ಕನ್ನಡ ಸುದ್ದಿ  /  Photo Gallery  /  Rohit Sharma Completes Half Century Of Sixes In World Test Championship History Wtc India Vs England 5th Test Jra

ಡಬ್ಲ್ಯೂಟಿಸಿಯಲ್ಲಿ ಸಿಕ್ಸರ್‌ಗಳ ಅರ್ಧಶತಕ; ವಿಶೇಷ ದಾಖಲೆ ನಿರ್ಮಿಸಿದ ಮೊದಲ ಭಾರತೀಯ ರೋಹಿತ್‌ ಶರ್ಮಾ

  • Rohit Sharma: ಇಂಗ್ಲೆಂಡ್ ವಿರುದ್ಧದ ಧರ್ಮಶಾಲಾ ಟೆಸ್ಟ್ ಪಂದ್ಯದಲ್ಲಿ ಟೀಮ್‌ ಇಂಡಿಯಾ ನಾಯಕ ರೋಹಿತ್ ಶರ್ಮಾ ಆಕರ್ಷಕ ಶತಕ ಸಿಡಿಸಿದರು. ಮೊದಲ ದಿನದಾಟದ ಅಂತ್ಯಕ್ಕೆ ಅರ್ಧಶತಕ ಸಿಡಿಸಿದ್ದ ಹಿಟ್‌ಮ್ಯಾನ್‌, ಎರಡು ಸಿಕ್ಸರ್ ಬಾರಿಸಿದ್ದರು. ಒಟ್ಟು ತಮ್ಮ ಇನ್ನಿಂಗ್ಸ್‌ನಲ್ಲಿ 3 ಸಿಕ್ಸರ್‌ ಸಿಡಿಸಿದ ಅವರು, ಸಿಕ್ಸರ್‌ಗಳ‌ ಅರ್ಧಶತಕ ದಾಖಲೆ ಮಾಡಿದ್ದಾರೆ.

ಇಂಗ್ಲೆಂಡ್ ವಿರುದ್ಧದ 5ನೇ ಟೆಸ್ಟ್ ಪಂದ್ಯದ ಎರಡನೇ ದಿನದಾಟದಲ್ಲಿ ರೋಹಿತ್ ಶರ್ಮಾ ಶತಕ ಬಾರಿಸಿದ್ದಾರೆ. ಮೊದಲ ದಿನ 52 ರನ್ ಗಳಿಸಿ ಔಟಾಗದೆ ಉಳಿದ ಎರಡನೇ ದಿನ 103 ರನ್‌ ಗಳಿಸಿ ಔಟಾದರು. ತಮ್ಮ ಇನ್ನಿಂಗ್ಸ್‌ನಲ್ಲಿ 3 ಸಿಕ್ಸರ್ ಸಿಡಿಸಿದರು. ಇದರೊಂದಿಗೆ ಅವರು ದಾಖಲೆಯನ್ನು ನಿರ್ಮಿಸಿದರು. ರೋಹಿತ್ ಶರ್ಮಾ ಅವರಿಗಿಂತ ಮೊದಲು ವಿಶ್ವದ ಏಕೈಕ ಕ್ರಿಕೆಟಿಗ ಮಾತ್ರ ಈ ವಿಶೇಷ ಮೈಲಿಗಲ್ಲನ್ನು ದಾಟಿದ್ದರು.
icon

(1 / 6)

ಇಂಗ್ಲೆಂಡ್ ವಿರುದ್ಧದ 5ನೇ ಟೆಸ್ಟ್ ಪಂದ್ಯದ ಎರಡನೇ ದಿನದಾಟದಲ್ಲಿ ರೋಹಿತ್ ಶರ್ಮಾ ಶತಕ ಬಾರಿಸಿದ್ದಾರೆ. ಮೊದಲ ದಿನ 52 ರನ್ ಗಳಿಸಿ ಔಟಾಗದೆ ಉಳಿದ ಎರಡನೇ ದಿನ 103 ರನ್‌ ಗಳಿಸಿ ಔಟಾದರು. ತಮ್ಮ ಇನ್ನಿಂಗ್ಸ್‌ನಲ್ಲಿ 3 ಸಿಕ್ಸರ್ ಸಿಡಿಸಿದರು. ಇದರೊಂದಿಗೆ ಅವರು ದಾಖಲೆಯನ್ನು ನಿರ್ಮಿಸಿದರು. ರೋಹಿತ್ ಶರ್ಮಾ ಅವರಿಗಿಂತ ಮೊದಲು ವಿಶ್ವದ ಏಕೈಕ ಕ್ರಿಕೆಟಿಗ ಮಾತ್ರ ಈ ವಿಶೇಷ ಮೈಲಿಗಲ್ಲನ್ನು ದಾಟಿದ್ದರು.(Reuters)

