Amla Navami 2023: ಇಂದು ಅಕ್ಷಯ ನವಮಿ, ಇಷ್ಟಾರ್ಥ ಸಿದ್ಧಿಗೆ ಈ ಆಮ್ಲ ನವಮಿಯೇ ಉತ್ತಮ ದಿನ
- Amla navami 2023: ಇಂದು ಆಮ್ಲ ನವಮಿ. ಅಕ್ಷಯ ನವಮಿ ಎಂದೂ ಈ ದಿನವನ್ನು ಗುರುತಿಸುತ್ತಾರೆ. ಈ ದಿನ ಮಾಡಿದ ಒಳ್ಳೆಯ ಕೆಲಸಗಳಿಗೆ ಉತ್ತಮ ಫಲವಿದೆ. ದಾನ ನೀಡಿದರೆ ಅದರಿಂದ ದೀರ್ಘಾವಧಿಯ ಶುಭಫಲವಿದೆ. ಅದೇ ರೀತಿ, ಅಮೃತಬಳ್ಳಿಯ ನೆರಳಿನಲ್ಲಿ ಕುಳಿತು ಆಹಾರ ಸೇವಿಸಿದರೆ ಅದು ಕೂಡ ಆರೋಗ್ಯದ ದೃಷ್ಟಿಯಿಂದ ಉತ್ತಮ ಫಲ ನೀಡುವುದೆಂಬ ನಂಬಿಕೆ ಇದೆ.
- Amla navami 2023: ಇಂದು ಆಮ್ಲ ನವಮಿ. ಅಕ್ಷಯ ನವಮಿ ಎಂದೂ ಈ ದಿನವನ್ನು ಗುರುತಿಸುತ್ತಾರೆ. ಈ ದಿನ ಮಾಡಿದ ಒಳ್ಳೆಯ ಕೆಲಸಗಳಿಗೆ ಉತ್ತಮ ಫಲವಿದೆ. ದಾನ ನೀಡಿದರೆ ಅದರಿಂದ ದೀರ್ಘಾವಧಿಯ ಶುಭಫಲವಿದೆ. ಅದೇ ರೀತಿ, ಅಮೃತಬಳ್ಳಿಯ ನೆರಳಿನಲ್ಲಿ ಕುಳಿತು ಆಹಾರ ಸೇವಿಸಿದರೆ ಅದು ಕೂಡ ಆರೋಗ್ಯದ ದೃಷ್ಟಿಯಿಂದ ಉತ್ತಮ ಫಲ ನೀಡುವುದೆಂಬ ನಂಬಿಕೆ ಇದೆ.
(1 / 5)
ಹಿಂದೂ ಧರ್ಮದಲ್ಲಿ ಕಾರ್ತಿಕ ಮಾಸದಲ್ಲಿ ಅನೇಕ ಪ್ರಮುಖ ಹಬ್ಬಗಳ ಆಚರಣೆ ಇದೆ. ಈ ಪೈಕಿ ಅಕ್ಷಯ ನವಮಿ ಅಥವಾ ಆಮ್ಲ ನವಮಿಯನ್ನು ಕಾರ್ತಿಕ ಮಾಸದ ಶುಕ್ಲ ಪಕ್ಷದ ನವಮಿ ತಿಥಿಯಂದು ಆಚರಿಸಲಾಗುತ್ತದೆ. ಆಮ್ಲ ನವಮಿಯಂದು ಭಗವಾನ್ ವಿಷ್ಣುವನ್ನು ಪೂಜಿಸಲಾಗುತ್ತದೆ ಶ್ರೀಹರಿಯನ್ನು ಶಾಸ್ತ್ರೋಕ್ತವಾಗಿ ಪೂಜಿಸುವುದರಿಂದ ಭಕ್ತರ ಎಲ್ಲಾ ಇಷ್ಟಾರ್ಥಗಳು ಈಡೇರುತ್ತವೆ ಮತ್ತು ಭಕ್ತರಿಗೆ ಶಾಶ್ವತ ಫಲಗಳು ಸಿಗುತ್ತವೆ ಎಂಬುದು ಧಾರ್ಮಿಕ ನಂಬಿಕೆ.
