ಯುಎಇ ವಿರುದ್ಧ ಸ್ಫೋಟಕ ಅರ್ಧಶತಕ ಸಿಡಿಸಿ ಹಲವು ದಾಖಲೆ ನಿರ್ಮಿಸಿದ ರಿಚಾ ಘೋಷ್; ರಿಷಭ್ ಪಂತ್ ದಾಖಲೆಯೂ ಪುಡಿಪುಡಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಯುಎಇ ವಿರುದ್ಧ ಸ್ಫೋಟಕ ಅರ್ಧಶತಕ ಸಿಡಿಸಿ ಹಲವು ದಾಖಲೆ ನಿರ್ಮಿಸಿದ ರಿಚಾ ಘೋಷ್; ರಿಷಭ್ ಪಂತ್ ದಾಖಲೆಯೂ ಪುಡಿಪುಡಿ

ಯುಎಇ ವಿರುದ್ಧ ಸ್ಫೋಟಕ ಅರ್ಧಶತಕ ಸಿಡಿಸಿ ಹಲವು ದಾಖಲೆ ನಿರ್ಮಿಸಿದ ರಿಚಾ ಘೋಷ್; ರಿಷಭ್ ಪಂತ್ ದಾಖಲೆಯೂ ಪುಡಿಪುಡಿ

  • Richa Ghosh: ಮಹಿಳಾ ಏಷ್ಯಾಕಪ್​ನಲ್ಲಿ ಯುಎಇ ವಿರುದ್ಧ ಸ್ಫೋಟಕ ಅರ್ಧಶತಕ ಬಾರಿಸಿದ​​ ರಿಚಾ ಘೋಷ್, ವಿಶೇಷ ದಾಖಲೆಯೊಂದನ್ನು ನಿರ್ಮಿಸಿದ್ದಾರೆ. ಆ ಮೂಲಕ ರಿಷಭ್ ಪಂತ್ ಅವರನ್ನೂ ಹಿಂದಿಕ್ಕಿದ್ದಾರೆ.

ಮಹಿಳಾ ಏಷ್ಯಾಕಪ್​ 2024 ಟೂರ್ನಿಯಲ್ಲಿ ಜುಲೈ 21ರಂದು ಭಾನುವಾರ ನಡೆದ ಭಾರತದ ವನಿತೆಯರ ಎರಡನೇ ಪಂದ್ಯದಲ್ಲಿ ಸ್ಫೋಟಕ ಅರ್ಧಶತಕ ಬಾರಿಸಿದ ರಿಚಾ ಘೋಷ್​ ಮಹತ್ವದ ದಾಖಲೆ ನಿರ್ಮಿಸಿದ್ದಾರೆ.
icon

(1 / 5)

ಯುನೈಟೆಡ್ ಆರ್ ಎಮಿರೇಟ್ಸ್ ವಿರುದ್ಧ ರಿಚಾ 29 ಎಸೆತಗಳಲ್ಲಿ 220.68 ಸ್ಟ್ರೈಕ್​​ರೇಟ್​​ನಲ್ಲಿ 12 ಬೌಂಡರಿ,1 ಸಿಕ್ಸರ್ ಸಹಿತ ಅಜೇಯ 64 ರನ್ ಗಳಿಸಿದರು. ಇದು ಟಿ20ಐನಲ್ಲಿ ರಿಚಾ ಗಳಿಸಿದ ಗರಿಷ್ಠ ಸ್ಕೋರ್ ಆಗಿದೆ. ಇದು ಅವರ ಮೊದಲ ಟಿ20ಐ ಅರ್ಧಶತಕವಾಗಿದೆ.
icon

(2 / 5)

ಇದರೊಂದಿಗೆ ಏಷ್ಯಾಕಪ್​ನಲ್ಲಿ ರಿಚಾ ವಿಶೇಷ ದಾಖಲೆ ನಿರ್ಮಿಸಿದ್ದರೆ. ಏಷ್ಯಾಕಪ್​​ ಇತಿಹಾಸದಲ್ಲಿ ಭಾರತದ ವಿಕೆಟ್ ಕೀಪರ್-ಬ್ಯಾಟರ್​ ಅರ್ಧಶತಕ ಸಿಡಿಸಿದ್ದು ಇದೇ ಮೊದಲು. ಈ ಹಿಂದೆ ಯಾವೊಬ್ಬ ವಿಕೆಟ್​ ಕೀಪರ್​​ ಸಹ ಮಹಿಳಾ ಏಷ್ಯಾಕಪ್​​ನಲ್ಲಿ ಫಿಫ್ಟಿ ಬಾರಿಸಿರಲಿಲ್ಲ.
icon

(3 / 5)

ಟಿ20ಐನಲ್ಲಿ ಅರ್ಧಶತಕ ಸಿಡಿಸಿದ ಭಾರತದ ಅತ್ಯಂತ ಕಿರಿಯ ವಿಕೆಟ್​ ಎಂಬ ದಾಖಲೆಗೂ ರಿಚಾ ಪಾತ್ರರಾಗಿದ್ದಾರೆ. ಆ ಮೂಲಕ ರಿಷಭ್ ಪಂತ್ ದಾಖಲೆ ಮುರಿದಿದ್ದಾರೆ. ರಿಚಾ 20 ವರ್ಷ 297 ದಿನಗಳ ವಯಸ್ಸಿನಲ್ಲಿ ಈ ಸಾಧನೆ ಮಾಡಿದ್ದರೆ, ಪಂತ್ 2019ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 21 ವರ್ಷ 306 ದಿನಗಳ ವಯಸ್ಸಿನಲ್ಲಿ ಅರ್ಧಶತಕ ಗಳಿಸಿದ್ದರು.
icon

(4 / 5)

ಮಹಿಳಾ ಏಷ್ಯಾಕಪ್ ಗ್ರೂಪ್ ಹಂತದ ಮೊದಲ ಪಂದ್ಯದಲ್ಲಿ ಭಾರತ ಪಾಕಿಸ್ತಾನ ಸೋಲಿಸಿದ್ದ ಭಾರತ ಈಗ ಯುಎಇ ತಂಡವನ್ನು 78 ರನ್​ಗಳಿಂದ ಮಣಿಸಿದೆ. ಈ ಗೆಲುವಿನೊಂದಿಗೆ ಹರ್ಮನ್ ಪಡೆ, ಏಷ್ಯಾಕಪ್ ನ ಕೊನೆಯ ನಾಲ್ಕರ ಘಟ್ಟಕ್ಕೆ ಲಗ್ಗೆಯಿಟ್ಟಿದೆ. ಭಾರತ 201/5 (20), ಯುಎಇ 123/7 (20).
icon

(5 / 5)

ಇತರ ಗ್ಯಾಲರಿಗಳು