Bengaluru Bala Bhavana: ನವೀಕರಣಗೊಂಡ ಬಾಲಭವನ ಲೋಕಾರ್ಪಣೆ: ಬೆಂಗಳೂರಲ್ಲಿನ್ನು ಚುಕ್ಕುಬುಕ್ಕು ಪುಟಾಣಿ ರೈಲು
ಇನ್ಮುಂದೆ ಕಬ್ಬನ್ ಪಾರ್ಕ್‌ನ ಬಾಲಭವನಕ್ಕೆ ಭೇಟಿ ನೀಡಿದರೆ ಮಕ್ಕಳನ್ನು ಪುಟಾಣಿ ರೈಲು ಸೇರಿದಂತೆ ಹಲವು ಆಕರ್ಷಣೆಗಳು ಸೆಳೆಯಲಿವೆ. ಏಕೆಂದರೆ, ಕಬ್ಬನ್ ಪಾರ್ಕ್ ಬಾಲಭವನ ನವೀಕರಣಗೊಂಡಿದ್ದು, ಆಕರ್ಷಕವಾಗಿದೆ.
(1 / 5)
ಕಬ್ಬನ್ ಪಾರ್ಕ್ ಅವರಣದಲ್ಲಿರುವ ನವೀಕರಣಗೊಂಡ ಬಾಲಭವನ ಮತ್ತು ಮಕ್ಕಳಿಗೆ ಪುಟಾಣಿ ರೈಲು ಉದ್ಘಾಟನೆಯನ್ನು ಮುಖ್ಯಮಂತ್ರಿಗಳಾದ ಬಸವರಾಜ್ ಎಸ್.ಬೊಮ್ಮಾಯಿ ನೆರವೇರಿಸಿದರು.
(2 / 5)
,ಗಣಿ ಮತ್ತು ಭೂವಿಜ್ಞಾನ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ, ವಿಕಲಚೇತನ, ಹಿರಿಯ ನಾಗರಿಕರ ಸಬಲೀಕರಣ ಸಚಿವರಾದ ಹಾಲಪ್ಪ ಬಸಪ್ಪ ಆಚಾರ್, ಕಂದಾಯ ಸಚಿವರಾದ ಆರ್.ಅಶೋಕ್, ಪ್ರಾಥಮಿಕ ಮತ್ತು ಪ್ರೌಡ ಶಿಕ್ಷಣ ಸಚಿವರಾದ ಬಿ.ಸಿ.ನಾಗೇಶ್ ಉಪಸ್ಥಿತರಿದ್ದರು.
(3 / 5)
"ಬಾಲಭವನ ನವೀಕರಣ ಮತ್ತು ಮಕ್ಕಳಿಗೆ ಟಾಯ್ ಟ್ರೈನ್ ,ಸಾಂಸ್ಕೃತಿಕ ಚಟುವಟಿಕೆ ಮತ್ತು ಮಕ್ಕಳಿಗೆ ಬೇಕಾದ ಉತ್ತಮ ವಾತವರಣ ಕಲ್ಪಿಸಲಾಗಿದೆ. ಇಂದು ಪ್ರಧಾನಿ ನರೇಂದ್ರ ಮೋದಿರವರ ನೇತೃತ್ವದಲ್ಲಿ ರಾಜ್ಯದಲ್ಲಿ ವಿಜಯ ಸಂಕಲ್ಪಯಾತ್ರೆ ಯಶ್ವಸಿಯಾಗಿ ಸಾಗುತ್ತಿದೆ.ಚುನಾವಣೆ ರಾಜಕೀಯದಲ್ಲಿ ವ್ಯಯಕ್ತಿಕ ನಿಂದನೆ ಮಾಡುವ ಬದಲು , ಮತದಾರರ ಬಳಿ ಹೋಗಬೇಕು ಅವರ ಕೊಡುವ ತೀರ್ಮಾನ ಒಪ್ಪಿಕೊಳ್ಳಬೇಕು, ದೇಶದಲ್ಲಿ ಕಾನೂನು ಎಲ್ಲರಿಗೂ ಒಂದೇ" ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
(4 / 5)
ಮಾನಸಿಕ ಮತ್ತು ದೃಹಿಕವಾಗಿ ಮಕ್ಕಳು ಸದೃಢವಾಗಿ ಬೆಳೆಯಲು ಮಕ್ಕಳಿಗೆ ಪಾಠದ ಜೊತೆಯಲ್ಲಿ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆ ಮುಖ್ಯ. ಈ ನಿಟ್ಟಿನಲ್ಲಿ ಭಾಲಭವನ ನವೀಕರಣ ಮಾಡಲಾಗಿದೆ. ಮಕ್ಕಳಿಗೆ ಸಾಂಸ್ಕೃತಿಕ ಚಟುವಟಿಕೆ,ಚಿತ್ರಕಲೆ ಮತ್ತು ನಾಟಕ ಮಾಡಲು ಬಾಲಭವನ ಇಂದಿನಿಂದ ಮಕ್ಕಳ ಉಪಯೋಗಕ್ಕೆ ಬರಲಿದೆ. ಮಕ್ಕಳ ಮನೋಲ್ಲಾಸಕ್ಕೆ ಟಾಯ್ ಟ್ರೈನ್ ನವನವೀನ ರೀತಿಯಲ್ಲಿ ಆರಂಭವಾಗಿದೆ.ಮಕ್ಕಳ ಬೆಳವಣಿಗೆ ಉತ್ತಮವಾಗಿರಬೇಕು, ರಾಷ್ಟ್ರದ ಭವಿಷ್ಯ ಅವರ ಕೈಯಲ್ಲಿ ಇದೆ ಎಂದು ಸಚಿವರಾದ ಬಸಪ್ಪ ಆಚಾರ್ ಹಾಲಪ್ಪ ಹೇಳಿದ್ದಾರೆ.
ಇತರ ಗ್ಯಾಲರಿಗಳು