ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಸೋತಾಗಲೂ, ಗೆದ್ದಾಗಲೂ ಕೈಬಿಡದೆ ಬೆಂಬಲಿಸಿದ ನಿಷ್ಟಾವಂತ ಫ್ಯಾನ್ಸ್‌ಗೆ ಆರ್‌ಸಿಬಿ ಗೌರವ ವಂದನೆ -Photos

ಸೋತಾಗಲೂ, ಗೆದ್ದಾಗಲೂ ಕೈಬಿಡದೆ ಬೆಂಬಲಿಸಿದ ನಿಷ್ಟಾವಂತ ಫ್ಯಾನ್ಸ್‌ಗೆ ಆರ್‌ಸಿಬಿ ಗೌರವ ವಂದನೆ -Photos

  • ಹಾಲಿ ಚಾಂಪಿಯನ್‌ ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧದ ಲೀಗ್‌ ಹಂತದ ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಭರ್ಜರಿ ಜಯ ಸಾಧಿಸಿದೆ. ಆ ಮೂಲಕ ಐಪಿಎಲ್ 2024ರ ಪ್ಲೇಆಫ್‌ಗೆ ಪ್ರವೇಶ ಪಡೆದಿದೆ. ತವರು ನೆಲ ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸೇರಿದ್ದ ಅಭಿಮಾನಿಗಳ ಮುಂದೆ ಅಮೋಘ ಪ್ರದರ್ಶನ ನೀಡಿ ಅದ್ಧೂರಿ ಜಯಭೇರಿ ಬಾರಿಸಿದೆ.

ಆರ್‌ಸಿಬಿಗೆ ಅಭಿಮಾನಿಗಳೇ ಶಕ್ತಿ. ರೋಚಕ ಪಂದ್ಯದ ವೇಳೆ ತಂಡವನ್ನು ಬೆಂಬಲಿಸಿದವರು ಅಭಿಮಾನಿಗಳು. ಹೀಗಾಗಿ ಪ್ಲೇಆಫ್‌ಗೆ ಲಗ್ಗೆಇಟ್ಟ ಖುಷಿಯಲ್ಲಿದ್ದ ಆರ್‌ಸಿಬಿ ತಂಡವು ತವರಿನ ಅಭಿಮಾನಿಗಳಿಗೆ ಗೌರವ ವಂದನೆ ಸಲ್ಲಿಸಿದೆ. 
icon

(1 / 7)

ಆರ್‌ಸಿಬಿಗೆ ಅಭಿಮಾನಿಗಳೇ ಶಕ್ತಿ. ರೋಚಕ ಪಂದ್ಯದ ವೇಳೆ ತಂಡವನ್ನು ಬೆಂಬಲಿಸಿದವರು ಅಭಿಮಾನಿಗಳು. ಹೀಗಾಗಿ ಪ್ಲೇಆಫ್‌ಗೆ ಲಗ್ಗೆಇಟ್ಟ ಖುಷಿಯಲ್ಲಿದ್ದ ಆರ್‌ಸಿಬಿ ತಂಡವು ತವರಿನ ಅಭಿಮಾನಿಗಳಿಗೆ ಗೌರವ ವಂದನೆ ಸಲ್ಲಿಸಿದೆ. (AFP)

ಪಂದ್ಯದ ಬಳಿಕ ಆರ್‌ಸಿಬಿ ತಂಡದ ಎಲ್ಲಾ ಆಟಗಾರರು ಮೈದಾನದ ಸುತ್ತಲೂ ನಡೆದು, ಸ್ಟೇಡಿಯಂನಲ್ಲಿ ಸೇರಿದ್ದ ಅಭಿಮಾನಿಗಳಿಗೆ ವಂದಿಸಿದರು. ಅವರತ್ತ ಕೈಬೀಸಿ ಬೆಂಬಲಕ್ಕಾಗಿ ಧನ್ಯವಾದ ಹೇಳಿದರು. ಈ ವೇಳೆ ಕೆಲವು ಅದೃಷ್ಟವಂತ ಅಭಿಮಾನಿಗಳಿಗೆ ಆಟಗಾರರಿಂದ ಆಟೋಗ್ರಾಫ್‌ ಕೂಡಾ ಸಿಕ್ಕಿತು.
icon

