ಗಣೇಶ ಚತುರ್ಥಿಯಂದು ಗಣಪನ ಭಜಿಸಲು ಇಲ್ಲಿದೆ ನೋಡಿ ಹನಿಗವನ, ಭಕ್ತಿಯ ಜೊತೆಗೆ ಪ್ರೀತಿಯ ಕೂಡಿಸಿ ಓದಿ-read here to worship ganesha on ganesha chauthi with love and devotion smk ,ಫೋಟೋ ಗ್ಯಾಲರಿ ಸುದ್ದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಗಣೇಶ ಚತುರ್ಥಿಯಂದು ಗಣಪನ ಭಜಿಸಲು ಇಲ್ಲಿದೆ ನೋಡಿ ಹನಿಗವನ, ಭಕ್ತಿಯ ಜೊತೆಗೆ ಪ್ರೀತಿಯ ಕೂಡಿಸಿ ಓದಿ

ಗಣೇಶ ಚತುರ್ಥಿಯಂದು ಗಣಪನ ಭಜಿಸಲು ಇಲ್ಲಿದೆ ನೋಡಿ ಹನಿಗವನ, ಭಕ್ತಿಯ ಜೊತೆಗೆ ಪ್ರೀತಿಯ ಕೂಡಿಸಿ ಓದಿ

  • ಚೌತಿಯಂದು ಗಣಪನ ಭಜಿಸಲು ಇಲ್ಲಿದೆ ನೋಡಿ ಹನಿಗವನ ನೀವೂ ಭಜಿಸಿ, ಭಕ್ತಿಯಿಂದ ಪ್ರಾರ್ಥಿಸಿ ಗಣಪನ ಆಶಿರ್ವಾದಗಳಿಸಿ.

ಅಮ್ಮನೊಂದಿಗೆ ಬೇಗ ಬಾ | ಆನೆಮೊಗದ ಕಂದ | ಕೊಡು ನಮಗೆ ಅನವರತ | ಅಳುಕಿಲ್ಲದ ಆನಂದ |
icon

(1 / 7)

ಅಮ್ಮನೊಂದಿಗೆ ಬೇಗ ಬಾ | ಆನೆಮೊಗದ ಕಂದ | ಕೊಡು ನಮಗೆ ಅನವರತ | ಅಳುಕಿಲ್ಲದ ಆನಂದ |

ರುಚಿರುಚಿ ಚಕ್ಕುಲಿ ಮೋದಕ | ಕೊಡುವೆನು ಕಡುಬು ಪಾನಕ | ದಿನಮೊದಲು ಬಂದುಬಿಡು  |ಸುಬ್ರಹ್ಮಣ್ಯನು ತಂದುಬಿಡು |
icon

(2 / 7)

ಮನೆಯಲಿ ಇರುವಳು ಪುಟಾಣಿ ತಂಗಿ | ತಂದಿಹಳವಳು ಹೊಸ ಅಂಗಿ | ಅಮ್ಮನದಂತೂ ನಿನದೆ ಜಪ | ಅಪ್ಪನಿಗೋ ಕೆಲಸವೇ ತಪ |
icon

(3 / 7)

ನೋಡಲಿ ಅಂಗಳದಲಿ ರಂಗೋಲಿ | ಜಗುಲಿಲಿ ಆಡು ಜೋಕಾಲಿ | ತಿನ್ನೋಣ ಬಾರೋ ಕಜ್ಜಾಯ | ವರವನು ಕೊಡುವೆಯ ಮಾರಾಯ |
icon

(4 / 7)

ಹಾಡನು ಹಾಡಿ ಪೂಜೆಯ ಮಾಡಿ | ಚಂದದ ಬೆರಗನು ನೋಡುವೆವು | ನೀರಲಿ ಮುಳುಗಿಸಿ ನಿನ್ನಯ ಕಳುಹಿಸಿ | ಹಬ್ಬವ ನಾವು ಮಾಡುವೆವು |
icon

(5 / 7)

ಭಕ್ತಿಯ ಜೊತೆಗೆ ಪ್ರೀತಿಯ ಕೂಡಿಸಿ | ಬೇಡುವೆವಯ್ಯ ಕರಗಳ ಜೋಡಿಸಿ | ತಪ್ಪದೆ ಬಾರೋ ಮುಂದಿನ ವರುಷ | ದಿನವೂ ಅರಳಲಿ ಹಬ್ಬದ ಹರುಷ |
icon

(6 / 7)

ಮೋದಕ ಪ್ರಿಯನೆ ನಮಿಸು ನಿನಗೆ | ಪ್ರೀತಿಯ ಕರುಣಿಸು ಅನವರತ ನನಗೆ | ಚೌತಿಗೆ ಬಂದು, ಮೋದಕವನು ತಿಂದು | ಬೇಡುವೆ ನಿನ್ನ ಆಶಿರ್ವದಿಸು ಎಂದು |
icon

(7 / 7)

ಇತರ ಗ್ಯಾಲರಿಗಳು