ಕನ್ನಡ ಸುದ್ದಿ  /  Photo Gallery  /  Reel Police Officers Of South Join Hands For Dhananjay Hoysala Movie

Dhananjaya Hoysala Glimpse: ಧನಂಜಯ್‌ ‘ಹೊಯ್ಸಳ’ನಿಗಾಗಿ ಕೈ ಜೋಡಿಸಿದ ನಾಲ್ಕು ಸ್ಟೇಟ್‌ನ ಸೆಲೆಬ್ರಿಟಿ ಪೊಲೀಸ್‌ ಆಫೀಸರ್ಸ್‌... PHOTOS

  • Dhananjaya Hoysala Glimpse: ಸ್ಯಾಂಡಲ್‌ವುಡ್‌ನ ಡಾಲಿ ಧನಂಜಯ್‌ ಪೊಲೀಸ್‌ ಅಧಿಕಾರಿಯಾಗಿ ಕಾಣಿಸಿಕೊಂಡಿರುವ ‘ಹೊಯ್ಸಳ’ ಚಿತ್ರದ ಪ್ರಚಾರ ಕಾರ್ಯಕ್ಕೆ ಚಿತ್ರತಂಡ ಚಾಲನೆ ನೀಡಿದೆ. ಇನ್ನೇನು ಚಿತ್ರದ ಕಿರು ವಿಡಿಯೋ ತುಣುಕು ಹೊರಬೀಳಲಿದೆ. ವಿಶೇಷ ಏನೆಂದರೆ ಆ ಕಿರು ವಿಡಿಯೋವನ್ನು ಘಟಾನುಘಟಿಗಳೇ ಬಿಡುಗಡೆ ಮಾಡುತ್ತಿದ್ದಾರೆ. ‘ಹೊಯ್ಸಳ’ನಿಗಾಗಿ ದಕ್ಷಿಣದ ನಾಲ್ಕು ಸ್ಟೇಟ್‌ನ ಸೆಲೆಬ್ರಿಟಿ ಪೊಲೀಸ್‌ ಆಫೀಸರ್ಸ್‌ ಕೈ ಜೋಡಿಸಿದ್ದಾರೆ!

ಧನಂಜಯ್‌ ಸಿನಿಮಾ ಕೆರಿಯರ್‌ನ 25ನೇ ಸಿನಿಮಾ ಎಂಬ ವಿಶೇಷಣದೊಂದಿಗೆ ಬರುತ್ತಿರುವ ‘ಹೊಯ್ಸಳ’ನನ್ನು ಅಷ್ಟೇ ಅದ್ಬುತವಾಗಿ ತೆರೆಗೆ ತರಲು ಚಿತ್ರತಂಡ ಪ್ಲಾನ್‌ ರೂಪಿಸಿದೆ. ಕೆಆರ್‌ಜಿ ಸ್ಡುಡಿಯೋಸ್‌ ಬ್ಯಾನರ್‌ನಲ್ಲಿ ನಿರ್ಮಾಣವಾಗಿರುವ ‘ಹೊಯ್ಸಳ’ ಚಿತ್ರವನ್ನು ವಿಜಯ್‌ ಎನ್‌ ನಿರ್ದೇಶನ ಮಾಡಿದ್ದಾರೆ.  
icon

(1 / 6)

ಧನಂಜಯ್‌ ಸಿನಿಮಾ ಕೆರಿಯರ್‌ನ 25ನೇ ಸಿನಿಮಾ ಎಂಬ ವಿಶೇಷಣದೊಂದಿಗೆ ಬರುತ್ತಿರುವ ‘ಹೊಯ್ಸಳ’ನನ್ನು ಅಷ್ಟೇ ಅದ್ಬುತವಾಗಿ ತೆರೆಗೆ ತರಲು ಚಿತ್ರತಂಡ ಪ್ಲಾನ್‌ ರೂಪಿಸಿದೆ. ಕೆಆರ್‌ಜಿ ಸ್ಡುಡಿಯೋಸ್‌ ಬ್ಯಾನರ್‌ನಲ್ಲಿ ನಿರ್ಮಾಣವಾಗಿರುವ ‘ಹೊಯ್ಸಳ’ ಚಿತ್ರವನ್ನು ವಿಜಯ್‌ ಎನ್‌ ನಿರ್ದೇಶನ ಮಾಡಿದ್ದಾರೆ.  (Twitter/@KRG_Studios)

ಈಗಾಗಲೇ ಮಾರ್ಚ್‌ 30ಕ್ಕೆ ಚಿತ್ರಮಂದಿರಕ್ಕೆ ಆಗಮಿಸುವ ಈ ಸಿನಿಮಾ ಪ್ರಚಾರ ಕೆಲಸಕ್ಕೆ ಇಳಿದಿದ್ದು, ಗುರುದೇವ ಹೊಯ್ಸಳನ ಕಿರು ವಿಡಿಯೋ ತುಣುಕಿಗೆ ಸೌತ್‌ ಸ್ಟಾರ್ಸ್‌ ಕೈ ಜೋಡಿಸಿದ್ದಾರೆ.  
icon

