ಕನ್ನಡ ಸುದ್ದಿ  /  Photo Gallery  /  Relationship Common Reasons To Fail Communicate Needs With Partners Expressing Feelings Love Marriage Kannada News Rst

Relationship: ಸಂಗಾತಿಯೊಂದಿಗೆ ತೆರೆದ ಮನಸ್ಸಿನಿಂದಿರಿ; ಸುಮಧುರ ಬಾಂಧವ್ಯಕ್ಕೆ ಸಂವಹನವೇ ಸೇತುವೆ

ಯಾವುದೇ ಸಂಬಂಧವಾಗಲಿ, ಭಾವನೆಗಳನ್ನು ವ್ಯಕ್ತಪಡಿಸುವುದು ಮುಖ್ಯ. ಮನಸ್ಸಿನ ಭಾವನೆಗಳನ್ನು ಸಂಗಾತಿ ಅವರಿಗಾಗಿಯೇ ಅರಿಯಬೇಕು ಎಂದುಕೊಳ್ಳುವುದು ತಪ್ಪು. ಇದರೊಂದಿಗೆ ಸಂಗಾತಿ ದೂರಾಗುವ ಭಯ, ಜಗಳದ ಆತಂಕ, ಹಿಂದಿನ ಅನುಭವಗಳು ಮನ ಮಾತು ಹಂಚಿಕೊಳ್ಳಲು ಅಡ್ಡಿಪಡಿಸಬಹುದು. ಇವೆಲ್ಲವನ್ನೂ ಮೀರಿ ಬಯಕೆಗಳನ್ನು ಹಂಚಿಕೊಂಡಾಗ ಸಂಬಂಧ ಸುಂದರ ಎನ್ನಿಸುವುದರಲ್ಲಿ ಅನುಮಾನವಿಲ್ಲ. 

ಪ್ರೀತಿ-ಪ್ರೇಮ, ಗಂಡ-ಹೆಂಡತಿ ಯಾವುದೇ ಸಂಬಂಧವಾಗಲಿ ನಿಮ್ಮ ಮನದ ಬಯಕೆಗಳನ್ನು ಸಂಗಾತಿಯ ಎದುರು ವ್ಯಕ್ತಪಡಿಸಿ. ನಿಮ್ಮ ಅಗತ್ಯಗಳ ಬಗ್ಗೆ ಸಂಗಾತಿಗೆ ಮನವರಿಕೆ ಮಾಡಿಕೊಡಿ. ನಿಮ್ಮ ಮನಸ್ಸನ್ನು ಯಾರೂ ಓದಲು ಸಾಧ್ಯವಿಲ್ಲ. ನಿಮ್ಮ ಮನಸ್ಸಿನ ಭಾವನೆಗಳನ್ನು ಅವರೆದುರು ತೆರೆದಿಡದೇ ಅವರಿಂದ ನಿರೀಕ್ಷೆ ಮಾಡುವುದು ಸರಿಯಲ್ಲ. ಯಾವುದೇ ಸಂಬಂಧವಾಗಲಿ ಇದು ಸಂಗಾತಿಗಳಿಬ್ಬರಿಗೂ ಅನ್ವಯವಾಗುತ್ತದೆ. ನಿಮ್ಮ ಬಯಕೆಗಳು ಪ್ರಮುಖವಾದದ್ದು, ಅಲ್ಲದೆ ಅದನ್ನು ಪೂರೈಸಿಕೊಳ್ಳುವ ಗುರಿ ನಿಮ್ಮದಾಗಬೇಕು. ಬಯಕೆಗಳನ್ನು ಹೇಳಿಕೊಳ್ಳುವಾಗ ಯಾವುದೇ ಭಯ, ಹಿಂಜರಿಕೆ, ಆತಂಕ, ನಕಾರಾತ್ಮಕ ನಂಬಿಕೆಗಳು ಅಡ್ಡಿ ಪಡಿಸದಂತೆ ನೋಡಿಕೊಳ್ಳಿ. ಆರೋಗ್ಯಕರ ಸಂಬಂಧದಲ್ಲಿ ಸಂಗಾತಿಗಳಿಬ್ಬರೂ ಒಬ್ಬರಿಗೊಬ್ಬರ ಅಗತ್ಯಗಳನ್ನು ಪೂರೈಸಲು ಪ್ರಯತ್ನಿಸಬೇಕು. ʼನಿಮ್ಮ ಭಾವನೆಗಳನ್ನು ಸಂಗಾತಿ ಎದುರು ವ್ಯಕ್ತಪಡಿಸಲು ಸಾಧ್ಯವಾಗದೇ ಹೆಣಗಾಡುತ್ತಿದ್ದರೆ, ಮೊದಲು ಅವು ಏನು ಎಂಬುದನ್ನು ಅರಿತುಕೊಳ್ಳಿʼ ಎಂದು ರಿಲೇಷನ್‌ಶಿಪ್‌ ತಜ್ಞೆ ಜೋರ್ಡನ್‌ ಗ್ರೀನ್‌. ಅವರು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಈ ಕುರಿತು ಬರೆದುಕೊಂಡಿದ್ದಾರೆ. ಸಂಗಾತಿಯ ಎದುರು ಮನದ ಬಯಕೆಗಳನ್ನು ಹಂಚಿಕೊಳ್ಳಲು ಅಡ್ಡಿಪಡಿಸಬಹುದಾದ ಕೆಲವು ಅಂಶಗಳ ಕುರಿತು ಇಲ್ಲಿ ತಿಳಿಸಲಾಗಿದೆ. 
icon

