ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ನಾಯಕನಾಗಿ 5000 ರನ್ ಪೂರೈಸಿದ ರೋಹಿತ್ ಶರ್ಮಾ; ಕೊಹ್ಲಿ, ಧೋನಿ, ಗಂಗೂಲಿ ಇರುವ ಗಣ್ಯರ ಪಟ್ಟಿಗೆ ಸೇರಿದ ಹಿಟ್​ಮ್ಯಾನ್

ನಾಯಕನಾಗಿ 5000 ರನ್ ಪೂರೈಸಿದ ರೋಹಿತ್ ಶರ್ಮಾ; ಕೊಹ್ಲಿ, ಧೋನಿ, ಗಂಗೂಲಿ ಇರುವ ಗಣ್ಯರ ಪಟ್ಟಿಗೆ ಸೇರಿದ ಹಿಟ್​ಮ್ಯಾನ್

  • Rohit Sharma: ಆರಂಭಿಕ ಆಟಗಾರ ರೋಹಿತ್​ ಶರ್ಮಾ ಅವರು ನಾಯಕನಾಗಿ ಟೀಮ್ ಇಂಡಿಯಾ ಪರ ವಿಶೇಷ ದಾಖಲೆ ನಿರ್ಮಿಸಿದ್ದಾರೆ. ಅಲ್ಲದೆ, ವಿರಾಟ್ ಕೊಹ್ಲಿ, ಸೌರವ್ ಗಂಗೂಲಿ, ಎಂಎಸ್ ಧೋನಿ ಅವರ ಎಲೈಟ್​ ಪಟ್ಟಿಗೂ ಸೇರ್ಪಡೆಯಾಗಿದ್ದಾರೆ.

2024ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ರೋಹಿತ್ ಶರ್ಮಾ ನಾಯಕನಾಗಿ ಟೀಮ್ ಇಂಡಿಯಾ ಪರ ವಿಶೇಷ ದಾಖಲೆ ಬರೆದಿದ್ದಾರೆ. 
icon

(1 / 5)

2024ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ರೋಹಿತ್ ಶರ್ಮಾ ನಾಯಕನಾಗಿ ಟೀಮ್ ಇಂಡಿಯಾ ಪರ ವಿಶೇಷ ದಾಖಲೆ ಬರೆದಿದ್ದಾರೆ. (BCCI- X)

ಭಾರತ ತಂಡದ ನಾಯಕನಾಗಿ ರೋಹಿತ್​ ಮೂರು ಫಾರ್ಮೆಟ್​ಗಳಲ್ಲಿ 5000 ರನ್​ಗಳ ಗಡಿ ದಾಟಿದ್ದಾರೆ. ಆ ಮೂಲಕ ಕೊಹ್ಲಿ, ಧೋನಿ, ಗಂಗೂಲಿಯಂತಹ ದಿಗ್ಗಜ ಆಟಗಾರರ ಎಲೈಟ್ ಪಟ್ಟಿಗೆ ಸೇರಿದ್ದಾರೆ.
icon

(2 / 5)

ಭಾರತ ತಂಡದ ನಾಯಕನಾಗಿ ರೋಹಿತ್​ ಮೂರು ಫಾರ್ಮೆಟ್​ಗಳಲ್ಲಿ 5000 ರನ್​ಗಳ ಗಡಿ ದಾಟಿದ್ದಾರೆ. ಆ ಮೂಲಕ ಕೊಹ್ಲಿ, ಧೋನಿ, ಗಂಗೂಲಿಯಂತಹ ದಿಗ್ಗಜ ಆಟಗಾರರ ಎಲೈಟ್ ಪಟ್ಟಿಗೆ ಸೇರಿದ್ದಾರೆ.(AFP)

