ವೈಕುಂಠ ಏಕಾದಶಿಯಂದು ನಾರಾಯಣನ ದರ್ಶನ ಪುಣ್ಯಕರ: ಕರ್ನಾಟಕದ 5 ಇತಿಹಾಸ ಪ್ರಸಿದ್ಧ ವಿಷ್ಣು ದೇಗುಲಗಳಿವು
- ವೈಕುಂಠ ಏಕಾದಶಿಗೆ ಕರ್ನಾಟಕದಲ್ಲಿ ವಿಶೇಷ ಮಹತ್ವವಿದೆ. ಇಂದು ಸ್ವರ್ಗದ ಬಾಗಿಲು ತೆರೆಯುವ ದಿನ ಎಂಬ ನಂಬಿಕೆ. ಹಾಗಾಗಿ ಈ ದಿನ ಭಕ್ತರು ವೆಂಕಟೇಶ್ವರನ ದರ್ಶನ ಪಡೆಯಲು ಹಾತೊರೆಯುತ್ತಾರೆ. ಈ ದಿನ ವಿಷ್ಣು (ವೆಂಕಟೇಶ್ವರ) ದೇಗುಲಗಳಲ್ಲಿ ವಿಶೇಷ ಪೂಜೆ ನಡೆಯುತ್ತದೆ. ಡಿ.23ಕ್ಕೆ ವೈಕುಂಠ ಏಕಾದಶಿಯಿದ್ದು ಈ ಸಂದರ್ಭ ಕರ್ನಾಟಕದ ಪ್ರಮುಖ ವಿಷ್ಣು ದೇವಾಲಯಗಳ ಮಾಹಿತಿ ಇಲ್ಲಿದೆ.
- ವೈಕುಂಠ ಏಕಾದಶಿಗೆ ಕರ್ನಾಟಕದಲ್ಲಿ ವಿಶೇಷ ಮಹತ್ವವಿದೆ. ಇಂದು ಸ್ವರ್ಗದ ಬಾಗಿಲು ತೆರೆಯುವ ದಿನ ಎಂಬ ನಂಬಿಕೆ. ಹಾಗಾಗಿ ಈ ದಿನ ಭಕ್ತರು ವೆಂಕಟೇಶ್ವರನ ದರ್ಶನ ಪಡೆಯಲು ಹಾತೊರೆಯುತ್ತಾರೆ. ಈ ದಿನ ವಿಷ್ಣು (ವೆಂಕಟೇಶ್ವರ) ದೇಗುಲಗಳಲ್ಲಿ ವಿಶೇಷ ಪೂಜೆ ನಡೆಯುತ್ತದೆ. ಡಿ.23ಕ್ಕೆ ವೈಕುಂಠ ಏಕಾದಶಿಯಿದ್ದು ಈ ಸಂದರ್ಭ ಕರ್ನಾಟಕದ ಪ್ರಮುಖ ವಿಷ್ಣು ದೇವಾಲಯಗಳ ಮಾಹಿತಿ ಇಲ್ಲಿದೆ.
(1 / 6)
ಹಿಂದೂ ಧರ್ಮದಲ್ಲಿ ಏಕಾದಶಿ ಆಚರಣೆಗೆ ಬಹಳ ಮಹತ್ವವಿದೆ. ಈ ದಿನ ಭಗವಾನ್ ವಿಷ್ಣುವಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಅದರಲ್ಲೂ ಸ್ವರ್ಗದ ಬಾಗಿಲು ತೆರೆಯುವ ಎಂದೇ ಕರೆಯುವ ವೈಕುಂಠ ಏಕಾದಶಿ ಬಹಳ ವಿಶೇಷ. ಈ ವರ್ಷ 2 ಬಾರಿ ವೈಕುಂಠ ಏಕಾದಶಿ ಬಂದಿದೆ. ಜನವರಿಯಲ್ಲಿ ಒಮ್ಮೆ ವೈಕುಂಠ ಏಕಾದಶಿ ನಡೆದಿತ್ತು. ಇದೀಗ ಡಿ.23ಕ್ಕೆ ವರ್ಷದ ಎರಡನೇ ಏಕಾದಶಿ ನಡೆಯಲಿದೆ. ವೈಕುಂಠ ಏಕಾದಶಿಯ ಈ ಸುಸಂದರ್ಭದಲ್ಲಿ ಕರ್ನಾಟಕದ 5 ಪ್ರಸಿದ್ಧ ವಿಷ್ಣು ದೇವಾಲಯಗಳ ಬಗ್ಗೆ ತಿಳಿಯೋಣ.
