ಕನ್ನಡ ಸುದ್ದಿ  /  Photo Gallery  /  Rcb Cricketer Ellyse Perry Creates History In Womens Premier League Becomes 1st Cricketer To Take 6 Wickets In Wpl Jra

ಮುಂಬೈ ವಿರುದ್ಧ ದಾಖಲೆಯ 6 ವಿಕೆಟ್‌ ಕಬಳಿಸಿದ ಎಲ್ಲಿಸ್‌ ಪೆರ್ರಿ; ಡಬ್ಲ್ಯೂಪಿಎಲ್‌ನಲ್ಲಿ ಇತಿಹಾಸ ನಿರ್ಮಿಸಿದ ಆರ್‌ಸಿಬಿ ಕ್ವೀನ್‌

  • Ellyse Perry: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಎಲ್ಲಿಸ್ ಪೆರ್ರಿ, ಡಬ್ಲ್ಯೂಪಿಎಲ್‌ನಲ್ಲಿ ಐತಿಹಾಸಿಕ ದಾಖಲೆ ನಿರ್ಮಿಸಿದ್ದಾರೆ. ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಬರೋಬ್ಬರಿ 6 ವಿಕೆಟ್‌ ಕಬಳಿಸಿ ನೂತನ ರೆಕಾರ್ಡ್‌ ಮಾಡಿದ್ದಾರೆ. ವಿಮೆನ್ಸ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲೇ ಅತ್ಯುತ್ತಮ ಬೌಲಿಂಗ್‌ ಅಂಕಿ-ಅಂಶ ದಾಖಲಿಸಿದ್ದಾರೆ.

ಮಾರ್ಚ್ 12 ಮಂಗಳವಾರ ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ ವಿರುದ್ಧ ಪೆರ್ರಿ ದಾಖಲೆ ಬರೆದಿದ್ದಾರೆ. ಮೇಲಿಂದ ಮೇಲೆ ಆರು ವಿಕೆಟ್‌ ಪಡೆದು, ಈವರೆಗೆ ಡಬ್ಲ್ಯೂಪಿಎಲ್‌ನಲ್ಲಿ ಅತ್ಯುತ್ತಮ ಬೌಲಿಂಗ್‌ ಪ್ರದರ್ಶನಕ್ಕೆ ಸಾಕ್ಷಿಯಾದರು.
icon

(1 / 7)

ಮಾರ್ಚ್ 12 ಮಂಗಳವಾರ ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ ವಿರುದ್ಧ ಪೆರ್ರಿ ದಾಖಲೆ ಬರೆದಿದ್ದಾರೆ. ಮೇಲಿಂದ ಮೇಲೆ ಆರು ವಿಕೆಟ್‌ ಪಡೆದು, ಈವರೆಗೆ ಡಬ್ಲ್ಯೂಪಿಎಲ್‌ನಲ್ಲಿ ಅತ್ಯುತ್ತಮ ಬೌಲಿಂಗ್‌ ಪ್ರದರ್ಶನಕ್ಕೆ ಸಾಕ್ಷಿಯಾದರು.(PTI)

ಮುಂಬೈ ತಂಡದ ಬಲಿಷ್ಠ ಬ್ಯಾಟಿಂಗ್‌ ಲೈನಪ್‌ಗೆ ಪೆರ್ರಿ ಚಳಿ ಬಿಡಿಸಿದರು. ಘಟಾನುಘಟಿ ಬ್ಯಾಟರ್‌ಗಳನ್ನೇ ಪೆವಿಲಿಯನ್‌ಗಟ್ಟಿ, ಆರ್‌ಸಿಬಿ ತಂಡಕ್ಕೆ ಭಾರಿ ಮುನ್ನಡೆ ತಂಡದುಕೊಟ್ಟರು.
icon

(2 / 7)

ಮುಂಬೈ ತಂಡದ ಬಲಿಷ್ಠ ಬ್ಯಾಟಿಂಗ್‌ ಲೈನಪ್‌ಗೆ ಪೆರ್ರಿ ಚಳಿ ಬಿಡಿಸಿದರು. ಘಟಾನುಘಟಿ ಬ್ಯಾಟರ್‌ಗಳನ್ನೇ ಪೆವಿಲಿಯನ್‌ಗಟ್ಟಿ, ಆರ್‌ಸಿಬಿ ತಂಡಕ್ಕೆ ಭಾರಿ ಮುನ್ನಡೆ ತಂಡದುಕೊಟ್ಟರು.(PTI)