(1 / 9)

ಪ್ರೀತಿ-ಪ್ರೇಮ, ಗಂಡ-ಹೆಂಡತಿ ಯಾವುದೇ ಸಂಬಂಧವಾಗಲಿ ನಿಮ್ಮ ಮನದ ಬಯಕೆಗಳನ್ನು ಸಂಗಾತಿಯ ಎದುರು ವ್ಯಕ್ತಪಡಿಸಿ. ನಿಮ್ಮ ಅಗತ್ಯಗಳ ಬಗ್ಗೆ ಸಂಗಾತಿಗೆ ಮನವರಿಕೆ ಮಾಡಿಕೊಡಿ. ನಿಮ್ಮ ಮನಸ್ಸನ್ನು ಯಾರೂ ಓದಲು ಸಾಧ್ಯವಿಲ್ಲ. ನಿಮ್ಮ ಮನಸ್ಸಿನ ಭಾವನೆಗಳನ್ನು ಅವರೆದುರು ತೆರೆದಿಡದೇ ಅವರಿಂದ ನಿರೀಕ್ಷೆ ಮಾಡುವುದು ಸರಿಯಲ್ಲ. ಯಾವುದೇ ಸಂಬಂಧವಾಗಲಿ ಇದು ಸಂಗಾತಿಗಳಿಬ್ಬರಿಗೂ ಅನ್ವಯವಾಗುತ್ತದೆ. ನಿಮ್ಮ ಬಯಕೆಗಳು ಪ್ರಮುಖವಾದದ್ದು, ಅಲ್ಲದೆ ಅದನ್ನು ಪೂರೈಸಿಕೊಳ್ಳುವ ಗುರಿ ನಿಮ್ಮದಾಗಬೇಕು. ಬಯಕೆಗಳನ್ನು ಹೇಳಿಕೊಳ್ಳುವಾಗ ಯಾವುದೇ ಭಯ, ಹಿಂಜರಿಕೆ, ಆತಂಕ, ನಕಾರಾತ್ಮಕ ನಂಬಿಕೆಗಳು ಅಡ್ಡಿ ಪಡಿಸದಂತೆ ನೋಡಿಕೊಳ್ಳಿ. ಆರೋಗ್ಯಕರ ಸಂಬಂಧದಲ್ಲಿ ಸಂಗಾತಿಗಳಿಬ್ಬರೂ ಒಬ್ಬರಿಗೊಬ್ಬರ ಅಗತ್ಯಗಳನ್ನು ಪೂರೈಸಲು ಪ್ರಯತ್ನಿಸಬೇಕು. ʼನಿಮ್ಮ ಭಾವನೆಗಳನ್ನು ಸಂಗಾತಿ ಎದುರು ವ್ಯಕ್ತಪಡಿಸಲು ಸಾಧ್ಯವಾಗದೇ ಹೆಣಗಾಡುತ್ತಿದ್ದರೆ, ಮೊದಲು ಅವು ಏನು ಎಂಬುದನ್ನು ಅರಿತುಕೊಳ್ಳಿʼ ಎಂದು ರಿಲೇಷನ್‌ಶಿಪ್‌ ತಜ್ಞೆ ಜೋರ್ಡನ್‌ ಗ್ರೀನ್‌. ಅವರು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಈ ಕುರಿತು ಬರೆದುಕೊಂಡಿದ್ದಾರೆ. ಸಂಗಾತಿಯ ಎದುರು ಮನದ ಬಯಕೆಗಳನ್ನು ಹಂಚಿಕೊಳ್ಳಲು ಅಡ್ಡಿಪಡಿಸಬಹುದಾದ ಕೆಲವು ಅಂಶಗಳ ಕುರಿತು ಇಲ್ಲಿ ತಿಳಿಸಲಾಗಿದೆ. (Unsplash)

