Ayodhya Ram Temple: ಅಯೋಧ್ಯೆ ರಾಮ ಮಂದಿರದಲ್ಲಿ ರಾಮ ದರ್ಬಾರ್‌ನಿಂದ ಸೀತಾ ಕೂಪದ ತನಕ ಏನೇನಿವೆ; ಇಲ್ಲಿದೆ ಸಚಿತ್ರ ವರದಿ
ಅಯೋಧ್ಯೆಯ ಶ್ರೀ ರಾಮಮಂದಿರದಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠೆಗೆ ದಿನಗಣನೆ ಶುರುವಾಗಿದೆ. ಈ ನಡುವೆ, ಶ್ರೀ ರಾಮಮಂದಿರ ನಿರ್ಮಾಣ ಕಾರ್ಯವೂ ಭರದಿಂದ ಸಾಗಿದೆ. ರಾಮ ದರ್ಬಾರ್‌ನಿಂದ ಸೀತಾ ಕೂಪದ ತನಕ ಅನೇಕ ವಿಶೇಷಗಳಿವೆ. ಅವುಗಳ ಸಚಿತ್ರ ವಿವರ ಹೀಗಿದೆ.
(1 / 11)
ಅಯೋಧ್ಯೆಯ ಶ್ರೀ ರಾಮಮಂದಿರದಲ್ಲಿ ಜನವರಿ 22ರಂದು ರಾಮಲಲಾನ ಪ್ರಾಣ ಪ್ರತಿಷ್ಠೆ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಪಾಲ್ಗೊಳ್ಳುವ ನಿರೀಕ್ಷೆಯಿದೆ. ದೇಶದ ಸಾಂಪ್ರದಾಯಿಕ ಮತ್ತು ಸ್ಥಳೀಯ ತಂತ್ರಜ್ಞಾನಗಳನ್ನು ಬಳಸಿಕೊಂಡು ಈ ಮಂದಿರವನ್ನು ನಿರ್ಮಿಸಲಾಗಿದೆ. ಈ ದೇವಾಲಯದ ಕೆಲವು ಪ್ರಮುಖ ವೈಶಿಷ್ಟ್ಯ ಹೀಗಿವೆ .
(File Photo)(2 / 11)
ಮೂರು ಅಂತಸ್ತಿನ ದೇವಾಲಯ ಈ ರಾಮಮಂದಿರ. ಪ್ರತಿ ಮಹಡಿಯ ಎತ್ತರ 20 ಅಡಿ ಇರಲಿದೆ. ದೇವಾಲಯದಲ್ಲಿ ಒಟ್ಟು 392 ಕಂಬಗಳು ಮತ್ತು 44 ಬಾಗಿಲುಗಳು ಇರುತ್ತವೆ
(ANI)(3 / 11)
ಅಯೋಧ್ಯೆಯ ರಾಮಮಂದಿರಕ್ಕೆ ಹೋಗುವ ಮುಖ್ಯ ದ್ವಾರದಲ್ಲಿ ಆನೆಗಳು, ಸಿಂಹಗಳು, ಭಗವಾನ್ ಹನುಮಾನ್ ಮತ್ತು 'ಗರುಡ'ನ ಅಲಂಕಾರಿಕ ಪ್ರತಿಮೆಗಳನ್ನು ಕೂರಿಸಲಾಗಿದೆ. ಈ ಪ್ರತಿಮೆಗಳನ್ನು ರಾಜಸ್ಥಾನದ ಬನ್ಸಿ ಪಹಾರ್‌ಪುರ ಪ್ರದೇಶದಿಂದ ಪಡೆದ ಮರಳುಗಲ್ಲಿನಿಂದ ರಚಿಸಲಾಗಿದೆ.
(ANI)(4 / 11)
ಸಾಂಪ್ರದಾಯಿಕ ನಾಗರ ಶೈಲಿಯಲ್ಲಿ ನಿರ್ಮಿಸಲಾದ ದೇವಾಲಯದ ಸಂಕೀರ್ಣವು 380 ಅಡಿ ಉದ್ದ (ಪೂರ್ವ-ಪಶ್ಚಿಮ ದಿಕ್ಕು), 250 ಅಡಿ ಅಗಲ ಮತ್ತು 161 ಅಡಿ ಎತ್ತರವನ್ನು ಹೊಂದಿರುತ್ತದೆ.
(ANI)(5 / 11)
ದೇವಸ್ಥಾನದ ಮುಂಭಾಗದ ನೋಟ. ಸಿಂಹದ್ವಾರದ ಮುಂಭಾಗದ ಮೆಟ್ಟಿಲುಗಳಲ್ಲಿ ಸಿಂಹ, ಆನೆಗಳ ಮೂರ್ತಿಗಳನ್ನು ಕೂರಿಸಲಾಗಿದೆ.
(ANI)(6 / 11)
ಗರ್ಭಗೃಹ ಅಥವಾ ದೇವಾಲಯದ ಒಳಗಿನ ಗರ್ಭಗುಡಿಯ ನೋಟ ಇದು. ರಾಮಲಲಾ ಅಥವಾ ಬಾಲರಾಮನ ವಿಗ್ರಹವನ್ನು ಇಲ್ಲಿ ಪ್ರತಿಷ್ಠಾಪಿಸಲಾಗುತ್ತದೆ. ಮೊದಲ ಮಹಡಿಯಲ್ಲಿ ಶ್ರೀ ರಾಮ ದರ್ಬಾರ್ ಇರುತ್ತದೆ.
(PTI)(9 / 11)
ದೇಗುಲದ ಮುಖ್ಯ ದ್ವಾರವು ಪೂರ್ವ ಭಾಗದಲ್ಲಿದೆ. ಇದನ್ನು ಸಿಂಹ ದ್ವಾರ ಎನ್ನಲಾಗುತ್ತಿದ್ದು, ಇಲ್ಲಿ 32 ಮೆಟ್ಟಿಲುಗಳನ್ನು ಏರುವ ಮೂಲಕ ದೇಗುಲ ಪ್ರವೇಶಿಸಬಹುದು. ವಿಕಲಚೇತನರು ಮತ್ತು ವಯಸ್ಸಾದ ಸಂದರ್ಶಕರ ಅನುಕೂಲಕ್ಕಾಗಿ ಇಳಿಜಾರು ದಾರಿ ಮತ್ತು ಲಿಫ್ಟ್‌ಗಳನ್ನು ಒದಗಿಸಲಾಗಿದೆ.
(HT Photo/Deepak Gupta)(10 / 11)
ಮಂದಿರವು 732 ಮೀಟರ್ ಉದ್ದ ಮತ್ತು 14 ಅಡಿ ಅಗಲವನ್ನು ಹೊಂದಿರುವ ಪರ್ಕೋಟಾ (ಆಯತಾಕಾರದ ಸಂಯುಕ್ತ ಗೋಡೆ) ಯಿಂದ ಸುತ್ತುವರಿದಿದೆ.
(PTI)ಇತರ ಗ್ಯಾಲರಿಗಳು