ಇಂಗ್ಲೆಂಡ್ ಎ ವಿರುದ್ಧದ ಅನಧಿಕೃತ ಟೆಸ್ಟ್ಗಳಿಗೆ ಭಾರತ ಎ ತಂಡ ಪ್ರಕಟ; ರಿಂಕು ಸೇರಿ ಟಿ20 ಸ್ಪೆಷಲಿಸ್ಟ್ಗಳಿಗೆ ಮಣೆ
- India-A Squad: ಇಂಗ್ಲೆಂಡ್ ಲಯನ್ಸ್ ವಿರುದ್ಧದ ಎರಡು ಮತ್ತು ಮೂರನೇ ಅನಧಿಕೃತ ಟೆಸ್ಟ್ ಕ್ರಿಕೆಟ್ ಪಂದ್ಯಗಳಿಗೆ ಭಾರತ ಎ ತಂಡವನ್ನು ಪ್ರಕಟಿಸಲಾಗಿದೆ. ಅಚ್ಚರಿ ವಿಷಯ ಏನೆಂದರೆ ಈ ತಂಡದಲ್ಲಿ ಟಿ20 ಸ್ಪೆಷಲಿಸ್ಟ್ಗಳೇ ತುಂಬಿದ್ದಾರೆ.
- India-A Squad: ಇಂಗ್ಲೆಂಡ್ ಲಯನ್ಸ್ ವಿರುದ್ಧದ ಎರಡು ಮತ್ತು ಮೂರನೇ ಅನಧಿಕೃತ ಟೆಸ್ಟ್ ಕ್ರಿಕೆಟ್ ಪಂದ್ಯಗಳಿಗೆ ಭಾರತ ಎ ತಂಡವನ್ನು ಪ್ರಕಟಿಸಲಾಗಿದೆ. ಅಚ್ಚರಿ ವಿಷಯ ಏನೆಂದರೆ ಈ ತಂಡದಲ್ಲಿ ಟಿ20 ಸ್ಪೆಷಲಿಸ್ಟ್ಗಳೇ ತುಂಬಿದ್ದಾರೆ.
(1 / 9)
ಇಂಗ್ಲೆಂಡ್ ಲಯನ್ಸ್ ವಿರುದ್ಧದ ಮೊದಲ 4 ದಿನಗಳ ಕಾಲ ನಡೆಯುವ ಎರಡು ಮತ್ತು ಮೂರನೇ ಅನಧಿಕೃತ ಟೆಸ್ಟ್ ಪಂದ್ಯಗಳಿಗೆ ಭಾರತ ಎ ತಂಡವನ್ನು ಬಿಸಿಸಿಐ ಪ್ರಕಟಿಸಿದೆ. ಎರಡೂ ಪಂದ್ಯಗಳಿಗೂ ಅಭಿಮನ್ಯು ಈಶ್ವರನ್ ನಾಯಕರಾಗಿ ಉಳಿದುಕೊಂಡಿದ್ದಾರೆ. ಆದರೆ ಈ ಪಂದ್ಯಗಳಿಗೆ ಒಂದೇ ತಂಡವನ್ನು ಪ್ರಕಟಿಸಿಲ್ಲ. ದೊಡ್ಡ ಮಟ್ಟದಲ್ಲಿ ಬವಲಾವಣೆ ಮಾಡಲಾಗಿದೆ.
(2 / 9)
ಡಿಸೆಂಬರ್ 19ರಂದು ನಡೆದ ಐಪಿಎಲ್ ಹರಾಜಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ 7.2 ಕೋಟಿ ನೀಡಿದ್ದ ಜಾರ್ಖಂಡ್ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಕುಮಾರ್ ಕುಶಾಗ್ರ ಅವರನ್ನು ಇಂಗ್ಲೆಂಡ್ ಲಯನ್ಸ್ ವಿರುದ್ಧದ ಸರಣಿಯ 2 ಮತ್ತು 3ನೇ ಪಂದ್ಯಗಳಿಗೆ ಆಯ್ಕೆ ಮಾಡಲಾಗಿದೆ. ಕುಶಾಗ್ರ ಪ್ರಸ್ತುತ ಸರ್ವಿಸಸ್ ವಿರುದ್ಧದ ರಣಜಿ ಪಂದ್ಯದಲ್ಲಿ ಜಾರ್ಖಂಡ್ ಪರ ಆಡುವುದರಲ್ಲಿ ನಿರತರಾಗಿದ್ದಾರೆ.
