ನೂರು ಕೋಟಿಯಲ್ಲ ಬಾಲಿವುಡ್‌ನಲ್ಲಿದ್ದಾರೆ ಸಾವಿರ ಕೋಟಿಯ ನಿರ್ದೇಶಕರು! ಬಿಟೌನ್‌ನ ಶ್ರೀಮಂತ ಡೈರೆಕ್ಟರ್‌ಗಳ ಆಸ್ತಿ ಮೌಲ್ಯ ಎಷ್ಟು?
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ನೂರು ಕೋಟಿಯಲ್ಲ ಬಾಲಿವುಡ್‌ನಲ್ಲಿದ್ದಾರೆ ಸಾವಿರ ಕೋಟಿಯ ನಿರ್ದೇಶಕರು! ಬಿಟೌನ್‌ನ ಶ್ರೀಮಂತ ಡೈರೆಕ್ಟರ್‌ಗಳ ಆಸ್ತಿ ಮೌಲ್ಯ ಎಷ್ಟು?

ನೂರು ಕೋಟಿಯಲ್ಲ ಬಾಲಿವುಡ್‌ನಲ್ಲಿದ್ದಾರೆ ಸಾವಿರ ಕೋಟಿಯ ನಿರ್ದೇಶಕರು! ಬಿಟೌನ್‌ನ ಶ್ರೀಮಂತ ಡೈರೆಕ್ಟರ್‌ಗಳ ಆಸ್ತಿ ಮೌಲ್ಯ ಎಷ್ಟು?

Richest Directors in Bollywood: ಬಾಲಿವುಡ್‌ ಸಿನಿಮಾಗಳ ನಾಯಕ, ನಾಯಕಿಯರು ಕೋಟಿ ಕೋಟಿ ಮೊತ್ತವನ್ನು ಸಂಭಾವನೆ ರೂಪದಲ್ಲಿ ಪಡೆಯುತ್ತಾರೆ. ಆ ಕಾರಣಕ್ಕೆ ಅಷ್ಟೇ ದೊಡ್ಡ ಆಸ್ತಿ ಮೌಲ್ಯವನ್ನೂ ಹೊಂದಿರುತ್ತಾರೆ. ಹೀಗಿರುವಾಗ ಅವರ ಸಿನಿಮಾ ನಿರ್ದೇಶಿಸುವ ನಿರ್ದೇಶಕರ ಆಸ್ತಿ ಕಥೆ ಏನು? ಬಿಟೌನ್‌ನ ಶ್ರೀಮಂತ ನಿರ್ದೇಶಕರ ಪಟ್ಟಿ ಇಲ್ಲಿದೆ.   

ಬಾಲಿವುಡ್‌ನಲ್ಲಿ ಒಬ್ಬರಿಗಿಂತ ಒಬ್ಬರು ಶ್ರೇಷ್ಠ ನಿರ್ದೇಶಕರಿದ್ದಾರೆ. ಸರಣಿ ಹಿಟ್‌ ಸಿನಿಮಾಗಳನ್ನು ನೀಡಿ ಸ್ಟಾರ್‌ ಪಟ್ಟ ಪಡೆದಿದ್ದಾರೆ. ಇಂತಿಪ್ಪ ನಿರ್ದೇಶಕರ ಪೈಕಿ ಯಾರ ಬಳಿ ಎಷ್ಟು ಆಸ್ತಿ ಇದೆ ಎಂಬುದು ನಿಮಗೆ ಗೊತ್ತಾ? ಇಲ್ಲಿದೆ ವಿವರ.
icon

(1 / 9)

(instagram)

ಕರಣ್ ಜೋಹರ್ ಬಾಲಿವುಡ್​​ನ ಅತ್ಯಂತ ಜನಪ್ರಿಯ ನಿರ್ದೇಶಕರಲ್ಲಿ ಒಬ್ಬರು. ಕರಣ್ ತಮ್ಮ ಫ್ಯಾಷನ್ ಮತ್ತು ಸ್ಟೈಲ್‌ನಿಂದಲೂ ಸುದ್ದಿಯಲ್ಲಿರುತ್ತಾರೆ. ಇದೇ ಕರಣ್ ಅವರ ಒಟ್ಟು ಸಂಪತ್ತು ಸುಮಾರು 1700 ಕೋಟಿ ರೂ ಎಂದು ವರದಿಯಾಗಿದೆ.
icon

(2 / 9)

ಮುನ್ನಾಭಾಯಿ ಎಂಬಿಬಿಎಸ್ ಮತ್ತು 3 ಈಡಿಯಟ್ಸ್ ಸೇರಿ ಹಲವು ಸಿನಿಮಾಗಳನ್ನು ನಿರ್ದೇಶಿಸಿರುವ ರಾಜ್‌ಕುಮಾರ್‌ ಹಿರಾನಿ ಅವರ ಆಸ್ತಿ ಮೌಲ್ಯ ಬರೋಬ್ಬರಿ  1,300 ಕೋಟಿ ರೂಪಾಯಿ.  
icon

(3 / 9)

ಬಾಲಿವುಡ್‌ನ ಖ್ಯಾತ ನಿರ್ದೇಶಕರಲ್ಲಿ ಒಬ್ಬರಾದ ಸಂಜಯ್ ಲೀಲಾ ಬನ್ಸಾಲಿ ಅವರ ಒಟ್ಟು ಆಸ್ತಿ ಮೌಲ್ಯ 940 ಕೋಟಿ ರೂಪಾಯಿ.
icon

(4 / 9)

ನಟ ನಿರ್ದೇಶಕ ಅನುರಾಗ್ ಕಶ್ಯಪ್ ಅವರು 850 ಕೋಟಿ ರೂ.ಗಳ ಆಸ್ತಿಯನ್ನು ಹೊಂದಿದ್ದಾರೆ. ಇತ್ತೀಚೆಗೆ ಅನುರಾಗ್ ಕಶ್ಯಪ್ ಅವರ ಮಗಳು ಆಲಿಯಾ ಕಶ್ಯಪ್ ಅವರ ವಿವಾಹ ಅದ್ದೂರಿಯಾಗಿ ನಡೆಯಿತು. 
icon

(5 / 9)

ಕಡಿಮೆ ಅವಧಿಯಲ್ಲಿ ಬಾಲಿವುಡ್‌ನಲ್ಲಿ ತಮ್ಮದೇ  ಆದ ಛಾಪು ಮೂಡಿಸಿರುವ ಮಹಿಳಾ ನಿರ್ದೇಶಕಿ ಮೇಘನಾ ಗುಲ್ಜಾರ್, ಅತ್ಯಂತ ಜನಪ್ರಿಯ ಮತ್ತು ಪ್ರತಿಭಾವಂತ ನಿರ್ದೇಶಕರಲ್ಲಿ ಒಬ್ಬರು. ಮೇಘನಾ ಅವರ ನಿವ್ವಳ ಆಸ್ತಿ ಮೌಲ್ಯ 830 ಕೋಟಿ ರೂಪಾಯಿ. 
icon

(6 / 9)

ಸಲ್ಮಾನ್ ಖಾನ್ ಅವರೊಂದಿಗೆ 'ಏಕ್ ಥಾ ಟೈಗರ್' ಮತ್ತು 'ಭಜರಂಗಿ ಭಾಯಿಜಾನ್' ನಂತಹ ಚಿತ್ರಗಳನ್ನು ನಿರ್ಮಿಸಿದ ಕಬೀರ್ ಖಾನ್ ಒಟ್ಟು ಆಸ್ತಿ 400 ಕೋಟಿ ರೂಪಾಯಿ.
icon

(7 / 9)

ಹೆಚ್ಚಾಗಿ ಆಕ್ಷನ್ ಚಿತ್ರಗಳನ್ನು ನಿರ್ದೇಶಿಸುವ ರೋಹಿತ್ ಶೆಟ್ಟಿ 336 ಕೋಟಿ ರೂ.ಗಳ ಆಸ್ತಿಯನ್ನು ಹೊಂದಿದ್ದಾರೆ ಎಂದು ವರದಿಯಾಗಿದೆ.
icon

(8 / 9)

'ಬರ್ಫಿ'ಯಂತಹ ಚಿತ್ರಗಳನ್ನು ನಿರ್ದೇಶಿಸಿರುವ ಬಾಲಿವುಡ್ ನಿರ್ದೇಶಕ ಅನುರಾಗ್ ಬಸು ಅವರ ಒಟ್ಟು ನಿವ್ವಳ ಆಸ್ತಿ ಮೌಲ್ಯ 330 ಕೋಟಿ ರೂಪಾಯಿ. ಇವರೆಲ್ಲರ ಪೈಕಿ 1700 ಕೋಟಿ ರೂ.ಗಳೊಂದಿಗೆ ಅತ್ಯಂತ ಶ್ರೀಮಂತ ಬಾಲಿವುಡ್ ನಿರ್ದೇಶಕ ಎಂಬ ಖ್ಯಾತಿ ಪಡೆದವರು ಕರಣ್ ಜೋಹರ್.  
icon

(9 / 9)

ಇತರ ಗ್ಯಾಲರಿಗಳು