Divine Power: ಮನೆಯಲ್ಲಿ ದೈವಿಕ ಶಕ್ತಿ ಹೆಚ್ಚಲು ಈ ಕ್ರಮಗಳನ್ನು ಅನುಸರಿಸಿ; ದೇವರನ್ನು ಒಲಿಸಿಕೊಳ್ಳಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Divine Power: ಮನೆಯಲ್ಲಿ ದೈವಿಕ ಶಕ್ತಿ ಹೆಚ್ಚಲು ಈ ಕ್ರಮಗಳನ್ನು ಅನುಸರಿಸಿ; ದೇವರನ್ನು ಒಲಿಸಿಕೊಳ್ಳಿ

Divine Power: ಮನೆಯಲ್ಲಿ ದೈವಿಕ ಶಕ್ತಿ ಹೆಚ್ಚಲು ಈ ಕ್ರಮಗಳನ್ನು ಅನುಸರಿಸಿ; ದೇವರನ್ನು ಒಲಿಸಿಕೊಳ್ಳಿ

  • ಕೆಲವರಿಗೆ ಮನೆಯಲ್ಲಿ ಸದಾ ಕಷ್ಟ, ಕಾರ್ಪಣ್ಯಗಳು ಎದುರಾಗಿರುತ್ತವೆ. ಅನಿರೀಕ್ಷಿತ ಅಪಾಯಗಳು, ಅನಾಹುತಗಳು ನಡೆದು ಮನೆಯೊಳಗೆ ಕಳೆ ಇಲ್ಲದಂತಾಗುತ್ತದೆ. ಆದರೆ ದೈವಶಕ್ತಿ ಅಥವಾ ದೈವ ಬಲದಿಂದ ಮನೆಯಲ್ಲಿನ ತೊಂದರೆಗಳನ್ನು ದೂರ ಮಾಡಬಹುದು. ಹಾಗಾದರೆ ಮನೆಯಲ್ಲಿ ದೈವಿಕ ಶಕ್ತಿ ಹೆಚ್ಚಲು ಏನು ಮಾಡಬೇಕು. ಇಲ್ಲಿದೆ ಒಂದಿಷ್ಟು ಸಲಹೆ.

ಮನೆಯಲ್ಲಿ ಅಳಿಲು, ಗುಬ್ಬಚ್ಚಿ, ಪಾರಿವಾಳ ಇತ್ಯಾದಿಗಳಿದ್ದರೆ ದೈವಿಕ ಶಕ್ತಿ ಹೆಚ್ಚುತ್ತದೆ ಎಂಬ ನಂಬಿಕೆ ಇದೆ. ಈ ಜೀವಿಗಳು ದೈವಿಕ ಶಕ್ತಿಯನ್ನು ಗ್ರಹಿಸುವ ಶಕ್ತಿಯನ್ನು ಹೊಂದಿವೆ ಎಂದು ಹೇಳಲಾಗುತ್ತದೆ.
icon

(1 / 6)

ಮನೆಯಲ್ಲಿ ಅಳಿಲು, ಗುಬ್ಬಚ್ಚಿ, ಪಾರಿವಾಳ ಇತ್ಯಾದಿಗಳಿದ್ದರೆ ದೈವಿಕ ಶಕ್ತಿ ಹೆಚ್ಚುತ್ತದೆ ಎಂಬ ನಂಬಿಕೆ ಇದೆ. ಈ ಜೀವಿಗಳು ದೈವಿಕ ಶಕ್ತಿಯನ್ನು ಗ್ರಹಿಸುವ ಶಕ್ತಿಯನ್ನು ಹೊಂದಿವೆ ಎಂದು ಹೇಳಲಾಗುತ್ತದೆ.(Gettyimages)

ಮನೆ ಯಾವಾಗಲೂ ಪರಿಮಳದಿಂದ ಕೂಡಿರಬೇಕು. ಮನೆಯೊಳಗೆ ಉತ್ತಮವಾದ ಸುಗಂಧವನ್ನು ಸೂಸಿದರೆ ಅಲ್ಲಿ ದೈವಿಕ ಶಕ್ತಿಯು ಹೆಚ್ಚಾಗಲು ಪ್ರಾರಂಭಿಸುತ್ತದೆ ಎಂದು ಹೇಳಲಾಗುತ್ತದೆ. ಆದುದರಿಂದ ಪೂಜಾ ಕೊಠಡಿ ಮಾತ್ರವಲ್ಲದೆ, ಇಡೀ ಮನೆಯು ಊದಿನ ಕಡ್ಡಿ ಅಥವಾ ಸಾಂಬ್ರಾಣಿಯ ಪರಿಮಳ ಬೀರುವಂತೆ ನೋಡಿಕೊಳ್ಳಬೇಕು.
icon

(2 / 6)

ಮನೆ ಯಾವಾಗಲೂ ಪರಿಮಳದಿಂದ ಕೂಡಿರಬೇಕು. ಮನೆಯೊಳಗೆ ಉತ್ತಮವಾದ ಸುಗಂಧವನ್ನು ಸೂಸಿದರೆ ಅಲ್ಲಿ ದೈವಿಕ ಶಕ್ತಿಯು ಹೆಚ್ಚಾಗಲು ಪ್ರಾರಂಭಿಸುತ್ತದೆ ಎಂದು ಹೇಳಲಾಗುತ್ತದೆ. ಆದುದರಿಂದ ಪೂಜಾ ಕೊಠಡಿ ಮಾತ್ರವಲ್ಲದೆ, ಇಡೀ ಮನೆಯು ಊದಿನ ಕಡ್ಡಿ ಅಥವಾ ಸಾಂಬ್ರಾಣಿಯ ಪರಿಮಳ ಬೀರುವಂತೆ ನೋಡಿಕೊಳ್ಳಬೇಕು.(Gettyimages)

