Indian-origin world leaders: ರಿಷಿ ಸುನಕ್​ ಸೇರಿದಂತೆ ಭಾರತೀಯ ಮೂಲದ ಜಾಗತಿಕ ನಾಯಕರಿವರು..
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Indian-origin World Leaders: ರಿಷಿ ಸುನಕ್​ ಸೇರಿದಂತೆ ಭಾರತೀಯ ಮೂಲದ ಜಾಗತಿಕ ನಾಯಕರಿವರು..

Indian-origin world leaders: ರಿಷಿ ಸುನಕ್​ ಸೇರಿದಂತೆ ಭಾರತೀಯ ಮೂಲದ ಜಾಗತಿಕ ನಾಯಕರಿವರು..

ಒಂದು ಕಾಲದಲ್ಲಿ ಭಾರತವನ್ನು ಬ್ರಿಟಿಷರು ಆಳಿದ್ದರು. ಇದೀಗ ಬ್ರಿಟನ್​​ ಆಳಲು ಭಾರತೀಯ ಮೂಲದ ರಿಷಿ ಸುನಕ್​ ಸಜ್ಜಾಗಿದ್ದಾರೆ. ಅತ್ಯಂತ ಕಿರಿಯ ವಯಸ್ಸಿಗೆ ಬ್ರಿಟನ್​​ನ ನೂತನ ಪ್ರಧಾನಿಯಾಗಿ ರಿಷಿ ಸುನಕ್​ ಆಯ್ಕೆಯಾಗಿದ್ದಾರೆ. ರಿಷಿ ಸುನಕ್​ ಸೇರಿದಂತೆ ಭಾರತೀಯ ಮೂಲದ ಜಾಗತಿಕ ನಾಯಕರು ಯಾರ್ಯಾರು ಇದ್ದಾರೆ ನೋಡೋಣ ಬನ್ನಿ..

ಬ್ರಿಟನ್​​ನ ನೂತನ ಪ್ರಧಾನಿಯಾಗಿ ಭಾರತೀಯ ಮೂಲದ ರಿಷಿ ಸುನಕ್ (42) ಆಯ್ಕೆಯಾಗಿದ್ದಾರೆ. ಈ ಹುದ್ದೆಯನ್ನು ಅಲಂಕರಿಸಿದ ಅತ್ಯಂತ ಕಿರಿಯ ಮತ್ತು ಮೊದಲ ಭಾರತೀಯ ಮೂಲದ ವ್ಯಕ್ತಿ ಎಂಬ ಹೆಗ್ಗಳಿಕೆಗೆ ರಿಷಿ ಸುನಕ್​​ ಪಾತ್ರರಾಗಿದ್ದಾರೆ.
icon

(1 / 6)

ಬ್ರಿಟನ್​​ನ ನೂತನ ಪ್ರಧಾನಿಯಾಗಿ ಭಾರತೀಯ ಮೂಲದ ರಿಷಿ ಸುನಕ್ (42) ಆಯ್ಕೆಯಾಗಿದ್ದಾರೆ. ಈ ಹುದ್ದೆಯನ್ನು ಅಲಂಕರಿಸಿದ ಅತ್ಯಂತ ಕಿರಿಯ ಮತ್ತು ಮೊದಲ ಭಾರತೀಯ ಮೂಲದ ವ್ಯಕ್ತಿ ಎಂಬ ಹೆಗ್ಗಳಿಕೆಗೆ ರಿಷಿ ಸುನಕ್​​ ಪಾತ್ರರಾಗಿದ್ದಾರೆ.(PTI)

ಭಾರತೀಯ ಮೂಲದ ಕಮಲಾ ಹ್ಯಾರಿಸ್ ಪ್ರಸ್ತುತ ಜೋ ಬಿಡನ್ ನೇತೃತ್ವದ ಸರ್ಕಾರದಲ್ಲಿ ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾದ ಉಪಾಧ್ಯಕ್ಷೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
icon

(2 / 6)

ಭಾರತೀಯ ಮೂಲದ ಕಮಲಾ ಹ್ಯಾರಿಸ್ ಪ್ರಸ್ತುತ ಜೋ ಬಿಡನ್ ನೇತೃತ್ವದ ಸರ್ಕಾರದಲ್ಲಿ ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾದ ಉಪಾಧ್ಯಕ್ಷೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.(AP file photo)