ದೂರ ಮಾಡುವ ಭಯ: ಮನದ ಭಾವನೆಗಳನ್ನು ಸಂಗಾತಿಯೊಂದಿಗೆ ಮುಕ್ತವಾಗಿ ಹಂಚಿಕೊಂಡಾಗ, ಅವರು ದೂರ ಮಾಡಬಹುದು, ಪ್ರೀತಿಯನ್ನು ಕಡೆಗಣಿಸಬಹುದು ಎಂಬ ಭಯದ ಕಾರಣದಿಂದ ಹಲವರು ಮುಕ್ತವಾಗಿರಲು ಹಿಂಜರಿಯುತ್ತಾರೆ. ಅಲ್ಲದೆ ತನ್ನ ಮೇಲೆ ತಪ್ಪು ಕಲ್ಪನೆ ಬರಬಹುದು ಎಂಬುದು ಕೂಡ ಅವರ ಹಿಂಜರಿಕೆಗೆ ಕಾರಣವಾಗಬಹುದು. 
icon

(2 / 9)

ದೂರ ಮಾಡುವ ಭಯ: ಮನದ ಭಾವನೆಗಳನ್ನು ಸಂಗಾತಿಯೊಂದಿಗೆ ಮುಕ್ತವಾಗಿ ಹಂಚಿಕೊಂಡಾಗ, ಅವರು ದೂರ ಮಾಡಬಹುದು, ಪ್ರೀತಿಯನ್ನು ಕಡೆಗಣಿಸಬಹುದು ಎಂಬ ಭಯದ ಕಾರಣದಿಂದ ಹಲವರು ಮುಕ್ತವಾಗಿರಲು ಹಿಂಜರಿಯುತ್ತಾರೆ. ಅಲ್ಲದೆ ತನ್ನ ಮೇಲೆ ತಪ್ಪು ಕಲ್ಪನೆ ಬರಬಹುದು ಎಂಬುದು ಕೂಡ ಅವರ ಹಿಂಜರಿಕೆಗೆ ಕಾರಣವಾಗಬಹುದು. (Gettyimages)

ಜಗಳವಾಗುವ ಆತಂಕ: ಕೆಲವೊಮ್ಮೆ ಮನದಲ್ಲಿ ಸಾವಿರ ಬಯಕೆಗಳಿದ್ದರೂ ಎಲ್ಲಿ ತಾನು ಬಳಕೆಗಳನ್ನು ಹೇಳಿಕೊಂಡರೆ ಜಗಳ ಉಂಟಾಗುತ್ತದೋ ಎಂಬ ಭಯದಿಂದ ಹಲವರು ಮನದಲ್ಲೇ ಮಂಡಿಗೆ ತಿನ್ನುತ್ತಾರೆ. ಬಯಕೆಗಳನ್ನು ಅಥವಾ ಆಸೆಗಳನ್ನು ವ್ಯಕ್ತಪಡಿಸಿದಾಗ ಅದು ಸಂಗಾತಿಗೆ ಇಷ್ಟವಾಗದೇ ವಾಗ್ವಾದ ನಡೆಯಬಹುದು, ಇದು ಜಗಳಕ್ಕೆ ತಿರುಗಿ ಸಂಬಂಧದಲ್ಲಿ ಬಿರುಕು ಮೂಡಬಹುದು ಎಂಬ ಆಂತಕದಿಂದ ಹಲವರು ಭಾವನೆಗಳನ್ನು ವ್ಯಕ್ತಪಡಿಸಲು ಹಿಂದೇಟು ಹಾಕುತ್ತಾರೆ. 
icon

