ಗಣರಾಜ್ಯೋತ್ಸವಕ್ಕೆ ವಿಶೇಷ ರಂಗೋಲಿ ಬಿಡಿಸಬೇಕು ಅಂತಿದ್ದೀರಾ; ದೇಶಭಕ್ತಿ ಹೆಚ್ಚಿಸುವಂತಿರುವ ಈ ವಿನ್ಯಾಸಗಳು ನಿಮಗೆ ಇಷ್ಟವಾಗಬಹುದು ಗಮನಿಸಿ
Republic Day Rangoli Designs: ಸ್ವಾತಂತ್ರ್ಯ ದಿನಾಚರಣೆಯ ನಂತರ ದೇಶದಲ್ಲಿ ಆಚರಿಸುವ ಎರಡನೇ ಪ್ರಮುಖ ರಾಷ್ಟ್ರೀಯ ಹಬ್ಬ ಗಣರಾಜ್ಯೋತ್ಸವ. ಈ ಬಾರಿ ಗಣತಂತ್ರ ದಿನದಂದು ವಿಶೇಷವಾದ ರಂಗೋಲಿಗಳನ್ನು ಬಿಡಿಸುವ ಮೂಲಕ ದೇಶಭಕ್ತಿ ಮೆರೆಯಬೇಕು ಅಂತಿದ್ದರೆ ಗಮನಿಸಿ. ಈ ತ್ರಿವರ್ಣ ರಂಗೋಲಿ ವಿನ್ಯಾಸಗಳು ಗಣರಾಜ್ಯೋತ್ಸವವರನ್ನು ವಿಶೇಷವನ್ನಾಗಿಸಬಹುದು.
(1 / 8)
ಪ್ರತಿವರ್ಷ ಜನವರಿ 26 ರಂದು ಭಾರತದಲ್ಲಿ ಗಣರಾಜ್ಯೋತ್ಸವ ಆಚರಿಸುತ್ತೇವೆ. ಇದು ಭಾರತವು ಪ್ರಜಾಪ್ರಭುತ್ವ ರಾಷ್ಟ್ರವಾದ ಗೌರವಾರ್ಥ ಆಚರಿಸುವ ದಿನವಾಗಿದೆ. ಈ ವರ್ಷ ಗಣರಾಜ್ಯೋತ್ಸವಕ್ಕೆ ದೇಶಭಕ್ತಿ ಹೆಚ್ಚಿಸುವಂತಹ ವಿಶೇಷವಾದ ರಂಗೋಲಿಗಳನ್ನು ಬಿಡಿಸಬೇಕು ಎಂದು ನೀವು ಅಂದುಕೊಳ್ಳುತ್ತಿದ್ದರೆ ಈ ವಿನ್ಯಾಸಗಳು ನಿಮಗೆ ಇಷ್ಟವಾಗಬಹುದು ನೋಡಿ.
(pinterest)(2 / 8)
ಭಾರತದ ಧ್ವಜ ರಂಗೋಲಿ
ನಿಮ್ಮ ಹೃದಯದಲ್ಲಿ ಅಡಗಿರುವ ತ್ರಿವರ್ಣ ಧ್ವಜದ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸಲು ನೀವು ಈ ತ್ರಿವರ್ಣ ರಂಗೋಲಿ ವಿನ್ಯಾಸವನ್ನು ಮಾಡಬಹುದು. ರಂಗೋಲಿಯ ಸೌಂದರ್ಯವನ್ನು ಹೆಚ್ಚಿಸಲು, ಅದರಲ್ಲಿ ಭಾರತದ ಧ್ವಜವನ್ನು ಸಹ ಮಾಡಬಹುದು. ಇದು ಗಣರಾಜ್ಯೋತ್ಸವಕ್ಕೆ ಬಹಳ ವಿಶೇಷವಾಗಿ ಕಾಣಿಸುತ್ತದೆ.