(3 / 9)
ವಿಶೇಷವೆಂದರೆ, ಮೊದಲ ಖಾಸಗಿ ಟೆಸ್ಟ್‌ಗೆ ತಂಡದಲ್ಲಿದ್ದ ಇಬ್ಬರು ವಿಕೆಟ್‌ಕೀಪರ್‌ಗಳಾದ ಕೆಎಸ್ ಭರತ್ ಮತ್ತು ಧ್ರುವ್ ಜುರೆಲ್ ಇಂಗ್ಲೆಂಡ್ ಸರಣಿಗೆ ಹಿರಿಯ ತಂಡವನ್ನು ಸೇರಿಕೊಳ್ಳಲಿದ್ದಾರೆ. ಹೀಗಾಗಿ ಆಯ್ಕೆಗಾರರು ಭಾರತ ಎ ತಂಡಕ್ಕೆ ಹೊಸ ವಿಕೆಟ್ ಕೀಪರ್ ಅನ್ನು ಹುಡುಕಬೇಕಾಯಿತು. ಉಪೇಂದ್ರ ಯಾದವ್, ಕುಶಾಗ್ರಾ ಅವರೊಂದಿಗೆ
(4 / 9)
ಭಾರತದ ಪರ ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಸ್ಥಿರ ಪ್ರದರ್ಶನ ನೀಡಿರುವ ವೇಗಿ ಅರ್ಷದೀಪ್ ಸಿಂಗ್, ಇಂಗ್ಲೆಂಡ್ ಲಯನ್ಸ್ ವಿರುದ್ಧದ ಟೆಸ್ಟ್ಗಳಿಗೆ ಭಾರತ ಎ ತಂಡದಲ್ಲಿ ಸೇರ್ಪಡೆಗೊಂಡಿದ್ದಾರೆ.
(5 / 9)
ತಿಲಕ್ ವರ್ಮಾ ಅವರು ಸರಣಿಯ ಕೊನೆಯ 2 ಖಾಸಗಿ ಟೆಸ್ಟ್‌ಗಳ ಭಾರತ ಎ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಪ್ರಸ್ತುತ ಹೈದರಾಬಾದ್ ಪರ ರಣಜಿ ಟ್ರೋಫಿಯಲ್ಲಿ ಆಡುತ್ತಿದ್ದಾರೆ. ರಣಜಿಯಲ್ಲೂ ತಿಲಕ್ ಫಾರ್ಮ್ ನಲ್ಲಿದ್ದಾರೆ. ಅಲ್ಲದೆ, ವಾಷಿಂಗ್ಟನ್ ಸುಂದರ್ ಈ ಸರಣಿಯ ಭಾಗವಾಗಿದ್ದಾರೆ.
(6 / 9)
ಪ್ರಕಟಗೊಂಡ ತಂಡಗಳ ಪೈಕಿ 2ನೇ ಟೆಸ್ಟ್‌ಗೆ ರಿಂಕು ಸಿಂಗ್ ಹೆಸರಿಲ್ಲ. ಆದರೆ ಮೂರನೇ ಪಂದ್ಯಕ್ಕೆ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ರಿಂಕು ಅವರನ್ನು ಆಯ್ಕೆ ಮಾಡುವ ಮೂಲಕ ಭಾರತದ ರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ ತಂಡಕ್ಕೂ ಆಯ್ಕೆ ಮಾಡುವ ಸೂಚನೆಯನ್ನು ಬಿಟ್ಟುಕೊಟ್ಟಿದ್ದಾರೆ.
(7 / 9)
ಎರಡನೇ ಅನಧಿಕೃತ ಟೆಸ್ಟ್‌ಗೆ ಭಾರತೀಯ ತಂಡ: ಅಭಿಮನ್ಯು ಈಶ್ವರನ್ (ನಾಯಕ), ಸಾಯಿ ಸುದರ್ಶನ್, ರಜತ್ ಪಾಟೀದಾರ್, ಸರ್ಫರಾಜ್ ಖಾನ್, ತಿಲಕ್ ವರ್ಮಾ, ಕುಮಾರ್ ಕುಶಾಗ್ರ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ಸೌರಭ್ ಕುಮಾರ್, ಅರ್ಷದೀಪ್ ಸಿಂಗ್, ತುಷಾರ್ ದೇಶಪಾಂಡೆ, ವಿದ್ವತ್ ಕಾವೇರಪ್ಪ, ಉಪೇಂದ್ರ ಯಾದವ್ (ಉಪೇಂದ್ರ ಯಾದವ್ ), ಆಕಾಶ್ ದೀಪ್ ಮತ್ತು ಯಶ್ ದಯಾಳ್.
(8 / 9)
ಮೂರನೇ ಅನಧಿಕೃತ ಟೆಸ್ಟ್‌ಗೆ ಭಾರತೀಯ ತಂಡ: ಅಭಿಮನ್ಯು ಈಶ್ವರನ್ (ನಾಯಕ), ಸಾಯಿ ಸುದರ್ಶನ್, ರಜತ್ ಪಾಟೀದಾರ್, ತಿಲಕ್ ವರ್ಮಾ, ರಿಂಕು ಸಿಂಗ್, ಕುಮಾರ್ ಕುಶಾಗ್ರ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ಶಾಮ್ಸ್ ಮುಲ್ಲಾನಿ, ಅರ್ಷ್‌ದೀಪ್ ಸಿಂಗ್, ತುಷಾರ್ ದೇಶಪಾಂಡೆ, ವಿದ್ವತ್ ಕಾವೇರಪ್ಪ, ಉಪೇಂದ್ರ ಯಾದವ್ (ಉಪೇಂದ್ರ ಯಾದವ್ ), ಆಕಾಶ್ ದೀಪ್ ಮತ್ತು ಯಶ್ ದಯಾಳ್.
ಇತರ ಗ್ಯಾಲರಿಗಳು