ಏಪ್ರಿಲ್ 2, 2011; ಶತಕೋಟಿ ಭಾರತೀಯರ ಕನಸು ನನಸಾದ ದಿನ; 28 ವರ್ಷಗಳ ಬಳಿಕ ಭಾರತ ವಿಶ್ವಕಪ್ ಗೆದ್ದ ಐತಿಹಾಸಿಕ ದಿನದ ಮೆಲುಕು-remembering april 2nd 2011 indian cricket team won icc odi world cup after 28 years india vs sri lanka ms dhoni jra ,ಫೋಟೋ ಗ್ಯಾಲರಿ ಸುದ್ದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಏಪ್ರಿಲ್ 2, 2011; ಶತಕೋಟಿ ಭಾರತೀಯರ ಕನಸು ನನಸಾದ ದಿನ; 28 ವರ್ಷಗಳ ಬಳಿಕ ಭಾರತ ವಿಶ್ವಕಪ್ ಗೆದ್ದ ಐತಿಹಾಸಿಕ ದಿನದ ಮೆಲುಕು

ಏಪ್ರಿಲ್ 2, 2011; ಶತಕೋಟಿ ಭಾರತೀಯರ ಕನಸು ನನಸಾದ ದಿನ; 28 ವರ್ಷಗಳ ಬಳಿಕ ಭಾರತ ವಿಶ್ವಕಪ್ ಗೆದ್ದ ಐತಿಹಾಸಿಕ ದಿನದ ಮೆಲುಕು

  • ಅದು 2011ರ ಏಪ್ರಿಲ್ 2. ಭಾರತವು ಎರಡನೇ ಬಾರಿಗೆ ಏಕದಿನ ವಿಶ್ವಕಪ್ ಟ್ರೋಫಿಯನ್ನು ಎತ್ತಿಹಿಡಿದು ಸಂಭ್ರಮಿಸಿದ ಐತಿಹಾಸಿಕ ದಿನ. 13 ವರ್ಷಗಳ ಹಿಂದೆ ಇದೇ ದಿನ, ಇಡೀ ಭಾರತವೇ ಖುಷಿಯ ಅಲೆಯಲ್ಲಿ ತೇಲುತ್ತಿತ್ತು. ಸುದೀರ್ಘ 28 ವರ್ಷಗಳ ಕಾಯುವಿಕೆಯ ಬಳಿಕ, ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಎಂಎಸ್ ಧೋನಿ ನೇತೃತ್ವದ ತಂಡವು ವಿಶ್ವಕಪ್‌ ಗೆದ್ದು ಬೀಗಿತು.

ಆ ಐತಿಹಾಸಿಕ ದಿನವು ಭಾರತೀಯ ಅಭಿಮಾನಿಗಳಿಗೆ ಶಾಶ್ವತವಾಗಿ ನೆನಪಿನಲ್ಲಿ ಉಳಿಯುವ  ವಿಶೇಷ ದಿನ. ಭಾರತೀಯ ಕ್ರಿಕೆಟ್‌ ಕಂಡ ಶ್ರೇಷ್ಠ ಕ್ಷಣಗಳಲ್ಲಿ ಒಂದು. ಆ ನೆನಪನ್ನು ಒಂದು ಬಾರಿ ಮೆಲುಕು ಹಾಕೋಣ.
icon

(1 / 11)

2011ರ ಫೆಬ್ರವರಿ 19ರಂದು, ಭಾರತವು ತನ್ನ ವಿಶ್ವಕಪ್ ಅಭಿಯಾನವನ್ನು ಬಾಂಗ್ಲಾದೇಶದ ಢಾಕಾದಲ್ಲಿ ಆರಂಭಿಸಿತು. ಮೊದಲ ಪಂದ್ಯದಲ್ಲೇ ಗೆದ್ದು ಶುಭಾರಂಭ ಮಾಡಿತು. ವೀರೇಂದ್ರ ಸೆಹ್ವಾಗ್‌ ಪಂದ್ಯದ ಹೀರೋ ಆಗಿ ಮಿಂಚಿದರು. (Getty Images)
icon

(2 / 11)

ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ‌ ಸಚಿನ್ ತೆಂಡೂಲ್ಕರ್ ಆಕರ್ಷಕ ಶತಕ ಬಾರಿಸಿದರು, ಆದರೆ ಈ ಪಂದ್ಯ ಟೈನಲ್ಲಿ ಕೊನೆಗೊಂಡಿತು. (ಗೆಟ್ಟಿ ಇಮೇಜಸ್)
icon

(3 / 11)

ಐರ್ಲೆಂಡ್ ವಿರುದ್ಧ ಭಾರತ ಸುಲಭ ಜಯ ತನ್ನದಾಗಿಸಿಕೊಂಡಿತು. ಪಂದ್ಯದಲ್ಲಿ ಐದು ವಿಕೆಟ್‌ ಹಾಗೂ 50 ರನ್‌ ಗಳಿಸಿದ ಯುವರಾಜ್‌ ಸಿಂಗ್‌ ಪಂದ್ಯಶ್ರೇಷ್ಠರಾದರು. (ಗೆಟ್ಟಿ ಇಮೇಜಸ್)
icon

(4 / 11)

ನೆದರ್ಲೆಂಡ್ಸ್‌ ವಿರುದ್ಧದ ಪಂದ್ಯದಲ್ಲಿ ಡಚ್ಚರು ನೀಡಿದ ಸುಲಭ ಗುರಿಯನ್ನು 36.3 ಓವರ್‌ಗಳಲ್ಲಿ ಬೆನ್ನಟ್ಟಿದ ಭಾರತವು, 5 ವಿಕೆಟ್‌ಗಳಿಂದ ಪಂದ್ಯವನ್ನು ಗೆದ್ದುಕೊಂಡಿತು (ಗೆಟ್ಟಿ ಇಮೇಜಸ್)
icon

(5 / 11)

ದಕ್ಷಿಣ ಆಫ್ರಿಕಾ ವಿರುದ್ಧ ಸಚಿನ್ ತೆಂಡೂಲ್ಕರ್ ಮತ್ತೊಂದು ಅದ್ಭುತ ಶತಕ ಸಿಡಿಸಿದರು. ಆದರೆ, ರೋಚಕ ಪಂದ್ಯದಲ್ಲಿ ಭಾರತ ಸೋತಿತು. ಟೂರ್ನಿಯಲ್ಲಿ ಭಾರತ ಸೋತ ಏಕೈಕ ಪಂದ್ಯವಿದು. (ಗೆಟ್ಟಿ ಇಮೇಜಸ್)
icon

(6 / 11)

ಚೆನ್ನೈನಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಭಾರತ ಭರ್ಜರಿ ಜಯ ಸಾಧಿಸಿತು. ಯುವರಾಜ್ ಸಿಂಗ್ ಆಕರ್ಷಕ ಶತಕ ಬಾರಿಸಿದರು. 80 ರನ್‌ಗಳ ಗೆಲುವಿನೊಂದಿಗೆ ಭಾರತ ಟ್ರೋಫಿಗೆ ಹತ್ತಿರವಾಯ್ತು. 
icon

(7 / 11)

1999, 2003 ಮತ್ತು 2007ರಲ್ಲಿ ಹ್ಯಾಟ್ರಿಕ್‌ ವಿಶ್ವಕಪ್‌ ಗೆದ್ದು ಸತತ ನಾಲ್ಕನೇ ವಿಶ್ವಕಪ್‌ ಗೆಲುವಿನ ಹೊಸ್ತಿಲಲ್ಲಿದ್ದ ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನು ಭಾರತ ಸೋಲಿಸಿತು. ವಿಶ್ವಕಪ್‌ ಗೆಲ್ಲುವ ಫೇವರೆಟ್‌ ತಂಡವಾಗಿದ್ದ ಕಾಂಗರೂಗಳನ್ನು ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಭಾರತವು 5 ವಿಕೆಟ್‌ಗಳಿಂದ ಮಣಿಸಿತು. ಇದರೊಂದಿಗೆ ರಿಕಿ ಪಾಂಟಿಂಗ್‌ ಬಳಗವನ್ನು ಟೂರ್ನಿಯಿಂದ ಹೊರದಬ್ಬಿತು. (ಗೆಟ್ಟಿ ಇಮೇಜಸ್)
icon