(3 / 9)

ಜಗಳವಾಗುವ ಆತಂಕ: ಕೆಲವೊಮ್ಮೆ ಮನದಲ್ಲಿ ಸಾವಿರ ಬಯಕೆಗಳಿದ್ದರೂ ಎಲ್ಲಿ ತಾನು ಬಳಕೆಗಳನ್ನು ಹೇಳಿಕೊಂಡರೆ ಜಗಳ ಉಂಟಾಗುತ್ತದೋ ಎಂಬ ಭಯದಿಂದ ಹಲವರು ಮನದಲ್ಲೇ ಮಂಡಿಗೆ ತಿನ್ನುತ್ತಾರೆ. ಬಯಕೆಗಳನ್ನು ಅಥವಾ ಆಸೆಗಳನ್ನು ವ್ಯಕ್ತಪಡಿಸಿದಾಗ ಅದು ಸಂಗಾತಿಗೆ ಇಷ್ಟವಾಗದೇ ವಾಗ್ವಾದ ನಡೆಯಬಹುದು, ಇದು ಜಗಳಕ್ಕೆ ತಿರುಗಿ ಸಂಬಂಧದಲ್ಲಿ ಬಿರುಕು ಮೂಡಬಹುದು ಎಂಬ ಆಂತಕದಿಂದ ಹಲವರು ಭಾವನೆಗಳನ್ನು ವ್ಯಕ್ತಪಡಿಸಲು ಹಿಂದೇಟು ಹಾಕುತ್ತಾರೆ. (Pexels)

ಆತ್ಮವಿಶ್ವಾಸದ ಕೊರತೆ: ಹಲವರಲ್ಲಿ ಆತ್ಮವಿಶ್ವಾಸದ ಕೊರತೆ ಇರುತ್ತದೆ. ಅವರಿಗೆ ಅವರ ಮೇಲೆ ವಿಶ್ವಾಸವಿರುವುದಿಲ್ಲ. ಅಲ್ಲದೆ ಆತ್ಮವಿಶ್ವಾಸದ ಕೊರತೆಯು ಪರಿಣಾಮಕಾರಿಯಾಗಿ ಸಂವಹನ ನಡೆಸಲು ಅಡ್ಡಿಯಾಗಬಹುದು. ಇದರೊಂದಿಗೆ ಬಯಕೆಗಳನ್ನು ಸಂಪೂರ್ಣವಾಗಿ, ಮುಕ್ತ ಮನಸ್ಸಿನಿಂದ ಸಂಗಾತಿಯೊಂದಿಗೆ ಹಂಚಿಕೊಳ್ಳಲು ಅಡ್ಡಿ ಪಡಿಸಬಹುದು.
icon

(4 / 9)

ಆತ್ಮವಿಶ್ವಾಸದ ಕೊರತೆ: ಹಲವರಲ್ಲಿ ಆತ್ಮವಿಶ್ವಾಸದ ಕೊರತೆ ಇರುತ್ತದೆ. ಅವರಿಗೆ ಅವರ ಮೇಲೆ ವಿಶ್ವಾಸವಿರುವುದಿಲ್ಲ. ಅಲ್ಲದೆ ಆತ್ಮವಿಶ್ವಾಸದ ಕೊರತೆಯು ಪರಿಣಾಮಕಾರಿಯಾಗಿ ಸಂವಹನ ನಡೆಸಲು ಅಡ್ಡಿಯಾಗಬಹುದು. ಇದರೊಂದಿಗೆ ಬಯಕೆಗಳನ್ನು ಸಂಪೂರ್ಣವಾಗಿ, ಮುಕ್ತ ಮನಸ್ಸಿನಿಂದ ಸಂಗಾತಿಯೊಂದಿಗೆ ಹಂಚಿಕೊಳ್ಳಲು ಅಡ್ಡಿ ಪಡಿಸಬಹುದು.(Shutterstock)

