ಪಿಚ್ ಮರ್ಮ, ಕಳಪೆ ಬೌಲಿಂಗ್​; ಮೆಗಾ ಫೈಟ್​ನಲ್ಲಿ ಕೆಕೆಆರ್​ ವಿರುದ್ಧ ಆರ್​ಸಿಬಿ ಸೋಲಿಗೆ ಪ್ರಮುಖ ಕಾರಣಗಳಿವು
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಪಿಚ್ ಮರ್ಮ, ಕಳಪೆ ಬೌಲಿಂಗ್​; ಮೆಗಾ ಫೈಟ್​ನಲ್ಲಿ ಕೆಕೆಆರ್​ ವಿರುದ್ಧ ಆರ್​ಸಿಬಿ ಸೋಲಿಗೆ ಪ್ರಮುಖ ಕಾರಣಗಳಿವು

ಪಿಚ್ ಮರ್ಮ, ಕಳಪೆ ಬೌಲಿಂಗ್​; ಮೆಗಾ ಫೈಟ್​ನಲ್ಲಿ ಕೆಕೆಆರ್​ ವಿರುದ್ಧ ಆರ್​ಸಿಬಿ ಸೋಲಿಗೆ ಪ್ರಮುಖ ಕಾರಣಗಳಿವು

  • RCB vs KKR: ಚಿನ್ನಸ್ವಾಮಿ ಮೈದಾನದಲ್ಲಿ 2015 ರಿಂದ ಆರ್​​ಸಿಬಿ ವಿರುದ್ಧ ಕೋಲ್ಕತಾ ನೈಟ್ ರೈಡರ್ಸ್ ಅಜೇಯ ಓಟ ಮುಂದುವರೆಸಿದೆ. ಮಾರ್ಚ್ 29ರಂದು ನಡೆದ ಐಪಿಎಲ್​ನ 10ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ 7 ವಿಕೆಟ್​​ಗಳಿಂದ ಕೆಕೆಆರ್ ಗೆದ್ದಿದೆ. ಹಾಗಾದರೆ ಆರ್​ಸಿಬಿ ಸೋಲಿಗೆ ಕಾರಣಗಳೇನು?

ಮಾರ್ಚ್​ 29ರ ಶುಕ್ರವಾರ ನಡೆದ ಐಪಿಎಲ್​ನ 10ನೇ ಪಂದ್ಯದಲ್ಲಿ ಆರ್​​ಸಿಬಿ ವಿರುದ್ಧ ಕೆಕೆಆರ್ ಗೆದ್ದು ಬೀಗಿದೆ. ಟೂರ್ನಿಯ ಮೊದಲ ಒಂಬತ್ತು ಪಂದ್ಯಗಳನ್ನು ತವರು ತಂಡಗಳೇ ಗೆದ್ದಿದ್ದವು. ಆದರೆ 10ನೇ ಪಂದ್ಯದಲ್ಲಿ ತವರಿನ ತಂಡವು ಸೋತಿದ್ದು, ಕೆಕೆಆರ್​​ ಈ ಋತುವಿನಲ್ಲಿ ತವರಿನಿಂದ ಹೊರಗೆ ಗೆದ್ದ ಮೊದಲ ತಂಡವಾಗಿದೆ.
icon

(1 / 7)