(2 / 7)

ಪಂದ್ಯದ ಬಳಿಕ ಆರ್‌ಸಿಬಿ ತಂಡದ ಎಲ್ಲಾ ಆಟಗಾರರು ಮೈದಾನದ ಸುತ್ತಲೂ ನಡೆದು, ಸ್ಟೇಡಿಯಂನಲ್ಲಿ ಸೇರಿದ್ದ ಅಭಿಮಾನಿಗಳಿಗೆ ವಂದಿಸಿದರು. ಅವರತ್ತ ಕೈಬೀಸಿ ಬೆಂಬಲಕ್ಕಾಗಿ ಧನ್ಯವಾದ ಹೇಳಿದರು. ಈ ವೇಳೆ ಕೆಲವು ಅದೃಷ್ಟವಂತ ಅಭಿಮಾನಿಗಳಿಗೆ ಆಟಗಾರರಿಂದ ಆಟೋಗ್ರಾಫ್‌ ಕೂಡಾ ಸಿಕ್ಕಿತು.(AFP)

ಪ್ರಸಕ್ತ ಆವೃತ್ತಿಯಲ್ಲಿ ಆರ್‌ಸಿಬಿಯ ಆರಂಭ ತೀರಾ ಕಳಪೆಯಾಗಿತ್ತು. ಮೊದಲ 7 ಪಂದ್ಯಗಳಲ್ಲಿ 6ರಲ್ಲಿ ಸೋತು ಟೂರ್ನಿಯಲ್ಲಿ ಹೊರಬೀಳುವ ಭೀತಿಯಲ್ಲಿತ್ತು. ಆದರೆ, ಆ ಬಳಿಕ ಸತತ 6 ಪಂದ್ಯಗಳಲ್ಲಿ ಗೆದ್ದು ಇದೀಗ ಪ್ಲೇಆಫ್‌ ಪ್ರವೇಶ ಮಾಡಿದೆ. ತಂಡದ ನಿರಂತರ ಸೋಲಿನ ಸಮಯದಲ್ಲೂ, ವೈಫಲ್ಯಗಳಲ್ಲೂ ಬೆಂಬಲಕ್ಕೆ ನಿಂತ ಅಭಿಮಾನಿಗಳಿಗೆ ಆಟಗಾರರು ಹೃದಯ ತುಂಬಿ ವಂದಿಸಿದರು.
icon

(3 / 7)

ಪ್ರಸಕ್ತ ಆವೃತ್ತಿಯಲ್ಲಿ ಆರ್‌ಸಿಬಿಯ ಆರಂಭ ತೀರಾ ಕಳಪೆಯಾಗಿತ್ತು. ಮೊದಲ 7 ಪಂದ್ಯಗಳಲ್ಲಿ 6ರಲ್ಲಿ ಸೋತು ಟೂರ್ನಿಯಲ್ಲಿ ಹೊರಬೀಳುವ ಭೀತಿಯಲ್ಲಿತ್ತು. ಆದರೆ, ಆ ಬಳಿಕ ಸತತ 6 ಪಂದ್ಯಗಳಲ್ಲಿ ಗೆದ್ದು ಇದೀಗ ಪ್ಲೇಆಫ್‌ ಪ್ರವೇಶ ಮಾಡಿದೆ. ತಂಡದ ನಿರಂತರ ಸೋಲಿನ ಸಮಯದಲ್ಲೂ, ವೈಫಲ್ಯಗಳಲ್ಲೂ ಬೆಂಬಲಕ್ಕೆ ನಿಂತ ಅಭಿಮಾನಿಗಳಿಗೆ ಆಟಗಾರರು ಹೃದಯ ತುಂಬಿ ವಂದಿಸಿದರು.(AFP)

