ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ದಿನೇಶ್ ಕಾರ್ತಿಕ್ ದಾಖಲೆ ಸರಿಗಟ್ಟಿ ಐಪಿಎಲ್​ನಲ್ಲಿ ಅಪರೂಪದ ಸಾಧನೆ ಮಾಡಿದ ರಿಷಭ್​ ಪಂತ್; ಧೋನಿಯಿಂದಲೂ ಸಾಧ್ಯವಾಗಿಲ್ಲ ಈ ರೆಕಾರ್ಡ್

ದಿನೇಶ್ ಕಾರ್ತಿಕ್ ದಾಖಲೆ ಸರಿಗಟ್ಟಿ ಐಪಿಎಲ್​ನಲ್ಲಿ ಅಪರೂಪದ ಸಾಧನೆ ಮಾಡಿದ ರಿಷಭ್​ ಪಂತ್; ಧೋನಿಯಿಂದಲೂ ಸಾಧ್ಯವಾಗಿಲ್ಲ ಈ ರೆಕಾರ್ಡ್

  • Rishabh Pant Record: ಐಪಿಎಲ್ ಇತಿಹಾಸದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿಕೆಟ್​ ಕೀಪರ್​ ರಿಷಭ್ ಪಂತ್ ಅಪರೂಪದ ದಾಖಲೆ ಬರೆದಿದ್ದಾರೆ. ಅಚ್ಚರಿ ಏನೆಂದರೆ 17 ವರ್ಷಗಳ ಐಪಿಎಲ್​ನಲ್ಲಿ ಚಾಣಾಕ್ಷ ವಿಕೆಟ್ ಕೀಪರ್ ಎಂದೇ ಕರೆಸಿಕೊಳ್ಳುವ ಎಂಎಸ್ ಧೋನಿ ಅವರಿಂದಲೂ ಈ ಸಾಧನೆ ಮಾಡಲು ಸಾಧ್ಯವಾಗಿಲ್ಲ.

ಡೆಲ್ಲಿ ಕ್ಯಾಪಿಟಲ್ಸ್ ನಾಯಕ ರಿಷಭ್ ಪಂತ್ ಅವರು ಬುಧವಾರ (ಏಪ್ರಿಲ್ 17) ದಿನೇಶ್ ಕಾರ್ತಿಕ್ ಅವರ ದಾಖಲೆ ಮುರಿದಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ಪರ ಇನ್ನಿಂಗ್ಸ್ ಒಂದರಲ್ಲಿ ವಿಕೆಟ್ ಕೀಪರ್ ಆಗಿ ಅತಿ ಹೆಚ್ಚು ಬಲಿ ಪಡೆಯುವ ಮೂಲಕ ಕಾರ್ತಿಕ್ ಅವರ ದಾಖಲೆಯನ್ನು ಅವರು ಸರಿಗಟ್ಟಿದ್ದಾರೆ.
icon

(1 / 6)

ಅಹಮದಾಬಾದ್​ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಏಪ್ರಿಲ್ 17ರಂದು ನಡೆದ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ಪಂತ್ ಈ ಮೈಲಿಗಲ್ಲನ್ನು ತಲುಪಿದ್ದಾರೆ. ವಿಕೆಟ್ ಹಿಂದೆ ನಿಂತು ಅಸಾಧಾರಣ ಕೌಶಲ್ಯ ಪ್ರದರ್ಶಿಸಿದ ಪಂತ್, 2 ಅದ್ಭುತ ಸ್ಟಂಪಿಂಗ್ ಮತ್ತು 2 ಅದ್ಭುತ ಕ್ಯಾಚ್ ಪಡೆದರು.
icon

(2 / 6)

ಇದಕ್ಕೂ ಮುನ್ನ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ದಿನೇಶ್ ಕಾರ್ತಿಕ್ 2 ಕ್ಯಾಚ್​ ಮತ್ತು ಎರಡು ಸ್ಟಂಪ್ ಸೇರಿದಂತೆ ನಾಲ್ಕು ಬಲಿ ಪಡೆದರು. 2019ರಲ್ಲಿ ಈ ಸಾಧನೆ ಮಾಡಿದ್ದರು. ಇದೀಗ ರಿಷಭ್ ಈ ದಾಖಲೆ ಸರಿಗಟ್ಟಿದ್ದಾರೆ.
icon

(3 / 6)

ಪಂತ್ ವಿಕೆಟ್ ಹಿಂದೆ ನಿಂತಿರುವುದು ಮಾತ್ರವಲ್ಲದೆ, ನಾಯಕನಾಗಿ ಗಮನ ಸೆಳೆದಿದ್ದಾರೆ. ಬ್ಯಾಟ್​​ನಿಂದ 11 ಎಸೆತಗಳಲ್ಲಿ ಅಜೇಯ 16 ರನ್ ಗಳಿಸಿದ ಪಂತ್, ಪಂದ್ಯಶ್ರೇಷ್ಠ ಪ್ರಶಸ್ತಿಗೂ ಆಯ್ಕೆಯಾಗಿದ್ದಾರೆ.
icon

(4 / 6)

ಐಪಿಎಲ್​​ ಇತಿಹಾಸದಲ್ಲಿ ಮೊದಲ ಬಾರಿಗೆ ವಿಕೆಟ್ ಕೀಪಿಂಗ್ ಮತ್ತು ನಾಯಕತ್ವಕ್ಕೆ ಸಂಬಂಧಿಸಿ ರಿಷಭ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದಾರೆ. ವಿಕೆಟ್ ಕೀಪಿಂಗ್ ಮತ್ತು ನಾಯಕತ್ವಕ್ಕೆ ಪಂತ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿರುವುದು ಐಪಿಎಲ್​ನಲ್ಲಿ ಇದೊಂದು ಅನಿರೀಕ್ಷಿತ ಘಟನೆ. 2019ರ ಬಳಿಕ ಇದೇ ಮೊದಲ ಬಾರಿಗೆ ಪಂತ್ ಮ್ಯಾನ್​ ಆಫ್ ದಿ ಮ್ಯಾಚ್ ಪ್ರಶಸ್ತಿಗೆ ಒಳಗಾಗಿದ್ದಾರೆ. ವಿಕೆಟ್ ಕೀಪರ್ ಮತ್ತು ನಾಯಕತ್ವಕ್ಕಾಗಿ ಧೋನಿ ಕೂಡ ಪಂದ್ಯಶ್ರೇಷ್ಠ ಪಡೆದಿಲ್ಲ.
icon

(5 / 6)

ಕ್ಷಣಕ್ಷಣದ ಅಪ್ಡೇಟ್ಸ್​ಗಾಗಿ ಹಿಂದೂಸ್ತಾನ್ ಟೈಮ್ಸ್ ಕನ್ನಡ ಓದಿ.
icon

(6 / 6)

ಕ್ಷಣಕ್ಷಣದ ಅಪ್ಡೇಟ್ಸ್​ಗಾಗಿ ಹಿಂದೂಸ್ತಾನ್ ಟೈಮ್ಸ್ ಕನ್ನಡ ಓದಿ.

IPL_Entry_Point

ಇತರ ಗ್ಯಾಲರಿಗಳು