(2 / 6)

ಈಗಾಗಲೇ ಮಾರ್ಚ್‌ 30ಕ್ಕೆ ಚಿತ್ರಮಂದಿರಕ್ಕೆ ಆಗಮಿಸುವ ಈ ಸಿನಿಮಾ ಪ್ರಚಾರ ಕೆಲಸಕ್ಕೆ ಇಳಿದಿದ್ದು, ಗುರುದೇವ ಹೊಯ್ಸಳನ ಕಿರು ವಿಡಿಯೋ ತುಣುಕಿಗೆ ಸೌತ್‌ ಸ್ಟಾರ್ಸ್‌ ಕೈ ಜೋಡಿಸಿದ್ದಾರೆ.  (Twitter/@KRG_Studios)

ಕನ್ನಡದಲ್ಲಿ ಕಿಚ್ಚ ಸುದೀಪ್‌ ‘ಹೊಯ್ಸಳ’ ಚಿತ್ರದ ಗ್ಲಿಂಪ್ಸ್‌ ಬಿಡುಗಡೆ ಮಾಡಲಿದ್ದಾರೆ. ಈ ಚಿತ್ರದ ಆಡಿಯೋವನ್ನು ಆನಂದ್ ಆಡಿಯೋ ದಾಖಲೆಯ ಮೊತ್ತಕ್ಕೆ ಕೊಳ್ಳುವುದರ ಮೂಲಕ ಧನಂಜಯ ಟಾಪ್ ಸ್ಟಾರ್‌ಗಳಲ್ಲಿ ಒಬ್ಬರಾಗಿ ಹೊರಹೊಮ್ಮಿದ್ದಾರೆ.  
icon

(3 / 6)

ಕನ್ನಡದಲ್ಲಿ ಕಿಚ್ಚ ಸುದೀಪ್‌ ‘ಹೊಯ್ಸಳ’ ಚಿತ್ರದ ಗ್ಲಿಂಪ್ಸ್‌ ಬಿಡುಗಡೆ ಮಾಡಲಿದ್ದಾರೆ. ಈ ಚಿತ್ರದ ಆಡಿಯೋವನ್ನು ಆನಂದ್ ಆಡಿಯೋ ದಾಖಲೆಯ ಮೊತ್ತಕ್ಕೆ ಕೊಳ್ಳುವುದರ ಮೂಲಕ ಧನಂಜಯ ಟಾಪ್ ಸ್ಟಾರ್‌ಗಳಲ್ಲಿ ಒಬ್ಬರಾಗಿ ಹೊರಹೊಮ್ಮಿದ್ದಾರೆ.  (Twitter/@KRG_Studios)

ಅದೇ ರೀತಿ ತೆಲುಗಿನಲ್ಲಿ ಅಡಿವಿ ಶೇಷ ‘ಹೊಯ್ಸಳ’ನ ತೆಲುಗು ಅವತರಣಿಗೆ ಟ್ವಿಟರ್‌ನಲ್ಲಿ ಶೇರ್‌ ಮಾಡಲಿದ್ದಾರೆ. ಈ ಚಿತ್ರದಲ್ಲಿ ಧನಂಜಯ ಖಡಕ್ ಪೋಲೀಸ್ ಆಫೀಸರ್ ಆಗಿ ಕಾಣಿಸಿಕೊಂಡಿದ್ದಾರೆ. ಚಿತ್ರ ಸಾಮಾಜಿಕ ಸಮಸ್ಯೆಗಳ ಬಗ್ಗೆ ಕೂಡಾ ಮಾತಾಡುತ್ತದೆ. ಬೆಳಗಾವಿ ಮತ್ತು ಸುತ್ತಮುತ್ತಲ ಜಾಗಗಳನ್ನು ಆಧರಿಸಿ ‘ಹೊಯ್ಸಳ’ ಕಥೆಯನ್ನು ಹೆಣೆಯಲಾಗಿದೆ.
icon

(4 / 6)

ಅದೇ ರೀತಿ ತೆಲುಗಿನಲ್ಲಿ ಅಡಿವಿ ಶೇಷ ‘ಹೊಯ್ಸಳ’ನ ತೆಲುಗು ಅವತರಣಿಗೆ ಟ್ವಿಟರ್‌ನಲ್ಲಿ ಶೇರ್‌ ಮಾಡಲಿದ್ದಾರೆ. ಈ ಚಿತ್ರದಲ್ಲಿ ಧನಂಜಯ ಖಡಕ್ ಪೋಲೀಸ್ ಆಫೀಸರ್ ಆಗಿ ಕಾಣಿಸಿಕೊಂಡಿದ್ದಾರೆ. ಚಿತ್ರ ಸಾಮಾಜಿಕ ಸಮಸ್ಯೆಗಳ ಬಗ್ಗೆ ಕೂಡಾ ಮಾತಾಡುತ್ತದೆ. ಬೆಳಗಾವಿ ಮತ್ತು ಸುತ್ತಮುತ್ತಲ ಜಾಗಗಳನ್ನು ಆಧರಿಸಿ ‘ಹೊಯ್ಸಳ’ ಕಥೆಯನ್ನು ಹೆಣೆಯಲಾಗಿದೆ.(Twitter/@KRG_Studios)

