Kamika Ekadashi 2023: ಇಂದು ಕಾಮಿಕ ಏಕಾದಶಿ, ಸರ್ವೈಕಾದಶಿ; ಚಾತುರ್ಮಾಸದ ಮೊದಲ ಏಕಾದಶಿ; ದಿನ ಮಹತ್ವ, ಕಥೆ ಇತ್ಯಾದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Kamika Ekadashi 2023: ಇಂದು ಕಾಮಿಕ ಏಕಾದಶಿ, ಸರ್ವೈಕಾದಶಿ; ಚಾತುರ್ಮಾಸದ ಮೊದಲ ಏಕಾದಶಿ; ದಿನ ಮಹತ್ವ, ಕಥೆ ಇತ್ಯಾದಿ

Kamika Ekadashi 2023: ಇಂದು ಕಾಮಿಕ ಏಕಾದಶಿ, ಸರ್ವೈಕಾದಶಿ; ಚಾತುರ್ಮಾಸದ ಮೊದಲ ಏಕಾದಶಿ; ದಿನ ಮಹತ್ವ, ಕಥೆ ಇತ್ಯಾದಿ

Kamika Ekadashi 2023: ಹಿಂದು ಧಾರ್ಮಿಕ ಪಂಚಾಗ ಪ್ರಕಾರ ಇಂದು (13 ಜುಲೈ 2023 ) ಕಾಮಿಕ ಏಕಾದಶಿ, ಸರ್ವೈಕಾದಶಿ. ಅದೇ ರೀತಿ ಚಾತುರ್ಮಾಸ ಆಚರಣೆಯ ಅವಧಿಯ ಮೊದಲ ಏಕಾದಶಿಯೂ ಹೌದು. ಈ ದಿನ ಮಹಾವಿಷ್ಣುವನ್ನು ಕ್ರಮಬದ್ಧವಾಗಿ ಪೂಜಿಸುವುದರಿಂದ ಹಲವು ಭಯ, ಆತಂಕಗಳು ದೂರಾಗುತ್ತವೆ ಎಂಬ ನಂಬಿಕೆ ಇದೆ.

ಪಂಚಾಂಗದ ಪ್ರಕಾರ, ಶ್ರಾವಣ ಕೃಷ್ಣ ಪಕ್ಷದ ಏಕಾದಶಿಯ ದಿನದಂದು ಕಾಮಿಕ ಏಕಾದಶಿ ಉಪವಾಸವನ್ನು ಆಚರಿಸಲಾಗುತ್ತದೆ. ಈ ಬಾರಿಯ ಕಾಮಿಕಾ ಏಕಾದಶಿ ಉಪವಾಸ ಜುಲೈ 13 ರಂದು ಆಚರಿಸಲಾಗುತ್ತದೆ. ಇದು ಚಾತುರ್ಮಾಸದ ಮೊದಲ ಏಕಾದಶಿ. ಭಗವಾನ್ ಮಹಾವಿಷ್ಣುವು ಚಾತುರ್ಮಾಸದಲ್ಲಿ 4 ತಿಂಗಳ ಕಾಲ ಯೋಗ ನಿದ್ರಾ ಭಂಗಿಯಲ್ಲಿ ಇರುತ್ತಾನೆ. ಈ ದಿನದಂದು ಭಗವಾನ್ ವಿಷ್ಣುವನ್ನು ಪೂಜಿಸಲಾಗುತ್ತದೆ ಮತ್ತು ಉಪವಾಸವನ್ನು ಆಚರಿಸಲಾಗುತ್ತದೆ. .
icon

(1 / 6)

ಪಂಚಾಂಗದ ಪ್ರಕಾರ, ಶ್ರಾವಣ ಕೃಷ್ಣ ಪಕ್ಷದ ಏಕಾದಶಿಯ ದಿನದಂದು ಕಾಮಿಕ ಏಕಾದಶಿ ಉಪವಾಸವನ್ನು ಆಚರಿಸಲಾಗುತ್ತದೆ. ಈ ಬಾರಿಯ ಕಾಮಿಕಾ ಏಕಾದಶಿ ಉಪವಾಸ ಜುಲೈ 13 ರಂದು ಆಚರಿಸಲಾಗುತ್ತದೆ. ಇದು ಚಾತುರ್ಮಾಸದ ಮೊದಲ ಏಕಾದಶಿ. ಭಗವಾನ್ ಮಹಾವಿಷ್ಣುವು ಚಾತುರ್ಮಾಸದಲ್ಲಿ 4 ತಿಂಗಳ ಕಾಲ ಯೋಗ ನಿದ್ರಾ ಭಂಗಿಯಲ್ಲಿ ಇರುತ್ತಾನೆ. ಈ ದಿನದಂದು ಭಗವಾನ್ ವಿಷ್ಣುವನ್ನು ಪೂಜಿಸಲಾಗುತ್ತದೆ ಮತ್ತು ಉಪವಾಸವನ್ನು ಆಚರಿಸಲಾಗುತ್ತದೆ. .(pngegg)

