ್ ತಂಡವನ್ನು ಎದುರಿಸಲಿದ್ದಾರೆ.
(AFP)

ಪ್ರಸನ್ನಕುಮಾರ್ ಪಿ.ಎನ್.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಸಂಜೆವಾಣಿ, ವಿಶ್ವವಾಣಿ, ಪ್ರಜಾವಾಣಿ, ಈಟಿವಿ ಭಾರತ್, ನ್ಯೂಸ್ ಫಸ್ಟ್​ ಮಾಧ್ಯಮ ಸಂಸ್ಥೆಗಳಲ್ಲಿ ಒಟ್ಟು 7 ವರ್ಷ ಸೇವೆ ಸಲ್ಲಿಸಿದ ಅನುಭವ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಪುಟ್ಟಲಿಂಗಯ್ಯನಪಾಳ್ಯ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.

ಇತರ ಗ್ಯಾಲರಿಗಳು