ಆಸ್ಟ್ರೇಲಿಯನ್ ಓಪನ್ ಫೈನಲ್ ಪ್ರವೇಶಿಸಿ ಹೊಸ ಇತಿಹಾಸ ಸೃಷ್ಟಿಸಿದ 43 ವರ್ಷ ರೋಹನ್ ಬೋಪಣ್ಣ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಆಸ್ಟ್ರೇಲಿಯನ್ ಓಪನ್ ಫೈನಲ್ ಪ್ರವೇಶಿಸಿ ಹೊಸ ಇತಿಹಾಸ ಸೃಷ್ಟಿಸಿದ 43 ವರ್ಷ ರೋಹನ್ ಬೋಪಣ್ಣ

ಆಸ್ಟ್ರೇಲಿಯನ್ ಓಪನ್ ಫೈನಲ್ ಪ್ರವೇಶಿಸಿ ಹೊಸ ಇತಿಹಾಸ ಸೃಷ್ಟಿಸಿದ 43 ವರ್ಷ ರೋಹನ್ ಬೋಪಣ್ಣ

  • Rohan Bopanna Reaches Australia Open 2024: 43 ವರ್ಷದ ರೋಹನ್ ಬೋಪಣ್ಣ ಆಸ್ಟ್ರೇಲಿಯನ್ ಓಪನ್ ಪುರುಷರ ಡಬಲ್ಸ್ ಫೈನಲ್ ತಲುಪಿದ್ದಾರೆ. ಇದು ಅವರ ವೃತ್ತಿಜೀವನದ ಮೊದಲ ಆಸ್ಟ್ರೇಲಿಯನ್ ಓಪನ್ ಫೈನಲ್ (ಪುರುಷರ ಡಬಲ್ಸ್).

ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯನ್ ಓಪನ್ ಟೆನಿಸ್‌ 2024ರ ಪುರುಷರ ಡಬಲ್ಸ್ ವಿಭಾಗದಲ್ಲಿ ಭಾರತದ ಹಿರಿಯ ಟೆನಿಸ್ ಆಟಗಾರ ರೋಹನ್ ಬೋಪಣ್ಣ ಫೈನಲ್‌ ತಲುಪುವ ಮೂಲಕ ದಾಖಲೆ ಬರೆದಿದ್ದಾರೆ. ಆ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ.
icon

(1 / 5)

ಜನವರಿ 25ರಂದು ನಡೆದ ಡಬಲ್ಸ್​ ಸೆಮಿಫೈನಲ್​​ನಲ್ಲಿ ರೋಹನ್ ಬೋಪಣ್ಣ ಮತ್ತು ಮ್ಯಾಥ್ಯೂ ಎಬ್ಡೆನ್ ಜೋಡಿ ಭರ್ಜರಿ ಗೆಲುವು ದಾಖಲಿಸಿ ಪ್ರಶಸ್ತಿ ಸುತ್ತಿಗೇರಿದ್ದಾರೆ. ಬೋಪಣ್ಣ ಗ್ರ್ಯಾಂಡ್​ಸ್ಲಾಮ್ ಫೈನಲ್ ತಲುಪಿದ ಅತ್ಯಂತ ಹಿರಿಯ ಆಟಗಾರ ಎಂಬ ದಾಖಲೆ ಬರೆದಿದ್ದಾರೆ.
icon

(2 / 5)

ಸೆಮಿಫೈನಲ್​ನಲ್ಲಿ ವಿಶ್ವ ನಂಬರ್​ 2 ಇಂಡೋ-ಆಸೀಸ್​ ಜೋಡಿ ರೋಚಕ 3 ಸೆಟ್‌ಗಳ ಕಾದಾಟದಲ್ಲಿ ಥಾಮಸ್ ಮಚಾಕ್ ಮತ್ತು ಜಾಂಗ್ ಝಿಶೆನ್ ಜೋಡಿಯನ್ನು ಸೋಲಿಸಿದರು. 6-3 3-6 7-6 (10-7) ಸೆಟ್​ಗಳ ಅಂತರದಿಂದ ಗೆದ್ದು ಬೋಪಣ್ಣ ಮತ್ತು ಎಬ್ಬೆನ್ ಫೈನಲ್ ಟಿಕೆಟ್ ಪಡೆದರು.
icon

(3 / 5)

ಇದೇ ವೇಳೆ 43 ವರ್ಷದ ಬೋಪಣ್ಣ ಗ್ರ್ಯಾಂಡ್ ಸ್ಲಾಮ್ ಫೈನಲ್‌ ತಲುಪಿದ ಹಿರಿಯ ಆಟಗಾರ ಎನ್ನುವ ತನ್ನದೇ ದಾಖಲೆಯನ್ನು ಮುರಿದಿದ್ದಾರೆ. 2023ರಲ್ಲಿ ನಡೆದಿದ್ದ ಯುಎಸ್​ ಓಪನ್​​ನಲ್ಲಿ ಈ ಜೋಡಿ ಫೈನಲ್ ಪ್ರವೇಶಿಸಿತ್ತು. ಆದರೆ ರನ್ನರ್​ಅಪ್​ಗೆ ತೃಪ್ತಿಯಾಗಿತ್ತು.
icon

(4 / 5)

ತಮ್ಮ 17 ಪ್ರಯತ್ನಗಳಲ್ಲಿ ಇದೇ ಮೊದಲ ಬಾರಿಗೆ ಆಸ್ಟ್ರೇಲಿಯನ್ ಓಪನ್ ಪ್ರವೇಶಿಸಿರುವ ಬೋಪಣ್ಣ-ಎಬ್ಡೆನ್ ಜೋಡಿ ಚೊಚ್ಚಲ ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿಗೆ ಮುತ್ತಿಕ್ಕುವ ನಿರೀಕ್ಷೆಯಲ್ಲಿದೆ. ಫೈನಲ್ ಪಂದ್ಯ ಜನವರಿ 27ರಂದು ನಡೆಯಲಿದೆ. ಇಟಲಿಯ ಸಿಮೋನ್ ಬೊಲೆಲ್ಲಿ ಮತ್ತು ಆಂಡ್ರಿಯಾ ವವಸ್ಸೋರಿ ವಿರುದ್ಧ ಫೈನಲ್​ನಲ್ಲಿ ಸೆಣಸಾಟ ನಡೆಯಲಿದೆ.
icon

(5 / 5)

ಇತರ ಗ್ಯಾಲರಿಗಳು