ಸಂಗಾತಿಗೆ ತಿಳಿದಿದೆ ಎಂಬ ನಂಬಿಕೆ: ನಿಮಗೆ ಏನು ಬೇಕು ಅಥವಾ ನೀವು ಏನನ್ನು ಬಯಸುತ್ತಿದ್ದೀರಿ ಎಂಬುದು ನಿಮ್ಮ ಸಂಗಾತಿಗೆ ಈಗಾಗಲೇ ತಿಳಿದಿದೆ ಎಂಬ ಭಾವ ಅಥವಾ ನಂಬಿಕೆ ನಿಮ್ಮಲ್ಲಿರುವುದು, ಇದು ಸಂಗಾತಿಯೊಂದಿಗೆ ನಿಮ್ಮ ಇಷ್ಟವನ್ನು ನೇರವಾಗಿ ಹಂಚಿಕೊಳ್ಳಲು ಬಿಡದಂತೆ ತಡೆಯಬಹುದು. ಇದು ಒಂದು ರೀತಿ ಸಂಗಾತಿ ಮೇಲಿನ ಅಸಮಾಧಾನಕ್ಕೂ ಕಾರಣವಾಗಬಹುದು. 
icon

(5 / 9)

ಸಂಗಾತಿಗೆ ತಿಳಿದಿದೆ ಎಂಬ ನಂಬಿಕೆ: ನಿಮಗೆ ಏನು ಬೇಕು ಅಥವಾ ನೀವು ಏನನ್ನು ಬಯಸುತ್ತಿದ್ದೀರಿ ಎಂಬುದು ನಿಮ್ಮ ಸಂಗಾತಿಗೆ ಈಗಾಗಲೇ ತಿಳಿದಿದೆ ಎಂಬ ಭಾವ ಅಥವಾ ನಂಬಿಕೆ ನಿಮ್ಮಲ್ಲಿರುವುದು, ಇದು ಸಂಗಾತಿಯೊಂದಿಗೆ ನಿಮ್ಮ ಇಷ್ಟವನ್ನು ನೇರವಾಗಿ ಹಂಚಿಕೊಳ್ಳಲು ಬಿಡದಂತೆ ತಡೆಯಬಹುದು. ಇದು ಒಂದು ರೀತಿ ಸಂಗಾತಿ ಮೇಲಿನ ಅಸಮಾಧಾನಕ್ಕೂ ಕಾರಣವಾಗಬಹುದು. (Pexels )

ಮುಜಗರಕ್ಕೆ ಒಳಗಾಗುವ ಭಾವನೆ: ಸಂಗಾತಿಯೊಂದಿಗೆ ಮನಸ್ಸಿನ ಭಾವನೆಗಳು ಅಥವಾ ಬಯಕೆಗಳನ್ನು ಹಂಚಿಕೊಂಡಾಗ ನೀವು ಅವರ ಮೇಲೆ ಅವಲಂಬಿತರಾಗಿದ್ದೀರಿ ಎಂಬ ಭಾವನೆ ಮೂಡುವುದು. ಅಲ್ಲದೆ ಭಾವನೆಗಳನ್ನು ಹಂಚಿಕೊಂಡ ಮೇಲೆ ಮುಜಗರಕ್ಕೆ ಒಳಗಾಗಬಹುದು, ಸಂಗಾತಿ ನಿಮ್ಮನ್ನು ಅವಮಾನಿಸಬಹುದು ಎಂಬ ಹಿಂಜರಿಕೆಯೂ ಭಾವನೆಗಳನ್ನು ಹೇಳಿಕೆಕೊಳ್ಳಲು ತಡೆ ಹಾಕಬಹುದು. 
icon

(6 / 9)

ಮುಜಗರಕ್ಕೆ ಒಳಗಾಗುವ ಭಾವನೆ: ಸಂಗಾತಿಯೊಂದಿಗೆ ಮನಸ್ಸಿನ ಭಾವನೆಗಳು ಅಥವಾ ಬಯಕೆಗಳನ್ನು ಹಂಚಿಕೊಂಡಾಗ ನೀವು ಅವರ ಮೇಲೆ ಅವಲಂಬಿತರಾಗಿದ್ದೀರಿ ಎಂಬ ಭಾವನೆ ಮೂಡುವುದು. ಅಲ್ಲದೆ ಭಾವನೆಗಳನ್ನು ಹಂಚಿಕೊಂಡ ಮೇಲೆ ಮುಜಗರಕ್ಕೆ ಒಳಗಾಗಬಹುದು, ಸಂಗಾತಿ ನಿಮ್ಮನ್ನು ಅವಮಾನಿಸಬಹುದು ಎಂಬ ಹಿಂಜರಿಕೆಯೂ ಭಾವನೆಗಳನ್ನು ಹೇಳಿಕೆಕೊಳ್ಳಲು ತಡೆ ಹಾಕಬಹುದು. (Unsplash)

