Temples In Dream: ಕನಸಿನಲ್ಲಿ ದೇವಸ್ಥಾನ ಕಂಡರೆ ಶುಭವೇ ಅಶುಭವೇ, ಸ್ವಪ್ನ ಶಾಸ್ತ್ರದ ಪ್ರಕಾರ ನೀವು ಕಂಡ ದೇಗುಲದ ಕನಸಿನ ಅರ್ಥ ತಿಳಿಯಿರಿ
Dreaming of Visiting a Temple: ಕೆಲವೊಮ್ಮೆ ತಿರುಪತಿಯೋ, ಧರ್ಮಸ್ಥಳವೋ, ಕುಕ್ಕೆ ಸುಬ್ರಹ್ಮಣ್ಯವೋ ಅಥವಾ ಇನ್ಯಾವುದೋ ದೇವಾಲಯಕ್ಕೆ ತೀರ್ಥಯಾತ್ರೆ ಕೈಗೊಂಡಂತೆ ನಿಮಗೆ ಕನಸು ಬೀಳಬಹುದು. ಕನಸಲ್ಲಿ ದೇಗುಲ ಕಂಡರೆ ಒಳ್ಳೆಯದೋ ಅಥವಾ ಕೆಟ್ಟದ್ದೋ ಎಂಬ ವಿವರ ಇಲ್ಲಿದೆ.
(1 / 6)
ಕನಸಲ್ಲಿ ಒಮ್ಮೆಮ್ಮೆ ಯಾವುದೇ ದೇವಾಲಯಕ್ಕೆ ಭೇಟಿ ನೀಡಿದಂತೆ ಭಾಸವಾಗಬಹುದು. ನಿಮ್ಮ ಊರಿನ ದೇಗುಲ ಅಥವಾ ಯಾವುದೋ ಪ್ರಶಿದ್ಧ ದೇವಾಲಯಕ್ಕೆ ಭೇಟಿ ನೀಡಿದ ಅನುಭೂತಿಯಾಗಬಹುದು. ಉಡುಪಿ ಶ್ರೀಕೃಷ್ಣ ದೇಗುಲ, ಶೃಂಗೇರಿ ವಿದ್ಯಾಶಂಕರ ದೇಗುಲ, ಮುರುಡೇಶ್ವರ, ಹಂಪಿ ವಿರುಪಾಕ್ಷ, ಗೋಕರ್ಣ, ಚೆನ್ನಕೇಶವ ದೇಗುಲ, ಸುಬ್ರಹ್ಮಣ್ಯ, ಧರ್ಮಸ್ಥಳ ಮಂಜುನಾಥ ದೇಗುಲ ಈ ರೀತಿ ಯಾವುದೋ ದೇಗುಲಕ್ಕೆ ಭೇಟಿ ನೀಡಿದ ಕನಸು ಬೀಳಬಹುದು.
(2 / 6)
ಕನಸಿನಲ್ಲಿ ದೇವಾಸ್ಥಾನ ಕಾಣಿಸಿಕೊಂಡರೆ ಶಾಸ್ತ್ರದ ಪ್ರಕಾರ ಅದು ಮಂಗಳಕರ ಎಂದು ಪರಿಗಣಿಸಲಾಗಿದೆ. ದೀರ್ಘಕಾಲದಿಂದ ಬಾಕಿ ಇರುವಂತಹ ಕೆಲಸಗಳು ಶೀಘ್ರದಲ್ಲಿಯೇ ಪೂರ್ಣಗೊಳ್ಳುತ್ತವೆ.
(3 / 6)
ನಿಮ್ಮ ಕನಸಿನಲ್ಲಿ ಪುರಾತನ ದೇವಾಲಯವನ್ನು ಕಂಡರೆ ಭಯಪಡಬೇಡಿ. ನಿಮ್ಮ ಹಳೆಯ ಸ್ನೇಹಿತ ನಿಮ್ಮನ್ನು ಭೇಟಿಯಾಗುವ ಸೂಚನೆ ಇದಾಗಿದೆ. ನಿಮ್ಮ ಅನೇಕ ಕಾರ್ಯಗಳು ಅವನ ಸಹಾಯದಿಂದ ಪೂರ್ಣಗೊಳ್ಳುತ್ತವೆ.
(4 / 6)
ಸ್ವಪ್ನ ಶಾಸ್ತ್ರದ ಪ್ರಕಾರ ದೇಗುಲದಲ್ಲಿ ನೀವು ಪೂಜೆ ಸಲ್ಲಿಸುತ್ತಿರುವ ಕನಸು ಕಂಡರೆ ಅದನ್ನು ಶುಭಕರ ಎಂದು ಪರಿಗಣಿಸಿ. ಎಷ್ಟೇ ಕಷ್ಟಗಳು ಬಂದರೂ ಭಯಪಡಬೇಡಿ, ದೇವರ ದಯೆಯಿಂದ ಒಳ್ಳೆಯದೇ ಸಂಭವಿಸುತ್ತದೆ ಎನ್ನುವುದನ್ನು ಇದು ಸೂಚಿಸುತ್ತದೆ.
(5 / 6)
ದೇಗುಲದಲ್ಲಿ ಘಂಟೆ ಬಾರಿಸುವ ಅಥವಾ ಕನಸಲ್ಲಿ ದೇವಾಲಯದ ಘಂಟೆ ಕಂಡರೆ ನೀವು ಶೀಘ್ರದಲ್ಲಿ ಶುಭ ಸುದ್ದಿಯನ್ನು ಪಡೆಯಲಿದ್ದೀರಿ ಎನ್ನುವ ಸೂಚನೆಯಾಗಿದೆ. ನೀವು ಮಾಡುತ್ತಿರುವ ಪ್ರಯತ್ನಕ್ಕೆ ಉತ್ತಮ ಯಶಸ್ಸು ದೊರಕುತ್ತದೆ.
ಇತರ ಗ್ಯಾಲರಿಗಳು