ಆರ್‌ಸಿಬಿ ಚೊಚ್ಚಲ ಐಪಿಎಲ್ ಟ್ರೋಫಿ ಕನಸಿಗೆ ಆನೆಬಲ; ಪ್ಲೇಆಫ್‌ಗೂ ಮುನ್ನ ತಂಡ ಸೇರಿಕೊಂಡ ಜೋಶ್ ಹೇಜಲ್‌ವುಡ್
ಐಪಿಎಲ್ 2025ರ ಆವೃತ್ತಿಯ ಪ್ಲೇಆಫ್ ಪಂದ್ಯಗಳಿಗೆ ಮುಂಚಿತವಾಗಿ ಆರ್‌ಸಿಬಿ ತಂಡಕ್ಕೆ ಆನೆಬಲ ಬಂದಂತಾಗಿದೆ. ಆಸ್ಟ್ರೇಲಿಯಾದ ವೇಗಿ ಜೋಶ್ ಹೇಜಲ್‌ವುಡ್ ಕೊನೆಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಶಿಬಿರ ಸೇರಿಕೊಂಡಿದ್ದಾರೆ. ಇದರೊಂದಿಗೆ ಅಭಿಮಾನಿಗಳು ಖುಷಿಯಾಗಿದ್ದಾರೆ. ಪ್ಲೇಆಫ್ ಪಂದ್ಯಗಳಲ್ಲಿ ತಂಡ ಇನ್ನಷ್ಟು ಬಲಿಷ್ಠವಾಗಲಿದೆ.
(1 / 7)
ಮೇ 17 ರಂದು ಟೂರ್ನಿಯ ಎರಡನೇ ಹಂತದ ಪಂದ್ಯಗಳು ಆರಂಭಗೊಂಡಿವೆ. ಆದರೆ ಜೋಶ್ ತಂಡಕ್ಕೆ ಬಂದಿರಲಿಲ್ಲ. ಇದೀಗ ಅವರ ಆಗಮನದೊಂದಿಗೆ ವೇಗದ ಬೌಲಿಂಗ್ ವಿಭಾಗ ಮತ್ತಷ್ಟು ಬಲವಾಗಿದೆ. ಅಲ್ಲದೆ ಅಭಿಮಾನಿಗಳು ಕೂಡಾ ಜೋಶ್ ಆಗಮನಕ್ಕಾಗಿ ಕುತೂಹಲದಿಂದ ಕಾಯುತ್ತಿದ್ದಾರೆ.
(2 / 7)
ಇಂಗ್ಲೆಂಡ್‌ನ ಲಾರ್ಡ್ಸ್ ಕ್ರಿಕೆಟ್ ಮೈದಾನದಲ್ಲಿ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC) ಫೈನಲ್ ಪಂದ್ಯ ನಡೆಯಲಿದೆ. ಮಹತ್ವದ ಐಸಿಸಿ ಪಂದ್ಯಕ್ಕೆ ತಯಾರಿ ನಡೆಸುವ ಸಲುವಾಗಿ ಹೇಜಲ್‌ವುಡ್ ಟಿ20 ಲೀಗ್‌ನ ಉಳಿದ ಭಾಗದಲ್ಲಿ ಆಡಲು ಭಾರತಕ್ಕೆ ಮರಳುವುದಿಲ್ಲ ಎಂದು ಹಲವಾರು ವರದಿಗಳು ತಿಳಿಸಿದ್ದವು.
(AP)(3 / 7)
ಭುಜದ ನೋವಿನಿಂದ ಬಳಲುತ್ತಿದ್ದ ಹೇಜಲ್‌ವುಡ್, 2025ರ ಐಪಿಎಲ್ ಟೂರ್ನಿಯ ಪಂದ್ಯಗಳನ್ನು ಮುಂದೂಡುವ ಮುನ್ನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಿಂದ ಹೊರಗುಳಿದಿದ್ದರು. ಆ ನಂತರ ತಂಡ ಆಡಿದ ಎಸ್‌ಆರ್‌ಎಚ್ ವಿರುದ್ಧದ ಕೊನೆಯ ಪಂದ್ಯದಲ್ಲೂ ಜೋಶ್ ಆಡಿರಲಿಲ್ಲ.
(AFP)(4 / 7)
ಮುಂಬರುವ ಪ್ಲೇಆಫ್ ಪಂದ್ಯಗಳಿಗೂ ಮುಂಚಿತವಾಗಿ ಹೇಜಲ್‌ವುಡ್ ಆರ್‌ಸಿಬಿ ಶಿಬಿರವನ್ನು ಸೇರಲಿದ್ದಾರೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿತ್ತು. ತಂಡವು ಚೊಚ್ಚಲ ಐಪಿಎಲ್ ಪ್ರಶಸ್ತಿ ಗೆಲ್ಲುವ ಅವಕಾಶಗಳನ್ನು ಹೆಚ್ಚಿಸಲು ವೇಗಿ ಕೊನೆಗೂ ತಂಡಕ್ಕೆ ಬಂದಿದ್ದಾರೆ.
(AFP)(5 / 7)
ಆರ್‌ಸಿಬಿ ಫ್ರಾಂಚೈಸಿಯು ಅಧಿಕೃತ ಎಕ್ಸ್ (ಹಿಂದೆ ಟ್ವಿಟರ್) ಹ್ಯಾಂಡಲ್ ಮೂಲಕ ಹೇಜಲ್‌ವುಡ್ ಲಕ್ನೋಗೆ ಬಂದು ತಂಡ ಸೇರಿಕೊಂಡಿರುವ ಬಗ್ಗೆ ಪೋಸ್ಟ್ ಮಾಡಿದೆ.
(AP)(6 / 7)
ಐಪಿಎಲ್ 2025ರಲ್ಲಿ ಆರ್‌ಸಿಬಿ ಪರ ಹೇಜಲ್‌ವುಡ್ ಅತ್ಯುತ್ತಮ ಬೌಲರ್ ಆಗಿದ್ದಾರೆ. 10 ಪಂದ್ಯಗಳಲ್ಲಿ 18 ವಿಕೆಟ್ ಕಬಳಿಸಿದ್ದಾರೆ.
(PTI)ಇತರ ಗ್ಯಾಲರಿಗಳು