ಹಿಂದಿನ ಕೆಟ್ಟ ಅನುಭವ: ಈ ಹಿಂದೆ ನಿಮಗೆ ಆಗಿರುವ ಕೆಟ್ಟ ಅನುಭವಗಳು ಕೂಡ ಭಾವನೆಗಳನ್ನು ವ್ಯಕ್ತಪಡಿಸಲು ಹಿಂದೇಟು ಹಾಕುವಂತೆ ಮಾಡಬಹುದು. ಈ ಹಿಂದೆ ನಿಮ್ಮ ಭಾವನೆಗಳನ್ನು ಹಂಚಿಕೊಂಡಾಗ ನಿಮ್ಮ ಸಂಗಾತಿ ಆ ಬಗ್ಗೆ ಗಮನ ಹರಿಸದೇ ಇರಬಹುದು, ಅಲ್ಲದೆ ಸರಿಯಾದ ರೀತಿಯಲ್ಲಿ ಪ್ರತಿಕ್ರಿಯೆ ನೀಡದೇ ಇರಬಹುದು. ಇದರಿಂದ ಕೂಡ ಭಾವನೆಗಳನ್ನು ವ್ಯಕ್ತಪಡಿಸಲು ಸಾಧ್ಯವಾಗದೇ ಇರಬಹುದು. 
icon

(7 / 9)

ಹಿಂದಿನ ಕೆಟ್ಟ ಅನುಭವ: ಈ ಹಿಂದೆ ನಿಮಗೆ ಆಗಿರುವ ಕೆಟ್ಟ ಅನುಭವಗಳು ಕೂಡ ಭಾವನೆಗಳನ್ನು ವ್ಯಕ್ತಪಡಿಸಲು ಹಿಂದೇಟು ಹಾಕುವಂತೆ ಮಾಡಬಹುದು. ಈ ಹಿಂದೆ ನಿಮ್ಮ ಭಾವನೆಗಳನ್ನು ಹಂಚಿಕೊಂಡಾಗ ನಿಮ್ಮ ಸಂಗಾತಿ ಆ ಬಗ್ಗೆ ಗಮನ ಹರಿಸದೇ ಇರಬಹುದು, ಅಲ್ಲದೆ ಸರಿಯಾದ ರೀತಿಯಲ್ಲಿ ಪ್ರತಿಕ್ರಿಯೆ ನೀಡದೇ ಇರಬಹುದು. ಇದರಿಂದ ಕೂಡ ಭಾವನೆಗಳನ್ನು ವ್ಯಕ್ತಪಡಿಸಲು ಸಾಧ್ಯವಾಗದೇ ಇರಬಹುದು. (Unsplash)

ಸಂಸ್ಕೃತಿ ಅಥವಾ ಕೌಟುಂಬಿಕ ನಂಬಿಕೆ: ಕೆಲವೊಮ್ಮೆ ಸಂಪ್ರದಾಯಸ್ಥ ಕುಟುಂಬ ಹಿನ್ನೆಲೆಯಿಂದ ಬಂದವರಲ್ಲಿ ಯಾವುದೇ ರೀತಿಯ ಬಯಕೆ, ಭಾವನೆಗಳನ್ನು ನೇರವಾಗಿ ವ್ಯಕ್ತಪಡಿಸಲು ಸಾಧ್ಯವಾಗದೇ ಇರಬಹುದು. ಇದು ಅವರು ಬೆಳೆದು ಬಂದ ರೀತಿಯ ಕಾರಣದಿಂದ ಆಗಿರಬಹುದು. ಆದರೆ ಇದು ಕೂಡ ಭಾವನೆಗಳ ವ್ಯಕ್ತಪಡಿಸುವಿಕೆ ಅಡ್ಡಿ ಪಡಿಸುವುದು ಸುಳ್ಳಲ್ಲ. 
icon

(8 / 9)

