ಕನ್ನಡ ಸುದ್ದಿ  /  Photo Gallery  /  Rohit Sharma Birthday Hitman Love Affairs With 3 Girls Friends Before His Marriage With Ritika Sajdesh Prs

Rohit Sharma Birthday: ರೋಹಿತ್ ಶರ್ಮಾ ಸಾಮಾನ್ಯ ಆಟಗಾರನಲ್ಲ; ಮದುವೆಗೂ ಮುನ್ನ ಮೂವರಿಗೆ ಪ್ರಪೋಸ್, ನಟಿ ಜೊತೆ ಡೇಟಿಂಗ್​​ ಮಾಡಿದ್ದರು!

  • ಇಂದು (ಏಪ್ರಿಲ್ 30ಕ್ಕೆ) ಟೀಮ್​ ಇಂಡಿಯಾ ಹಾಗೂ ಮುಂಬೈ ಇಂಡಿಯನ್ಸ್​ ನಾಯಕ ರೋಹಿತ್​ ಶರ್ಮಾಗೆ 36ನೇ ಹುಟ್ಟುಹಬ್ಬದ ಸಂಭ್ರಮ. ನೂರಾರು ದಾಖಲೆಗಳ ಒಡೆಯನಾಗಿರುವ ಹಿಟ್​ಮ್ಯಾನ್​ಗೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಆದರೆ ರೋಹಿತ್​ ತನ್ನ ಮದುವೆಗೂ ಮೂವರಿಗೆ ಪ್ರಪೋಸ್​ ಮಾಡಿದ್ದರಂತೆ.

ಟೀಮ್​ ಇಂಡಿಯಾ ನಾಯಕ ರೋಹಿತ್​ ಶರ್ಮಾ ಏಕದಿನ ಕ್ರಿಕೆಟ್​ನಲ್ಲಿ 3 ದ್ವಿಶತಕ ಸಿಡಿಸಿದ ವಿಶ್ವದ ಏಕೈಕ ಆಟಗಾರ. ಆಟಗಾರನಾಗಿ ಆರು ಬಾರಿ ಮತ್ತು ನಾಯಕನಾಗಿ 5 ಬಾರಿ ಐಪಿಎಲ್ ಪ್ರಶಸ್ತಿ ಗೆದ್ದಿರುವ ರೋಹಿತ್ ಶರ್ಮಾ, 2021ರ ಟಿ20 ವಿಶ್ವಕಪ್ ಟೂರ್ನಿಯ ನಂತರ ಭಾರತೀಯ ಟಿ20 ನಾಯಕತ್ವ ವಹಿಸಿಕೊಂಡರು. ಸೌತ್​ ಆಫ್ರಿಕಾ ಎದುರಿನ ಕೇಪ್​ಟೌನ್ ಟೆಸ್ಟ್ ನಂತರ ಅವರು ಟೀಮ್ ಇಂಡಿಯಾದ ಮೂರು ಮಾದರಿಯ ನಾಯಕರಾದರು.
icon

(1 / 8)

ರೋಹಿತ್ ಶರ್ಮಾ 20ನೇ ವಯಸ್ಸಿನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಜೀವನ ಆರಂಭಿಸಿದರು. 2007ರ ಟಿ20 ವಿಶ್ವಕಪ್​​​ನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದರು. ಆದರೆ ತಂಡದಲ್ಲಿ ಹೆಚ್ಚೆಚ್ಚು ಅವಕಾಶ ಪಡೆಯದೆ ಬಂದು ಹೋಗುತ್ತಿದ್ದರು. 2013ರ ಐಪಿಎಲ್​ ನಂತರ ರೋಹಿತ್​ ಗ್ರಾಫ್​ ಬದಲಾಯಿತು. ಮುಂಬೈ ಇಂಡಿಯನ್ಸ್ ನಾಯಕನಾಗಿ ಐಪಿಎಲ್ ಪ್ರಶಸ್ತಿ ಗೆದ್ದ ನಂತರ ಭಾರತದ ಆರಂಭಿಕ ಆಟಗಾರನಾಗಿ ಬದಲಾದರು. ವೈಟ್ ಬಾಲ್ ಕ್ರಿಕೆಟ್​ನಲ್ಲಿ ವಿರಾಟ್ ಕೊಹ್ಲಿಗೆ ಉಪನಾಯಕನಾಗಿ ಕಾರ್ಯ ನಿರ್ವಹಿಸಿದರು. 2019ರ ಏಕದಿನ ವಿಶ್ವಕಪ್‌ನಲ್ಲಿ 5 ಶತಕ ಸಿಡಿಸಿರುವ ರೋಹಿತ್, 2023ರ ವಿಶ್ವಕಪ್‌ನಲ್ಲಿ ನಾಯಕನಾಗಿ ಕಣಕ್ಕಿಳಿಯಲಿದ್ದಾರೆ.
icon

(2 / 8)

2015ರ ಡಿಸೆಂಬರ್​ 13ರಂದು ರಿತಿಕಾ ಸಜ್​ದೇಶ್​ ಅವರೊಂದಿಗೆ ರೋಹಿತ್​​​ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಆದರೆ, ರಿತಿಕಾ ಅವರೊಂದಿಗೆ ವಿವಾಹಕ್ಕೂ ಮುನ್ನ ರೋಹಿತ್​​ ಶರ್ಮಾ ಮೂವರಿಗೆ ಪ್ರಪೋಸ್​ ಮಾಡಿದ್ದರು ಎಂಬ ಗುಸು ಗುಸು ಸುದ್ದಿ ಈಗಲೂ ಇದೆ. ರೋಹಿತ್ ತನ್ನ ಶಾಲಾ ದಿನಗಳಲ್ಲಿ ತನ್ನ ಸಹಪಾಠಿಗೆ ಪ್ರಪೋಸ್ ಮಾಡಿದ್ದರು. ಆದರೆ ರೋಹಿತ್ ಬಾಲ್ಯದ ಪ್ರೇಮಕಥೆಗೆ ಶಾಲಾ ದಿನಗಳ ನಂತರ ಫುಲ್ ಸ್ಟಾಪ್ ಬಿದ್ದಿತು.
icon