ಮುಂಬೈ ತಂಡದ ಎಸ್ ಸಜನಾ, ಹರ್ಮನ್‌ಪ್ರೀತ್ ಕೌರ್, ಅಮೆಲಿಯಾ ಕೆರ್, ಅಮನ್‌ಜೋತ್ ಕೌರ್, ಪೂಜಾ ವಸ್ತ್ರಾಕರ್ ಮತ್ತು ನ್ಯಾಟ್ ಸಿವರ್ ಬ್ರಂಟ್ ಅವರ ವಿಕೆಟ್‌ಗಳನ್ನು ಕೀಳುವ ಮೂಲಕ, ಕೇವಲ 113 ರನ್‌ಗಳಿಗೆ ಹಾಲಿ ಚಾಂಪಿಯನ್‌ ತಂಡ ಆಲೌಟ್‌ ಆಗುವಂತೆ ಮಾಡಿದರು.
icon

(3 / 7)

ಮುಂಬೈ ತಂಡದ ಎಸ್ ಸಜನಾ, ಹರ್ಮನ್‌ಪ್ರೀತ್ ಕೌರ್, ಅಮೆಲಿಯಾ ಕೆರ್, ಅಮನ್‌ಜೋತ್ ಕೌರ್, ಪೂಜಾ ವಸ್ತ್ರಾಕರ್ ಮತ್ತು ನ್ಯಾಟ್ ಸಿವರ್ ಬ್ರಂಟ್ ಅವರ ವಿಕೆಟ್‌ಗಳನ್ನು ಕೀಳುವ ಮೂಲಕ, ಕೇವಲ 113 ರನ್‌ಗಳಿಗೆ ಹಾಲಿ ಚಾಂಪಿಯನ್‌ ತಂಡ ಆಲೌಟ್‌ ಆಗುವಂತೆ ಮಾಡಿದರು.(PTI)

ಪಂದ್ಯದಲ್ಲಿ ಆರ್‌ಸಿಬಿ ನಾಯಕಿ ಸ್ಮೃತಿ ಮಂಧಾನ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡರು. ಈ ನಿರ್ಧಾರ ಅಭಿಮಾನಿಗಳಿಗೆ ಅಚ್ಚರಿ ಕೊಟ್ಟಿತು. ಆದರೆ, ಪೆರ್ರಿ ತಮ್ಮ ನಾಯಕಿಯ ನಿರ್ಧಾರವನ್ನು ಸಮರ್ಥಿಸಿದ್ದಾರೆ. 
icon

(4 / 7)

ಪಂದ್ಯದಲ್ಲಿ ಆರ್‌ಸಿಬಿ ನಾಯಕಿ ಸ್ಮೃತಿ ಮಂಧಾನ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡರು. ಈ ನಿರ್ಧಾರ ಅಭಿಮಾನಿಗಳಿಗೆ ಅಚ್ಚರಿ ಕೊಟ್ಟಿತು. ಆದರೆ, ಪೆರ್ರಿ ತಮ್ಮ ನಾಯಕಿಯ ನಿರ್ಧಾರವನ್ನು ಸಮರ್ಥಿಸಿದ್ದಾರೆ. (PTI)

ಒಟ್ಟು ನಾಲ್ಕು ಓವರ್‌ ಎಸೆದ ಪೆರ್ರಿ, ಅಂತಿಮವಾಗಿ ಕೇವಲ 15 ರನ್‌ ಬಿಟ್ಟುಕೊಟ್ಟು 6 ವಿಕೆಟ್‌ ಕಬಳಿಸಿದರು. 33 ವರ್ಷ ವರ್ಷದ ಆಸೀಸ್‌ ಆಟಗಾರ್ತಿ, ಡಬ್ಲ್ಯೂಪಿಎಲ್‌ ಇತಿಹಾಸದಲ್ಲಿ ಐದು ವಿಕೆಟ್ ಪಡೆದ ಐದನೇ ಬೌಲರ್ ಎನಿಸಿಕೊಂಡರು. 
icon