ಸಂಸ್ಕೃತಿ ಅಥವಾ ಕೌಟುಂಬಿಕ ನಂಬಿಕೆ: ಕೆಲವೊಮ್ಮೆ ಸಂಪ್ರದಾಯಸ್ಥ ಕುಟುಂಬ ಹಿನ್ನೆಲೆಯಿಂದ ಬಂದವರಲ್ಲಿ ಯಾವುದೇ ರೀತಿಯ ಬಯಕೆ, ಭಾವನೆಗಳನ್ನು ನೇರವಾಗಿ ವ್ಯಕ್ತಪಡಿಸಲು ಸಾಧ್ಯವಾಗದೇ ಇರಬಹುದು. ಇದು ಅವರು ಬೆಳೆದು ಬಂದ ರೀತಿಯ ಕಾರಣದಿಂದ ಆಗಿರಬಹುದು. ಆದರೆ ಇದು ಕೂಡ ಭಾವನೆಗಳ ವ್ಯಕ್ತಪಡಿಸುವಿಕೆ ಅಡ್ಡಿ ಪಡಿಸುವುದು ಸುಳ್ಳಲ್ಲ. (Pexels)

ನಿಮ್ಮ ಕಾರಣಗಳು ಏನೇ ಇರಬಹುದು. ಆದರೆ ನಿಮ್ಮ ಬಯಕೆ ಅಥವಾ ಅಗತ್ಯಗಳನ್ನು ಸಂಗಾತಿಯೊಂದಿಗೆ ಆರಾಮದಾಯಕವಾಗಿ ಹಾಗೂ ಅಧಿಕೃತ ಎಂದು ಭಾವಿಸುವ ರೀತಿಯಲ್ಲಿ ಸಂವಹನ ನಡೆಸುವುದು ಬಹಳ ಮುಖ್ಯವಾಗುತ್ತದೆ. ಮುಕ್ತ ಹಾಗೂ ಪ್ರಾಮಾಣಿಕ ಸಂವಹನವನ್ನು ಪ್ರೋತ್ಸಾಹಿಸುವುದು ಸಂಗಾತಿಗಳಿಬ್ಬರ ನಡುವಿನ ಸಂಬಂಧದ ಸಂಕೋಲೆಯನ್ನು ಭದ್ರಪಡಿಸುತ್ತದೆ. ಅಂತಿಮವಾಗಿ ಇದು ಪರಿಪೂರ್ಣ ಹಾಗೂ ಸಂತೃಪ್ತ ಸಂಬಂಧಕ್ಕೆ ದಾರಿ ಮಾಡಿಕೊಡುತ್ತದೆ ಎನ್ನುವುದು ಜೋರ್ಡನ್‌ ಅವರ ಅಭಿಪ್ರಾಯ.
icon

(9 / 9)

ನಿಮ್ಮ ಕಾರಣಗಳು ಏನೇ ಇರಬಹುದು. ಆದರೆ ನಿಮ್ಮ ಬಯಕೆ ಅಥವಾ ಅಗತ್ಯಗಳನ್ನು ಸಂಗಾತಿಯೊಂದಿಗೆ ಆರಾಮದಾಯಕವಾಗಿ ಹಾಗೂ ಅಧಿಕೃತ ಎಂದು ಭಾವಿಸುವ ರೀತಿಯಲ್ಲಿ ಸಂವಹನ ನಡೆಸುವುದು ಬಹಳ ಮುಖ್ಯವಾಗುತ್ತದೆ. ಮುಕ್ತ ಹಾಗೂ ಪ್ರಾಮಾಣಿಕ ಸಂವಹನವನ್ನು ಪ್ರೋತ್ಸಾಹಿಸುವುದು ಸಂಗಾತಿಗಳಿಬ್ಬರ ನಡುವಿನ ಸಂಬಂಧದ ಸಂಕೋಲೆಯನ್ನು ಭದ್ರಪಡಿಸುತ್ತದೆ. ಅಂತಿಮವಾಗಿ ಇದು ಪರಿಪೂರ್ಣ ಹಾಗೂ ಸಂತೃಪ್ತ ಸಂಬಂಧಕ್ಕೆ ದಾರಿ ಮಾಡಿಕೊಡುತ್ತದೆ ಎನ್ನುವುದು ಜೋರ್ಡನ್‌ ಅವರ ಅಭಿಪ್ರಾಯ.(Unsplash)


IPL_Entry_Point

ಇತರ ಗ್ಯಾಲರಿಗಳು