(3 / 8)

ರೋಹಿತ್ ಶರ್ಮಾ ಮಹಾರಾಷ್ಟ್ರದ ನಾಗ್ಪುರದಲ್ಲಿ 1987ರ ಏಪ್ರಿಲ್ 30 ರಂದು ಜನಿಸಿದ್ದರು. ಸದ್ಯ ಕ್ರಿಕೆಟ್ ನಲ್ಲಿ ಹಲವು ದಾಖಲೆಗಳನ್ನು ಮಾಡಿದ್ದು, ಟೀಂ ಇಂಡಿಯಾದ ಮೂರು ಮಾದರಿಗಳಿಗೆ ಫುಲ್ ಟೈಮ್ ನಾಯಕರಾಗಿದ್ದಾರೆ.
icon

(4 / 8)

ಹೈದರಾಬಾದ್​ ಯುವತಿಯ ಬೆನ್ನಲ್ಲೇ ಬಾಲಿವುಡ್ ನಟಿ ಸೋಫಿಯಾ ಹಯಾತ್​ ಅವರ ಪ್ರೀತಿಯ ಬಲೆಗೆ ಬಿದ್ದರು. ಇಬ್ಬರೂ ಪಬ್‌ಗಳಲ್ಲಿ ಸಾರ್ವಜನಿಕವಾಗಿ ಸುತ್ತಾಡಿ ಸಿಕ್ಕಿಬಿದ್ದಿದ್ದರು. 2012ರಲ್ಲಿ ಸೋಫಿಯಾ ಅವರು ರೋಹಿತ್ ಜೊತೆ ಡೇಟಿಂಗ್ ಮಾಡುತ್ತಿರುವುದಾಗಿ ಸಾರ್ವಜನಿಕವಾಗಿ ಘೋಷಿಸಿದರು. ಇದಾದ ಬಳಿಕ ರೋಹಿತ್ ಸೋಫಿಯಾ ಜೊತೆಗೂ ಬ್ರೇಕ್ ಅಪ್ ಆದರು. 
icon

(5 / 8)

ಬ್ರೇಕಪ್​ ಬೆನ್ನಲ್ಲೇ ಸೋಫಿಯಾ ಟ್ವೀಟ್​​ನಲ್ಲಿ ಸಂಚಲನ ಹೇಳಿಕೆ ನೀಡಿದ್ದರು. ರೋಹಿತ್​ ಜೆಂಟಲ್​ಮನ್​ ಅಲ್ಲ. ಆತ ಸೋಲುವುದನ್ನು ನಾನು ನೋಡಬೇಕು ಎಂದು ಆಕೆ ಟ್ವೀಟ್​ ಮಾಡಿದ್ದರು. ಈ ಟ್ವೀಟ್​ಗಳು ಈಗಲೂ ಇವೆ.
icon

(6 / 8)

ಈ ಮೂವರ ಜೊತೆಗಿನ ಪ್ರೀತಿ ಪ್ರೇಮದ ನಂತರ ರಿತಿಕಾ ಸಜ್​ದೇಶ್​​ ರೋಹಿತ್ ಬಾಳಿಗೆ ಪ್ರವೇಶಿಸಿದರು. ಇವರಿಬ್ಬರ ಪ್ರೇಮಕಥೆಯೂ ಕುತೂಹಲಕಾರಿಯಾಗಿದೆ. ರಿತಿಕಾ ಮದುವೆಗೂ ಮುನ್ನ ಕ್ರೀಡಾ ಈವೆಂಟ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದರು. ರಿತಿಕಾ ಕೆಲವು ವರ್ಷಗಳ ಕಾಲ ವಿರಾಟ್ ಕೊಹ್ಲಿಯ ಮ್ಯಾನೇಜರ್ ಆಗಿಯೂ ಕೆಲಸ ಮಾಡಿದ್ದಾರೆ.
icon

(7 / 8)

ವಿರಾಟ್ ಕೊಹ್ಲಿ ನಂತರ ರಿತಿಕಾ ಅವರು ರೋಹಿತ್ ಶರ್ಮಾ ಮ್ಯಾನೇಜರ್ ಆದರು. ಆ ಪರಿಚಯದ ನಂತರ ಅದು ಸ್ನೇಹವಾಗಿ, ಪ್ರೀತಿಯಾಗಿ ಕೊನೆಗೆ ಮದುವೆ ಆದರು. ಎಂಟು ವರ್ಷಗಳಿಂದ ಇವರ ದಾಂಪತ್ಯ ಜೀವನ ಸುಸೂತ್ರವಾಗಿ ಸಾಗುತ್ತಿದೆ. ಅವರಿಗೆ ಸಮೈರಾ ಎಂಬ ಐದು ವರ್ಷದ ಮಗಳೂ ಇದ್ದಾಳೆ. ಈ ದಂಪತಿ ಮಗಳು ಸಮೈರಾಗೆ ಸಂಬಂಧಿಸಿದ ಎಲ್ಲವನ್ನೂ ಜಾಲತಾಣಗಳಲ್ಲಿ ಪೋಸ್ಟ್​ ಮಾಡುತ್ತಿರುತ್ತಾರೆ.
icon

(8 / 8)

IPL_Entry_Point

ಇತರ ಗ್ಯಾಲರಿಗಳು