Relationship: ಸಂಬಂಧ ಹಾಳು ಮಾಡುವ ಮುನ್ನ ಜಗಳ ನಿಲ್ಲಿಸೋದು ಹೇಗೆ, ಈ 10 ಮಾತುಗಳಿಗಿದೆ ವಾದಕ್ಕೆ ಬ್ರೇಕ್‌ ಹಾಕೋ ಶಕ್ತಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Relationship: ಸಂಬಂಧ ಹಾಳು ಮಾಡುವ ಮುನ್ನ ಜಗಳ ನಿಲ್ಲಿಸೋದು ಹೇಗೆ, ಈ 10 ಮಾತುಗಳಿಗಿದೆ ವಾದಕ್ಕೆ ಬ್ರೇಕ್‌ ಹಾಕೋ ಶಕ್ತಿ

Relationship: ಸಂಬಂಧ ಹಾಳು ಮಾಡುವ ಮುನ್ನ ಜಗಳ ನಿಲ್ಲಿಸೋದು ಹೇಗೆ, ಈ 10 ಮಾತುಗಳಿಗಿದೆ ವಾದಕ್ಕೆ ಬ್ರೇಕ್‌ ಹಾಕೋ ಶಕ್ತಿ

  • Phrases To Effectively End Any Argument: ಸಂಗಾತಿ, ಸ್ನೇಹಿತರು, ಕುಟುಂಬದ ಸದಸ್ಯರು ಸೇರಿದಂತೆ ಪ್ರೀತಿಪಾತ್ರರ ನಡುವೆ ವಾದ ವಿವಾದ ಜೋರಾದಗ ಆ ಜಗಳಕ್ಕೆ ಬ್ರೇಕ್‌ ಹಾಕಲು "ಆಯ್ತು ಮಾರ್ರೆ, ನಿಂದೇ ಸರಿ" ಎಂದು ನೀವು ಹೇಳಿರಬಹುದು. ವಾದ ವಿವಾದ ನಿಲ್ಲಿಸಲು ನೆರವಾಗುವ ನುಡಿಗಟ್ಟುಗಳು, ಮಾತುಗಳ ವಿವರ ಇಲ್ಲಿದೆ.

Phrases To Effectively End Any Argument: ಸಂಬಂಧದಲ್ಲಿ ಸರಸ ವಿರಸ ವಾದ ವಿವಾದ ಸಾಮಾನ್ಯ. ಯಾವುದೋ ಕಾರಣಕ್ಕೆ ನಿಮ್ಮ ಮತ್ತು ನಿಮ್ಮನ್ನು ತುಂಬಾ ಪ್ರೀತಿಸುವ ವ್ಯಕ್ತಿಯ ನಡುವೆ ಏನೋ ಜಗಳ ವಾದ ವಿವಾದ ಆರಂಭವಾಗಬಹುದು. ಅಂದರೆ, ನಿಮ್ಮ ಸಂಗಾತಿ,  ಸ್ನೇಹಿತ/ಸ್ನೇಹಿತೆ, ಕುಟುಂಬದ ಸದಸ್ಯರು, ಸಹೋದ್ಯೋಗಿಗಳು ಯಾರೇ ಆಗಿರಲಿ, ಕೆಲವೊಮ್ಮೆ ವಾದ ವಿವಾದ ನಡೆಯುತ್ತದೆ. ಇಂತಹ ವಾದ ವಿವಾದಕ್ಕೆ ಬೇಗ ಬ್ರೇಕ್‌ ಹಾಕಿದರೆ ಉತ್ತಮ. ಇಂತಹ ವಾದ ವಿವಾದ ತಾರಕಕ್ಕೆ ಏರಿದಾಗ ಕೆಲವೊಂದು ನುಡಿಗಟ್ಟುಗಳು, ಮಾತುಗಳು ಇಂತಹ ಜಗಳಕ್ಕೆ ಬ್ರೇಕ್‌ ಹಾಕಲು ನೆರವಾಗಬಹುದು ಎಂದು ಮಾನಸಿಕ ತಜ್ಞರು ಹೇಳಿದ್ದಾರೆ. "ಇಂತಹ ವಾದವಿವಾದಕ್ಕೆ ಬಹುತೇಕವಾಗಿ ತಪ್ಪು ಕಲ್ಪನೆಯಿಂದ ಅಥವಾ ತಪ್ಪಾಗಿ ಅರ್ಥೈಸಿಕೊಳ್ಳುವುದರಿಂದ ಉಂಟಾಗುತ್ತದೆ" ಎಂದು ಸೈಕ್ಯಾಟ್ರಿಸ್ಟ್‌ ಪ್ಯಾಟ್ರಿಸ್‌ ಬೆರ್ರಿ ಹೇಳಿದ್ದಾರೆ. ಅವರ ಪ್ರಕಾರ ಈ ಮುಂದಿನ ಮಾತುಗಳು ಜಗಳ ಕಡಿಮೆ ಮಾಡಲು ನೆರವಾಗಬಹುದು.
icon

