ಕನ್ನಡ ಸುದ್ದಿ  /  Photo Gallery  /  Religion Based Population Imbalance Cannot Be Ignored Says Rss Chief Mohan Bhagwat

Mohan Bhagwat: ಧರ್ಮಾಧಾರಿತ ಜನಸಂಖ್ಯೆ ಅಸಮತೋಲನದ ನಿರ್ಲಕ್ಷ್ಯ ಸಲ್ಲದು: ಮೋಹನ್‌ ಭಾಗವತ್!‌

  • ನಾಗ್ಪುರ: ಧರ್ಮಾಧಾರಿತ ಜನಸಂಖ್ಯೆಯ ಅಸಮತೋಲನವು ನಿರ್ಲಕ್ಷಿಸದ ಪ್ರಮುಖ ವಿಷಯವಾಗಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರ್‌ಎಸ್‌ಎಸ್)‌ ಮುಖ್ಯಸ್ಥ ಮೋಹನ್‌ ಭಾಗವತ್‌ ಅಭಿಪ್ರಾಯಪಟ್ಟಿದ್ದಾರೆ. ಜಯದಶಮಿ ಅಂಗವಾಗಿ ನಾಗ್ಪುರದಲ್ಲಿರುವ ಆರ್‌ಎಸ್‌ಎಸ್‌ ಕೇಂದ್ರ ಕಚೇರಿಯಲ್ಲಿ ದೇಶವನ್ನುದ್ದೇಶಿಸಿ ಮಾತನಾಡಿದ ಭಾಗವತ್‌, ಧರ್ಮಾಧಾರಿತ ಜನಸಂಖ್ಯೆಯ ಅಸಮತೋಲನ ಕಳವಳಕಾರಿ ಎಂದು ಹೇಳಿದರು. ಭಾಗವತ್‌ ಭಾಷಣದ ಸಾರಾಂಶ ಇಲ್ಲಿದೆ..

ಜನಸಂಖ್ಯೆಯ ಅಸಮತೋಲನವು ಭೌಗೋಳಿಕ ಗಡಿಗಳಲ್ಲಿ ಬದಲಾವಣೆಗಳಿಗೆ ಕಾರಣವಾಗುತ್ತದೆ. ಜನನ ದರದಲ್ಲಿನ ವ್ಯತ್ಯಾಸಗಳ ಜೊತೆಗೆ, ಬಲವಂತದ ಮತಾಂತರ, ಆಮಿಷ ಅಥವಾ ದುರಾಶೆ ಮತ್ತು ಒಳನುಸುಳುವಿಕೆ ಕೂಡ ಧರ್ಮಾಧಾರಿತ ಜನಸಂಖ್ಯೆ ಅಸಮತೋಲನ ದೊಡ್ಡ ಕಾರಣಗಳಾಗಿವೆ ಎಂದು ಮೋಹನ್‌ ಭಾಗವತ್‌ ಹೇಳಿದರು.
icon

(1 / 5)

ಜನಸಂಖ್ಯೆಯ ಅಸಮತೋಲನವು ಭೌಗೋಳಿಕ ಗಡಿಗಳಲ್ಲಿ ಬದಲಾವಣೆಗಳಿಗೆ ಕಾರಣವಾಗುತ್ತದೆ. ಜನನ ದರದಲ್ಲಿನ ವ್ಯತ್ಯಾಸಗಳ ಜೊತೆಗೆ, ಬಲವಂತದ ಮತಾಂತರ, ಆಮಿಷ ಅಥವಾ ದುರಾಶೆ ಮತ್ತು ಒಳನುಸುಳುವಿಕೆ ಕೂಡ ಧರ್ಮಾಧಾರಿತ ಜನಸಂಖ್ಯೆ ಅಸಮತೋಲನ ದೊಡ್ಡ ಕಾರಣಗಳಾಗಿವೆ ಎಂದು ಮೋಹನ್‌ ಭಾಗವತ್‌ ಹೇಳಿದರು.(ANI)

