ಗೆಳೆಯನಾಗಲಿ, ಗಂಡನಾಗಲಿ, ಪ್ರತಿ ಪುರುಷನೂ ತನ್ನ ಸಂಗಾತಿ ಬಳಿ ಮುಚ್ಚಿಡಲು ಬಯಸುವ 5 ರಹಸ್ಯಗಳಿವು-relationship 5 things every men hide from their female partner secrets of men every women must know rst ,ಫೋಟೋ ಗ್ಯಾಲರಿ ಸುದ್ದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಗೆಳೆಯನಾಗಲಿ, ಗಂಡನಾಗಲಿ, ಪ್ರತಿ ಪುರುಷನೂ ತನ್ನ ಸಂಗಾತಿ ಬಳಿ ಮುಚ್ಚಿಡಲು ಬಯಸುವ 5 ರಹಸ್ಯಗಳಿವು

ಗೆಳೆಯನಾಗಲಿ, ಗಂಡನಾಗಲಿ, ಪ್ರತಿ ಪುರುಷನೂ ತನ್ನ ಸಂಗಾತಿ ಬಳಿ ಮುಚ್ಚಿಡಲು ಬಯಸುವ 5 ರಹಸ್ಯಗಳಿವು

Things woman should know about men: ಮಹಿಳೆಯರನ್ನು ನಿಗೂಢ ಸ್ವಭಾವದವರು, ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದೆಲ್ಲಾ ಹೇಳಲಾಗುತ್ತದೆ. ಆದರೆ ಕೆಲವೊಂದು ವಿಚಾರಗಳಲ್ಲಿ ಪುರುಷರು ಕೂಡ ನಿಗೂಢವಾಗಿರ್ತಾರೆ, ಸೀಕ್ರೆಟ್ ಮೇಂಟೈನ್ ಮಾಡ್ತಾರೆ. ಪ್ರತಿ ಪುರುಷರು ತನ್ನ ಸಂಗಾತಿಗೆ ತಿಳಿಯದಂತೆ ಮುಚ್ಚಿಡುವ 5 ರಹಸ್ಯಗಳಿವು, ಈ ರಸಹ್ಯಗಳ ಬಗ್ಗೆ ನೀವು ತಿಳಿಯಲೇಬೇಕು. 

ಸಂಬಂಧ ಎಂಬುದು ತೆರೆದ ಪುಸ್ತಕದಂತಿರಬೇಕು, ಸಂಗಾತಿಗಳ ಮಧ್ಯ ಯಾವುದೇ ರಹಸ್ಯ ಸುಳಿಯಬಾರದು. ಇದರಿಂದ ಸಂಬಂಧದಲ್ಲಿ ಅನ್ಯೋನ್ಯತೆ ಹೆಚ್ಚುತ್ತದೆ ಎಂದು ಹೇಳಲಾಗುತ್ತದೆ. ಹಲವು ಬಾರಿ ಸಂಗಾತಿ ನಿಮ್ಮಿಂದ ಏನನ್ನು ಮುಚ್ಚಿಟ್ಟಿಲ್ಲ ಎಂದು ನೀವು ಅಂದುಕೊಂಡಿರುತ್ತೀರಾ, ಆದರೆ ಪುರುಷರು ತಮ್ಮ ಸಂಗಾತಿಯಿಂದ ಈ 5 ರಹಸ್ಯಗಳನ್ನು ಸದಾ ಮುಚ್ಚಿಡುತ್ತಾರಂತೆ. ಅಂತಹ ರಹಸ್ಯಗಳು ಯಾವುವು ನೋಡಿ. 
icon

(1 / 8)

ಸಂಬಂಧ ಎಂಬುದು ತೆರೆದ ಪುಸ್ತಕದಂತಿರಬೇಕು, ಸಂಗಾತಿಗಳ ಮಧ್ಯ ಯಾವುದೇ ರಹಸ್ಯ ಸುಳಿಯಬಾರದು. ಇದರಿಂದ ಸಂಬಂಧದಲ್ಲಿ ಅನ್ಯೋನ್ಯತೆ ಹೆಚ್ಚುತ್ತದೆ ಎಂದು ಹೇಳಲಾಗುತ್ತದೆ. ಹಲವು ಬಾರಿ ಸಂಗಾತಿ ನಿಮ್ಮಿಂದ ಏನನ್ನು ಮುಚ್ಚಿಟ್ಟಿಲ್ಲ ಎಂದು ನೀವು ಅಂದುಕೊಂಡಿರುತ್ತೀರಾ, ಆದರೆ ಪುರುಷರು ತಮ್ಮ ಸಂಗಾತಿಯಿಂದ ಈ 5 ರಹಸ್ಯಗಳನ್ನು ಸದಾ ಮುಚ್ಚಿಡುತ್ತಾರಂತೆ. ಅಂತಹ ರಹಸ್ಯಗಳು ಯಾವುವು ನೋಡಿ. (shutterstock)