(2 / 5)
ಅಕ್ಷಯ ನವಮಿ ಅಥವಾ ಆಮ್ಲ ನವಮಿ ಯಾವಾಗ ಎಂದು ತಿಳಿಯಿರಿ: ಕಾರ್ತಿಕ ನವಮಿಯ ಶುಕ್ಲ ಪಕ್ಷದ ನವಮಿ ತಿಥಿಯು ನವೆಂಬರ್ 21 ರಂದು ನಸುಕಿನ 3:16 ಕ್ಕೆ ಪ್ರಾರಂಭವಾಗುತ್ತದೆ ಮತ್ತು ಈ ತಿಥಿಯು ನವೆಂಬರ್ 22 ರಂದು ನಸುಕಿನ 01: 11 ಕ್ಕೆ ಕೊನೆಗೊಳ್ಳುತ್ತದೆ. ಆದ್ದರಿಂದ, ನವೆಂಬರ್ 21 ರ ಮಂಗಳವಾರದಂದು ಮಾತ್ರ ಆಮ್ಲ ನವಮಿಯನ್ನು ಅಥವಾ ಅಕ್ಷಯ ನವಮಿಯನ್ನು ಆಚರಿಸಲಾಗುತ್ತದೆ.(Freepik)
(3 / 5)
ಅಕ್ಷಯ ನವಮಿಯ ದಿನದಂದು ಮಾಡಿದ ಯಾವುದೇ ದಾನದ ಫಲವು ಅಕ್ಷಯವಾಗುತ್ತದೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ಈ ದಿನದ ಯಾವುದೇ ದಾನ ಅಥವಾ ಒಳ್ಳೆಯ ಕಾರ್ಯವು ಅದರ ಫಲವನ್ನು ಎಂದಿಗೂ ವ್ಯರ್ಥವಾಗುವುದಿಲ್ಲ ಎಂಬುದು ಧಾರ್ಮಿಕ ನಂಬಿಕೆ.
(4 / 5)
ಕಾರ್ತಿಕ ಮಾಸದ ಶುಕ್ಲಪಕ್ಷದ ನವಮಿ ತಿಥಿಯಿಂದ ಪೂರ್ಣಿಮಾ ತಿಥಿಯವರೆಗೆ ನೆಲ್ಲಿ ಮರದಲ್ಲಿ ವಿಷ್ಣು ಮತ್ತು ಲಕ್ಷ್ಮಿ ದೇವಿ ನೆಲೆಸಿರುತ್ತಾರೆ ಎಂಬುದು ಪೌರಾಣಿಕ ನಂಬಿಕೆ. ಆದ್ದರಿಂದ ನೆಲ್ಲಿಮರವನ್ನು ಪೂಜಿಸಿ ಅದರ ನೆರಳಿನಲ್ಲಿ ಕುಳಿತುಕೊಂಡರೆ ಜನರ ಎಲ್ಲ ದುಃಖಗಳು ದೂರವಾಗುತ್ತವೆ. ಅದಕ್ಕಾಗಿಯೇ ಆಮ್ಲ ನವಮಿಯಂದು ನೆಲ್ಲಿ ಮರದ ಕೆಳಗೆ ಕುಳಿತುಕೊಳ್ಳುವುದು ಮಂಗಳಕರ ಎಂದು ಪರಿಗಣಿಸಲಾಗಿದೆ. ಹೀಗೆ ಮಾಡುವುದರಿಂದ ಲಕ್ಷ್ಮೀದೇವಿಯೂ ಸಂತುಷ್ಟಳಾದಳು.
ಇತರ ಗ್ಯಾಲರಿಗಳು