ಜನರು ಕಾನೂನಿನ ಚೌಕಟ್ಟಿನಲ್ಲಿ ಅನ್ಯಾಯದ ವಿರುದ್ಧ ಧ್ವನಿ ಎತ್ತಬೇಕು. ತಪ್ಪಿನ ವಿರುದ್ಧ ಧ್ವನಿ ಎತ್ತುವುದು ಸಹಜವಾಗಬೇಕು. ನಾವೆಲ್ಲರೂ ಒಂದಾಗಿ ದೇಶದ ಅಭಿವೃದ್ಧಿಗಾಗಿ ಶ್ರಮಿಸಬೇಕು ಎಂದು ಮೋಹನ್ ಭಾಗವತ್ ಇದೇ ವೇಳೆ ಕರೆ ನೀಡಿದರು.
icon

(2 / 5)

ಜನರು ಕಾನೂನಿನ ಚೌಕಟ್ಟಿನಲ್ಲಿ ಅನ್ಯಾಯದ ವಿರುದ್ಧ ಧ್ವನಿ ಎತ್ತಬೇಕು. ತಪ್ಪಿನ ವಿರುದ್ಧ ಧ್ವನಿ ಎತ್ತುವುದು ಸಹಜವಾಗಬೇಕು. ನಾವೆಲ್ಲರೂ ಒಂದಾಗಿ ದೇಶದ ಅಭಿವೃದ್ಧಿಗಾಗಿ ಶ್ರಮಿಸಬೇಕು ಎಂದು ಮೋಹನ್ ಭಾಗವತ್ ಇದೇ ವೇಳೆ ಕರೆ ನೀಡಿದರು.(ANI)

ಹಿಂದೂ ರಾಷ್ಟ್ರದ ಪರಿಕಲ್ಪನೆಯು ಎಲ್ಲೆಡೆ ಚರ್ಚೆಯಾಗುತ್ತಿದೆ. ಅನೇಕರು ಈ ಪರಿಕಲ್ಪನೆಯನ್ನು ಒಪ್ಪುತ್ತಾರೆ ಆದರೆ 'ಹಿಂದೂ' ಪದವನ್ನು ವಿರೋಧಿಸುತ್ತಾರೆ. ಬೇರೆ ಪದ ಬಳಸುವುದರಲ್ಲಿ ನಮಗೆ ಯಾವುದೇ ಸಮಸ್ಯೆ ಇಲ್ಲ. ಪರಿಕಲ್ಪನೆಯ ಸ್ಪಷ್ಟತೆಗಾಗಿ ಮಾತ್ರ ನಾವು ಹಿಂದೂ ಪದಕ್ಕೆ ಒತ್ತು ನೀಡುತ್ತೇವೆ ಎಂದು ಮೋಹನ್‌ ಭಾಗವತ್‌ ಸ್ಪಷ್ಟಪಡಿಸಿದರು.
icon

(3 / 5)

ಹಿಂದೂ ರಾಷ್ಟ್ರದ ಪರಿಕಲ್ಪನೆಯು ಎಲ್ಲೆಡೆ ಚರ್ಚೆಯಾಗುತ್ತಿದೆ. ಅನೇಕರು ಈ ಪರಿಕಲ್ಪನೆಯನ್ನು ಒಪ್ಪುತ್ತಾರೆ ಆದರೆ 'ಹಿಂದೂ' ಪದವನ್ನು ವಿರೋಧಿಸುತ್ತಾರೆ. ಬೇರೆ ಪದ ಬಳಸುವುದರಲ್ಲಿ ನಮಗೆ ಯಾವುದೇ ಸಮಸ್ಯೆ ಇಲ್ಲ. ಪರಿಕಲ್ಪನೆಯ ಸ್ಪಷ್ಟತೆಗಾಗಿ ಮಾತ್ರ ನಾವು ಹಿಂದೂ ಪದಕ್ಕೆ ಒತ್ತು ನೀಡುತ್ತೇವೆ ಎಂದು ಮೋಹನ್‌ ಭಾಗವತ್‌ ಸ್ಪಷ್ಟಪಡಿಸಿದರು.(ANI)