(5 / 7)

ಒಟ್ಟು ನಾಲ್ಕು ಓವರ್‌ ಎಸೆದ ಪೆರ್ರಿ, ಅಂತಿಮವಾಗಿ ಕೇವಲ 15 ರನ್‌ ಬಿಟ್ಟುಕೊಟ್ಟು 6 ವಿಕೆಟ್‌ ಕಬಳಿಸಿದರು. 33 ವರ್ಷ ವರ್ಷದ ಆಸೀಸ್‌ ಆಟಗಾರ್ತಿ, ಡಬ್ಲ್ಯೂಪಿಎಲ್‌ ಇತಿಹಾಸದಲ್ಲಿ ಐದು ವಿಕೆಟ್ ಪಡೆದ ಐದನೇ ಬೌಲರ್ ಎನಿಸಿಕೊಂಡರು. (PTI)

ಇದು ಡಬ್ಲ್ಯೂಪಿಎಲ್‌ ಇತಿಹಾಸದ ಅತ್ಯುತ್ತಮ ಬೌಲಿಂಗ್‌ ಅಂಕಿ-ಅಂಶವಾಗಿದೆ. ಕಳೆದ ಆವೃತ್ತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಮರಿಜನ್ನೆ ಕಪ್ ಗುಜರಾತ್ ಜೈಂಟ್ಸ್ ವಿರುದ್ಧ 15 ರನ್‌ಗಳಿಗೆ 5 ವಿಕೆಟ್‌ ಪಡೆದಿದ್ದು ಈವರೆಗಿನ ಅತ್ಯುತ್ತಮ ಅಂಕಿ-ಅಂಶವಾಗಿತ್ತು.
icon

(6 / 7)

ಇದು ಡಬ್ಲ್ಯೂಪಿಎಲ್‌ ಇತಿಹಾಸದ ಅತ್ಯುತ್ತಮ ಬೌಲಿಂಗ್‌ ಅಂಕಿ-ಅಂಶವಾಗಿದೆ. ಕಳೆದ ಆವೃತ್ತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಮರಿಜನ್ನೆ ಕಪ್ ಗುಜರಾತ್ ಜೈಂಟ್ಸ್ ವಿರುದ್ಧ 15 ರನ್‌ಗಳಿಗೆ 5 ವಿಕೆಟ್‌ ಪಡೆದಿದ್ದು ಈವರೆಗಿನ ಅತ್ಯುತ್ತಮ ಅಂಕಿ-ಅಂಶವಾಗಿತ್ತು.(PTI)

ಮೊದಲ 9 ಎಸೆತಗಳಲ್ಲಿ ವಿಕೆಟ್‌ ಪಡೆಯದ ಪೆರ್ರಿ, ನಂತರದ 15 ಎಸೆತಗಳಲ್ಲಿ 6 ವಿಕೆಟ್‌ ಪಡೆದರು.  ಇವರಲ್ಲಿ ನಾಲ್ವರು ಕ್ಲೀನ್‌ ಬೋಲ್ಡ್‌ ಆದರೆ, ಇಬ್ಬರು ಎಲ್‌ಬಿಡಬ್ಲ್ಯೂ ಬಲೆಗೆ ಬಿದ್ದರು.
icon

(7 / 7)

ಮೊದಲ 9 ಎಸೆತಗಳಲ್ಲಿ ವಿಕೆಟ್‌ ಪಡೆಯದ ಪೆರ್ರಿ, ನಂತರದ 15 ಎಸೆತಗಳಲ್ಲಿ 6 ವಿಕೆಟ್‌ ಪಡೆದರು.  ಇವರಲ್ಲಿ ನಾಲ್ವರು ಕ್ಲೀನ್‌ ಬೋಲ್ಡ್‌ ಆದರೆ, ಇಬ್ಬರು ಎಲ್‌ಬಿಡಬ್ಲ್ಯೂ ಬಲೆಗೆ ಬಿದ್ದರು.(PTI)


ಇತರ ಗ್ಯಾಲರಿಗಳು