(3 / 8)
ವರ್ಣರಂಜಿತ ರಂಗೋಲಿ
ನಿಮಗೆ ಸರಿಯಾಗಿ ರಂಗೋಲಿ ಹಾಕಲು ಬರುವುದಿಲ್ಲ ಅಂತಾದರೆ ಚಿಂತಿಸಬೇಡಿ, ಈ ರಂಗೋಲಿ ವಿನ್ಯಾಸವನ್ನು ಟ್ರೈ ಮಾಡಿ. ಈ ರಂಗೋಲಿ ವಿನ್ಯಾಸವು ನೋಡಲು ಸುಂದರವಾಗಿರುವುದು ಮಾತ್ರವಲ್ಲ, ಬಿಡಿಸುವುದು ತುಂಬಾ ಸುಲಭ. ಇದು ಕೂಡ ಗಣರಾಜ್ಯೋತ್ಸವಕ್ಕೆ ಹೇಳಿ ಮಾಡಿಸಿದಂತಿರುವುದು ಸುಳ್ಳಲ್ಲ.
(4 / 8)
ಭಾರತದ ರಾಷ್ಟ್ರ ಪಕ್ಷಿ ನವಿಲಿನ ಚಿತ್ತಾರದೊಂದಿಗೆ ವಿಶೇಷವಾದ ರಂಗೋಲಿ ಚಿತ್ತಾರವನ್ನು ನೀವು ಮೂಡಿಸಬಹುದು. ನವಿಲಿನ ದೇಹ ಗರಿಗಳನ್ನು ಕೇಸರಿ, ಬಿಳಿ, ಹಸಿರು ಬಣ್ಣಗಳಿಂದ ಸಿಂಗರಿಸಬಹುದು. ಇದರೊಳಗೆ ನೀವು ಗಣರಾಜ್ಯೋತ್ಸವ ಶುಭಾಶಯವನ್ನೂ ಕೂಡ ಬರೆಯಬಹುದು.
(5 / 8)
ಗಣರಾಜ್ಯೋತ್ಸವದಂದು ರಂಗೋಲಿ ಬಿಡಿಸಲು ಹೆಚ್ಚು ಸಮಯವಿಲ್ಲ ಅಂದುಕೊಳ್ಳುವವರು ಈ ಸರಳ ವಿನ್ಯಾಸದ ರಂಗೋಲಿಯನ್ನು ಆಯ್ಕೆ ಮಾಡಿಕೊಳ್ಳಬಹುದು. ಎರಡು ಕೈಗಳಲ್ಲಿ ಭಾರತವನ್ನು ಭಾರತಾಂಬೆ ಹಿಡಿದಿಟ್ಟುಕೊಂಡಿರುವಂತೆ ಕಾಣುವ ಈ ರಂಗೋಲಿ ಸರಳವಾಗಿದ್ದರೂ ಗಣರಾಜ್ಯೋತ್ಸವಕ್ಕೆ ವಿಶೇಷವಾಗಿ ಕಾಣಿಸುತ್ತದೆ.
(6 / 8)
ನಿಮ್ಮ ಬಳಿ ತ್ರಿವರ್ಣ ರಂಗೋಲಿ ಪುಡಿ ಇಲ್ಲ ಅಂತ ಚಿಂತೆ ಮಾಡದರಿ. ಹೂ, ಎಲೆಗಳಿಂದ ಈ ರೀತಿ ಸುಂದರವಾದ ಒಂದು ವಿನ್ಯಾಸ ರಚಿಸಿ, ಅದರ ಮೇಲೆ ಅಶೋಕ ಚಕ್ರ ಇರಿಸಬಹುದು. ಇದನ್ನು ನೀವು ಟೇಬಲ್, ಧ್ವಜ ಕಟ್ಟೆಯಲ್ಲಿ ಕೂಡ ಮಾಡಬಹುದು.
(7 / 8)
ಅಕ್ಕಿ, ಬೇಳೆ, ಹೆಸರುಕಾಳಿನಿಂದ ಮೂಡಿಸಿದ ಈ ಭಾರತದ ಚಿತ್ರ ಗಣರಾಜ್ಯೋತ್ಸವಕ್ಕೆ ವಿಶೇಷವಾಗಿ ಕಾಣಿಸುತ್ತದೆ. ಮೊದಲು ಚಾಕ್ ಪೀಸ್ ಅಥವಾ ರಂಗೋಲಿ ಪುಡಿಯಿಂದ ಭಾರತವನ್ನು ರಚಿಸಿಕೊಳ್ಳಿ. ನಂತರ ಅದರಲ್ಲಿ ಕಾಳುಗಳನ್ನು ತುಂಬಿ. ಇದು ತುಂಬಾ ಸುಂದರವಾಗಿ ಕಾಣುತ್ತದೆ.
ಇತರ ಗ್ಯಾಲರಿಗಳು