ಮುಂಬೈ ವಿರುದ್ಧ ದಾಖಲೆಯ 6 ವಿಕೆಟ್ ಕಬಳಿಸಿದ ಎಲ್ಲಿಸ್ ಪೆರ್ರಿ; ಡಬ್ಲ್ಯೂಪಿಎಲ್‌ನಲ್ಲಿ ಇತಿಹಾಸ ನಿರ್ಮಿಸಿದ ಆರ್‌ಸಿಬಿ ಕ್ವೀನ್
- Ellyse Perry: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಎಲ್ಲಿಸ್ ಪೆರ್ರಿ, ಡಬ್ಲ್ಯೂಪಿಎಲ್‌ನಲ್ಲಿ ಐತಿಹಾಸಿಕ ದಾಖಲೆ ನಿರ್ಮಿಸಿದ್ದಾರೆ. ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಬರೋಬ್ಬರಿ 6 ವಿಕೆಟ್ ಕಬಳಿಸಿ ನೂತನ ರೆಕಾರ್ಡ್ ಮಾಡಿದ್ದಾರೆ. ವಿಮೆನ್ಸ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲೇ ಅತ್ಯುತ್ತಮ ಬೌಲಿಂಗ್ ಅಂಕಿ-ಅಂಶ ದಾಖಲಿಸಿದ್ದಾರೆ.
- Ellyse Perry: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಎಲ್ಲಿಸ್ ಪೆರ್ರಿ, ಡಬ್ಲ್ಯೂಪಿಎಲ್‌ನಲ್ಲಿ ಐತಿಹಾಸಿಕ ದಾಖಲೆ ನಿರ್ಮಿಸಿದ್ದಾರೆ. ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಬರೋಬ್ಬರಿ 6 ವಿಕೆಟ್ ಕಬಳಿಸಿ ನೂತನ ರೆಕಾರ್ಡ್ ಮಾಡಿದ್ದಾರೆ. ವಿಮೆನ್ಸ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲೇ ಅತ್ಯುತ್ತಮ ಬೌಲಿಂಗ್ ಅಂಕಿ-ಅಂಶ ದಾಖಲಿಸಿದ್ದಾರೆ.
(1 / 7)
ಮಾರ್ಚ್ 12 ಮಂಗಳವಾರ ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಪೆರ್ರಿ ದಾಖಲೆ ಬರೆದಿದ್ದಾರೆ. ಮೇಲಿಂದ ಮೇಲೆ ಆರು ವಿಕೆಟ್ ಪಡೆದು, ಈವರೆಗೆ ಡಬ್ಲ್ಯೂಪಿಎಲ್‌ನಲ್ಲಿ ಅತ್ಯುತ್ತಮ ಬೌಲಿಂಗ್ ಪ್ರದರ್ಶನಕ್ಕೆ ಸಾಕ್ಷಿಯಾದರು.(PTI)
(2 / 7)
ಮುಂಬೈ ತಂಡದ ಬಲಿಷ್ಠ ಬ್ಯಾಟಿಂಗ್ ಲೈನಪ್‌ಗೆ ಪೆರ್ರಿ ಚಳಿ ಬಿಡಿಸಿದರು. ಘಟಾನುಘಟಿ ಬ್ಯಾಟರ್‌ಗಳನ್ನೇ ಪೆವಿಲಿಯನ್‌ಗಟ್ಟಿ, ಆರ್‌ಸಿಬಿ ತಂಡಕ್ಕೆ ಭಾರಿ ಮುನ್ನಡೆ ತಂಡದುಕೊಟ್ಟರು.(PTI)
(3 / 7)
ಮುಂಬೈ ತಂಡದ ಎಸ್ ಸಜನಾ, ಹರ್ಮನ್‌ಪ್ರೀತ್ ಕೌರ್, ಅಮೆಲಿಯಾ ಕೆರ್, ಅಮನ್‌ಜೋತ್ ಕೌರ್, ಪೂಜಾ ವಸ್ತ್ರಾಕರ್ ಮತ್ತು ನ್ಯಾಟ್ ಸಿವರ್ ಬ್ರಂಟ್ ಅವರ ವಿಕೆಟ್‌ಗಳನ್ನು ಕೀಳುವ ಮೂಲಕ, ಕೇವಲ 113 ರನ್‌ಗಳಿಗೆ ಹಾಲಿ ಚಾಂಪಿಯನ್ ತಂಡ ಆಲೌಟ್ ಆಗುವಂತೆ ಮಾಡಿದರು.(PTI)
(4 / 7)
ಪಂದ್ಯದಲ್ಲಿ ಆರ್‌ಸಿಬಿ ನಾಯಕಿ ಸ್ಮೃತಿ ಮಂಧಾನ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡರು. ಈ ನಿರ್ಧಾರ ಅಭಿಮಾನಿಗಳಿಗೆ ಅಚ್ಚರಿ ಕೊಟ್ಟಿತು. ಆದರೆ, ಪೆರ್ರಿ ತಮ್ಮ ನಾಯಕಿಯ ನಿರ್ಧಾರವನ್ನು ಸಮರ್ಥಿಸಿದ್ದಾರೆ. (PTI)
(5 / 7)
ಒಟ್ಟು ನಾಲ್ಕು ಓವರ್ ಎಸೆದ ಪೆರ್ರಿ, ಅಂತಿಮವಾಗಿ ಕೇವಲ 15 ರನ್ ಬಿಟ್ಟುಕೊಟ್ಟು 6 ವಿಕೆಟ್ ಕಬಳಿಸಿದರು. 33 ವರ್ಷ ವರ್ಷದ ಆಸೀಸ್ ಆಟಗಾರ್ತಿ, ಡಬ್ಲ್ಯೂಪಿಎಲ್ ಇತಿಹಾಸದಲ್ಲಿ ಐದು ವಿಕೆಟ್ ಪಡೆದ ಐದನೇ ಬೌಲರ್ ಎನಿಸಿಕೊಂಡರು. (PTI)
(6 / 7)
ಇದು ಡಬ್ಲ್ಯೂಪಿಎಲ್ ಇತಿಹಾಸದ ಅತ್ಯುತ್ತಮ ಬೌಲಿಂಗ್ ಅಂಕಿ-ಅಂಶವಾಗಿದೆ. ಕಳೆದ ಆವೃತ್ತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮರಿಜನ್ನೆ ಕಪ್ ಗುಜರಾತ್ ಜೈಂಟ್ಸ್ ವಿರುದ್ಧ 15 ರನ್‌ಗಳಿಗೆ 5 ವಿಕೆಟ್ ಪಡೆದಿದ್ದು ಈವರೆಗಿನ ಅತ್ಯುತ್ತಮ ಅಂಕಿ-ಅಂಶವಾಗಿತ್ತು.(PTI)
ಇತರ ಗ್ಯಾಲರಿಗಳು