ವಿಶ್ವಕಪ್​ನ ಎರಡನೇ ಸೆಮಿಫೈನಲ್​ನಲ್ಲಿ ಇಂಗ್ಲೆಂಡ್​ ವಿರುದ್ಧ 22 ರನ್ ಗಳಿಸಿದ್ದ ಅವಧಿಯಲ್ಲಿ ಈ ವಿಶೇಷ ಸಾಧನೆ ಮಾಡಿದರು. ಭಾರತದ ಪರ ನಾಯಕನಾಗಿ 5000+ ಸ್ಕೋರ್ ಮಾಡಿದ 5ನೇ ಆಟಗಾರ ಎನಿಸಿದ್ದಾರೆ.
icon

(3 / 5)

ವಿಶ್ವಕಪ್​ನ ಎರಡನೇ ಸೆಮಿಫೈನಲ್​ನಲ್ಲಿ ಇಂಗ್ಲೆಂಡ್​ ವಿರುದ್ಧ 22 ರನ್ ಗಳಿಸಿದ್ದ ಅವಧಿಯಲ್ಲಿ ಈ ವಿಶೇಷ ಸಾಧನೆ ಮಾಡಿದರು. ಭಾರತದ ಪರ ನಾಯಕನಾಗಿ 5000+ ಸ್ಕೋರ್ ಮಾಡಿದ 5ನೇ ಆಟಗಾರ ಎನಿಸಿದ್ದಾರೆ.(AFP)

ಭಾರತ ತಂಡದ ಕ್ಯಾಪ್ಟನ್ ಆಗಿ ಅತ್ಯಧಿಕ ರನ್ ಗಳಿಸಿದವರ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಅಗ್ರಸ್ಥಾನ ಪಡೆದಿದ್ದಾರೆ. ಕೊಹ್ಲಿ ನಾಯಕನಾಗಿ 12883 ರನ್ (ಮೂರು ಫಾರ್ಮೆಟ್) ಗಳಿಸಿದ್ದಾರೆ.
icon

(4 / 5)

ಭಾರತ ತಂಡದ ಕ್ಯಾಪ್ಟನ್ ಆಗಿ ಅತ್ಯಧಿಕ ರನ್ ಗಳಿಸಿದವರ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಅಗ್ರಸ್ಥಾನ ಪಡೆದಿದ್ದಾರೆ. ಕೊಹ್ಲಿ ನಾಯಕನಾಗಿ 12883 ರನ್ (ಮೂರು ಫಾರ್ಮೆಟ್) ಗಳಿಸಿದ್ದಾರೆ.(PTI)

ಎರಡನೇ ಸ್ಥಾನದಲ್ಲಿ ಎಂಎಸ್ ಧೋನಿ ಸ್ಥಾನ ಪಡೆದಿದ್ದು, 11207 ರನ್ ಸಿಡಿಸಿದ್ದಾರೆ. ಮೊಹಮ್ಮದ್ ಅಜರುದ್ದೀನ್ 8095 ರನ್, ಸೌರವ್ ಗಂಗೂಲಿ 7643 ರನ್ ಗಳಿಸಿ ಕ್ರಮವಾಗಿ 3 ಮತ್ತು 4ನೇ ಸ್ಥಾನದಲ್ಲಿದ್ದಾರೆ. ಇವರ ನಂತರ ರೋಹಿತ್​ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.
icon

(5 / 5)

ಎರಡನೇ ಸ್ಥಾನದಲ್ಲಿ ಎಂಎಸ್ ಧೋನಿ ಸ್ಥಾನ ಪಡೆದಿದ್ದು, 11207 ರನ್ ಸಿಡಿಸಿದ್ದಾರೆ. ಮೊಹಮ್ಮದ್ ಅಜರುದ್ದೀನ್ 8095 ರನ್, ಸೌರವ್ ಗಂಗೂಲಿ 7643 ರನ್ ಗಳಿಸಿ ಕ್ರಮವಾಗಿ 3 ಮತ್ತು 4ನೇ ಸ್ಥಾನದಲ್ಲಿದ್ದಾರೆ. ಇವರ ನಂತರ ರೋಹಿತ್​ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.(PTI)


ಇತರ ಗ್ಯಾಲರಿಗಳು