(8 / 11)

ಮೊಹಾಲಿಯಲ್ಲಿ ನಡೆದ ಸೆಮಿಫೈನಲ್‌ ಪಂದ್ಯ ಇನ್ನೂ ರೋಚಕವಾಗಿತ್ತು. ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು 29 ರನ್‌ಗಳಿಂದ ರೋಚಕವಾಗಿ ಸೋಲಿಸಿದ ಭಾರತ, ಫೈನಲ್‌ಗೆ ಲಗ್ಗೆ ಹಾಕಿತು. (ಗೆಟ್ಟಿ ಇಮೇಜಸ್)
icon

(9 / 11)

"ಧೋನಿ ಫಿನಿಶಸ್ ಆಫ್ ಇನ್ ಸ್ಟೈಲ್! ಆ ಮ್ಯಾಗ್ನಿಫಿಶಿಯೆಂಟ್ ಸ್ಟ್ರೈಕ್ ಇಂಟು ದಿ ಕ್ರೌಡ್. ಇಂಡಿಯಾ ಲಿಫ್ಟ್ ದಿ ವರ್ಲ್ಡ್ ಕಪ್ ಆಫ್ಟರ್ 28 ಇಯರ್ಸ್..." ಕಾಮೆಂಟರಿಯಲ್ಲಿದ್ದ ಭಾರತದ ಮಾಜಿ ಕೋಚ್‌ ರವಿ ಶಾಸ್ತ್ರಿಯವರ ವೀಕ್ಷಕ ವಿವರಣೆಯನ್ನು ಕೇಳುವಾಗ ಈಗಲೂ ರೋಮಾಂಚನವಾಗುತ್ತದೆ. ವಿಶ್ವಕಪ್‌ ಗೆದ್ದ 13 ವರ್ಷಗಳ ನಂತರವೂ ಪ್ರತಿ ಭಾರತೀಯನ ಕಿವಿಯಲ್ಲಿ ಈ ವಾಕ್ಯ ಪ್ರತಿಧ್ವನಿಸುತ್ತಲೇ ಇದೆ. ಬರೋಬ್ಬರಿ 28 ವರ್ಷಗಳ ನಂತರ ತನ್ನದೇ ತವರಿನಲ್ಲಿ ಭಾರತ ವಿಶ್ವಕಪ್ ಎತ್ತಿಹಿಡಿದು ಸಂಭ್ರಮಿಸಿತು. ಭಾರತ ತಂಡದ ನಾಯಕ ಎಂಎಸ್ ಧೋನಿ ಸಿಕ್ಸರ್‌ ಸಿಡಿಸುವುದರೊಂದಿಗೆ ಶ್ರೀಲಂಕಾ ತಂಡವನ್ನು ಫೈನಲ್‌ ಪಂದ್ಯದಲ್ಲಿ ಸೋಲಿಸಿ, ಭಾರತ ಕ್ರಿಕೆಟ್‌ ತಂಡದ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದರು. 
icon

(10 / 11)

ಭಾರತ ಕ್ರಿಕೆಟ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ಮುಂಬೈನ ತಾಜ್ ಪ್ಯಾಲೇಸ್ ಹೋಟೆಲ್‌ ಬಳಿ ನಡೆದ ಫೋಟೋ ಶೂಟ್‌ನಲ್ಲಿ ಪಾಲ್ಗೊಂಡರು. ಗೇಟ್ ವೇ ಆಫ್ ಇಂಡಿಯಾ ಪಕ್ಕದಲ್ಲಿ ನಿಂತು ಐಸಿಸಿ ಕ್ರಿಕೆಟ್ ವಿಶ್ವಕಪ್ ಟ್ರೋಫಿಯೊಂದಿಗೆ ಫೋಟೋಗೆ ಪೋಸ್ ನೀಡಿದರು.
icon

(11 / 11)

ಇತರ ಗ್ಯಾಲರಿಗಳು