ಮಲಯಾಳಂನಲ್ಲಿ ಪ್ರಥ್ವಿರಾಜ್‌ ಸುಕುಮಾರ್‌ ‘ಹೊಯ್ಸಳ’ ಚಿತ್ರದ ಮಲಯಾಳಂ ಗ್ಲಿಂಪ್ಸ್‌ ರಿಲೀಸ್‌ ಮಾಡಲಿದ್ದಾರೆ. ಕೆಆರ್‌ಜಿ ಸ್ಟುಡಿಯೋಸ್‌ನ ಕಾರ್ತಿಕ್ ಮತ್ತು ಯೋಗಿ ಜಿ ರಾಜ್ ಅವರು ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ರತ್ನನ್ ಪ್ರಪಂಚ ಯಶಸ್ಸಿನ ನಂತರ ಅವರ ಮತ್ತೊಂದು ಪ್ರಯತ್ನವಾಗಿ ಈ ಚಿತ್ರ ಮೂಡಿಬರುತ್ತಿದೆ. 
icon

(5 / 6)

ಮಲಯಾಳಂನಲ್ಲಿ ಪ್ರಥ್ವಿರಾಜ್‌ ಸುಕುಮಾರ್‌ ‘ಹೊಯ್ಸಳ’ ಚಿತ್ರದ ಮಲಯಾಳಂ ಗ್ಲಿಂಪ್ಸ್‌ ರಿಲೀಸ್‌ ಮಾಡಲಿದ್ದಾರೆ. ಕೆಆರ್‌ಜಿ ಸ್ಟುಡಿಯೋಸ್‌ನ ಕಾರ್ತಿಕ್ ಮತ್ತು ಯೋಗಿ ಜಿ ರಾಜ್ ಅವರು ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ರತ್ನನ್ ಪ್ರಪಂಚ ಯಶಸ್ಸಿನ ನಂತರ ಅವರ ಮತ್ತೊಂದು ಪ್ರಯತ್ನವಾಗಿ ಈ ಚಿತ್ರ ಮೂಡಿಬರುತ್ತಿದೆ. (Twitter/@KRG_Studios)

ತಮಿಳಿನಲ್ಲಿ ನಟ ಕಾರ್ತಿ ಪೊಲೀಸ್‌ ವೇಷದಲ್ಲಿಯೇ ‘ಹೊಯ್ಸಳ’ನಿಗೆ ಶುಭ ಕೋರಲಿದ್ದಾರೆ. ಬಡವ ರಾಸ್ಕಲ್ ಚಿತ್ರದಲ್ಲಿ ಡಾಲಿ ಜೊತೆಗೆ ಮಿಂಚಿದ್ದ ಅಮೃತಾ ಅಯ್ಯಂಗಾರ್, ಮತ್ತೊಮ್ಮೆ ಧನಂಜಯ ಅವರಿಗೆ ಜೋಡಿಯಾಗಿದ್ದಾರೆ. ನವೀನ್ ಶಂಕರ್, ಅವಿನಾಶ್ ಬಿಎಸ್, ಮಯೂರಿ ನಟರಾಜ ಮತ್ತು ಪ್ರತಾಪ್ ನಾರಾಯಣ್ ಅವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
icon

(6 / 6)

ತಮಿಳಿನಲ್ಲಿ ನಟ ಕಾರ್ತಿ ಪೊಲೀಸ್‌ ವೇಷದಲ್ಲಿಯೇ ‘ಹೊಯ್ಸಳ’ನಿಗೆ ಶುಭ ಕೋರಲಿದ್ದಾರೆ. ಬಡವ ರಾಸ್ಕಲ್ ಚಿತ್ರದಲ್ಲಿ ಡಾಲಿ ಜೊತೆಗೆ ಮಿಂಚಿದ್ದ ಅಮೃತಾ ಅಯ್ಯಂಗಾರ್, ಮತ್ತೊಮ್ಮೆ ಧನಂಜಯ ಅವರಿಗೆ ಜೋಡಿಯಾಗಿದ್ದಾರೆ. ನವೀನ್ ಶಂಕರ್, ಅವಿನಾಶ್ ಬಿಎಸ್, ಮಯೂರಿ ನಟರಾಜ ಮತ್ತು ಪ್ರತಾಪ್ ನಾರಾಯಣ್ ಅವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.(Twitter/@KRG_Studios)


IPL_Entry_Point

ಇತರ ಗ್ಯಾಲರಿಗಳು