ಆರ್‌ಸಿಬಿ vs ಸಿಎಸ್‌ಕೆ ಮುಖಾಮುಖಿಯಲ್ಲಿ ಹೆಚ್ಚು ರನ್, ವಿಕೆಟ್ ಪಡೆದವರು ಯಾರು; ವಿರಾಟ್ ದಾಖಲೆಗೆ ಬೇಕು 1 ರನ್
- RCB vs CSK: ಐಪಿಎಲ್ 2024ರ ಆವೃತ್ತಿಯ ಉದ್ಘಾಟನಾ ಪಂದ್ಯದಲ್ಲಿ ಎರಡು ಬಲಿಷ್ಠ ತಂಡಗಳು ಕಣಕ್ಕಿಳಿಯುತ್ತಿವೆ. ಹಾಲಿ ಚಾಂಪಿಯನ್ ಸಿಎಸ್‌ಕೆ ಮತ್ತು ಆರ್‌ಸಿಬಿ ತಂಡಗಳ ಮುಖಾಮುಖಿಗೆ ಚೆಪಾಕ್ ಅಂಗಳ ಸಜ್ಜಾಗಿದೆ. ಉಭಯ ತಂಡಗಳ ನಡುವಿನ ಈವರೆಗಿನ ಮುಖಾಮುಖಿಯಲ್ಲಿ ಆಟಗಾರರ ದಾಖಲೆ ಹೇಗಿದೆ ಎಂಬುದನ್ನು ನೋಡೋಣ.

(1 / 6)
ಆರ್‌ಸಿಬಿ ಮತ್ತು ಸಿಎಸ್‌ಕೆ ತಂಡಗಳ ನಡುವಿನ ಪರಸ್ಪರ ಮುಖಾಮುಖಿಯಲ್ಲಿ ಅಧಿಕ ರನ್ ಗಳಿಸಿದ ದಾಖಲೆ ವಿರಾಟ್ ಕೊಹ್ಲಿ ಹೆಸರಲ್ಲಿದೆ. ಇದೇ ವೇಳೆ ರವೀಂದ್ರ ಜಡೇಜಾ
ಅತಿ ಹೆಚ್ಚು ವಿಕೆಟ್ ಪಡೆದಿದ್ದಾರೆ.
(2 / 6)
ವಿರಾಟ್ ಕೊಹ್ಲಿ ಚೆನ್ನೈ ವಿರುದ್ಧ ಬರೋಬ್ಬರಿ 999 ರನ್ ಗಳಿಸಿದ್ದಾರೆ. ಅವರು ಇನ್ನು 1 ರನ್ ಗಳಿಸಿದರೆ, ತಂಡದ ವಿರುದ್ಧ 1000 ರನ್ ಮೈಲಿಗಲ್ಲು ತಲುಪಲಿದ್ದಾರೆ.
(3 / 6)
ಸಿಎಸ್‌ಕೆ ತಂಡದ ಪ್ರಮುಖ ಆಲ್‌ರೌಂಡರ್ ರವೀಂದ್ರ ಜಡೇಜಾ, 18 ವಿಕೆಟ್‌ಗಳನ್ನು ಪಡೆದಿದ್ದಾರೆ. ವಿಕೆಟ್ ಪಡೆದವರ ಪಟ್ಟಿಯಲ್ಲಿ ಜಡ್ಡುಗೆ ಅಗ್ರಸ್ಥಾನ.
(4 / 6)
ಶಿವಂ ದುಬೆ ಅಜೇಯ 95 ರನ್ ಗಳಿಸುವ ಮೂಲಕ, ಉಭಯ ತಂಡಗಳ ಮುಖಾಮುಖಿಯೊಂದರಲ್ಲಿ ಗರಿಷ್ಠ ರನ್ ಗಳಿಸಿದ ರೆಕಾರ್ಡ್ ಹೊಂದಿದ್ದಾರೆ.
(5 / 6)
ಉಭಯ ತಂಡಗಳು ಈವರೆಗೆ ಒಟ್ಟು 31 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ಸಿಎಸ್‌ಕೆ 20 ಮತ್ತು ಆರ್‌ಸಿಬಿ 10 ಪಂದ್ಯಗಳನ್ನು ಗೆದ್ದಿದೆ.
ಇತರ ಗ್ಯಾಲರಿಗಳು