Richest States of India: ಭಾರತದ ಅತ್ಯಂತ ಶ್ರೀಮಂತ ರಾಜ್ಯ ಯಾವುದು, ಕರ್ನಾಟಕದ ಸ್ಥಾನವೆಷ್ಟು? ಟಾಪ್-7 ರಾಜ್ಯಗಳ ಪಟ್ಟಿ ಇದು
- Richest States of India: 2024ರ ಜಿಡಿಪಿ ಅಂಕಿಅಂಶಗಳ ಪ್ರಕಾರ ಮಹಾರಾಷ್ಟ್ರವು ದೇಶದ ಶ್ರೀಮಂತ ರಾಜ್ಯವಾಗಿ ಹೊರಹೊಮ್ಮಿದೆ. ಭಾರತದ ಜಿಡಿಪಿಯಲ್ಲಿ ಮಹಾರಾಷ್ಟ್ರದ ಪಾಲು ಶೇ 13.30ರಷ್ಟಿದೆ. ಆ ಮೂಲಕ ಭಾರತದ ಶ್ರೀಮಂತ ರಾಷ್ಟ್ರವಾಗಿ ಹೊರಹೊಮ್ಮಿದೆ.
- Richest States of India: 2024ರ ಜಿಡಿಪಿ ಅಂಕಿಅಂಶಗಳ ಪ್ರಕಾರ ಮಹಾರಾಷ್ಟ್ರವು ದೇಶದ ಶ್ರೀಮಂತ ರಾಜ್ಯವಾಗಿ ಹೊರಹೊಮ್ಮಿದೆ. ಭಾರತದ ಜಿಡಿಪಿಯಲ್ಲಿ ಮಹಾರಾಷ್ಟ್ರದ ಪಾಲು ಶೇ 13.30ರಷ್ಟಿದೆ. ಆ ಮೂಲಕ ಭಾರತದ ಶ್ರೀಮಂತ ರಾಷ್ಟ್ರವಾಗಿ ಹೊರಹೊಮ್ಮಿದೆ.
(1 / 6)
2027-28ರ ವೇಳೆಗೆ ಭಾರತ ದೇಶವು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಲಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಈ ವರ್ಷದ ಆರಂಭದಲ್ಲಿ ಭವಿಷ್ಯ ನುಡಿದಿದ್ದರು. ಭಾರತವನ್ನು 5 ಟ್ರಿಲಿಯನ್ ಡಾಲರ್ ಆರ್ಥಿಕತೆಯ ದೇಶವನ್ನಾಗಿ ಮಾಡುವುದು ಕೇಂದ್ರ ಸರ್ಕಾರದ ಗುರಿಯಾಗಿದೆ. ಹಾಗಿದ್ದರೆ, 2024ರ ಅಂಕಿ-ಅಂಶಗಳ ಪ್ರಕಾರ ಭಾರತದ ಶ್ರೀಮಂತ ರಾಜ್ಯ ಯಾವುದು? ಇಲ್ಲಿದೆ ವಿವರ.
(2 / 6)
ಜಿಡಿಪಿಯ ಪಾಲನ್ನು ಆಧರಿಸಿ ಮಹಾರಾಷ್ಟ್ರವು ಭಾರತದ ಅತ್ಯಂತ ಶ್ರೀಮಂತ ರಾಜ್ಯವಾಗಿದೆ ದೇಶದ ಜಿಡಿಪಿಯಲ್ಲಿ ಶೇಕಡಾ 13.30ರಷ್ಟಿದ್ದು, ಅಗ್ರಸ್ಥಾನದಲ್ಲಿದೆ. ಮಹಾರಾಷ್ಟ್ರ 31 ಟ್ರಿಲಿಯನ್ ರೂಪಾಯಿಗಿಂತಲೂ ಹೆಚ್ಚಿನ GSDP ಹೊಂದಿದೆ.
(3 / 6)
8.90 ರಷ್ಟು ಜಿಡಿಪಿ ಪಾಲು ಹೊಂದಿರುವ ತಮಿಳುನಾಡು ಎರಡನೇ ಶ್ರೀಮಂತ ರಾಜ್ಯವಾಗಿದೆ. 20 ಟ್ರಿಲಿಯನ್ ರೂಪಾಯಿ GSDP ಕೊಡುಗೆ ನೀಡುತ್ತಿದೆ. ಗುಜರಾತ್ ಅತಿ ಹೆಚ್ಚು ಗಳಿಕೆಯ ರಾಜ್ಯಗಳ ಪೈಕಿ 3ನೇಸ್ಥಾನದಲ್ಲಿದೆ. ತಮಿಳುನಾಡಿನಂತೆ 20 ಟ್ರಿಲಿಯನ್ ರೂಪಾಯಿ GSDP ಕೊಡುಗೆ ನೀಡುತ್ತಿದೆ.
(4 / 6)
ಜನಸಂಖ್ಯೆಯ ದೃಷ್ಟಿಯಿಂದ ದೇಶದ ಅತಿದೊಡ್ಡ ರಾಜ್ಯವಾದ ಉತ್ತರ ಪ್ರದೇಶವು ದೇಶದ ಜಿಡಿಪಿಯ ಶೇಕಡಾ 8.40 ರಷ್ಟನ್ನು ಹೊಂದಿದೆ. 19.7 ಟ್ರಿಲಿಯನ್ ರೂಪಾಯಿ GSDP ಕೊಡುಗೆ ನೀಡುವ ಉತ್ತರ ಪ್ರದೇಶವು ನಾಲ್ಕನೇ ಸ್ಥಾನದಲ್ಲಿದೆ. ಕರ್ನಾಟಕವು19.6 ಟ್ರಿಲಿಯನ್ ರೂಪಾಯಿ GSDP ಕೊಡುಗೆ ನೀಡುವ ಮೂಲಕ ಐದನೇ ಸ್ಥಾನದಲ್ಲಿದೆ. ಪಶ್ಚಿಮ ಬಂಗಾಳ ರಾಜ್ಯವು 13 ಟ್ರಿಲಿಯನ್ ರೂಪಾಯಿ ಕಾಣಿಕೆ ನೀಡುವ ಮೂಲಕ 6ನೇ ಸ್ಥಾನದಲ್ಲಿದೆ. 11.3 ಟ್ರಿಲಿಯನ್ ರೂಪಾಯಿ GSDP ಕೊಡುಗೆ ನೀಡುತ್ತಿರುವ ಆಂಧ್ರ ಪ್ರದೇಶ 7ನೇ ಸ್ಥಾನದಲ್ಲಿದೆ.
(5 / 6)
2024-25ರ ಅಂದಾಜು 11.07 ಲಕ್ಷ ಕೋಟಿ ರೂಪಾಯಿಗಳ GSDPಯೊಂದಿಗೆ ನವದೆಹಲಿ 13ನೇ ಸ್ಥಾನದಲ್ಲಿದ್ದರೆ, ದೇಶದ ಆರ್ಥಿಕತೆಯಲ್ಲಿ ದೆಹಲಿಯ ಪಾಲು ಶೇಕಡಾ 3.6 ರಷ್ಟಿದೆ.
ಇತರ ಗ್ಯಾಲರಿಗಳು