(1 / 12)

"ನನಗೆ ನಿನ್ನ ಮಾತು ಅರ್ಥವಾಯಿತು" ಎಂಬ ಮಾತು ಹೇಳಿ. ನಿಮ್ಮ ಜತೆ ವಾದಿಸುತ್ತಿರುವವರಿಗೆ ನೀವು ಅರ್ಥ ಮಾಡಿಕೊಳ್ಳುತ್ತಿದ್ದೀರಿ ಎಂದು ಅರ್ಥವಾಗುತ್ತದೆ. ಇದು ಜಗಳ ತಣ್ಣಗಾಗಲು ನೆರವಾಗುತ್ತದೆ.
icon

(2 / 12)

ಸರಿ ನೀವು ಹೇಳಿದ್ದೇ ಸರಿ ಎಂದು ಹೇಳಿನೋಡಿ. ಅದರಲ್ಲಿ ಯಾರ ಸರಿ ಅಥವಾ ತಪ್ಪು ಎಂಬ ವಿಷಯ ಬೇಡ. ಮುಂದಿನವರು ಏನು ಹೇಳುತ್ತಾರೋ ಅದಕ್ಕೆ ಆ ಕ್ಷಣದಲ್ಲಿ ಸಮ್ಮತಿಸುವ ಮೂಲಕ ವಾದವಿವಾದಕ್ಕೆ ಕೊನೆ ಹಾಡಬಹುದು.
icon

(3 / 12)

ಒಂದು ವಿಷಯದ ಕುರಿತು ಹಲವು ಅಭಿಪ್ರಾಯಗಳು, ಆಲೋಚನೆಗಳು ಇರುತ್ತವೆ, ನಾವು ಈ ಕುರಿತು ಜಗಳ ಮಾಡುವುದು ಬೇಡ ಎಂದು ಹೇಳಿ ವಾದವಿವಾದಕ್ಕೆ ಬ್ರೇಕ್‌ ಹಾಕಲು ಪ್ರಯತ್ನಿಸಿ.ನಿಮ್ಮ ದೃಷ್ಟಿಕೋನವನ್ನು ನಾನು ಗೌರವಿಸುತ್ತೇನೆ ಎಂದು ಹೇಳಿ. ಮತ್ತೊಬ್ಬರ ಆಲೋಚನೆಯನ್ನು ಗೌರವಿಸುವ ಇನ್ನೊಂದು ದಾರಿ ಇದಾಗಿದೆ ಎಂದು ಡಾ. ಬ್ರೆರಿ ಹೇಳಿದ್ದಾರೆ.
icon

(4 / 12)

ನಿಮ್ಮ ಮಾತು ಕೇಳುತ್ತಿದ್ದೇನೆ ಎಂದು ಹೇಳಿ. ಕೆಲವೊಂದು ಜಗಳಗಳಿಗೆ "ತನ್ನ ಮುಂದಿರುವವರಿಗೆ ನನ್ನ ಆಲೋಚನೆಗಳು ಅರ್ಥವಾಗುತ್ತಿಲ್ಲ, ಮನದಟ್ಟಾಗುತ್ತಿಲ್ಲ" ಎನ್ನುವುದೇ ಕಾರಣವಾಗಿರುತ್ತದೆ.  
icon

(5 / 12)

ನಿನ್ನ ಆಲೋಚನೆ ಸರಿಯಾಗಿದೆ. ಆದರೆ, ಈ ಕುರಿತು ಮಾತನಾಡಲು ಇದು ಸರಿಯಾದ ಸಮಯವಲ್ಲ ಎಂದು ಹೇಳಿ. ಈ ಮೂಲಕ ಆ ಕ್ಷಣದ ವಾದವಿವಾದಕ್ಕೆ ಮಂಗಳ ಹಾಡಲು ಪ್ರಯತ್ನಿಸಿ.
icon

