ಶಿವನಿಗೆ ನಂದಿ, ಸರಸ್ವತಿಗೆ ಹಂಸ; ವಿವಿಧ ಹಿಂದೂ ದೇವರುಗಳು ಬಳಸುವ ವಾಹನಗಳ ಮಹತ್ವ ತಿಳಿಯಿರಿ
- ಎಲ್ಲಾ ಹಿಂದೂ ದೇವರುಗಳಿಗೂ ಒಂದೊಂದು ವಾಹನವಿದೆ. ಪ್ರಾಣಿ, ಪಕ್ಷಿಗಳನ್ನು ವಿವಿಧ ದೇವರುಗಳು ವಾಹನವನ್ನಾಗಿಸಿಕೊಂಡಿರುತ್ತಾರೆ. ಗಜಮುಖನ ವಾಹನ ಮೂಷಿಕನಾದರೆ, ಮಣಿಕಂಠನ ವಾಹನ ನವಿಲು. ಸರಸ್ವತಿ ದೇವಿಗೆ ಹಂಸ ವಾಹನ. ಈ ವಾಹನಗಳನ್ನು ಬಳಸುವ ಕಾರಣಗಳನ್ನು ತಿಳಿಯಿರಿ.
- ಎಲ್ಲಾ ಹಿಂದೂ ದೇವರುಗಳಿಗೂ ಒಂದೊಂದು ವಾಹನವಿದೆ. ಪ್ರಾಣಿ, ಪಕ್ಷಿಗಳನ್ನು ವಿವಿಧ ದೇವರುಗಳು ವಾಹನವನ್ನಾಗಿಸಿಕೊಂಡಿರುತ್ತಾರೆ. ಗಜಮುಖನ ವಾಹನ ಮೂಷಿಕನಾದರೆ, ಮಣಿಕಂಠನ ವಾಹನ ನವಿಲು. ಸರಸ್ವತಿ ದೇವಿಗೆ ಹಂಸ ವಾಹನ. ಈ ವಾಹನಗಳನ್ನು ಬಳಸುವ ಕಾರಣಗಳನ್ನು ತಿಳಿಯಿರಿ.
(1 / 6)
ಹಿಂದೂ ಧರ್ಮದಲ್ಲಿ ಪೂಜಿಸಲ್ಪಡುವ ಮುಕ್ಕೋಟಿ ದೇವರುಗಳು ಭಿನ್ನವಾಗಿರುತ್ತಾರೆ. ಇವರಲ್ಲಿ ವಿಶಿಷ್ಟ ಲಕ್ಷಣಗಳಿರುವುದು ಸಹಜ. ಈ ದೇವರುಗಳು ದುಷ್ಟರನ್ನು ಶಿಕ್ಷಿಸಿ, ಶಿಷ್ಟರನ್ನು ರಕ್ಷಿಸುವವರು. ಪ್ರತಿ ದೇವರಿಗೂ ಒಂದೊಂದು ರೀತಿಯ ನೈವೇದ್ಯ ನೀಡಲಾಗುತ್ತದೆ. ಜೊತೆಗೆ ಒಬ್ಬೊಬ್ಬರಿಗೂ ವಿಶೇಷ ವಾಹನವಿದೆ. ಗಜಮುಖನ ವಾಹನ ಮೂಷಿಕನಾದರೆ, ಮಣಿಕಂಠನ ವಾಹನ ನವಿಲು. ಸರಸ್ವತಿ ದೇವಿಗೆ ಹಂಸ ವಾಹನ. ದೇವರುಗಳು ತಮ್ಮ ವಾಹನದ ಮೇಲೆ ಕುಳಿತು ಪ್ರಪಂಚ ಸುತ್ತುತ್ತಾರೆ ಎಂಬುದು ನಂಬಿಕೆ. ಹಾಗಾದರೆ ಹಿಂದೂ ದೇವರುಗಳ ಬಳಸುವ ವಾಹನಗಳ ಹಿಂದಿನ ಅರ್ಥವೇನು, ಈ ವಾಹನಗಳನ್ನೇ ಅವರು ಆಯ್ಕೆ ಮಾಡಿಕೊಳ್ಳಲು ಕಾರಣವೇನು? ಇಲ್ಲಿದೆ ಉತ್ತರ.
