Rishi Sunak Prime Minister: 'ಕಠಿಣ ನಿರ್ಧಾರ'ಗಳು ಹೊರಬೀಳಲಿವೆ: ಬ್ರಿಟನ್ ಪ್ರಧಾನಿ ರಿಷಿ ಸುನಕ್ '
- ಲಂಡನ್: ದೇಶವನ್ನು ಆರ್ಥಿಕ ಕುಸಿತದಿಂದ ಮೇಲೆತ್ತಲು ತಮ್ಮ ಸರ್ಕಾರ ಹಲವು ಕಠಿಣ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಬ್ರಿಟನ್ ನೂತನ ಪ್ರಧಾನಮಂತ್ರಿ ರಿಷಿ ಸುನಕ್ ಘೋಷಿಸಿದ್ದಾರೆ. ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ, 10 ಡೌನಿಂಗ್ ಸ್ಟ್ರೀಟ್‌ನಲ್ಲಿ ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡಿದ ರಿಷಿ ಸುನಕ್, ಆರ್ಥಿಕ ಹಿಂಜರಿಕೆಯಿಂದ ದೇಶವನ್ನು ಮೇಲೆತ್ತಲು ಎಲ್ಲರ ಸಹಕಾರ ಕೋರುವುದಾಗಿ ಹೇಳಿದರು. ರಿಷಿ ಸುನಕ್ ಭಾಷಣದ ಸಾರಾಂಶ ಇಲ್ಲಿದೆ.

(1 / 5)
ದೇಶದ ಬೆಳವಣಿಗೆಗೆ ಪ್ರಾಮಾಣಿಕ ಪ್ರಯತ್ನ ಮಾಡಿದ ನಿಗರ್ಮಿತ ಲಿಜ್ ಟ್ರಸ್ ಅವರನ್ನು ನಾನು ಅಭಿನಂದಿಸುತ್ತೇನೆ. ಒಂದು ಉದಾತ್ತ ಗುರಿಯನ್ನು ಈಡೇರಿಸುವಲ್ಲಿ ಅವರು ಪ್ರಾಮಾಣಿಕವಾಗಿ ಶ್ರಮಿಸಿದ್ದಾರೆ. ಆದರೆ ಅವರ ಆಡಳಿತಾವಧಿಯಲ್ಲಿ ಕೈಗೊಂಡ ಕೆಲವು ತಪ್ಪು ನಿರ್ಣಯಗಳನ್ನು ನಮ್ಮ ಸರ್ಕಾರ ಸರಿಪಡಿಸಲಿದೆ ಎಂದು ರಿಷಿ ಸುನಕ್ ಭರವಸೆ ನೀಡಿದರು.(ANI)
(2 / 5)
ನಮ್ಮ ಸರ್ಕಾರವು ಪ್ರತಿ ಹಂತದಲ್ಲೂ ಸಮಗ್ರತೆ, ವೃತ್ತಿಪರತೆ ಮತ್ತು ಹೊಣೆಗಾರಿಕೆಯನ್ನು ಪ್ರದರ್ಶಿಸಲಿದೆ. ದೇಶವನ್ನು ಆರ್ಥಿಕ ಹಿಂಜರಿಕೆಯಿಂದ ಮೇಲೆತ್ತಲು ನನಗೆ ಎಲ್ಲರ ಸಹಕಾರ ಅವಶ್ಯಕತೆಯಿದೆ. ನನಗೆ ಬ್ರಿಟನ್ ನಾಗರಿಕರ ಬೆಂಬಲ ದೊರೆಯಲಿದೆ ಎಂಬ ವಿಶ್ವಾಸವಿದೆ ಎಂದು ರಿಷಿ ಸುನಕ್ ನುಡಿದರು.(ANI)
(3 / 5)
ಬ್ರೆಕ್ಸಿಟ್ ಅವಕಾಶಗಳನ್ನು ಹೆಚ್ಚು ಬಳಸಿಕೊಳ್ಳುವ ಆರ್ಥಿಕತೆಯನ್ನು ನನ್ನ ಸರ್ಕಾರ ನಿರ್ಮಿಸುತ್ತದೆ. ಈ ದಿಸೆಯಲ್ಲಿ ಕೆಲವು ಕಠಿಣ ಕ್ರಮಗಳನ್ನು ನಾವು ಕೈಗೊಳ್ಳಲೇಬೇಕಿದ್ದು, ನಮ್ಮ ನಿವಾರ್ಯತೆಯನ್ನು ಬ್ರಿಟನ್ ಜನ ಅರ್ಥಮಾಡಿಕೊಳ್ಳಲಿದ್ದಾರೆ ಎಂಬ ವಿಶ್ವಾಸವಿದೆ ಎಂದು ರಿಷಿ ಸುನಕ್ ಹೇಳಿದರು.(ANI)
(4 / 5)
ಭವಿಷ್ಯದಲ್ಲಿ ನಮ್ಮ ದೇಶವನ್ನು ಮುನ್ನಡೆಸಲು, ರಾಜಕೀಯಕ್ಕಿಂತ ಹೆಚ್ಚಾಗಿ ದೇಶದ ಜನರ ಬೆಂಬಲದ ಅವಶ್ಯಕತೆ ಇದೆ. ನನ್ನ ಪಕ್ಷದ ಅತ್ಯುತ್ತಮ ಸಂಪ್ರದಾಯಗಳನ್ನು ಪ್ರತಿನಿಧಿಸುವ ಆಡಳಿತವನ್ನು ನೀಡಲು ನಾನು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ. ನಾವೆಲ್ಲರೂ ಒಟ್ಟಾಗಿ ಬ್ರಿಟನ್ ಭವಿಷ್ಯವನ್ನು ನಿರ್ಧರಿಸೋಣ ಎಂದು ರಿಷಿ ಸುನಕ್ ಕರೆ ನೀಡಿದರು.(ANI)
(5 / 5)
ಅನೇಕರು ಮಾಡಿದ ತ್ಯಾಗಕ್ಕೆ ಯೋಗ್ಯವಾದ ಭವಿಷ್ಯವನ್ನು ನಾವು ಸೃಷ್ಟಿಸುತ್ತೇವೆ. ಬ್ರಿಟನ್‌ನ ಭವಿಷ್ಯದ ಪೀಳಿಗೆ ನಮ್ಮ ಬಗ್ಗೆ ಹೆಮ್ಮೆಪಡುವಂತ ಸನ್ನಿವೇಶವನ್ನು ನಾವು ನಿರ್ಮಾಣ ಮಾಡುತ್ತೇವೆ. ಬ್ರಿಟನ್‌ನ ಭವಿಷ್ಯ ಅತ್ಯಂತ ಪ್ರಕಾಶಮಾನವಾಗಿದೆ ಎಂಬ ಭರವಸೆ ನನಗಿದೆ. ನಿಮ್ಮೆಲ್ಲರ ಸಹಕಾರದಿಂದ ಬ್ರಿಟನ್‌ನ ಗತವೈಭವದ ದಿನಗಳನ್ನು ಮರಳಿ ತರಲಾಗುವುದು ಎಂದು ನೂತನ ಪ್ರಧಾನಿ ರಿಷಿ ಸುನಕ್ ಇದೇ ವೇಳೆ ಭರವಸೆ ನೀಡಿದರು.(ANI)
ಇತರ ಗ್ಯಾಲರಿಗಳು