(6 / 12)

ನೀನು ಹೇಳುವ ವಿಷಯದ ಕುರಿತು ನನಗೆ ಅರ್ಥವಾಗುತ್ತಿದೆ. ಆದರೆ, ಈ ವಿಷಯವನ್ನು ಇನ್ನೊಂದು ಬಾರಿ ಚರ್ಚಿಸೋಣ ಎಂದು ಹೇಳಿ. 
icon

(7 / 12)

ನಾವು ಒಂದು ಬ್ರೇಕ್‌ ತೆಗೆದುಕೊಂಡು ಮತ್ತೆ ಚರ್ಚೆ ಮುಂದುವರೆಸೋಣ ಎಂದು ಹೇಳಿ. ಬ್ರೇಕ್‌ ಮುಗಿಸಿ ಬಂದಾಗ ಆವೇಶ ಕಡಿಮೆಯಾಗಿರುತ್ತದೆ. ಅಥವಾ ನಾವಿಬ್ಬರೂ ಈಗ ಬ್ರೇಕ್‌ ತೆಗೆದುಕೊಳ್ಳುವುದು ಒಳ್ಳೆಯದು ಎಂದು ಹೇಳಿನೋಡಿ.
icon

(8 / 12)

ನಾವಿಬ್ಬರು ಸಮಸ್ಯೆಯ ಕುರಿತು ಮಾತನಾಡುತ್ತಿದ್ದೇವೆ, ಪರಿಹಾರದ ಕುರಿತು ಯೋಚಿಸೋಣ ಎಂದು ಹೇಳಿ. 
icon

(9 / 12)

ನಾವಿಬ್ಬರು ಸಮಸ್ಯೆಯ ಕುರಿತು ಮಾತನಾಡುತ್ತಿದ್ದೇವೆ, ಪರಿಹಾರದ ಕುರಿತು ಯೋಚಿಸೋಣ ಎಂದು ಹೇಳಿ. 

ನಮಗೆ ಇಬ್ಬರಿಗೆ ಒಪ್ಪಿಗೆಯಾಗದೆ ಇರಬಹುದು, ಆದರೆ, ಅದು ಓಕೆ ಎಂದು ಹೇಳಿ. ಈ ಮೂಲಕ ಆ ವಾದವಿವಾದಕ್ಕೆ ಬ್ರೇಕ್‌ ಹಾಕಬಹುದು. 
icon

(10 / 12)

ಸರಿಯೋ ತಪ್ಪೋ ಗೊತ್ತಿಲ್ಲ, ಆದರೆ, ನನಗೆ ನಿನ್ನ ಜತೆಗಿನ ಸಂಬಂಧ ಮುಖ್ಯ ಎಂದು ಹೇಳಿ. ಇದು ಸಂಗಾತಿಯ ನಡುವೆ ಪ್ರೀತಿ ಹೆಚ್ಚಿಸಬಹುದು. ಸ್ನೇಹಿತರು, ಸಹೋದ್ಯೋಗಿಗಳ ನಡುವೆ ಬಾಂಧವ್ಯ ಹೆಚ್ಚಿಸಬಹುದು. 
icon

(11 / 12)

ಜಗಳ, ವಾದವಿವಾದ ನಡೆದಾಗ ಇಬ್ಬರಲ್ಲಿ ಒಬ್ಬರು ಮೊದಲು ತಣ್ಣಗಾಗಲು ಪ್ರಯತ್ನಿಸಬೇಕು. ನಿಮ್ಮ ಎದುರಿನವರು ಹೈಟೆಂಪರ್‌ನಲ್ಲಿರುವಾಗ ನೀವು ಸಾವಧಾನವಾಗಿ ಯೋಚಿಸಿ, ಸಾಧ್ಯವಾದರೆ ಸೈಲೆಂಟ್‌ ಆಗಿ. ಇಬ್ಬರೂ ಧ್ವನಿ ಹೆಚ್ಚಿಸುತ್ತ ಹೋದರೆ ಅಂತ್ಯ ಕೆಟ್ಟದಾಗಿರುತ್ತದೆ. 
icon

(12 / 12)

ಇತರ ಗ್ಯಾಲರಿಗಳು