Ayodhya Ram Lalla: ಕಂಡೆ ನಾ ಮುದ್ದು ರಾಮನ; ಅಯೋಧ್ಯೆ ರಾಮ ಮಂದಿರ ಪ್ರವೇಶದ ವೇಳೆ ಕಂಡ ಬಾಲರಾಮನ ಮೊದಲ ಫೋಟೋ
First Image of Ram lalla: ಅಯೋಧ್ಯೆಯಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮ (ಜ.22)ಕ್ಕೆ ಕ್ಷಣಗಣನೆ ಶುರುವಾಗಿದೆ. ಮೈಸೂರಿನ ಅರುಣ್ ಯೋಗಿರಾಜ್ ಕೆತ್ತನೆಯ ರಾಮಲಲಾ ಹೇಗಿದ್ದಾನೆ? ಎಂಬ ಕುತೂಹಲ ಸಹಜ. ಬಾಲರಾಮನನ್ನು ಪೂರ್ಣವಾಗಿ ಕಣ್ತುಂಬಿಕೊಳ್ಳಲು ಇಂದು ಬಿಟ್ಟು ಮೂರು ದಿನ ಕಾಯಬೇಕು. ಬಾಲ ರಾಮನ ಮೊದಲ ಚಿತ್ರಗಳು ಇಲ್ಲಿವೆ..
(2 / 9)
ಅಯೋಧ್ಯೆಯ ರಾಮ ಮಂದಿರಕ್ಕೆ ಬುಧವಾರ (ಜ.17) ರಾತ್ರಿ ರಾಮಲಲಾನ ಪ್ರವೇಶವಾಗಿದೆ. ಹೌದು, ಮೈಸೂರಿನ ಅರುಣ್ ಯೋಗಿರಾಜ್ ಅವರು ಕೃಷ್ಣ ಶಿಲೆಯಲ್ಲಿ ಕೆತ್ತನೆ ಮಾಡಿರುವ ಬಾಲರಾಮ ವಿಗ್ರಹವನ್ನು ನಿನ್ನೆ ರಾತ್ರಿ ರಾಮ ಮಂದಿರದ ಒಳಕ್ಕೆ ತರಲಾಯಿತು. ಚಿತ್ರದಲ್ಲಿ ಕಾರ್ಯಕರ್ತರ ಜೊತೆಗೆ ವಿಗ್ರಹದ ಪಾದದ ಭಾಗದಲ್ಲಿ ಕೈಕಟ್ಟಿ ನಿಂತ ಅರುಣ್ ಯೋಗಿರಾಜ್ ಅವರನ್ನೂ ಕಾಣಬಹುದು. (HT_PRINT)
(3 / 9)
ರಾಮಲಲಾನ ಪ್ರಾಣ ಪ್ರತಿಷ್ಠೆ ಜನವರಿ 22ಕ್ಕೆ ನಡೆಯಲಿದೆ. ರಾಮ ಮಂದಿರದ ಗರ್ಭಗುಡಿಯ ಕೂರ್ಮಪೀಠದಲ್ಲಿ ಬಾಲರಾಮನ ವಿಗ್ರಹವನ್ನು ಇಂದು (ಜ.18) ಕೂರಿಸಲಾಗುತ್ತದೆ. ವೈದಿಕರ ತಂಡಕ್ಕೆ ಬಾಲರಾಮನ ದರ್ಶನಕ್ಕಾಗಿ ಇಡೀ ದೇಶ ಹಾತೊರೆಯುತ್ತಿರುವ ಕ್ಷಣ ಇದು. ಬಾಲರಾಮ ವಿಗ್ರಹ ಮೊದಲ ನೋಟ ಇದು.(PTI)
(4 / 9)
