ಟೆಸ್ಟ್​​ನಲ್ಲಿ ಭಾರತ ಪರ ಹೆಚ್ಚು ಸಿಕ್ಸರ್; ಧೋನಿ ದಾಖಲೆ ಧೂಳೀಪಟಗೊಳಿಸಿದ ಸಿಕ್ಸರ್​ ಕಿಂಗ್ ರೋಹಿತ್ ಶರ್ಮಾ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಟೆಸ್ಟ್​​ನಲ್ಲಿ ಭಾರತ ಪರ ಹೆಚ್ಚು ಸಿಕ್ಸರ್; ಧೋನಿ ದಾಖಲೆ ಧೂಳೀಪಟಗೊಳಿಸಿದ ಸಿಕ್ಸರ್​ ಕಿಂಗ್ ರೋಹಿತ್ ಶರ್ಮಾ

ಟೆಸ್ಟ್​​ನಲ್ಲಿ ಭಾರತ ಪರ ಹೆಚ್ಚು ಸಿಕ್ಸರ್; ಧೋನಿ ದಾಖಲೆ ಧೂಳೀಪಟಗೊಳಿಸಿದ ಸಿಕ್ಸರ್​ ಕಿಂಗ್ ರೋಹಿತ್ ಶರ್ಮಾ

  • Rohit Sharma Sixer Record : ಇಂಗ್ಲೆಂಡ್ ವಿರುದ್ಧ ಶತಕ ಸಿಡಿಸಿದ ರೋಹಿತ್ ಶರ್ಮಾ ಟೆಸ್ಟ್​ ಕ್ರಿಕೆಟ್​ನಲ್ಲಿ ಭಾರತದ ಪರ ಅತ್ಯಧಿಕ ಸಿಕ್ಸರ್​ ಸಿಡಿಸಿದ ಎರಡನೇ ಆಟಗಾರ ಎನಿಸಿದ್ದಾರೆ. 

ಇಂಗ್ಲೆಂಡ್ ವಿರುದ್ಧ ಮೂರನೇ ಪಂದ್ಯದಲ್ಲಿ 3 ಸಿಕ್ಸರ್​ ಸಿಡಿಸಿದ ರೋಹಿತ್ ಶರ್ಮಾ ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತದ ಪರ ಅತಿಹೆಚ್ಚು ಸಿಕ್ಸರ್​ ಬಾರಿಸಿದ ಎರಡನೇ ಆಟಗಾರ ಎಂಬ ದಾಖಲೆ ಬರೆದಿದ್ದಾರೆ.
icon

(1 / 8)

ಇಂಗ್ಲೆಂಡ್ ವಿರುದ್ಧ ಮೂರನೇ ಪಂದ್ಯದಲ್ಲಿ 3 ಸಿಕ್ಸರ್​ ಸಿಡಿಸಿದ ರೋಹಿತ್ ಶರ್ಮಾ ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತದ ಪರ ಅತಿಹೆಚ್ಚು ಸಿಕ್ಸರ್​ ಬಾರಿಸಿದ ಎರಡನೇ ಆಟಗಾರ ಎಂಬ ದಾಖಲೆ ಬರೆದಿದ್ದಾರೆ.(AFP)

78 ಸಿಕ್ಸರ್ ಸಿಡಿಸಿ ಎರಡನೇ ಸ್ಥಾನದಲ್ಲಿದ್ದ ಮಾಜಿ ನಾಯಕ ಎಂಎಸ್ ಧೋನಿ ಅವರನ್ನು ಹಿಂದಿಕ್ಕಿರುವ ಹಾಲಿ ನಾಯಕ ರೋಹಿತ್​, ಆ ಸ್ಥಾನವನ್ನು ಕಬ್ಜಾ ಮಾಡಿಕೊಂಡಿದ್ದಾರೆ.
icon

(2 / 8)

