Ayodhya Ram Temple: ಅಯೋಧ್ಯೆ ರಾಮ ಮಂದಿರದಲ್ಲಿ ರಾಮಲಲಾ ಉತ್ಸವ ಮೂರ್ತಿಯ ಪಲ್ಲಕ್ಕಿ ಮೆರವಣಿಗೆಯ ಕ್ಷಣಗಳು
ಅಯೋಧ್ಯೆಯ ರಾಮ ಮಂದಿರಕ್ಕೆ ಬುಧವಾರ (ಜ.17) ಕೃಷ್ಣ ಶಿಲೆಯ ಬಾಲರಾಮನ ಪ್ರವೇಶವಾಗಿದ್ದು, ಇದೇ ದಿನ ಮಂದಿರದ ಸುತ್ತ ರಾಮಲಲಾನ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಕೂರಿಸಿ ಭಕ್ತರು ಮೆರವಣಿಗೆಯ ಮೂಲಕ ಪ್ರದಕ್ಷಿಣೆ ಬಂದರು. ಈ ಪಲ್ಲಕ್ಕಿ ಮೆರವಣಿಗೆಯ ಚಿತ್ರನೋಟ.
(1 / 6)
ಅಯೋಧ್ಯೆಯ ರಾಮಮಂದಿರದಲ್ಲಿ ರಾಮಲಲಾನ ಪ್ರಾಣಪ್ರತಿಷ್ಠೆಯ ವಿಧಿವಿಧಾನಗಳು ಶುರುವಾಗಿವೆ. ಭವ್ಯ ಬಾಲರಾಮನ ವಿಗ್ರಹ ನಿನ್ನೆ (ಜ.17) ರಾಮ ಮಂದಿರ ತಲುಪಿದೆ. 200 ಕಿಲೋ ತೂಕದ ಬಾಲರಾಮನ ವಿಗ್ರಹದ ಮೆರವಣಿಗೆ ಕಷ್ಟವೆಂಬ ಕಾರಣಕ್ಕೆ 10 ಕಿಲೋ ತೂಕದ ಬೆಳ್ಳಿಯ ರಾಮಲಲಾನ ವಿಗ್ರಹದ ಪಲ್ಲಕ್ಕಿ ಮೆರವಣಿಗೆ ನಡೆಯಿತು.(PTI)
(2 / 6)
ಅಯೋಧ್ಯೆಯ ರಾಮಮಂದಿರದ ರಾಮಲಲಾನ ಬೆಳ್ಳಿಯ ವಿಗ್ರಹ. ಪಲ್ಲಕ್ಕಿ ಮೆರವಣಿಗೆ ವೇಳೆ ಪಲ್ಲಕ್ಕಿಯಲ್ಲಿ ಕೂರಿಸಿದ್ದ ಬಾಲರಾಮನ ಮೂರ್ತಿ. (PTI)
(3 / 6)
ಅಯೋಧ್ಯೆಯ ರಾಮ ಮಂದಿರದಲ್ಲಿ ಬಾಲ ರಾಮನ ವಿಗ್ರಹ ಪ್ರತಿಷ್ಠಾಪನೆಗೆ ಮುನ್ನ ಮಂದಿರಕ್ಕೆ ಪ್ರದಕ್ಷಿಣೆ ಬಂದ ಪಲ್ಲಕ್ಕಿ ಮೆರವಣಿಗೆಯ ನೋಟ(PTI)
(4 / 6)
ಇದೇ ವೇಳೆ ಇನ್ನೊಂದೆಡೆ, ಪ್ರಯಾಗ್‌ರಾಜ್‌ನಲ್ಲಿ ಶ್ರೀರಾಮ ಚರಣ ಪಾದುಕೆಯ ಮೆರವಣಿಗೆ ನಡೆಯುತ್ತಿದ್ದು, ಚಿತ್ರಕೂಟ ತಲುಪಿದೆ. ನಾಳೆ (ಜ.19) ಈ ಪಾದುಕೆಗಳು ರಾಮ ಜನ್ಮಭೂಮಿ ತಲುಪಲಿವೆ. (Anand Prashad/ ANI)
(5 / 6)
ಪ್ರಯಾಗ್‌ರಾಜ್‌ನ ಚಿತ್ರಕೂಟದಲ್ಲಿ ಶ್ರೀ ರಾಮ ಚರಣ ಪಾದುಕೆಯ ದರ್ಶನಕ್ಕಾಗಿ ಮುಗಿಬಿದ್ದ ಭಕ್ತಜನ.(Anand Prashad)
ಇತರ ಗ್ಯಾಲರಿಗಳು