ತಂಡವು ನಿರಂತರವಾಗಿ ಸೋಲುತ್ತಿದ್ದರೂ, ಅಭಿಮಾನಿಗಳು ಮಾತ್ರ ತಮ್ಮ ತಂಡದ ಮೇಲಿನ ಭರವಸೆ ಕಳೆದುಕೊಂಡಿರಲಿಲ್ಲ. ಮೈದಾನಕ್ಕೆ ಬಂದು ಪಂದ್ಯಗಳನ್ನು ವೀಕ್ಷಿಸುತ್ತಿದ್ದರು. ಇದು ಆಟಗಾರರ ಮನಗೆದ್ದಿದೆ. ತಮ್ಮ ತಂಡದ ಮೇಲೆ ಅಚಲವಾದ ನಂಬಿಕೆ ಹಾಗೂ ಭರವಸೆ ಅಭಿಮಾನಿಗಳಿಗಿತ್ತು. ಇದಕ್ಕೆ ಫ್ರಾಂಚೈಸ್‌ ಕಡೆಯಿಂದ ಗೌರವ ಸಲ್ಲಿಕೆಯಾಗಿದೆ.
icon

(4 / 7)

ತಂಡವು ನಿರಂತರವಾಗಿ ಸೋಲುತ್ತಿದ್ದರೂ, ಅಭಿಮಾನಿಗಳು ಮಾತ್ರ ತಮ್ಮ ತಂಡದ ಮೇಲಿನ ಭರವಸೆ ಕಳೆದುಕೊಂಡಿರಲಿಲ್ಲ. ಮೈದಾನಕ್ಕೆ ಬಂದು ಪಂದ್ಯಗಳನ್ನು ವೀಕ್ಷಿಸುತ್ತಿದ್ದರು. ಇದು ಆಟಗಾರರ ಮನಗೆದ್ದಿದೆ. ತಮ್ಮ ತಂಡದ ಮೇಲೆ ಅಚಲವಾದ ನಂಬಿಕೆ ಹಾಗೂ ಭರವಸೆ ಅಭಿಮಾನಿಗಳಿಗಿತ್ತು. ಇದಕ್ಕೆ ಫ್ರಾಂಚೈಸ್‌ ಕಡೆಯಿಂದ ಗೌರವ ಸಲ್ಲಿಕೆಯಾಗಿದೆ.(AFP)

ಪಂದ್ಯದಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಪಾತ್ರರಾದ ನಾಯಕ ಫಾಫ್‌ ಡುಪ್ಲೆಸಿಸ್‌ ಕೂಡಾ ಅಭಿಮಾನಿಗಳ ಬೆಂಬಲಕ್ಕೆ ಮನಸೋತಿದ್ದಾರೆ. ನಾವು ಹಲವು ಪಂದ್ಯಗಳಲ್ಲಿ ಸತತವಾಗಿ ಸೋತರೂ ಅಭಿಮಾನಿಗಳು ಮಾತ್ರ ನಮಗಾಗಿ ಮೈದಾನಕ್ಕೆ ಬಂದಿದ್ದರು. ಅವರ ಬೆಂಬಲಕ್ಕಾಗಿ ಪ್ರೇಕ್ಷಕರಿಗೆ ಧನ್ಯವಾದ ಸಲ್ಲಿಸಲಿದ್ದೇವೆ ಎಂದು ಫಾಫ್‌ ಹೇಳಿದರು.
icon

(5 / 7)

ಪಂದ್ಯದಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಪಾತ್ರರಾದ ನಾಯಕ ಫಾಫ್‌ ಡುಪ್ಲೆಸಿಸ್‌ ಕೂಡಾ ಅಭಿಮಾನಿಗಳ ಬೆಂಬಲಕ್ಕೆ ಮನಸೋತಿದ್ದಾರೆ. ನಾವು ಹಲವು ಪಂದ್ಯಗಳಲ್ಲಿ ಸತತವಾಗಿ ಸೋತರೂ ಅಭಿಮಾನಿಗಳು ಮಾತ್ರ ನಮಗಾಗಿ ಮೈದಾನಕ್ಕೆ ಬಂದಿದ್ದರು. ಅವರ ಬೆಂಬಲಕ್ಕಾಗಿ ಪ್ರೇಕ್ಷಕರಿಗೆ ಧನ್ಯವಾದ ಸಲ್ಲಿಸಲಿದ್ದೇವೆ ಎಂದು ಫಾಫ್‌ ಹೇಳಿದರು.(AFP)

