ಆರ್ಸಿಬಿ ಹೆಸರು ಬದಲಾಯ್ತಷ್ಟೆ, ಹಣೆಬರಹವಲ್ಲ; ಫಾಫ್ ಪಡೆಯನ್ನು ಕ್ರೂರವಾಗಿ ಟೀಕಿಸಿದ ಭಾರತದ ಮಾಜಿ ಕ್ರಿಕೆಟಿಗ
- Aakash chopra on RCB Lost: ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಅವರು ಆರ್ಸಿಬಿ ತಂಡವನ್ನು ಟೀಕಿಸಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಹೆಸರು ಬದಲಾದರೂ ಹಣೆಬರಹ ಬದಲಾಗಲಿಲ್ಲ ಎಂದು ಹೇಳಿದ್ದಾರೆ.
- Aakash chopra on RCB Lost: ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಅವರು ಆರ್ಸಿಬಿ ತಂಡವನ್ನು ಟೀಕಿಸಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಹೆಸರು ಬದಲಾದರೂ ಹಣೆಬರಹ ಬದಲಾಗಲಿಲ್ಲ ಎಂದು ಹೇಳಿದ್ದಾರೆ.
(1 / 9)
ರಾಜಸ್ಥಾನ್ ರಾಯಲ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸೋಲನುಭವಿಸಿದ ಟೀಕೆಗಳು ಸಂಖ್ಯೆ ಹೆಚ್ಚಾಗುತ್ತಿದೆ. ಅಭಿಮಾನಿಗಳ ಜೊತೆಗೆ ಮಾಜಿ ಕ್ರಿಕೆಟರ್ಗಳು, ಕ್ರಿಕೆಟ್ ಎಕ್ಸ್ಫರ್ಟ್ಗಳು ಆರ್ಸಿಬಿ ಮ್ಯಾನೇಜ್ಮೆಂಟ್ ವಿರುದ್ಧ ಕಿಡಿಕಾರಿದ್ದಾರೆ.
(2 / 9)
ಅದರ ಸಾಲಿಗೆ ಮಾಜಿ ಕ್ರಿಕೆಟಿಗ ಹಾಗೂ ಕಾಮೆಂಟೇಟರ್ ಆಕಾಶ್ ಚೋಪ್ರಾ ಕೂಡ ಸೇರಿದ್ದಾರೆ. ಟೀಕಿಸುವುದರ ಜೊತೆಗೆ ಆರ್ಸಿಬಿ ಕುರಿತು ಕ್ರೂರ ಹೇಳಿಕೆಯೊಂದನ್ನು ನೀಡಿದ್ದಾರೆ. ಆರ್ಸಿಬಿಗೆ ಹೆಸರು ಬದಲಾದರೂ ಹಣೆಬರಹ ಬದಲಾಗಲಿಲ್ಲ ಎಂದು ಹೇಳಿದ್ದಾರೆ.