ಧರ್ಮಶಾಲಾ ಟೆಸ್ಟ್‌ನ ಮೊದಲ ದಿನದಂದು ರೋಹಿತ್ ಶರ್ಮಾ ಎರಡು ಸಿಕ್ಸರ್‌ ಬಾರಿಸುವ ಮೂಲಕ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಇತಿಹಾಸದಲ್ಲಿ ಸಿಕ್ಸರ್‌ಗಳ ಅರ್ಧಶತಕ ಪೂರೈಸಿದರು. ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ 50 ಸಿಕ್ಸರ್‌ ಸಿಡಿಸಿದ ಮೊದಲ ಭಾರತೀಯ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಈ ದಾಖಲೆ ಮಾಡಿದ ವಿಶ್ವದ ಎರಡನೇ ಕ್ರಿಕೆಟಿಗ. ರೋಹಿತ್ ಪ್ರಸ್ತುತ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ  52 ಸಿಕ್ಸರ್‌ ಸಿಡಿಸಿದ್ದಾರೆ. ಡಬ್ಲ್ಯೂಟಿಸಿಯಲ್ಲಿ 32 ಪಂದ್ಯಗಳಲ್ಲಿ 54 ಇನ್ನಿಂಗ್ಸ್‌ಗಳಲ್ಲಿ ಭಾರತೀಯ ನಾಯಕ ಈ ಸಾಧನೆ ಮಾಡಿದ್ದಾರೆ.
icon

(2 / 6)

ಧರ್ಮಶಾಲಾ ಟೆಸ್ಟ್‌ನ ಮೊದಲ ದಿನದಂದು ರೋಹಿತ್ ಶರ್ಮಾ ಎರಡು ಸಿಕ್ಸರ್‌ ಬಾರಿಸುವ ಮೂಲಕ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಇತಿಹಾಸದಲ್ಲಿ ಸಿಕ್ಸರ್‌ಗಳ ಅರ್ಧಶತಕ ಪೂರೈಸಿದರು. ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ 50 ಸಿಕ್ಸರ್‌ ಸಿಡಿಸಿದ ಮೊದಲ ಭಾರತೀಯ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಈ ದಾಖಲೆ ಮಾಡಿದ ವಿಶ್ವದ ಎರಡನೇ ಕ್ರಿಕೆಟಿಗ. ರೋಹಿತ್ ಪ್ರಸ್ತುತ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ  52 ಸಿಕ್ಸರ್‌ ಸಿಡಿಸಿದ್ದಾರೆ. ಡಬ್ಲ್ಯೂಟಿಸಿಯಲ್ಲಿ 32 ಪಂದ್ಯಗಳಲ್ಲಿ 54 ಇನ್ನಿಂಗ್ಸ್‌ಗಳಲ್ಲಿ ಭಾರತೀಯ ನಾಯಕ ಈ ಸಾಧನೆ ಮಾಡಿದ್ದಾರೆ.

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಇತಿಹಾಸದಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ದಾಖಲೆ ಇಂಗ್ಲೆಂಡ್‌ ನಾಯಕ ಬೆನ್ ಸ್ಟೋಕ್ಸ್ ಹೆಸರಿನಲ್ಲಿದೆ. ಟೆಸ್ಟ್ ಚಾಂಪಿಯನ್ಶಿಪ್ ಅಡಿಯಲ್ಲಿ ಬ್ರಿಟಿಷ್ ನಾಯಕ 45 ಪಂದ್ಯಗಳ 82 ಇನ್ನಿಂಗ್ಸ್‌ಗಳಲ್ಲಿ ಬ್ಯಾಟಿಂಗ್ ಮಾಡಿ, ಒಟ್ಟು 78 ಸಿಕ್ಸರ್‌ ಬಾರಿಸಿದ್ದಾರೆ.
icon

(3 / 6)

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಇತಿಹಾಸದಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ದಾಖಲೆ ಇಂಗ್ಲೆಂಡ್‌ ನಾಯಕ ಬೆನ್ ಸ್ಟೋಕ್ಸ್ ಹೆಸರಿನಲ್ಲಿದೆ. ಟೆಸ್ಟ್ ಚಾಂಪಿಯನ್ಶಿಪ್ ಅಡಿಯಲ್ಲಿ ಬ್ರಿಟಿಷ್ ನಾಯಕ 45 ಪಂದ್ಯಗಳ 82 ಇನ್ನಿಂಗ್ಸ್‌ಗಳಲ್ಲಿ ಬ್ಯಾಟಿಂಗ್ ಮಾಡಿ, ಒಟ್ಟು 78 ಸಿಕ್ಸರ್‌ ಬಾರಿಸಿದ್ದಾರೆ.(AP)

