ಕನ್ನಡ ಸುದ್ದಿ  /  Photo Gallery  /  Rishabh Pant Ready To Set Ipl 2024 Ablaze As Nca Grants Fitness Clearance Pant Will Return To Cricket After 449 Days Prs

449 ದಿನಗಳ ನಂತರ ಕ್ರಿಕೆಟ್​ಗೆ ಮರಳಲಿದ್ದಾರೆ ರಿಷಭ್ ಪಂತ್; ಎನ್​ಸಿಎ ಕಡೆಯಿಂದ ಸಿಕ್ತು ಗ್ರೀನ್ ಸಿಗ್ನಲ್

  • Rishabh Pant : ರಿಷಭ್ ಪಂತ್ ಅವರು ಕ್ರಿಕೆಟ್ ಆಡಲು ಫಿಟ್ ಆಗಿದ್ದು, ಐಪಿಎಲ್ ಆಡಬಹುದು ಎಂದು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ಹಸಿರು ನಿಶಾನೆ ತೋರಿದೆ.

ಭೀಕರ ಅಪಘಾತದಿಂದ ಚೇತರಿಸಿಕೊಂಡಿರುವ ವಿಕೆಟ್ ಕೀಪರ್​ ಬ್ಯಾಟರ್​ ರಿಷಭ್ ಪಂತ್​, ಮೈದಾನಕ್ಕೆ ಮರಳಲು ಸಜ್ಜಾಗಿದ್ದಾರೆ. ಬರೋಬ್ಬರಿ 449 ದಿನಗಳ ನಂತರ ಸ್ಪರ್ಧಾತ್ಮಕ ಕ್ರಿಕೆಟ್​ನಲ್ಲಿ ತನ್ನ ಪವರ್ ತೋರಿಸಲು ಸಜ್ಜಾಗಿದ್ದಾರೆ.
icon

(1 / 9)

ರಿಷಭ್ ಪಂತ್ ಅವರು ಕ್ರಿಕೆಟ್​ಗೆ ಫಿಟ್ ಆಗಿದ್ದು, ಐಪಿಎಲ್ ಆಡಬಹುದು ಎಂದು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ಹಸಿರು ನಿಶಾನೆ ತೋರಿದೆ. ಮಾರ್ಚ್ 10ರ ಭಾನುವಾರ ರಾತ್ರಿ ಎನ್​ಸಿಎ ಈ ಫಿಟ್​ ಅಂಡ್ ಫೈನ್​ ಸರ್ಟಿಫಿಕೇಟ್​ ನೀಡಿದೆ.
icon

(2 / 9)

ರಿಷಭ್ ಪಂತ್ ಅವರು ಕ್ರಿಕೆಟ್​ಗೆ ಫಿಟ್ ಆಗಿದ್ದು, ಐಪಿಎಲ್ ಆಡಬಹುದು ಎಂದು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ಹಸಿರು ನಿಶಾನೆ ತೋರಿದೆ. ಮಾರ್ಚ್ 10ರ ಭಾನುವಾರ ರಾತ್ರಿ ಎನ್​ಸಿಎ ಈ ಫಿಟ್​ ಅಂಡ್ ಫೈನ್​ ಸರ್ಟಿಫಿಕೇಟ್​ ನೀಡಿದೆ.(PTI)

2022ರ ಡಿಸೆಂಬರ್‌ 30ರಂದು ತನ್ನ ತಾಯಿಯನ್ನು ಭೇಟಿಯಾಗಿ ಹೊಸ ವರ್ಷಕ್ಕೂ ಮುನ್ನ ಸರ್​ಪ್ರೈನ್ ನೀಡಲು ದೆಹಲಿಯಿಂದ ಉತ್ತರಾಖಂಡ್​ಗೆ ಕಾರಿನಲ್ಲಿ ಪ್ರಯಾಣಿಸಿದ್ದ ರಿಷಭ್ ಪಂತ್‌, ಮಾರ್ಗಮಧ್ಯೆ ಭೀಕರ ಅಪಘಾತಕ್ಕೆ ಒಳಗಾಗಿದ್ದರು.
icon

(3 / 9)

2022ರ ಡಿಸೆಂಬರ್‌ 30ರಂದು ತನ್ನ ತಾಯಿಯನ್ನು ಭೇಟಿಯಾಗಿ ಹೊಸ ವರ್ಷಕ್ಕೂ ಮುನ್ನ ಸರ್​ಪ್ರೈನ್ ನೀಡಲು ದೆಹಲಿಯಿಂದ ಉತ್ತರಾಖಂಡ್​ಗೆ ಕಾರಿನಲ್ಲಿ ಪ್ರಯಾಣಿಸಿದ್ದ ರಿಷಭ್ ಪಂತ್‌, ಮಾರ್ಗಮಧ್ಯೆ ಭೀಕರ ಅಪಘಾತಕ್ಕೆ ಒಳಗಾಗಿದ್ದರು.(PTI)