ಆರ್​​ಸಿಬಿ ಪವರ್​​ಪ್ಲೇನಲ್ಲಿ 61 ರನ್, 10 ಓವರ್​​ಗಳಲ್ಲಿ 2 ವಿಕೆಟ್​ಗೆ 85 ರನ್ ಗಳಿಸಿತ್ತು. 200ರ ಗಡಿ ದಾಟುವ ನಿರೀಕ್ಷೆ ಹುಟ್ಟು ಹಾಕಿತ್ತು. ಆದರೆ, ಮೊದಲ ಹತ್ತು ಓವರ್​​ಗಳ ನಂತರ ಆರ್​ಸಿಬಿ ಆಟ ನೀರಸವಾಗಿ ಸಾಗಿತು. ವಿರಾಟ್ ಕೊಹ್ಲಿ (83) ಜವಾಬ್ದಾರಿಯುತ ಆಟವಾಡಿದರೂ ಅವರಿಗೆ ಉಳಿದ ಆಟಗಾರರಿಂದ ಸಾಥ್ ಸಿಗಲಿಲ್ಲ. ಪರಿಣಾಮ 20 ಓವರ್​​ಗೆ 6 ವಿಕೆಟ್ ನಷ್ಟಕ್ಕೆ 182 ರನ್ ಗಳಿಸ್ತು.
icon

(2 / 7)

ಚಿನ್ನಸ್ವಾಮಿ ಪಿಚ್​ ಎಂದರೆ ಹೈಸ್ಕೋರಿಂಗ್ ಎಂದೇ ನಿರೀಕ್ಷಿಸಲಾಗುತ್ತದೆ. ಆದರೀಗ ಹೊಸ ಪಿಚ್​ ನಿಧಾನವಾಗಿತ್ತು. ಇದನ್ನು ಅರ್ಥ ಮಾಡಿಕೊಂಡ ಬೌಲರ್​ಗಳು ಶೇಕಡಾ 51ರಂದು ನಿಧಾನವಾಗಿ ಬೌಲಿಂಗ್ ಮಾಡಿದರು. ಇದು ಆರ್​​ಸಿಬಿ ಬ್ಯಾಟರ್​​ಗಳಿಗೆ ರನ್ ಗಳಿಸಲು ಕಷ್ಟವಾಯಿತು. ಆದರೆ ನಿಧಾನಗತಿಯ ಪಿಚ್​ ಅನ್ನು ಅರಿಯುವಲ್ಲಿ ಆರ್​ಸಿಬಿ ಬೌಲರ್​​ಗಳು ಎಡವಿದರು. ಇದು ಕೂಡ ಒಂದು ಸೋಲಿಗೆ ಪ್ರಮುಖ ಅಂಶವಾಗಿದೆ.
icon

(3 / 7)

ಮೊದಲ ಓವರ್​​​ನಲ್ಲಿ ಮೂರು ಸಿಕ್ಸರ್​​​​ಗಳೊಂದಿಗೆ ಎರಡನೇ ಇನ್ನಿಂಗ್ಸ್​ ಆರಂಭಿಸಿದ ಕೆಕೆಆರ್​ ಆರಂಭಿಕ ಜೋಡಿ, ಪವರ್ ಪ್ಲೇನಲ್ಲಿ 85 ರನ್ ಗಳಿಸಿತು. ಇದು ಕೆಕೆಆರ್​​ ಪಾಲಿಗೆ ದೊಡ್ಡ ವರದಾನವಾಯಿತು. ಉತ್ತಮ ಆರಂಭ ಹಾಕಿಕೊಟ್ಟ ಕಾರಣ ಉಳಿದ ಬ್ಯಾಟರ್​​ಗಳು ಗುರಿಯನ್ನು ಬೆನ್ನಟ್ಟಲು ಸುಲಭವಾಯಿತು. ಪವರ್​​ಪ್ಲೇನಲ್ಲಿ ಈ ರೀತಿ ರನ್ ಕಲೆ ಹಾಕಿದರೆ, ಆ ತಂಡವು ಶೇಕಡಾ 50 ರಷ್ಟು ಪಂದ್ಯ ಗೆದ್ದಂತೆ ಲೆಕ್ಕ.
icon

(4 / 7)