ಟೆಸ್ಟ್ ಚಾಂಪಿಯನ್‌ಶಿಪ್‌ ಇತಿಹಾಸದಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳ ಪಟ್ಟಿಯಲ್ಲಿ ರಿಷಭ್ ಪಂತ್ ಮೂರನೇ ಸ್ಥಾನದಲ್ಲಿದ್ದಾರೆ. ಭಾರತದ ಸ್ಟಾರ್ ವಿಕೆಟ್ ಕೀಪರ್-ಬ್ಯಾಟರ್‌ 24 ಪಂದ್ಯಗಳ 41 ಇನ್ನಿಂಗ್ಸ್‌ಗಳಲ್ಲಿ 38 ಸಿಕ್ಸರ್‌ ಬಾರಿಸಿದ್ದಾರೆ.
icon

(4 / 6)

ಟೆಸ್ಟ್ ಚಾಂಪಿಯನ್‌ಶಿಪ್‌ ಇತಿಹಾಸದಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳ ಪಟ್ಟಿಯಲ್ಲಿ ರಿಷಭ್ ಪಂತ್ ಮೂರನೇ ಸ್ಥಾನದಲ್ಲಿದ್ದಾರೆ. ಭಾರತದ ಸ್ಟಾರ್ ವಿಕೆಟ್ ಕೀಪರ್-ಬ್ಯಾಟರ್‌ 24 ಪಂದ್ಯಗಳ 41 ಇನ್ನಿಂಗ್ಸ್‌ಗಳಲ್ಲಿ 38 ಸಿಕ್ಸರ್‌ ಬಾರಿಸಿದ್ದಾರೆ.(ANI)

ಯಶಸ್ವಿ ಜೈಸ್ವಾಲ್ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಇತಿಹಾಸದಲ್ಲಿ ವೇಗವಾಗಿ ಸಿಕ್ಸರ್ ಬಾರಿಸಿದ ಬ್ಯಾಟರ್ ಆಗಿದ್ದಾರೆ. ಅವರು 9 ಪಂದ್ಯಗಳ 16 ಇನ್ನಿಂಗ್ಸ್‌ಗಳಲ್ಲಿ 29 ಸಿಕ್ಸರ್ ಬಾರಿಸಿದ್ದಾರೆ. ಇವರು ನಾಲ್ಕನೇ ಸ್ಥಾನದಲ್ಲಿದ್ದಾರೆ.
icon

(5 / 6)

ಯಶಸ್ವಿ ಜೈಸ್ವಾಲ್ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಇತಿಹಾಸದಲ್ಲಿ ವೇಗವಾಗಿ ಸಿಕ್ಸರ್ ಬಾರಿಸಿದ ಬ್ಯಾಟರ್ ಆಗಿದ್ದಾರೆ. ಅವರು 9 ಪಂದ್ಯಗಳ 16 ಇನ್ನಿಂಗ್ಸ್‌ಗಳಲ್ಲಿ 29 ಸಿಕ್ಸರ್ ಬಾರಿಸಿದ್ದಾರೆ. ಇವರು ನಾಲ್ಕನೇ ಸ್ಥಾನದಲ್ಲಿದ್ದಾರೆ.(AFP)

ಯಶಸ್ವಿಯಂತೆ ಇಂಗ್ಲೆಂಡ್‌ ಬ್ಯಾಟರ್ ಜಾನಿ ಬೈರ್‌ಸ್ಟೋ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ 29 ಸಿಕ್ಸರ್‌ ಬಾರಿಸಿದ್ದಾರೆ. ಅವರು 35 ಪಂದ್ಯಗಳ 66 ಇನ್ನಿಂಗ್ಸ್‌ ತೆಗೆದುಕೊಂಡು ಈ ಸಾಧನೆ ಮಾಡಿದ್ದಾರೆ.
icon

(6 / 6)

ಯಶಸ್ವಿಯಂತೆ ಇಂಗ್ಲೆಂಡ್‌ ಬ್ಯಾಟರ್ ಜಾನಿ ಬೈರ್‌ಸ್ಟೋ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ 29 ಸಿಕ್ಸರ್‌ ಬಾರಿಸಿದ್ದಾರೆ. ಅವರು 35 ಪಂದ್ಯಗಳ 66 ಇನ್ನಿಂಗ್ಸ್‌ ತೆಗೆದುಕೊಂಡು ಈ ಸಾಧನೆ ಮಾಡಿದ್ದಾರೆ.(reuters)


IPL_Entry_Point

ಇತರ ಗ್ಯಾಲರಿಗಳು