ಕಾಮಿಕ ಏಕಾದಶಿಯ ಶುಭ ಸಮಯಹಿಂದೂ ಪಂಚಾಂಗದ ಪ್ರಕಾರ, ಶ್ರಾವಣ ಮಾಸದ ಕೃಷ್ಣ ಪಕ್ಷದ ಏಕಾದಶಿ ದಿನಾಂಕವು ಜುಲೈ 12 ಸಂಜೆ 5.59 ರಿಂದ ಪ್ರಾರಂಭವಾಗಿದೆ. ಇಂದು (ಜುಲೈ 13) ಸಂಜೆ 6.24 ಕ್ಕೆ ಕೊನೆಗೊಳ್ಳುತ್ತದೆ. ಈ ಸಂದರ್ಭದಲ್ಲಿ ಉದಯ ತಿಥಿಯ ಪ್ರಕಾರ ಕಾಮಿಕಾ ಏಕಾದಶಿಯನ್ನು ಜುಲೈ 13 ರಂದು ಆಚರಿಸಲಾಗುತ್ತಿದೆ.
icon

(2 / 6)

ಕಾಮಿಕ ಏಕಾದಶಿಯ ಶುಭ ಸಮಯಹಿಂದೂ ಪಂಚಾಂಗದ ಪ್ರಕಾರ, ಶ್ರಾವಣ ಮಾಸದ ಕೃಷ್ಣ ಪಕ್ಷದ ಏಕಾದಶಿ ದಿನಾಂಕವು ಜುಲೈ 12 ಸಂಜೆ 5.59 ರಿಂದ ಪ್ರಾರಂಭವಾಗಿದೆ. ಇಂದು (ಜುಲೈ 13) ಸಂಜೆ 6.24 ಕ್ಕೆ ಕೊನೆಗೊಳ್ಳುತ್ತದೆ. ಈ ಸಂದರ್ಭದಲ್ಲಿ ಉದಯ ತಿಥಿಯ ಪ್ರಕಾರ ಕಾಮಿಕಾ ಏಕಾದಶಿಯನ್ನು ಜುಲೈ 13 ರಂದು ಆಚರಿಸಲಾಗುತ್ತಿದೆ.( unsplash /raimond-klavins-)

ಕಾಮಿಕ ಏಕಾದಶಿ ವ್ರತದ ಮಹತ್ವಧಾರ್ಮಿಕ ನಂಬಿಕೆಗಳ ಪ್ರಕಾರ ಕಾಮಿಕ ಏಕಾದಶಿ ವ್ರತವನ್ನು ಆಚರಿಸುವುದರಿಂದ ಮತ್ತು ಕ್ರಮಬದ್ಧವಾಗಿ ಮಹಾವಿಷ್ಣುವನ್ನು ಪೂಜಿಸುವುದರಿಂದ ವ್ಯಕ್ತಿಯ ಎಲ್ಲಾ ತೊಂದರೆಗಳು ದೂರವಾಗುತ್ತವೆ. ಇಷ್ಟಾರ್ಥ ಎಲ್ಲಾ ಕಾರ್ಯಗಳು ನೆರವೇರುತ್ತವೆ. ಈ ಸಂದರ್ಭದಲ್ಲಿ ದಾನ ಮಾಡುವುದು ವಿಶೇಷ ಮಹತ್ವವನ್ನು ಹೊಂದಿದೆ. ಈ ದಿನದಂದು ತುಳಸಿಯನ್ನು ಪೂಜಿಸಬೇಕು. 
icon

(3 / 6)