ಪುರುಷರು ನಿಗೂಢ ಸ್ವಭಾದವರಲ್ಲ, ಅವರು ಎಲ್ಲವನ್ನು ಎಲ್ಲರೆದುರು ಹೇಳಿಕೊಳ್ಳುತ್ತಾರೆ, ಮಹಿಳೆಯರಂತೆ ಗುಪ್ತಗಾಮಿನಿಯರಲ್ಲ ಎಂದೆಲ್ಲಾ ಹೇಳಲಾಗುತ್ತದೆ. ಆದರೆ ಮಹಿಳೆಯರು ತಮ್ಮ ಸಂಗಾತಿಯೊಂದಿಗೆ ಜೀವನ ಪೂರ್ತಿ ಕಳೆದರೂ ಅವರ ಈ 5 ರಹಸ್ಯಗಳನ್ನು ಕಂಡುಹಿಡಿಯಲು ಸಾಧ್ಯವಾಗುವುದಿಲ್ಲವಂತೆ. ಪುರುಷರಲ್ಲೂ ನಿಗೂಢ ಸ್ವಭಾವ ಇರುತ್ತದೆ. 
icon

(2 / 8)

ಪುರುಷರು ನಿಗೂಢ ಸ್ವಭಾದವರಲ್ಲ, ಅವರು ಎಲ್ಲವನ್ನು ಎಲ್ಲರೆದುರು ಹೇಳಿಕೊಳ್ಳುತ್ತಾರೆ, ಮಹಿಳೆಯರಂತೆ ಗುಪ್ತಗಾಮಿನಿಯರಲ್ಲ ಎಂದೆಲ್ಲಾ ಹೇಳಲಾಗುತ್ತದೆ. ಆದರೆ ಮಹಿಳೆಯರು ತಮ್ಮ ಸಂಗಾತಿಯೊಂದಿಗೆ ಜೀವನ ಪೂರ್ತಿ ಕಳೆದರೂ ಅವರ ಈ 5 ರಹಸ್ಯಗಳನ್ನು ಕಂಡುಹಿಡಿಯಲು ಸಾಧ್ಯವಾಗುವುದಿಲ್ಲವಂತೆ. ಪುರುಷರಲ್ಲೂ ನಿಗೂಢ ಸ್ವಭಾವ ಇರುತ್ತದೆ. (shutterstock)

ಪುರುಷರು ಸಹ ನೋವು ಅನುಭವಿಸುತ್ತಾರೆ: ಗಂಡುಮಕ್ಕಳಿಗೆ ನೋವಿಲ್ಲ, ಅವರದು ಹೆಂಗರುಳಲ್ಲ, ಭಾವನೆಗಳ ಆಳವಾಗಿರುವುದಿಲ್ಲ ಎಂದೆಲ್ಲಾ ಹಲವರು ಹೇಳುತ್ತಾರೆ. ಯಾಕೆಂದರೆ ಪುರುಷರು ಯಾವತ್ತೂ ಅಳುವುದಿಲ್ಲ, ನೋವು ತೋಡಿಕೊಳ್ಳುವುದಿಲ್ಲ. ಹಾಗಂತ ಅವರಿಗೆ ನೋವಿಲ್ಲ ಎಂದರ್ಥವಲ್ಲ. ಖಂಡಿತ ಅವರಿಗೂ ನೋವಿರುತ್ತದೆ. ಆದರೆ ಅವರು ಅದನ್ನು ಸಂಗಾತಿಯ ಎದುರು ತೋರಿಸುವುದಿಲ್ಲ, ಮನದೊಳಗೆ ಅಳುತ್ತಿರುತ್ತಾರಂತೆ. ಆದರೆ ಸಂಗಾತಿ ಅವರ ನೋವನ್ನು ಕಣ್ಣಿನಿಂದಲೇ ಅರ್ಥ ಮಾಡಿಕೊಳ್ಳಬೇಕು.   
icon