(2 / 6)
ಶನಿಯ ವಾಹನ ಕಾಗೆ: ಶನಿಯು ಹಲವು ವಾಹನಗಳನ್ನು ಹೊಂದಿದ್ದಾನೆ ಎಂದು ನಂಬಲಾಗಿದೆಯಾದರೂ, ಕಾಗೆ ಅತ್ಯಂತ ಜನಪ್ರಿಯವಾಗಿದೆ. ಶನಿಯು ನ್ಯಾಯದ ದೇವರು. ಕಾಗೆಯನ್ನು ಸೂಕ್ಷ್ಮಮತಿ ಹಾಗೂ ಬುದ್ಧಿವಂತಿಕೆಯ ಸಂಕೇತವೆಂದು ಪರಿಗಣಿಸಲಾಗಿದೆ. ಕಾಗೆಗೆ ತೀಕ್ಷ್ಣ ದೃಷ್ಟಿ ಇದೆ. ಕಾಗೆಯು ತನ್ನ ನಿರ್ಧಾರಗಳನ್ನು ಶನಿಗೆ ತಿಳಿಸುತ್ತದೆ. ಆ ಮೂಲಕ ಶನಿ ದೇವರಿಗೆ ಸಹಾಯ ಮಾಡುತ್ತದೆ ಮತ್ತು ಪ್ರಪಂಚದ ಮೇಲೆ ನಿಗಾ ಇಡುತ್ತದೆ ಎಂದು ನಂಬಲಾಗಿದೆ.ಮತ್ತೊಂದು ನಂಬಿಕೆಯ ಪ್ರಕಾರ, ಕಾಗೆಗಳು ಸಾವಿನ ದೇವರ ಸಂದೇಶವಾಹಕರು. ಅದಕ್ಕಾಗಿಯೇ ಕಾಗೆಯಿಂದ ಮುಟ್ಟಿಸಿಕೊಂಡರೆ ಅಶುಭವೆಂದು ಪರಿಗಣಿಸಲಾಗಿದೆ. ಶನಿ ದೇವರು ಮಾನವರ ಜೀವನ ಮತ್ತು ಸಾವಿನ ಚಕ್ರದ ಭಾಗವಾಗಿರುವುದರಿಂದ, ಕಾಗೆಯು ಎರಡಕ್ಕೂ ಪ್ರಯೋಜನವನ್ನು ನೀಡುತ್ತದೆ ಎಂದು ಹೇಳಲಾಗುತ್ತದೆ.
(3 / 6)
ಇಂದ್ರನ ವಾಹನ ಐರಾವತ: ಇಂದ್ರನು ಸ್ವರ್ಗದ ರಾಜ. ಅವನ ವಾಹನ ಐರಾವತ ಅಂದರೆ ಬಿಳಿ ಆನೆ. ಗುಡುಗು ಮತ್ತು ಮಿಂಚಿನ ರಾಜ ಎಂದು ಹೇಳಲಾಗುತ್ತದೆ. ಇಂದ್ರನ ವಾಹನ ಐರಾವತವನ್ನು ಶುದ್ಧತೆ, ಶಕ್ತಿ ಮತ್ತು ಸಮೃದ್ಧಿಯ ಸಂಕೇತವಾಗಿ ನೋಡಲಾಗುತ್ತದೆ. ಇಂದ್ರನು ಮಳೆ ಮತ್ತು ಫಲವತ್ತತೆಗೆ ಕಾರಣವಾದ ದೇವರು. ಆನೆಯ ವಾಹನವು ನೀರು ಮತ್ತು ಸಮೃದ್ಧಿಗೆ ಸಂಬಂಧಿಸಿದೆ. ಐರಾವತವು ಸ್ವರ್ಗದ ಕಾವಲುಗಾರನಾಗಿ ಕಾರ್ಯನಿರ್ವಹಿಸುತ್ತದೆ ಎಂಬುದು ಇನ್ನೊಂದು ನಂಬಿಕೆ. (Wikipedia)
(4 / 6)
ಮಾತೆ ದುರ್ಗೆಯ ವಾಹನ ಸಿಂಹ: ದುರ್ಗಾದೇವಿಯು ಸ್ತ್ರೀ ಶಕ್ತಿಯ ಮೂರ್ತರೂಪ. ಈ ದೇವಿಯು ಸಿಂಹದ ಮೇಲೆ ಸವಾರಿ ಮಾಡುತ್ತಾಳೆ. ಇದು ಶಕ್ತಿ, ಧೈರ್ಯ ಮತ್ತು ಪರಾಕ್ರಮವನ್ನು ಸಂಕೇತಿಸುತ್ತದೆ. ಸಿಂಹದೊಂದಿಗಿನ ದುರ್ಗಾದೇವಿಯ ಒಡನಾಟವು ಉಗ್ರ ರಕ್ಷಣಾತ್ಮಕ ಸ್ವಭಾವವನ್ನು ಸಂಕೇತಿಸುತ್ತದೆ. ಅವಳು ಆಗಾಗ್ಗೆ ರಾಕ್ಷಸರನ್ನು ಕೊಲ್ಲುತ್ತಾಳೆ ಮತ್ತು ದುಷ್ಟ ಶಕ್ತಿಗಳಿಂದ ಜಗತ್ತನ್ನು ರಕ್ಷಿಸುತ್ತಾಳೆ. ಸಿಂಹದ ಮೇಲೆ ಸವಾರಿ ಮಾಡುವ ದುರ್ಗಾ ದೇವಿಯು ಯಾವುದೇ ಪ್ರತಿಕೂಲತೆಯನ್ನು ನಿವಾರಿಸುವ ಮಹಾನ್ ಸ್ತ್ರೀ ಶಕ್ತಿಯನ್ನು ಪ್ರತಿನಿಧಿಸುತ್ತಾಳೆ.