(3 / 9)
ಆರ್ಆರ್ ವಿರುದ್ಧ ಆರ್ಸಿಬಿ ಮೊದಲು ಬ್ಯಾಟಿಂಗ್ ನಡೆಸಿತು. ವಿರಾಟ್ ಕೊಹ್ಲಿ 72 ಎಸೆತಗಳಲ್ಲಿ 12 ಬೌಂಡರಿ, 4 ಸಿಕ್ಸರ್ ಸಹಿತ 113 ರನ್ ಗಳಿಸಿದರು. ಪರಿಣಾಮ ಆರ್ಸಿಬಿ 20 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 183 ರನ್ ಗಳಿಸಿತು.(AP)
(4 / 9)
ಈ ಗುರಿ ಹಿಂಬಾಲಿಸಿದ ರಾಜಸ್ಥಾನ್ ಸುಲಭ ಜಯ ಸಾಧಿಸಿತು. ಜೋಸ್ ಬಟ್ಲರ್ ಅವರ ಅದ್ಭುತ ಶತಕ (100) ಮತ್ತು ಸಂಜು ಸ್ಯಾಮ್ಸನ್ ಅವರ ಆಕರ್ಷಕ (69) ಅರ್ಧಶತಕದ ಸಹಾಯದಿಂದ 19.1 ಓವರ್ಗಳಲ್ಲೇ ಗೆಲುವಿನ ನಗೆ ಬೀರಿತು. ಈ ಜೈಪುರದಲ್ಲಿ ನಡೆಯಿತು.(AP)
(5 / 9)
ಆರ್ಸಿಬಿ ಸೋಲಿನ ಬಳಿಕ ಚೋಪ್ರಾ, ತಂಡದ ಪ್ರದರ್ಶನವನ್ನು ಟೀಕಿಸಿದ್ದಾರೆ. ಟೂರ್ನಿಯು ರೋಚಕತೆಯಿಂದ ಸಾಗುತ್ತಿದೆ ಎಂದು ಎಲ್ಲರೂ ಹೇಳುತ್ತಿದ್ದಾರೆ. ಆದರೆ ಬೆಂಗಳೂರು ತಂಡದಲ್ಲಿ ಅದು ಕಾಣುತ್ತಿಲ್ಲ. ಅಲ್ಲಿ ಹೋರಾಟವೇ ನಡೆಯುತ್ತಿಲ್ಲ ಎಂದು ಹೇಳಿದ್ದಾರೆ.(ANI)
(6 / 9)
ಕೊಹ್ಲಿ ರನ್ ಗಳಿಸಬೇಕೆಂದು ನಾವು ಬಯಸುತ್ತಿದ್ದೇವೆ, ಅದಕ್ಕೆ ತಕ್ಕಂತೆ ಅವರು ಆಡುತ್ತಿದ್ದಾರೆ. ಆದರೆ ಉಳಿದವರು ವಿಫಲರಾಗುತ್ತಿದ್ದಾರೆ. ಹಾಗಾಗಿ ಎಷ್ಟೇ ಸ್ಕೋರ್ ಮಾಡಿದರೂ ಅದು ಸಾಕಾಗುತ್ತಿಲ್ಲ ಎಂದು ಅವರು ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ವಿವರಿಸಿದ್ದಾರೆ.(ANI)
(7 / 9)
ಆರ್ಸಿಬಿ ತಂಡಕ್ಕೆ ಏನಾಗುತ್ತಿದೆ. ಆಡಿರುವ 5ರಲ್ಲಿ 4 ಸೋಲು, 1 ಗೆಲುವು ಸಾಧಿಸಿದ್ದಾರೆ. ಅವರ ಪರಿಸ್ಥಿತಿ ತುಂಬಾ ಕೆಟ್ಟದಾಗಿದೆ. ಆರ್ಸಿಬಿ ತನ್ನ ಹೆಸರನ್ನು ಬದಲಿಸಿಕೊಂಡಿದ್ದಾರೆ. ಆದರೆ ತಂಡದ ಹಣೆಬರಹ ಮಾತ್ರ ಬದಲಾಗಿಲ್ಲ ಎಂದು ಭಾರತದ ಮಾಜಿ ಓಪನರ್ ಹೇಳಿದ್ದಾರೆ. (AFP)
(8 / 9)
ಕೊಹ್ಲಿ ನಿಧಾನವಾಗಿ ಬ್ಯಾಟ್ ಬೀಸಿದರು ಎನ್ನುವುದರ ಬಗ್ಗೆ ಚರ್ಚೆ ನಡೆಯುತ್ತಿದೆ. ಆದರೆ, ಸಮಸ್ಯೆ ಅದಲ್ಲ. ಮತ್ತೊಂದು ಯಾರೂ ಆಡುತ್ತಿಲ್ಲ. ಎಷ್ಟು ಸಲ ಒಬ್ಬರೇ ಆಡಬೇಕಾಗುತ್ತದೆ. ಉಳಿದವರು ಕ್ರೀಸ್ಗೆ ಬಂದು ವಾಪಸ್ ಹೋಗಬೇಕೇ ಎಂದು ಆಕಾಶ್ ಚೋಪ್ರಾ ಪ್ರಶ್ನಿಸಿದ್ದಾರೆ.
ಇತರ ಗ್ಯಾಲರಿಗಳು