78 ಸಿಕ್ಸರ್ ಸಿಡಿಸಿ ಎರಡನೇ ಸ್ಥಾನದಲ್ಲಿದ್ದ ಮಾಜಿ ನಾಯಕ ಎಂಎಸ್ ಧೋನಿ ಅವರನ್ನು ಹಿಂದಿಕ್ಕಿರುವ ಹಾಲಿ ನಾಯಕ ರೋಹಿತ್​, ಆ ಸ್ಥಾನವನ್ನು ಕಬ್ಜಾ ಮಾಡಿಕೊಂಡಿದ್ದಾರೆ.(BCCI-X)

ಭಾರತ ತಂಡದ ನಾಯಕನಾಗಿ ಅಧಿಕ ಟೆಸ್ಟ್​ ಸಿಕ್ಸರ್​​ಗಳನ್ನು ಬಾರಿಸಿದ ಹೆಗ್ಗಳಿಕೆಗೆ ಪಾತ್ರರಾದ ಹಿಟ್​ಮ್ಯಾನ್, ವೀರೇಂದ್ರ ಸೆಹ್ವಾಗ್ ನಂತರ ಸ್ಥಾನ ಪಡೆದಿದ್ದಾರೆ.
icon

(3 / 8)

ಭಾರತ ತಂಡದ ನಾಯಕನಾಗಿ ಅಧಿಕ ಟೆಸ್ಟ್​ ಸಿಕ್ಸರ್​​ಗಳನ್ನು ಬಾರಿಸಿದ ಹೆಗ್ಗಳಿಕೆಗೆ ಪಾತ್ರರಾದ ಹಿಟ್​ಮ್ಯಾನ್, ವೀರೇಂದ್ರ ಸೆಹ್ವಾಗ್ ನಂತರ ಸ್ಥಾನ ಪಡೆದಿದ್ದಾರೆ.(BCCI-X)

ಮೊದಲ ಸ್ಥಾನದಲ್ಲಿರುವ ಮಾಜಿ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್ ಟೆಸ್ಟ್​ನಲ್ಲಿ 90 ಸಿಕ್ಸರ್ ಸಿಡಿಸಿದ್ದಾರೆ. ಆ ಮೂಲಕ ಭಾರತದ ಪರ ಅತ್ಯಧಿಕ ಸಿಕ್ಸರ್ ಸಿಡಿಸಿದ ಆಟಗಾರ ಎನಿಸಿದ್ದಾರೆ. 104 ಟೆಸ್ಟ್ ಪಂದ್ಯಗಳನ್ನಾಡಿದ್ದಾರೆ.
icon

(4 / 8)

ಮೊದಲ ಸ್ಥಾನದಲ್ಲಿರುವ ಮಾಜಿ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್ ಟೆಸ್ಟ್​ನಲ್ಲಿ 90 ಸಿಕ್ಸರ್ ಸಿಡಿಸಿದ್ದಾರೆ. ಆ ಮೂಲಕ ಭಾರತದ ಪರ ಅತ್ಯಧಿಕ ಸಿಕ್ಸರ್ ಸಿಡಿಸಿದ ಆಟಗಾರ ಎನಿಸಿದ್ದಾರೆ. 104 ಟೆಸ್ಟ್ ಪಂದ್ಯಗಳನ್ನಾಡಿದ್ದಾರೆ.(Surjeet Yadav)

ಎರಡನೇ ಸ್ಥಾನದಲ್ಲಿರುವ ರೋಹಿತ್​ ಶರ್ಮಾ 80 ಸಿಕ್ಸರ್​ ಸಿಡಿಸಿದ್ದಾರೆ. ಅವರು 57 ಟೆಸ್ಟ್​ ಪಂದ್ಯಗಳಲ್ಲಿ ಮಾತ್ರ ಕಣಕ್ಕಿಳಿದಿದ್ದಾರೆ.
icon

(5 / 8)

ಎರಡನೇ ಸ್ಥಾನದಲ್ಲಿರುವ ರೋಹಿತ್​ ಶರ್ಮಾ 80 ಸಿಕ್ಸರ್​ ಸಿಡಿಸಿದ್ದಾರೆ. ಅವರು 57 ಟೆಸ್ಟ್​ ಪಂದ್ಯಗಳಲ್ಲಿ ಮಾತ್ರ ಕಣಕ್ಕಿಳಿದಿದ್ದಾರೆ.(PTI)

