ಶತಕ ಬಾರಿಸಿದ ಬೆನ್ನಲ್ಲೇ ಅದ್ಭುತ ಫ್ರಂಟ್ಫ್ಲಿಪ್ ಹೊಡೆದ ರಿಷಭ್ ಪಂತ್; ಸಂಭ್ರಮದ ಚಿತ್ರನೋಟ
2025ರ ಐಪಿಎಲ್ನ ಕೊನೆಯ ಲೀಗ್ ಪಂದ್ಯದಲ್ಲಿ ರಿಷಭ್ ಪಂತ್ ಶತಕ ಬಾರಿಸಿದ್ದಾರೆ. ಇದರೊಂದಿಗೆ ಅದ್ಭುತ ಫಾರ್ಮ್ಗೆ ಮರಳಿದರು. ಆದರೆ ಶತಕ ಸಿಡಿಸಿದ ಬೆನ್ನಲ್ಲೇ ಅದ್ಭುತ ಫ್ರಂಟ್ಫ್ಲಿಪ್ ಹೊಡೆಯುವ ಮೂಲಕ ಗಮನ ಸೆಳೆದಿದ್ದಾರೆ.
(1 / 9)
18ನೇ ಆವೃತ್ತಿಯ ಐಪಿಎಲ್ ಟೂರ್ನಿಯುದ್ದಕ್ಕೂ ಕಳಪೆ ಪ್ರದರ್ಶನ ನೀಡಿ ತೀವ್ರ ಟೀಕೆಗೆ ಗುರಿಯಾಗಿದ್ದ ಲಕ್ನೋ ಸೂಪರ್ ಜೈಂಟ್ಸ್ ನಾಯಕ ರಿಷಭ್ ಪಂತ್ ಅಂತಿಮ ಲೀಗ್ ಪಂದ್ಯದಲ್ಲಿ ಭರ್ಜರಿ ಆಟವಾಡಿದರು.
(2 / 9)
ಪ್ರಸಕ್ತ ಆವೃತ್ತಿಯಲ್ಲಿ 7 ಪಂದ್ಯಗಳಲ್ಲಿ ಒಂದಂಕಿಗೆ ಔಟಾಗಿರುವ ಪಂತ್, ಎರಡನೇ ಐಪಿಎಲ್ ಶತಕ ಸಿಡಿಸಿ ಇಂಗ್ಲೆಂಡ್ ಸರಣಿಗೂ ಮುನ್ನ ಲಯಕ್ಕೆ ಮರಳಿದ್ದಾರೆ.
(3 / 9)
ತಮ್ಮ ತವರಿನ ಮೈದಾನವಾದ ಲಕ್ನೋದ ಏಕನಾ ಕ್ರಿಕೆಟ್ ಮೈದಾನದಲ್ಲಿ ಆರ್ಸಿಬಿ ವಿರುದ್ಧ 61 ಎಸೆತಗಳಲ್ಲಿ 11 ಬೌಂಡರಿ, 8 ಸಿಕ್ಸರ್ ಸಹಿತ 118 ರನ್ ಗಳಿಸಿ ಅಜೇಯರಾಗಿ ಉಳಿದರು.
(4 / 9)
ಐಪಿಎಲ್‌ನಲ್ಲಿ 2018ರಲ್ಲಿ ಕೊನೆಯದಾಗಿ ಶತಕ ಬಾರಿಸಿದ್ದ ಪಂತ್ ಇದೀಗ 7 ವರ್ಷಗಳ ನಂತರ ಐಪಿಎಲ್‌ನಲ್ಲಿ ಶತಕ ಬಾರಿಸಿದ್ದಾರೆ. ಶತಕ ಸಿಡಿಸಿದ ಕೂಡಲೇ ಪಂತ್ ವಿಚಿತ್ರವಾಗಿ ಸಂಭ್ರಮಿಸಿದ್ದು ವೈರಲ್ ಆಗಿದೆ.
(5 / 9)
ಶತಕ ಸಿಡಿಸಿದ ಕೂಡಲೇ ಮೈದಾನದಲ್ಲಿ ಪಲ್ಟಿ ಹೊಡೆದು ವಿಭಿನ್ನವಾಗಿ ಸಂಭ್ರಮಿಸಿದ್ದಾರೆ. ಇದೀಗ ಈ ವಿಡಿಯೋ ಮತ್ತು ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
(8 / 9)
ಪ್ರಸಕ್ತ ಆವೃತ್ತಿಯಲ್ಲಿ ರಿಷಭ್ ಪಂತ್, ಆಡಿರುವ 14 ಪಂದ್ಯಗಳಲ್ಲಿ 24.45ರ ಬ್ಯಾಟಿಂಗ್ ಸರಾಸರಿಯಲ್ಲಿ 269 ರನ್ ಗಳಿಸಿದ್ದಾರೆ. ಒಂದು ಅರ್ಧಶತಕ, 1 ಶತಕ ಬಾರಿಸಿದ್ದಾರೆ.
ಇತರ ಗ್ಯಾಲರಿಗಳು