ಮೊದಲ ಪಂದ್ಯದಲ್ಲಿ ಸುನಿಲ್ ನರೇನ್ ಓಪನಿಂಗ್ ಮಾಡಿದ್ದಕ್ಕೆ ಕೆಕೆಆರ್ ಟೀಕೆ ಎದುರಿಸಿತ್ತು. ಆದರೆ ಗೌತಮ್ ಗಂಭೀರ್ ಅವರನ್ನು ಮತ್ತೆ ನರೇನ್​ಗೆ ಆರಂಭಿಕರಾಗಿ ಕಣಕ್ಕಿಳಿಯಲು ಅವಕಾಶ ನೀಡಿತು. ಬಿರುಸಿನ ಬ್ಯಾಟಿಂಗ್ ನಡೆಸಿದ ಸುನಿಲ್, 22 ಎಸೆತಗಳಲ್ಲಿ 2 ಬೌಂಡರಿ ಮತ್ತು 5 ಸಿಕ್ಸರ್ ಸಹಿತ 47 ರನ್ ಗಳಿಸಿದರು. ಸ್ಟ್ರೈಕ್ ರೇಟ್ 213.63.
icon

(5 / 7)

ರಾಯಲ್ ಚಾಲೆಂಜರ್ಸ್ ಬೆಂಗಳೂರು ಫೀಲ್ಡಿಂಗ್ ವೇಳೆ ಸಾಕಷ್ಟು ಪ್ರಮಾದಗಳನ್ನು ಎಸಗಿತು. ಒಂದೆರಡು ಕ್ಯಾಚ್ ಕೈಬಿಟ್ಟಿದ್ದು ಸೇರಿ ಫೀಲ್ಡಿಂಗ್ ಸರಿಯಾಗಿ ನಡೆಸಲಿಲ್ಲ. ಬೌಂಡರಿಗಳನ್ನು ತಡೆಯಲಿಲ್ಲ. ಇದು ಕೂಡ ತಂಡದ ಹಿನ್ನಡೆಗೆ ಕಾರಣವಾಗಿದ್ದು, ಮುಂದಿನ ಪಂದ್ಯಗಳಲ್ಲಿ ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕಿದೆ.
icon

(6 / 7)

(AFP)

ಮೂರು ಪಂದ್ಯಗಳಿಂದಲೂ ಫಾಫ್ ಡು ಪ್ಲೆಸಿಸ್, ರಜತ್ ಪಾಟೀದಾರ್​ ಅಬ್ಬರಿಸಿಲ್ಲ. ಕಳೆದ ಎರಡು ಪಂದ್ಯಗಳಲ್ಲಿ ಫ್ಲಾಪ್ ಆಗಿದ್ದ ಕ್ಯಾಮರೂನ್  ಗ್ರೀನ್​ ಮತ್ತು ಗ್ಲೆನ್ ಮ್ಯಾಕ್ಸ್​ವೆಲ್ ಇನ್ನೇನು ಲಯಕ್ಕೆ ಮರಳಿದರು ಎನ್ನುವಷ್ಟರಲ್ಲಿ ಔಟಾದರು. ಈ ನಾಲ್ವರ ವೈಫಲ್ಯವೂ ತಂಡಕ್ಕೆ ಕಾಡುತ್ತಿದೆ. ಮುಂದಿನ ಪಂದ್ಯದಲ್ಲಿ ಈ ಆಟಗಾರರಿಂದ ಅದ್ಭುತ ಪ್ರದರ್ಶನ ಹೊರಬರಬೇಕಿದೆ. ಅಲ್ಲದೆ, ಬೌಲಿಂಗ್​​ನಲ್ಲಿ ಯಾರಿಂದಲೂ ಪರಿಣಾಮಕಾರಿ ಪ್ರದರ್ಶನ ಬರುತ್ತಿಲ್ಲ. ಮೂರು ಪಂದ್ಯಗಳಿಂದಲೂ ಬೌಲಿಂಗ್ ವಿಭಾಗವು ಕೆಟ್ಟ ಪ್ರದರ್ಶನ ನೀಡಿ ಟೀಕೆಗೆ ಗುರಿಯಾಗಿದೆ.
icon

(7 / 7)

ಇತರ ಗ್ಯಾಲರಿಗಳು