ಐದೈದು ಟ್ರೋಫಿ ಗೆದ್ದರೂ ಆರ್ಸಿಬಿಯ ಈ ವಿಚಾರದಲ್ಲಿ ಮುಂಬೈ-ಸಿಎಸ್ಕೆ ಏನೇನೂ ಅಲ್ಲ! ಇದೊಂದು ಹೊಸ ಮೈಲಿಗಲ್ಲು!
- ಐದೈದು ಟ್ರೋಫಿ ಗೆದ್ದಿರುವ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳೂ ಮಾಡದ ಸಾಧನೆಯನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಾಡಿದೆ.
- ಐದೈದು ಟ್ರೋಫಿ ಗೆದ್ದಿರುವ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳೂ ಮಾಡದ ಸಾಧನೆಯನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಾಡಿದೆ.
(1 / 10)
18ನೇ ಆವೃತ್ತಿಯ ಐಪಿಎಲ್ನಲ್ಲಿ ಪ್ಲೇಆಫ್ ಪ್ರವೇಶಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಐತಿಹಾಸಿಕ ದಾಖಲೆ ನಿರ್ಮಿಸಿದೆ. ಆದರೆ ಈ ಬಾರಿ ಮೈದಾನದಲ್ಲಿ ಅಲ್ಲ, ಸಾಮಾಜಿಕ ಜಾಲತಾಣದಲ್ಲಿ.!
(AP)(2 / 10)
ಐದೈದು ಟ್ರೋಫಿ ಗೆದ್ದಿರುವ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಸಹ ಆರ್ಸಿಬಿಯ ಈ ದಾಖಲೆ ನಿರ್ಮಿಸಲು ಸಾಧ್ಯವಾಗಿಲ್ಲ ಎಂಬುದು ಅಚ್ಚರಿ.
(AFP)(3 / 10)
ಆರ್‌ಸಿಬಿ ಇನ್ಸ್ಟಾಗ್ರಾಂನಲ್ಲಿ 20 ಮಿಲಿಯನ್ ಫಾಲೋವರ್ಸ್ ಪೂರೈಸಿದ್ದು, ಐತಿಹಾಸಿಕ ದಾಖಲೆ ನಿರ್ಮಿಸಿದೆ. ಈ ಸಾಧನೆ ಮಾಡಿದ ಮೊದಲ ಐಪಿಎಲ್ ತಂಡ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.
(AP)(4 / 10)
ಫ್ರಾಂಚೈಸಿ ಕ್ರಿಕೆಟ್ ಲೀಗ್ ಇತಿಹಾಸದಲ್ಲಿ ಯಾವೊಂದು ತಂಡವೂ ಈ ಮೈಲಿಗಲ್ಲು ಮುಟ್ಟಿಲ್ಲ. ಕೇವಲ ತಿಂಗಳ ಅಂತರದಲ್ಲಿ 3 ಮಿಲಿಯನ್ ಫಾಲೋವರ್ಸ್ ಹೆಚ್ಚಿಸಿಕೊಂಡಿದೆ.
(5 / 10)
ಇದೇ ಐಪಿಎಲ್ ಮಧ್ಯದಲ್ಲಿ ಅತಿ ಹೆಚ್ಚು ಫಾಲೋವರ್ಸ್ ಹೊಂದಿದ್ದ ಸಿಎಸ್ಕೆ (17.7) ತಂಡವನ್ನು ಹಿಂದಿಕ್ಕಿದ ಆರ್‌ಸಿಬಿ, ಈಗ ತಿಂಗಳ ಅಂತರದಲ್ಲಿ 20 ಮಿಲಿಯನ್ ಫಾಲೋವರ್ಸ್ ಗಡಿ ದಾಟಿದೆ.
(6 / 10)
ಪ್ರಸ್ತುತ ಸಿಎಸ್ಕೆ 18.6 ಮಿಲಿಯನ್ (ಈ ಸುದ್ದಿ ಪಬ್ಲಿಷ್ ಆಗುವ ತನಕ) ಫಾಲೋವರ್ಸ್ ಹೊಂದಿದ್ದು, 2ನೇ ಸ್ಥಾನ ಪಡೆದಿದೆ. ಮುಂಬೈ ಇಂಡಿಯನ್ಸ್ಗೆ 18 ಮಿಲಿಯನ್ (ಈ ಸುದ್ದಿ ಪಬ್ಲಿಷ್ ಆಗುವ ತನಕ) ಫಾಲೋವರ್ಸ್ ಇದ್ದಾರೆ. ಈ ಎರಡು ತಂಡಗಳು ಐದೈದು ಐಪಿಎಲ್ ಟ್ರೋಫಿ ಗೆದ್ದಿವೆ.
(PTI)(7 / 10)
ಕೆಕೆಆರ್ 7.5 ಮಿಲಿಯನ್ ಮತ್ತು ಎಸ್ಆರ್ಹೆಚ್ 5.4 ಮಿಲಿಯನ್ ಫಾಲೋವರ್ಸ್ ಹೊಂದಿದ್ದು, ಕ್ರಮವಾಗಿ 4, 5ನೇ ಸ್ಥಾನ ಪಡೆದಿವೆ. ಆದರೆ ಈ ಮಟ್ಟಿಗೆ ಫಾಲೋವರ್ಸ್ ಪಡೆಯಲು ಕಾರಣ ಏನೆಂದರೆ ವಿರಾಟ್ ಕೊಹ್ಲಿ ಅವರ ಜಾಗತಿಕ ಜನಪ್ರಿಯತೆಯೇ ಕಾರಣ.
(8 / 10)
ಆರ್‌ಸಿಬಿ ಆರ್‌ಸಿಬಿ ಪ್ರಸಕ್ತ ಐಪಿಎಲ್ನಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿದೆ. ಆಡಿರುವ 13 ಪಂದ್ಯಗಳಿಂದ 17 ಅಂಕ (8 ಗೆಲುವು, 3 ಸೋಲು, 1 ಫಲಿತಾಂಶವಿಲ್ಲ) ಪಡೆದಿದ್ದು, ಪ್ಲೇಆಫ್ಗೆ ಅರ್ಹತೆ ಪಡೆದುಕೊಂಡಿದೆ.
(9 / 10)
2025ರ ಐಪಿಎಲ್ನಲ್ಲಿ ಅಗ್ರ-2ರೊಳಗೆ ಲೀಗ್ ಹಂತವನ್ನು ಮುಗಿಸಲು ಆರ್‌ಸಿಬಿ ಯೋಜನೆ ಹಾಕಿಕೊಂಡಿದೆ. ಅದಕ್ಕಾಗಿ ಐಪಿಎಲ್ನ ಮತ್ತು ತನ್ನ ಕೊನೆಯ ಲೀಗ್ ಪಂದ್ಯವನ್ನು ಮೇ 27ರಂದು ಆಡಲಿದೆ. ಈ ಪಂದ್ಯದಲ್ಲಿ ಗೆದ್ದರೆ ಮೊದಲ ಎರಡರಲ್ಲಿ ಸ್ಥಾನ ಪಡೆಯುವುದು ಖಚಿತ.
ಇತರ ಗ್ಯಾಲರಿಗಳು