ರಣಭೀಕರ ಅಪಘಾತದಲ್ಲಿ ಪಂತ್ ಬದುಕಿದ್ದೇ ಹೆಚ್ಚು. ಅವರ ಮಂಡಿಗೆ ಬಲವಾದ ಗಾಯವಾಗಿತ್ತು. ಈ ಸಲುವಾಗಿ ಮುಂಬೈನ ಧೀರೂಬಾಯ್ ಅಂಬಾನಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಪಡೆದಿದ್ದರು. ಇದೀಗ ನಿಧಾನವಾಗಿ ಚೇತರಿಸಿಕೊಂಡಿದ್ದಾರೆ.
icon

(4 / 9)

ಡಿಸೆಂಬರ್​ 30ರಂದು ಗಾಯಗೊಂಡಿದ್ದ ಪಂತ್ ಇನ್ನೂ ಕ್ರಿಕೆಟ್ ಮೈದಾನಕ್ಕೆ ಬಂದಿಲ್ಲ. 17ನೇ ಆವೃತ್ತಿಯ ಮಾರ್ಚ್ 23ರಂದು ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕನಾಗಿ ಪಂಜಾಬ್ ಕಿಂಗ್ಸ್​ ವಿರುದ್ಧದ ಕಣಕ್ಕಿಳಿದು ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಕಂಬ್ಯಾಕ್‌ ಮಾಡಲಿದ್ದಾರೆ.
icon

(5 / 9)

ಗಾಯಗೊಂಡ ದಿನದಿಂದ ಕಂಬ್ಯಾಕ್ ಪಂದ್ಯದವರೆಗೂ ಒಟ್ಟು 449 ದಿನಗಳ ಕಾಲ ಅವರು ಕ್ರಿಕೆಟ್​ನಿಂದ ದೂರ ಉಳಿದಂತಾಗುತ್ತದೆ. ವರ್ಷಕ್ಕೂ ಹೆಚ್ಚಿನ ಕಾಲ ಕಂಬ್ಯಾಕ್ ಮಾಡುವ ಪಂತ್ ಆಟವು ಹೇಗಿರಲಿದೆ ಎಂಬ ಕುತೂಹಲ ಕ್ರಿಕೆಟ್​ ಪ್ರಿಯರಲ್ಲಿ ಮನೆ ಮಾಡಿದೆ.
icon

(6 / 9)

2024ರ ಐಪಿಎಲ್​ ಟೂರ್ನಿಯ ಮೊದಲ ಹಂತದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ನಾಯಕ ರಿಷಭ್ ಪಂತ್ ಕೇವಲ ಬ್ಯಾಟಿಂಗ್ ಕಡೆಯಷ್ಟೇ ಗಮನ ಹರಿಸಲಿದ್ದಾರೆ. ಅವರು ವಿಕೆಟ್ ಕೀಪಿಂಗ್ ಮಾಡುವುದಿಲ್ಲ ಎಂದು ಫ್ರಾಂಚೈಸಿ ಮಾಲೀಕರು ಈ ಹಿಂದೆ ಮಾಹಿತಿ ನೀಡಿದ್ದಾರೆ.
icon

(7 / 9)

ಸಾರ್ವರ್ತಿಕ ಚುನಾವಣೆ ಕಾರಣ ಬಹುನಿರೀಕ್ಷಿತ ಐಪಿಎಲ್‌ ಹಂತ ಹಂತವಾಗಿ ನಡೆಯಲಿದೆ. ಮಾರ್ಚ್‌ 22ರಂದು ಚೆನ್ನೈನ ಚಿದಂಬರಂ ಮೈದಾನದಲ್ಲಿ ಉದ್ಘಾಟನಾ ಪಂದ್ಯ ನಡೆಯಲಿದೆ. ಮೊದಲ ಹಂತ ಮಾರ್ಚ್ 22ರಿಂದ ಏಪ್ರಿಲ್ 7ರ ತನಕ ನಡೆಯಲಿದೆ.
icon

(8 / 9)

ಕ್ಷಣಕ್ಷಣದ ಅಪ್ಡೇಟ್ಸ್​​ಗಾಗಿ ಹಿಂದೂಸ್ತಾನ್ ಟೈಮ್ಸ್ ಕನ್ನಡ ಓದಿ.
icon

(9 / 9)

ಕ್ಷಣಕ್ಷಣದ ಅಪ್ಡೇಟ್ಸ್​​ಗಾಗಿ ಹಿಂದೂಸ್ತಾನ್ ಟೈಮ್ಸ್ ಕನ್ನಡ ಓದಿ.

IPL_Entry_Point

ಇತರ ಗ್ಯಾಲರಿಗಳು