ದೇವಸ್ಥಾನ, ನೀರು, ಸ್ಮಶಾನ ಎಲ್ಲರಿಗೂ ಸಮಾನವಾಗಿರಬೇಕು. ಅನುಕಂಪದ ವಿಷಯಗಳಿಗೆ ನಾವು ಜಗಳವಾಡಬಾರದು. ಯಾರೋ ಒಬ್ಬರು ಕುದುರೆ ಸವಾರಿ ಮಾಡಬಹುದು ಮತ್ತು ಇನ್ನೊಬ್ಬರಿಗೆ ಸಾಧ್ಯವಿಲ್ಲ ಎಂಬಂತಹ ಮಾತುಗಳು ಸಮಾಜದಲ್ಲಿ ಸ್ಥಾನ ಪಡೆಯಬಾರದು ಎಂದು ಮೋಹನ್‌ ಭಾಗವತ್‌ ಮಾರ್ಮಿಕವಾಗಿ ನುಡಿದರು.
icon

(4 / 5)

ದೇವಸ್ಥಾನ, ನೀರು, ಸ್ಮಶಾನ ಎಲ್ಲರಿಗೂ ಸಮಾನವಾಗಿರಬೇಕು. ಅನುಕಂಪದ ವಿಷಯಗಳಿಗೆ ನಾವು ಜಗಳವಾಡಬಾರದು. ಯಾರೋ ಒಬ್ಬರು ಕುದುರೆ ಸವಾರಿ ಮಾಡಬಹುದು ಮತ್ತು ಇನ್ನೊಬ್ಬರಿಗೆ ಸಾಧ್ಯವಿಲ್ಲ ಎಂಬಂತಹ ಮಾತುಗಳು ಸಮಾಜದಲ್ಲಿ ಸ್ಥಾನ ಪಡೆಯಬಾರದು ಎಂದು ಮೋಹನ್‌ ಭಾಗವತ್‌ ಮಾರ್ಮಿಕವಾಗಿ ನುಡಿದರು.(ANI)

ನಾಗ್ಪುರದ ಆರ್‌ಎಸ್‌ಎಸ್ ಪ್ರಧಾನ ಕಚೇರಿಯಲ್ಲಿ ನಡೆದ ವಿಜಯದಶಮಿ2022 ಆಚರಣೆಯಲ್ಲಿ, ಮೌಂಟ್ ಎವರೆಸ್ಟ್ ಏರಿದ ಮೊದಲ ಮಹಿಳೆ ಸಂತೋಷ್ ಯಾದವ್ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಇದೇ ಮೊದಲ ಬಾರಿಗೆ ಮಹಿಳೆಯೊಬ್ಬರು ಆರ್‌ಎಸ್‌ಎಸ್‌ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದು ವಿಶೇಷವಾಗಿತ್ತು. ಸಮಾರಭದಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿ, ,ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
icon

(5 / 5)

ನಾಗ್ಪುರದ ಆರ್‌ಎಸ್‌ಎಸ್ ಪ್ರಧಾನ ಕಚೇರಿಯಲ್ಲಿ ನಡೆದ ವಿಜಯದಶಮಿ2022 ಆಚರಣೆಯಲ್ಲಿ, ಮೌಂಟ್ ಎವರೆಸ್ಟ್ ಏರಿದ ಮೊದಲ ಮಹಿಳೆ ಸಂತೋಷ್ ಯಾದವ್ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಇದೇ ಮೊದಲ ಬಾರಿಗೆ ಮಹಿಳೆಯೊಬ್ಬರು ಆರ್‌ಎಸ್‌ಎಸ್‌ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದು ವಿಶೇಷವಾಗಿತ್ತು. ಸಮಾರಭದಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿ, ,ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.(ANI)


IPL_Entry_Point

ಇತರ ಗ್ಯಾಲರಿಗಳು