ಮೈಸೂರಿನ ಅರುಣ್ ಯೋಗಿರಾಜ್ ಮತ್ತು ಸಂಗಡಿಗರು ಅಯೋಧ್ಯೆಯಲ್ಲೇ ಕೃಷ್ಣ ಶಿಲೆಯ ವಿಗ್ರಹದ ಕೆತ್ತನೆ ಕೆಲಸ ಪೂರ್ಣಗೊಳಿಸಿದ್ದರು. 200 ಕಿಲೋ ತೂಕದ ರಾಮಲಲಾ ವಿಗ್ರಹವನ್ನು ಶ್ರೀ ರಾಮ ಜನ್ಮಭೂಮಿಯ ರಾಮ ಮಂದಿರದ ಒಳಕ್ಕೆ ಕೊಂಡೊಯ್ಯುವ ಸಲುವಾಗಿ ಕ್ರೇನ್ ಮೂಲಕ ಎತ್ತಿ ಟ್ರಕ್‌ನಲ್ಲಿ ಇರಿಸಲಾಯಿತು. ವಿಗ್ರಹವನ್ನು ಸಂಪೂರ್ಣವಾಗಿ ಪ್ಯಾಕ್ ಮಾಡಿದ್ದು, ಪೂರ್ಣ ನೋಟ ಕಾಣಲು ಸಿಕ್ಕಿಲ್ಲ.(PTI)
(5 / 9)
ಅಯೋಧ್ಯೆಯ ರಾಮ ಮಂದಿರದಲ್ಲಿ ಪ್ರತಿಷ್ಠಾಪನೆ ಮಾಡಲಿರುವ ರಾಮಲಲಾ ವಿಗ್ರಹವನ್ನು ಟ್ರಕ್‌ನಲ್ಲಿಟ್ಟು ಹಳದಿ ಟಾರ್ಪಾಲಿನ್ ಮುಚ್ಚಿ ಬಿಗಿ ಭದ್ರತೆಯೊಂದಿಗೆ ರಾಮ ಮಂದಿರದ ಕಡೆಗೆ ಸಾಗಿಸಲಾಯಿತು. (ANI Photo/Rahul Singh)
(6 / 9)
ಬಾಲರಾಮನ ವಿಗ್ರಹವನ್ನು ಹೊತ್ತೊಯ್ಯುತ್ತಿದ್ದ ಟ್ರಕ್‌ನ ಜೊತೆಗೆ ಬೆಂಗಾವಲು ವಾಹನಗಳಿದ್ದವು. ಅದೇ ರೀತಿ ಗನ್ ಹಿಡಿದ ಭದ್ರತಾ ಸಿಬ್ಬಂದಿಯೂ ಜೊತೆಗೆ ಇದ್ದರು.(ANI Photo/Amit Sharma)
(7 / 9)
ಭಾರಿ ಭದ್ರತೆಯೊಂದಿಗೆ ಬಾಲರಾಮ ವಿಗ್ರಹವನ್ನು ಕೊಂಡೊಯ್ಯುತ್ತಿದ್ದ ಟ್ರಕ್ ಕಾಣುತ್ತಲೇ ಸುತ್ತಮುತ್ತಲಿದ್ದವರೆಲ್ಲ ಜೈ ಶ್ರೀರಾಮ್ ಘೋಷಣೆ ಕೂಗಿದರು. ಸ್ಥಳದಲ್ಲಿ ಜೈಶ್ರೀರಾಮ್ ಘೋಷಣೆ ಮುಗಿಲುಮುಟ್ಟಿತ್ತು.(Rahul Singh)
(8 / 9)
ಅಯೋಧ್ಯೆಯ ಬೀದಿಗಳಲ್ಲಿ ಬಾಲ ರಾಮನ ವಿಗ್ರಹವನ್ನು ಹೊತ್ತೊಯ್ಯುತ್ತಿದ್ದ ಟ್ರಕ್ ಜತೆಗೆ ಸಾಲು ಸಾಲು ವಾಹನಗಳ ಮೆರವಣಿಗೆ ಕಂಡುಬಂತು. ಅದೇ ರೀತಿ ರಸ್ತೆಯ ಇಕ್ಕೆಲಗಳಲ್ಲಿ ರಾಮಭಕ್ತರು ಭಕ್ತಿ ಭಾವದಿಂದ ನಿಂತು ಜೈ ಶ್ರೀರಾಮ್ ಘೋಷಣೆಯೊಂದಿಗೆ ಈ ದೃಶ್ಯವನ್ನು ಕಣ್ತುಂಬಿಕೊಂಡರು.(Rahul Singh)
ಇತರ ಗ್ಯಾಲರಿಗಳು