(5 / 6)
ಶಿವನ ವಾಹನ ನಂದಿ: ಮಹಾಶಿವನ ವಾಹನ ನಂದಿ. ಪರಶಿವನು ನಂದಿಯ ಮೇಲೆ ಕುಳಿತು ಪ್ರಯಾಣ ಮಾಡುತ್ತಾನೆ. ನಂದಿಯು ಶಿವನ ನಿಷ್ಠಾವಂತ ವಾಹನ ಹಾಗೂ ದ್ವಾರಪಾಲಕನಾಗಿಯೂ ಕಾರ್ಯನಿರ್ವಹಿಸುತ್ತಾನೆ. ಶಿವನು ನಂದಿಯನ್ನು ತನ್ನ ವಾಹನವನ್ನಾಗಿ ಆಯ್ಕೆ ಮಾಡಿರುವುದರ ಹಿಂದೆ ಎರಡು ಪ್ರಸಿದ್ಧ ಕಥೆಗಳಿವೆ. ನಂದಿ ಶಕ್ತಿ ಹಾಗೂ ನಿಷ್ಠೆಯನ್ನು ಪ್ರತಿನಿಧಿಸುವವನು ಎಂದು ಒಂದು ಕಥೆ ಹೇಳುತ್ತದೆ. ಸೃಷ್ಟಿ ಮತ್ತು ವಿನಾಶದೊಂದಿಗಿನ ಸಂಬಂಧವು ಶಿವನ ಪಾತ್ರಕ್ಕೆ ಸೂಕ್ತವಾದ ಗುಣವೆಂದು ಹೇಳಲಾಗುತ್ತದೆ. ಇನ್ನೊಂದು ಕಥೆ ಹೇಳುವಂತೆ ನಂದಿಯು ಸಾಕ್ಷಾತ್ ಶಿಲಾದ ಋಷಿಯ ಮಗ. ಆತ ಮಹಾ ಶಿವಭಕ್ತ. ಅವನಿಗೆ ಅಮರತ್ವದ ಉಡುಗೊರೆ ಇದೆ. ಶಿವನಿಗೆ ವಾಹನವಾಗುವ ವರವಿದೆ ಎಂದೂ ಪುರಾಣಗಳು ಹೇಳುತ್ತವೆ.
(6 / 6)
ಸರಸ್ವತಿ ದೇವಿಯ ಹಂಸ: ಹಂಸವು ಜ್ಞಾನ, ಶಿಕ್ಷಣ ಮತ್ತು ಕಲೆಗಳ ದೇವತೆಯಾದ ಸರಸ್ವತಿ ದೇವಿಯ ವಾಹನವಾಗಿದೆ. ಸರಸ್ವತಿ ದೇವಿಯು ಹಂಸವನ್ನು ವಾಹನವಾಗಿ ಆಯ್ಕೆ ಮಾಡುವುದು ಶುದ್ಧತೆ, ಕರುಣೆ ಹಾಗೂ ಒಳ್ಳೆಯದು-ಕೆಟ್ಟದ್ದರ ನಡುವೆ ವ್ಯತ್ಯಾಸವನ್ನು ತೋರಿಸುವ ಸಾಮರ್ಥ್ಯದ ಸಂಕೇತವೆಂದು ನಂಬಲಾಗಿದೆ. ಶಿಸ್ತು ಮತ್ತು ಶುದ್ಧತೆಯನ್ನು ಸಂಕೇತಿಸುತ್ತದೆ. ಇವೆರಡೂ ವಿದ್ಯಾರ್ಥಿ ಜೀವನದಲ್ಲಿ ಮುಖ್ಯವಾದ ಅಂಶಗಳಾಗಿವೆ. ಆದ್ದರಿಂದ ಹಂಸ ಸರಸ್ವತಿ ಭಕ್ತರಿಗೆ ಸರಿಯಾದ ಮಾರ್ಗಗಳನ್ನು ಅನುಸರಿಸಲು ಸಹಾಯ ಮಾಡುತ್ತದೆ ಎಂದು ನಂಬಲಾಗಿದೆ.
ಇತರ ಗ್ಯಾಲರಿಗಳು