ಮೂರನೇ ಸ್ಥಾನಕ್ಕೆ ಕುಸಿದಿರುವ ಎಂಎಸ್ ಧೋನಿ (90 ಟೆಸ್ಟ್), 78 ಸಿಕ್ಸರ್​​ಗಳನ್ನು ಚಚ್ಚಿದ್ದಾರೆ. ಸಚಿನ್ ತೆಂಡೂಲ್ಕರ್ 200 ಟೆಸ್ಟ್​​ಗಳಲ್ಲಿ 69 ಸಿಕ್ಸರ್, ಕಪಿಲ್ ದೇವ್ 61 ಟೆಸ್ಟ್​ ಸಿಕ್ಸರ್​​ಗಳನ್ನು ಬಾರಿಸಿದ್ದಾರೆ.
icon

(6 / 8)

ಮೂರನೇ ಸ್ಥಾನಕ್ಕೆ ಕುಸಿದಿರುವ ಎಂಎಸ್ ಧೋನಿ (90 ಟೆಸ್ಟ್), 78 ಸಿಕ್ಸರ್​​ಗಳನ್ನು ಚಚ್ಚಿದ್ದಾರೆ. ಸಚಿನ್ ತೆಂಡೂಲ್ಕರ್ 200 ಟೆಸ್ಟ್​​ಗಳಲ್ಲಿ 69 ಸಿಕ್ಸರ್, ಕಪಿಲ್ ದೇವ್ 61 ಟೆಸ್ಟ್​ ಸಿಕ್ಸರ್​​ಗಳನ್ನು ಬಾರಿಸಿದ್ದಾರೆ.(PTI)

ಒಟ್ಟಾರೆ, ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ರೋಹಿತ್​ ಶರ್ಮಾ ಅತ್ಯಧಿಕ ಸಿಕ್ಸರ್​ ಸಿಡಿಸಿದ ಭಾರತದ ನಾಯಕ ಎನಿಸಿದ್ದಾರೆ. ಇಲ್ಲೂ ಸಹ ಮಾಜಿ ನಾಯಕನ ಸಿಕ್ಸರ್​​ಗಳ ದಾಖಲೆಯನ್ನು ಹಿಂದಿಕ್ಕಿದ್ದಾರೆ. ರೋಹಿತ್​ 212 ಸಿಕ್ಸರ್​ ಸಿಡಿಸಿದ್ದರೆ, ಧೋನಿ ನಾಯಕನಾಗಿ 212 ಸಿಕ್ಸರ್​ ಸಿಡಿಸಿದ್ದಾರೆ.
icon

(7 / 8)

ಒಟ್ಟಾರೆ, ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ರೋಹಿತ್​ ಶರ್ಮಾ ಅತ್ಯಧಿಕ ಸಿಕ್ಸರ್​ ಸಿಡಿಸಿದ ಭಾರತದ ನಾಯಕ ಎನಿಸಿದ್ದಾರೆ. ಇಲ್ಲೂ ಸಹ ಮಾಜಿ ನಾಯಕನ ಸಿಕ್ಸರ್​​ಗಳ ದಾಖಲೆಯನ್ನು ಹಿಂದಿಕ್ಕಿದ್ದಾರೆ. ರೋಹಿತ್​ 212 ಸಿಕ್ಸರ್​ ಸಿಡಿಸಿದ್ದರೆ, ಧೋನಿ ನಾಯಕನಾಗಿ 212 ಸಿಕ್ಸರ್​ ಸಿಡಿಸಿದ್ದಾರೆ.(ANI )

ಕ್ಷಣ ಕ್ಷಣದ ಅಪ್ಡೇಟ್ಸ್​ಗಾಗಿ ಹಿಂದೂಸ್ತಾನ್ ಟೈಮ್ಸ್ ಕನ್ನಡ ಓದಿ.
icon

(8 / 8)

ಕ್ಷಣ ಕ್ಷಣದ ಅಪ್ಡೇಟ್ಸ್​ಗಾಗಿ ಹಿಂದೂಸ್ತಾನ್ ಟೈಮ್ಸ್ ಕನ್ನಡ ಓದಿ.


ಇತರ ಗ್ಯಾಲರಿಗಳು