(3 / 8)

ಪುರುಷರು ಸಹ ನೋವು ಅನುಭವಿಸುತ್ತಾರೆ: ಗಂಡುಮಕ್ಕಳಿಗೆ ನೋವಿಲ್ಲ, ಅವರದು ಹೆಂಗರುಳಲ್ಲ, ಭಾವನೆಗಳ ಆಳವಾಗಿರುವುದಿಲ್ಲ ಎಂದೆಲ್ಲಾ ಹಲವರು ಹೇಳುತ್ತಾರೆ. ಯಾಕೆಂದರೆ ಪುರುಷರು ಯಾವತ್ತೂ ಅಳುವುದಿಲ್ಲ, ನೋವು ತೋಡಿಕೊಳ್ಳುವುದಿಲ್ಲ. ಹಾಗಂತ ಅವರಿಗೆ ನೋವಿಲ್ಲ ಎಂದರ್ಥವಲ್ಲ. ಖಂಡಿತ ಅವರಿಗೂ ನೋವಿರುತ್ತದೆ. ಆದರೆ ಅವರು ಅದನ್ನು ಸಂಗಾತಿಯ ಎದುರು ತೋರಿಸುವುದಿಲ್ಲ, ಮನದೊಳಗೆ ಅಳುತ್ತಿರುತ್ತಾರಂತೆ. ಆದರೆ ಸಂಗಾತಿ ಅವರ ನೋವನ್ನು ಕಣ್ಣಿನಿಂದಲೇ ಅರ್ಥ ಮಾಡಿಕೊಳ್ಳಬೇಕು.   (pixabay)

ಕಣ್ಣು ತಪ್ಪಿಸಿ ಸುಂದರ ಹುಡುಗಿಯರನ್ನು ನೋಡುವುದು: ಹುಡುಗರು ತಮ್ಮ ಸಂಗಾತಿ ಜೊತೆಗೆ ಇದ್ದರೂ ಪಕ್ಕದಲ್ಲಿ ಹಾದು ಹೋಗುವ ಹುಡುಗಿಯನ್ನು ತಿರುಗಿ ನೋಡೇ ನೋಡುತ್ತಾರೆ.  ಆದರೆ ಇದರರ್ಥ ಅವರ ಮನಸ್ಸಿನಲ್ಲಿ ನಿಮಗೆ ಮೋಸ ಮಾಡುವ ಉದ್ದೇಶ ಇದು ಎಂದರ್ಥವಲ್ಲ. ಆದರೆ ಕೆಲವು ಇದೇ ನೆಪದಲ್ಲಿ ಬೇರೆ ಮಹಿಳೆಯರಿಗೆ ಮೆಸೇಜ್‌ ಮಾಡುವುದು, ಫರ್ಟ್ ಮಾಡುವುದು ಮಾಡುತ್ತಿದ್ದರೆ ಅದನ್ನು ಮೋಸ ಎಂದು ಪರಿಗಣಿಸಬಹುದು. 
icon

(4 / 8)

ಕಣ್ಣು ತಪ್ಪಿಸಿ ಸುಂದರ ಹುಡುಗಿಯರನ್ನು ನೋಡುವುದು: ಹುಡುಗರು ತಮ್ಮ ಸಂಗಾತಿ ಜೊತೆಗೆ ಇದ್ದರೂ ಪಕ್ಕದಲ್ಲಿ ಹಾದು ಹೋಗುವ ಹುಡುಗಿಯನ್ನು ತಿರುಗಿ ನೋಡೇ ನೋಡುತ್ತಾರೆ.  ಆದರೆ ಇದರರ್ಥ ಅವರ ಮನಸ್ಸಿನಲ್ಲಿ ನಿಮಗೆ ಮೋಸ ಮಾಡುವ ಉದ್ದೇಶ ಇದು ಎಂದರ್ಥವಲ್ಲ. ಆದರೆ ಕೆಲವು ಇದೇ ನೆಪದಲ್ಲಿ ಬೇರೆ ಮಹಿಳೆಯರಿಗೆ ಮೆಸೇಜ್‌ ಮಾಡುವುದು, ಫರ್ಟ್ ಮಾಡುವುದು ಮಾಡುತ್ತಿದ್ದರೆ ಅದನ್ನು ಮೋಸ ಎಂದು ಪರಿಗಣಿಸಬಹುದು. (shutterstock)