(2 / 6)
ಚೆಲುವರಾಯಸ್ವಾಮಿ ದೇವಸ್ಥಾನ ಮೇಲುಕೋಟೆ: ಮೈಸೂರಿನ ಮೇಲುಕೋಟೆಯಲ್ಲಿರುವ ಚೆಲುವರಾಯಸ್ವಾಮಿ ದೇವಾಲಯ ಕರ್ನಾಟಕ ಪ್ರಸಿದ್ಧ ವಿಷ್ಣು ದೇವಾಲಯಗಳಲ್ಲಿ ಒಂದು. ಮೈಸೂರು ಪಟ್ಟಣದಿಂದ 50 ಕಿಲೋಮೀಟರ್ ದೂರದಲ್ಲಿದೆ ಈ ದೇವಾಲಯ. ಸಣ್ಣ ಕಲ್ಲಿನ ಬೆಟ್ಟದ ಮೇಲೆ ಈ ದೇವಾಲಯವನ್ನು ನಿರ್ಮಿಸಲಾಗಿದೆ. ಧಾರ್ಮಿಕ ಪ್ರಾಮುಖ್ಯತೆ ಮಾತ್ರವಲ್ಲದೆ, ಅದ್ಭುತ ವಾಸ್ತುಶಿಲ್ಪದ ಕಾರಣದಿಂದಲೂ ಈ ದೇವಾಲಯ ಹೆಸರು ಗಳಿಸಿದೆ. 16 ರಿಂದ 17ನೇ ಶತಮಾನದ ಅವಧಿಯಲ್ಲಿ ಈ ದೇವಾಲಯವನ್ನು ನಿರ್ಮಿಸಲಾಗಿದೆ ಎಂದು ಹೇಳಲಾಗುತ್ತದೆ. (Explorebees)
(3 / 6)
ರಂಗನಾಥಸ್ವಾಮಿ ದೇವಾಲಯ ಶ್ರೀರಂಗಪಟ್ಟಣ: ವೈಷ್ಣವರ ಪ್ರಮುಖ ಯಾತ್ರಾಸ್ಥಳಗಳಲ್ಲಿ ಒಂದಾಗಿರುವ ರಂಗನಾಥಸ್ವಾಮಿ ದೇವಾಲಯವು ಐತಿಹಾಸಿಕ ಪಟ್ಟಣವಾದ ಶ್ರೀರಂಗ ಪಟ್ಟಣದಲ್ಲಿದೆ. ಗಂಗರ ಆಳ್ವಿಕೆಯ ಕಾಲದಲ್ಲಿ ಈ ದೇಗುಲವನ್ನು ನಿರ್ಮಿಸಲಾಗಿದೆ ಎನ್ನಲಾಗುತ್ತದೆ. ಪ್ರತಿವರ್ಷ ಸಾವಿರಾರು ಭಕ್ತರು ಈ ದೇವಾಲಯಕ್ಕೆ ಭೇಟಿ ನೀಡುತ್ತಾರೆ. (Holidify)
(4 / 6)
ಚನ್ನಕೇಶವ ದೇವಾಲಯ ಬೇಲೂರು: ಬೇಲೂರಿನಲ್ಲಿ ಚೆನ್ನಕೇವಶ ದೇವಾಲಯಕ್ಕೆ ಸಾಮಾನ್ಯವಾಗಿ ಎಲ್ಲವೂ ಭೇಟಿ ನೀಡುತ್ತಾರೆ. ಇದೊಂದು ಪ್ರಮುಖ ಪ್ರವಾಸಿತಾಣವೂ ಆಗಿರುವುದರಿಂದ ಪ್ರತಿದಿನ ಇಲ್ಲಿದೆ ಸಾವಿರಾರು ಮಂದಿ ಭೇಟಿ ನೀಡುತ್ತಾರೆ. ಇದು 12ನೇ ಶತಮಾನದ ದೇಗುಲವಾಗಿದೆ. ಹೊಯ್ಸಳರು ಈ ದೇವಾಲಯವನ್ನು ಕಟ್ಟಿಸಿದ್ದರು. ಈ ದೇಗುಲದ ಗೋಡೆಗಳ ಮೇಲೆ ಭಾರತೀಯ ಮಹಾಕಾವ್ಯಗಳಾದ ರಾಮಾಯಣ ಹಾಗೂ ಮಹಾಭಾರತದ ದೃಶ್ಯಗಳನ್ನು ಕೆತ್ತಲಾಗಿದೆ. (Native Planet)
(5 / 6)
ವಿಠ್ಠಲ ದೇವಾಲಯ ಹಂಪಿ: ಅತ್ಯದ್ಭುತ ವಾಸ್ತುಶಿಲ್ಪವನ್ನು ಹೊಂದಿರುವ ಪ್ರಮುಖ ದೇವಾಲಯಗಳಲ್ಲಿ ಹಂಪಿಯ ವಿಠ್ಠಲ ದೇವಾಲಯ ಕೂಡ ಒಂದು. ಇದು ಹಂಪಿಯಲ್ಲಿರುವ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದೆ. 15ನೇ ಶತಮಾನದಲ್ಲಿ ವಿಜಯನಗರ ಸಾಮ್ರಾಜ್ಯದವರು ಈ ದೇವಾಲಯವನ್ನು ಕಟ್ಟಿಸಿದ್ದಾರೆ. ಇದನ್ನು ದ್ರಾವಿಡ ಶೈಲಿಯ ವಾಸ್ತುಶಿಲ್ಪದಲ್ಲಿ ನಿರ್ಮಿಸಲಾಗಿದೆ.(Tourism of India)
(6 / 6)
ಅನಂತಶಯನ ದೇವಾಲಯ ಕಾರ್ಕಳ: ಉಡುಪಿ ಜಿಲ್ಲೆಯ ಕಾರ್ಕಳದಲ್ಲಿರುವ ಅನಂತಶಯನ ದೇವಾಯಲವು ಕರ್ನಾಟಕದ ಪ್ರಸಿದ್ಧ ವಿಷ್ಣುದೇವಾಲಯಗಳಲ್ಲಿ ಒಂದಾಗಿದೆ. 15ನೇ ಶತಮಾನದಲ್ಲಿ ಇದು ಜೈನ ಬಸದಿಯಾಗಿತ್ತು ಎಂದು ಹೇಳಲಾಗುತ್ತದೆ. ನಂತರ ಶ್ರೀ ನರಸಿಂಹ ಭಾರತಿ ಸ್ವಾಮೀಜಿ ಈ ಬಸದಿಯನ್ನು ವಿಷ್ಣುದೇಗುಲವಾಗಿ ಪರಿವರ್ತಿಸಲು ಶ್ರಮಿಸಿದರು ಎನ್ನಲಾಗುತ್ತದೆ. ಈ ದೇವಾಲಯಕ್ಕೂ ನೂರಾರು ಪ್ರವಾಸಿಗರು ಭೇಟಿ ನೀಡುತ್ತಾರೆ. (Trawell.in)
ಇತರ ಗ್ಯಾಲರಿಗಳು