IPL 2024: ಸಿಎಸ್‌ಕೆ ವಿರುದ್ಧ ಚೆಪಾಕ್ ಮೈದಾನದಲ್ಲಿ ಕಳೆದ 15 ವರ್ಷಗಳಿಂದ ಗೆದ್ದೇ ಇಲ್ಲ ಆರ್‌ಸಿಬಿ
- ಐಪಿಎಲ್ 2024ರ ಆವೃತ್ತಿ ವೇಳಾಪಟ್ಟಿ ಪ್ರಕಟಗೊಂಡಿದೆ. ಉದ್ಘಾಟನಾ ಪಂದ್ಯದಲ್ಲಿ ಆರ್‌ಸಿಬಿ ಹಾಗೂ ಸಿಎಸ್‌ಕೆ ತಂಡಗಳು ಮುಖಾಮುಖಿಯಾಗುತ್ತಿದೆ. ಚೆನ್ನೈ ತವರು ಚೆಪಾಕ್ ಅಂಗಳದಲ್ಲಿ ನಡೆಯಲಿರುವ ಪಂದ್ಯ ರೋಚಕತೆ ಸೃಷ್ಟಿಸಿದೆ. ಆದರೆ, ಈ ಮೈದಾನವು ಆರ್‌ಸಿಬಿಗೆ ದುರದೃಷ್ಟಕರವಾಗಿದೆ. ಏಕೆಂದರೆ ಕಳೆದ 15 ವರ್ಷಗಳಲ್ಲಿ ಇಲ್ಲಿ ತಂಡವು ಒಂದೇ ಒಂದು ಪಂದ್ಯವನ್ನೂ ಗೆದ್ದಿಲ್ಲ.

(1 / 8)
17ನೇ ಆವೃತ್ತಿಯ ಐಪಿಎಲ್ ಟೂರ್ನಿಯು ಮಾರ್ಚ್ 22ರಂದು ಆರಂಭವಾಗಲಿದೆ. ವೇಳಾಪಟ್ಟಿಯ ಘೋಷಣೆಯೊಂದಿಗೆ ಐಪಿಎಲ್ ಕ್ರೇಜ್ ಆರಂಭವಾಗಿದೆ. ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗುತ್ತಿದೆ.
(PTI)(2 / 8)
ಉದ್ಘಾಟನಾ ಪಂದ್ಯವು ಹಾಲಿ ಚಾಂಪಿಯನ್ ಸಿಎಸ್‌ಕೆ ತವರು ಮೈದಾನ ಚೆಪಾಕ್ ಮೈದಾನದಲ್ಲಿ ನಡೆಯಲಿದೆ. ಇದರೊಂದಿಗೆ ಹಳದಿ ಆರ್ಮಿಯು ಐಪಿಎಲ್ ಕ್ರಿಕೆಟ್ ಇತಿಹಾಸದಲ್ಲಿ 9ನೇ ಬಾರಿಗೆ ಮೊದಲ ಪಂದ್ಯದಲ್ಲಿ ಆಡಲಿದೆ.
(PTI)(3 / 8)
ಸಿಎಸ್‌ಕೆ ಮತ್ತು ಆರ್‌ಸಿಬಿ ತಂಡಗಳು ಐಪಿಎಲ್ ಇತಿಹಾಸದಲ್ಲಿ ಒಟ್ಟು 31 ಬಾರಿ ಮುಖಾಮುಖಿಯಾಗಿವೆ. ಇದರಲ್ಲಿ ಸಿಎಸ್‌ಕೆ 20 ಪಂದ್ಯಗಳಲ್ಲಿ ಗೆದ್ದರೆ, ಆರ್‌ಸಿಬಿಯು 10 ಪಂದ್ಯಗಳಲ್ಲಿ ಮಾತ್ರ ವಿಜಯದ ನಗೆ ಬೀರಿದೆ.
(AFP)(4 / 8)
ಚೆಪಾಕ್‌ನಲ್ಲಿ ಆರ್‌ಸಿಬಿ ದಾಖಲೆಯು ತೀರಾ ಕಳಪೆಯಾಗಿದೆ. ಚೆನ್ನೈನ ಎಂಎ ಚಿದಂಬರಂ ಮೈದಾನ ಆರ್‌ಸಿಬಿ ಪಾಲಿಗೆ ಸೋಲಿನ ತಾಣವಾಗಿದೆ.
(PTI)(5 / 8)
16 ವರ್ಷಗಳ ಐಪಿಎಲ್ ಇತಿಹಾಸದಲ್ಲಿ ಆರ್‌ಸಿಬಿ ತಂಡವು ಬಲಿಷ್ಠ ಸಿಎಸ್‌ಕೆ ವಿರುದ್ಧ ಚೆಪಾಕ್ ಮೈದಾನದಲ್ಲಿ ಕೇವಲ ಒಂದು ಪಂದ್ಯದಲ್ಲಿ ಮಾತ್ರ ಗೆದ್ದಿದೆ.
(PTI)(6 / 8)
ರೆಡ್ ಆಂಡ್ ಗೋಲ್ಡ್ ಆರ್ಮಿಯು 2008ರಲ್ಲಿ ಚೆಪಾಕ್ಮ್ ಮೈದಾನದಲ್ಲಿ ಮೊದಲ ಋತುವಿನ ಪಂದ್ಯದಲ್ಲಿ ಸಿಎಸ್‌ಕೆ ತಂಡವನ್ನು ಸೋಲಿಸಿತ್ತು. ಅಂದಿನಿಂದಿಂದಿನವರೆಗೂ ಚೆಪಾಕ್ ಅಂಗಳದಲ್ಲಿ ಆರ್‌ಸಿಬಿ ವಿರುದ್ದ ಚೆನ್ನೈ ಅಜೇಯವಾಗಿದೆ.
(PTI)(7 / 8)
2008ರಿಂದ 2019ರವರೆಗೆ, ಆರ್‌ಸಿಬಿ ಮತ್ತು ಸಿಎಸ್‌ಕೆ ಚೆಪಾಕ್ ಸ್ಟೇಡಿಯಂನಲ್ಲಿ 7 ಬಾರಿ ಆಡಿವೆ. ಇದರಲ್ಲಿ ಆರ್‌ಸಿಬಿ ತಂಡ ಒಂದು ಬಾರಿ ಹಾಗೂ ಸಿಎಸ್‌ಕೆ ತಂಡ 6 ಬಾರಿ ಜಯ ಸಾಧಿಸಿದೆ.
(PTI)ಇತರ ಗ್ಯಾಲರಿಗಳು