ಮನೆಯ ಪೂಜಾ ಕೋಣೆಯಲ್ಲಿ ಕನ್ನಡಿ ಇಡುವುದರಿಂದ ದೈವಿಕ ಶಕ್ತಿ ಹೆಚ್ಚುತ್ತದೆ. ಕನ್ನಡಿಗೆ ದೈವಿಕ ಶಕ್ತಿಯನ್ನು ಹೆಚ್ಚಿಸುವ ಶಕ್ತಿ ಇದೆ. ಅದರಲ್ಲೂ ಕುಲದೇವತೆ ಕನ್ನಡಿಯಲ್ಲಿ ನೆಲೆಸುತ್ತಾಳೆ ಎಂದು ಶಾಸ್ತ್ರಗಳು ಹೇಳುತ್ತವೆ.
icon

(3 / 6)

ಮನೆಯ ಪೂಜಾ ಕೋಣೆಯಲ್ಲಿ ಕನ್ನಡಿ ಇಡುವುದರಿಂದ ದೈವಿಕ ಶಕ್ತಿ ಹೆಚ್ಚುತ್ತದೆ. ಕನ್ನಡಿಗೆ ದೈವಿಕ ಶಕ್ತಿಯನ್ನು ಹೆಚ್ಚಿಸುವ ಶಕ್ತಿ ಇದೆ. ಅದರಲ್ಲೂ ಕುಲದೇವತೆ ಕನ್ನಡಿಯಲ್ಲಿ ನೆಲೆಸುತ್ತಾಳೆ ಎಂದು ಶಾಸ್ತ್ರಗಳು ಹೇಳುತ್ತವೆ.(Gettyimages)

ಕುಟುಂಬದವರೆಲ್ಲಾ ಒಟ್ಟಾಗಿ ಪೂಜಿಸಿದರೆ ದೇವರ ಶಕ್ತಿ ಹೆಚ್ಚುತ್ತದೆ ಎಂಬ ನಂಬಿಕೆ ಇದೆ.
icon

(4 / 6)

ಕುಟುಂಬದವರೆಲ್ಲಾ ಒಟ್ಟಾಗಿ ಪೂಜಿಸಿದರೆ ದೇವರ ಶಕ್ತಿ ಹೆಚ್ಚುತ್ತದೆ ಎಂಬ ನಂಬಿಕೆ ಇದೆ.(Gettyimages)

ದಿನದಲ್ಲಿ ಒಂದು ಬಾರಿಯಾದರೂ ಬೆಳಿಗ್ಗೆ ಮತ್ತು ಸಂಜೆ ದೀಪವನ್ನು ಬೆಳಗಿಸಬೇಕು. ನೀವು ಇದನ್ನು ಮುಂದುವರಿಸಿದರೆ, ಜೀವನದಲ್ಲಿ ತೊಂದರೆಗಳು ಕ್ರಮೇಣ ಕಣ್ಮರೆಯಾಗುತ್ತವೆ ಎಂದು ಹೇಳಲಾಗುತ್ತದೆ. 
icon

(5 / 6)

ದಿನದಲ್ಲಿ ಒಂದು ಬಾರಿಯಾದರೂ ಬೆಳಿಗ್ಗೆ ಮತ್ತು ಸಂಜೆ ದೀಪವನ್ನು ಬೆಳಗಿಸಬೇಕು. ನೀವು ಇದನ್ನು ಮುಂದುವರಿಸಿದರೆ, ಜೀವನದಲ್ಲಿ ತೊಂದರೆಗಳು ಕ್ರಮೇಣ ಕಣ್ಮರೆಯಾಗುತ್ತವೆ ಎಂದು ಹೇಳಲಾಗುತ್ತದೆ. (gettyimages)

ಮನೆಯಲ್ಲಿ ಮಂತ್ರ ಪಠಿಸಿದರೆ, ಅದರಿಂದ ಉಂಟಾಗುವ ಕಂಪನಗಳು ದೇವತೆಯ ಶಕ್ತಿಯನ್ನು ಹೆಚ್ಚಿಸುತ್ತವೆ. ಆದ್ದರಿಂದ ನಿಮಗೆ ತಿಳಿದಿರುವ ಮಂತ್ರಗಳನ್ನು ಗಟ್ಟಿಯಾಗಿ ಪಠಿಸಿ ಮತ್ತು ಪೂಜೆ ಮಾಡಿ.
icon

(6 / 6)

ಮನೆಯಲ್ಲಿ ಮಂತ್ರ ಪಠಿಸಿದರೆ, ಅದರಿಂದ ಉಂಟಾಗುವ ಕಂಪನಗಳು ದೇವತೆಯ ಶಕ್ತಿಯನ್ನು ಹೆಚ್ಚಿಸುತ್ತವೆ. ಆದ್ದರಿಂದ ನಿಮಗೆ ತಿಳಿದಿರುವ ಮಂತ್ರಗಳನ್ನು ಗಟ್ಟಿಯಾಗಿ ಪಠಿಸಿ ಮತ್ತು ಪೂಜೆ ಮಾಡಿ.(Gettyimages)


ಇತರ ಗ್ಯಾಲರಿಗಳು