ಮಾರಿಷಸ್‌ ಕ್ಯಾಬಿನೆಟ್‌ನಲ್ಲಿ ಹಲವಾರು ಪ್ರಮುಖ ಸ್ಥಾನಗಳನ್ನು ಅಲಂಕರಿಸಿದ್ದ ಪ್ರವಿಂದ್ ಕುಮಾರ್ ಜುಗ್ನಾಥ್ ಅವರು ಮಾರಿಷಸ್​ನ ಪ್ರಧಾನ ಮಂತ್ರಿಯಾಗಿದ್ದಾರೆ.
icon

(3 / 6)

ಮಾರಿಷಸ್‌ ಕ್ಯಾಬಿನೆಟ್‌ನಲ್ಲಿ ಹಲವಾರು ಪ್ರಮುಖ ಸ್ಥಾನಗಳನ್ನು ಅಲಂಕರಿಸಿದ್ದ ಪ್ರವಿಂದ್ ಕುಮಾರ್ ಜುಗ್ನಾಥ್ ಅವರು ಮಾರಿಷಸ್​ನ ಪ್ರಧಾನ ಮಂತ್ರಿಯಾಗಿದ್ದಾರೆ. (REUTERS)

ಆಂಟೋನಿಯೊ ಕೋಸ್ಟಾ ಅವರು ಪೋರ್ಚುಗಲ್‌ನ ಪ್ರಧಾನಿಯಾಗಿದ್ದಾರೆ ಮತ್ತು 2022 ರಲ್ಲಿ ಗೆದ್ದ ನಂತರ ಅವರ ಮೂರನೇ ಅಧಿಕಾರಾವಧಿಯನ್ನು ಪೂರೈಸುತ್ತಿದ್ದಾರೆ.
icon

(4 / 6)

ಆಂಟೋನಿಯೊ ಕೋಸ್ಟಾ ಅವರು ಪೋರ್ಚುಗಲ್‌ನ ಪ್ರಧಾನಿಯಾಗಿದ್ದಾರೆ ಮತ್ತು 2022 ರಲ್ಲಿ ಗೆದ್ದ ನಂತರ ಅವರ ಮೂರನೇ ಅಧಿಕಾರಾವಧಿಯನ್ನು ಪೂರೈಸುತ್ತಿದ್ದಾರೆ.(AFP)

ಚಂದ್ರಿಕಾಪರ್ಸಾದ್ "ಚಾನ್" ಸಂತೋಖಿ ಅವರು ಸುರಿನಾಮ್‌ನ (ದಕ್ಷಿಣ ಅಮೆರಿಕದ ದೇಶ) ಅಧ್ಯಕ್ಷರಾಗಿದ್ದಾರೆ. ಇದಕ್ಕೂ ಮೊದಲು 1991 ರಲ್ಲಿ, ಸಂತೋಖಿ ಅವರು ಪೊಲೀಸ್ ಮುಖ್ಯಸ್ಥರಾಗಿ ನೇಮಕಗೊಂಡಿದ್ದರು.
icon

(5 / 6)

ಚಂದ್ರಿಕಾಪರ್ಸಾದ್ "ಚಾನ್" ಸಂತೋಖಿ ಅವರು ಸುರಿನಾಮ್‌ನ (ದಕ್ಷಿಣ ಅಮೆರಿಕದ ದೇಶ) ಅಧ್ಯಕ್ಷರಾಗಿದ್ದಾರೆ. ಇದಕ್ಕೂ ಮೊದಲು 1991 ರಲ್ಲಿ, ಸಂತೋಖಿ ಅವರು ಪೊಲೀಸ್ ಮುಖ್ಯಸ್ಥರಾಗಿ ನೇಮಕಗೊಂಡಿದ್ದರು. (ANI)

ಭಾರತೀಯ ಮೂಲದ ಜಾಗತಿಕ ನಾಯಕರು
icon

(6 / 6)

ಭಾರತೀಯ ಮೂಲದ ಜಾಗತಿಕ ನಾಯಕರು


ಇತರ ಗ್ಯಾಲರಿಗಳು