ಕಾಮಿಕಾ ಏಕಾದಶಿಯ ವ್ರತಕ್ಕೆ ಸಂಬಂಧಿಸಿದ ಕಥೆಕಾಮಿಕಾ ಏಕಾದಶಿಯಂದು ಉಪವಾಸದ ದಿನದಂದು ಏಕಾದಶಿ ವ್ರತ ಕಥಾವನ್ನು ಓದಬೇಕು ಮತ್ತು ಕೇಳಬೇಕು. ಇದು ಇಲ್ಲದೆ ಉಪವಾಸವನ್ನು ಅಪೂರ್ಣವೆಂದು ಪರಿಗಣಿಸಲಾಗುತ್ತದೆ. ಕಾಮಿಕಾ ಏಕಾದಶಿಯ ಉಪವಾಸಕ್ಕೆ ಸಂಬಂಧಿಸಿ ಪ್ರಚಲಿತದಲ್ಲಿರುವ ಒಂದು ಕಥೆ ಹೀಗಿದೆ.  ಮುಂಗೋಪದ ಸ್ವಭಾವದ ಗ್ರಾಮ ಮುಖ್ಯಸ್ಥನೊಬ್ಬ ಹಳ್ಳಿಯಲ್ಲಿ ವಾಸಿಸುತ್ತಿದ್ದರು. ಒಂದು ದಿನ ಕೋಪದ ಭರದಲ್ಲಿ ಕೊಲೆ ಮಾಡಿದ. ಇದರಿಂದಾಗಿ ಆತನಿಗೆ ಬ್ರಹ್ಮಹತ್ಯಾ ದೋಷ ಉಂಟಾಯಿತು. ಅದಕ್ಕೆ ಪ್ರಾಯಶ್ಚಿತ್ತ ಮಾಡಿಕೊಳ್ಳಲು ಹತನ ಅಂತ್ಯಸಂಸ್ಕಾರ ಮಾಡಲು ಮುಂದಾದರೆ, ಹತನಾದ ವ್ಯಕ್ತಿಯ ಸಮುದಾಯದವರು ಅದಕ್ಕೆ ಅವಕಾಶ ಕೊಡಲಿಲ್ಲ. 
icon

(4 / 6)

ಋಷಿಯೊಬ್ಬರನ್ನು ಭೇಟಿಯಾದ ಗ್ರಾಮ ಮುಖ್ಯಸ್ಥ ಬ್ರಹ್ಮ ಹತ್ಯಾ ದೋಷ ನಿವಾರಣೆಗೆ ಉಪಾಯವೇನು ಎಂದು ಕೇಳಿದ. ಆಗ ಮುನಿಯು ಈ ಪಾಪದಿಂದ ಮುಕ್ತಿ ಹೊಂದಲು ಕಾಮಿಕ ಏಕಾದಶಿಯನ್ನು ಉಪವಾಸ ಮಾಡುವಂತೆ ಸಲಹೆ ನೀಡಿದರು. ಈ ವ್ರತವನ್ನು ಕ್ರಮಬದ್ಧವಾಗಿ ಆಚರಿಸುವುದರಿಂದ ವ್ಯಕ್ತಿಯ ಎಲ್ಲ ಪಾಪಗಳು ನಾಶವಾಗುತ್ತವೆ ಎಂದು ಹೇಳಿದರು.
icon

(5 / 6)

ಅದರಂತೆ, ಗ್ರಾಮ ಮುಖ್ಯಸ್ಥ ಕಾಮಿಕಾ ಏಕಾದಶಿ ಉಪವಾಸವನ್ನು ಆಚರಿಸಿದ. ಕ್ರಮಬದ್ಧವಾಗಿ ಭಗವಾನ್ ವಿಷ್ಣುವನ್ನು ಪೂಜಿಸಿದ. ಇದರಿಂದ ಸಂತುಷ್ಟನಾದ ಭಗವಾನ್ ಶ್ರೀ ಹರಿಯು ಆತನ ಬ್ರಹ್ಮಹತ್ಯಾ ದೋಷ ನಿವಾರಣೆ ಆದುದಾಗಿ ಹೇಳಿ ಅಂತರ್ಧಾನನಾದ. ಈ ಕಥಾ ಶ್ರವಣ ಕೂಡ ಏಕಾದಶಿ ದಿನ ಉತ್ತಮ ಭಾವನೆಗಳನ್ನು ಬೆಳೆಸುತ್ತದೆ ಎಂಬುದು ನಂಬಿಕೆ. (ಹಕ್ಕುತ್ಯಾಗ: ಈ ಲೇಖನವು ಜನಪದದ ಮಾಹಿತಿಯನ್ನು ಒಳಗೊಂಡಿದ್ದು, ಇದುವೇ ಸರಿ ಎಂದು ಹಿಂದುಸ್ತಾನ್‌ ಟೈಮ್ಸ್‌ ಕನ್ನಡ ಪ್ರತಿಪಾದಿಸುವುದಿಲ್ಲ. ಮಾಹಿತಿಗೋಸ್ಕರ ಇದನ್ನು ಇಲ್ಲಿ ಪ್ರಕಟಿಸಲಾಗಿದೆ)
icon

(6 / 6)

ಇತರ ಗ್ಯಾಲರಿಗಳು