ಸಾಮಾಜಿಕ ಮಾಧ್ಯಮದಲ್ಲಿ ಬೇಹುಗಾರಿಕೆ: ನಿಮ್ಮ ಸಂಗಾತಿಯ ಸಾಮಾಜಿಕ ಮಾಧ್ಯಮ ಖಾತೆಗಳನ್ನು ನೀವು ಮಾತ್ರ ಪರಿಶೀಲಿಸುತ್ತಿದ್ದೀರಿ ಎಂದು ನೀವು ಭಾವಿಸಿದರೆ, ನೀವು ತಪ್ಪು. ಸಾಮಾಜಿಕ ಮಾಧ್ಯಮದಲ್ಲಿ ನಿಮ್ಮನ್ನು ಯಾರು ಅನುಸರಿಸುತ್ತಾರೆ ಅಥವಾ ನೀವು ಯಾರನ್ನು ಅನುಸರಿಸುತ್ತೀರಿ, ಅವರೊಂದಿಗೆ ನೀವು ಯಾವ ರೀತಿಯ ಸಂದೇಶಗಳನ್ನು ಹಂಚಿಕೊಳ್ಳುತ್ತೀರಿ, ನಿಮ್ಮ ಪೋಸ್ಟ್‌ಗಳನ್ನು ಯಾರು ಹೆಚ್ಚು ಇಷ್ಟಪಡುತ್ತಾರೆ ಎಂಬುದನ್ನು ನಿಮ್ಮ ಪಾಲುದಾರರು ಸಾಮಾಜಿಕ ಮಾಧ್ಯಮದಲ್ಲಿ ಪರಿಶೀಲಿಸುತ್ತಾರೆ.
icon

(5 / 8)

ಸಾಮಾಜಿಕ ಮಾಧ್ಯಮದಲ್ಲಿ ಬೇಹುಗಾರಿಕೆ: ನಿಮ್ಮ ಸಂಗಾತಿಯ ಸಾಮಾಜಿಕ ಮಾಧ್ಯಮ ಖಾತೆಗಳನ್ನು ನೀವು ಮಾತ್ರ ಪರಿಶೀಲಿಸುತ್ತಿದ್ದೀರಿ ಎಂದು ನೀವು ಭಾವಿಸಿದರೆ, ನೀವು ತಪ್ಪು. ಸಾಮಾಜಿಕ ಮಾಧ್ಯಮದಲ್ಲಿ ನಿಮ್ಮನ್ನು ಯಾರು ಅನುಸರಿಸುತ್ತಾರೆ ಅಥವಾ ನೀವು ಯಾರನ್ನು ಅನುಸರಿಸುತ್ತೀರಿ, ಅವರೊಂದಿಗೆ ನೀವು ಯಾವ ರೀತಿಯ ಸಂದೇಶಗಳನ್ನು ಹಂಚಿಕೊಳ್ಳುತ್ತೀರಿ, ನಿಮ್ಮ ಪೋಸ್ಟ್‌ಗಳನ್ನು ಯಾರು ಹೆಚ್ಚು ಇಷ್ಟಪಡುತ್ತಾರೆ ಎಂಬುದನ್ನು ನಿಮ್ಮ ಪಾಲುದಾರರು ಸಾಮಾಜಿಕ ಮಾಧ್ಯಮದಲ್ಲಿ ಪರಿಶೀಲಿಸುತ್ತಾರೆ.(pixabay)

ಒತ್ತಡ: ಪುರುಷರ ಜೀವನದಲ್ಲಿ ಹೆಚ್ಚಿನ ಒತ್ತಡವಿದ್ದರೆ ಅದನ್ನು ಮನೆಯಲ್ಲಿ ಹೇಳಿಕೊಳ್ಳಲು ಇಷ್ಟಪಡುವುದಿಲ್ಲ. ಹೆಚ್ಚಿನ ಸಂದರ್ಭಗಳಲ್ಲಿ, ಅವರು ತಮ್ಮ ಸಮಸ್ಯೆಗಳನ್ನು ತಮ್ಮ ಕುಟುಂಬದಿಂದ ಅಥವಾ ಅವರ ಸಂಗಾತಿಯಿಂದ ಮರೆಮಾಡುತ್ತಾರೆ. 
icon