ತಂಡವು ಮುಂದೆ ಮೇ 22ರ ಬುಧವಾರ ಎಲಿಮನೇಟರ್‌ ಪಂದ್ಯದಲ್ಲಿ ಆಡಲಿದೆ. ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿರುವ ಎಲಿಮನೇಟರ್‌ ಪಂದ್ಯದಲ್ಲಿ ರಾಜಸ್ಥಾನ್‌ ರಾಯಲ್ಸ್‌ ಅಥವಾ ಸನ್‌ರೈಸರ್ಸ್‌ ಹೈದರಾಬಾದ್‌ ತಂಡವನ್ನು ಎದುರಿಸಲಿದೆ.
icon

(6 / 7)

ತಂಡವು ಮುಂದೆ ಮೇ 22ರ ಬುಧವಾರ ಎಲಿಮನೇಟರ್‌ ಪಂದ್ಯದಲ್ಲಿ ಆಡಲಿದೆ. ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿರುವ ಎಲಿಮನೇಟರ್‌ ಪಂದ್ಯದಲ್ಲಿ ರಾಜಸ್ಥಾನ್‌ ರಾಯಲ್ಸ್‌ ಅಥವಾ ಸನ್‌ರೈಸರ್ಸ್‌ ಹೈದರಾಬಾದ್‌ ತಂಡವನ್ನು ಎದುರಿಸಲಿದೆ.

ಸಿಎಸ್‌ಕೆ ವಿರುದ್ಧ ಗೆದ್ದ ಆರ್‌ಸಿಬಿ ನಾಲ್ಕನೇ ತಂಡವಾಗಿ ಪ್ಲೇಆಫ್‌ ಪ್ರವೇಶಿಸಿತು. ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಬೆಂಗಳೂರು 20 ಓವರ್‌​​ಗಳಲ್ಲಿ 5 ವಿಕೆಟ್ ನಷ್ಟಕ್ಕೆ 218 ರನ್ ಗಳಿಸಿತು. ಗೆಲುವಿಗೆ 219 ರನ್‌ಗ​ಳ ಗುರಿ ಬೆನ್ನಟ್ಟಿದ ಸಿಎಸ್‌​ಕೆ, 20 ಓವರ್‌​​ಗಳಲ್ಲಿ 7 ವಿಕೆಟ್ ಕಳೆದುಕೊಂಡು 191 ರನ್ ಮಾತ್ರವೇ ಗಳಿಸಿತು. ಇದರೊಂದಿಗೆ ಆರ್‌ಸಿಬಿ 27 ರನ್‌ಗಳಿಂದ ಗೆದ್ದು ಬೀಗಿತು.
icon

(7 / 7)

ಸಿಎಸ್‌ಕೆ ವಿರುದ್ಧ ಗೆದ್ದ ಆರ್‌ಸಿಬಿ ನಾಲ್ಕನೇ ತಂಡವಾಗಿ ಪ್ಲೇಆಫ್‌ ಪ್ರವೇಶಿಸಿತು. ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಬೆಂಗಳೂರು 20 ಓವರ್‌​​ಗಳಲ್ಲಿ 5 ವಿಕೆಟ್ ನಷ್ಟಕ್ಕೆ 218 ರನ್ ಗಳಿಸಿತು. ಗೆಲುವಿಗೆ 219 ರನ್‌ಗ​ಳ ಗುರಿ ಬೆನ್ನಟ್ಟಿದ ಸಿಎಸ್‌​ಕೆ, 20 ಓವರ್‌​​ಗಳಲ್ಲಿ 7 ವಿಕೆಟ್ ಕಳೆದುಕೊಂಡು 191 ರನ್ ಮಾತ್ರವೇ ಗಳಿಸಿತು. ಇದರೊಂದಿಗೆ ಆರ್‌ಸಿಬಿ 27 ರನ್‌ಗಳಿಂದ ಗೆದ್ದು ಬೀಗಿತು.


ಟಿ20 ವರ್ಲ್ಡ್‌ಕಪ್ 2024

ಇತರ ಗ್ಯಾಲರಿಗಳು