(6 / 8)

ಒತ್ತಡ: ಪುರುಷರ ಜೀವನದಲ್ಲಿ ಹೆಚ್ಚಿನ ಒತ್ತಡವಿದ್ದರೆ ಅದನ್ನು ಮನೆಯಲ್ಲಿ ಹೇಳಿಕೊಳ್ಳಲು ಇಷ್ಟಪಡುವುದಿಲ್ಲ. ಹೆಚ್ಚಿನ ಸಂದರ್ಭಗಳಲ್ಲಿ, ಅವರು ತಮ್ಮ ಸಮಸ್ಯೆಗಳನ್ನು ತಮ್ಮ ಕುಟುಂಬದಿಂದ ಅಥವಾ ಅವರ ಸಂಗಾತಿಯಿಂದ ಮರೆಮಾಡುತ್ತಾರೆ. 

ಹುಡುಗರು ಹುಡುಗಿಯರನ್ನು ಮಾತ್ರವಲ್ಲ, ಹುಡುಗರನ್ನೂ ನೋಡುತ್ತಾರೆ. ಹಾಗಂತ ಅದನ್ನು ತಪ್ಪು ತಿಳಿಯುವ ಅಗತ್ಯವಿಲ್ಲ. ಅವರು ತಮ್ಮ ಜೀವನಶೈಲಿಯಲ್ಲಿ ಒಂದಿಷ್ಟು ಬದಲಾವಣೆ ಮಾಡಿಕೊಳ್ಳಲು ಇತರ ಪುರುಷರ ಸ್ಟೈಲ್‌, ಬಟ್ಟೆ, ಶೂಗಳನ್ನು ನೋಡುತ್ತಾರೆ. ಇತ್ತೀಚಿನ ಟ್ರೆಂಡ್ ಹೀಗಿದೆ ಎಂದು ಗುರುತಿಸುವ ಕಾರಣಕ್ಕೆ ಪುರುಷರನ್ನು ಗಮನಿಸುತ್ತಾರಂತೆ.  
icon

(7 / 8)

ಹುಡುಗರು ಹುಡುಗಿಯರನ್ನು ಮಾತ್ರವಲ್ಲ, ಹುಡುಗರನ್ನೂ ನೋಡುತ್ತಾರೆ. ಹಾಗಂತ ಅದನ್ನು ತಪ್ಪು ತಿಳಿಯುವ ಅಗತ್ಯವಿಲ್ಲ. ಅವರು ತಮ್ಮ ಜೀವನಶೈಲಿಯಲ್ಲಿ ಒಂದಿಷ್ಟು ಬದಲಾವಣೆ ಮಾಡಿಕೊಳ್ಳಲು ಇತರ ಪುರುಷರ ಸ್ಟೈಲ್‌, ಬಟ್ಟೆ, ಶೂಗಳನ್ನು ನೋಡುತ್ತಾರೆ. ಇತ್ತೀಚಿನ ಟ್ರೆಂಡ್ ಹೀಗಿದೆ ಎಂದು ಗುರುತಿಸುವ ಕಾರಣಕ್ಕೆ ಪುರುಷರನ್ನು ಗಮನಿಸುತ್ತಾರಂತೆ.  

ಆಹಾರ, ಆರೋಗ್ಯ, ಫ್ಯಾಷನ್‌, ರಿಲೇಷನ್‌ಶಿಪ್‌ , ಪೇರೆಂಟಿಂಗ್‌ ಸಂಬಂಧಿಸಿದ ಲೇಖನಗಳಿಗಾಗಿ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ಲೈಫ್‌ಸ್ಟೈಲ್‌ ಪುಟಕ್ಕೆ ಭೇಟಿ ನೀಡಿ 
icon

(8 / 8)

ಆಹಾರ, ಆರೋಗ್ಯ, ಫ್ಯಾಷನ್‌, ರಿಲೇಷನ್‌ಶಿಪ್‌ , ಪೇರೆಂಟಿಂಗ್‌ ಸಂಬಂಧಿಸಿದ ಲೇಖನಗಳಿಗಾಗಿ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ಲೈಫ್‌ಸ್ಟೈಲ್‌ ಪುಟಕ್ಕೆ ಭೇಟಿ ನೀಡಿ 


ಇತರ ಗ್ಯಾಲರಿಗಳು