ಐಪಿಎಲ್​ ಹುಟ್ಟಿದ ದಿನವೇ ಅಪರೂಪದ ದಾಖಲೆ ನಿರ್ಮಿಸಿದ ರೋಹಿತ್​ ಶರ್ಮಾ; ಧೋನಿ ನಂತರ ಈ ಸಾಧನೆ ಮಾಡಿದ 2ನೇ ಆಟಗಾರ-rohit sharma joins ms dhoni in elusive list became only the 2nd cricketer in ipl history on the 16th anniversary ipl prs ,ಫೋಟೋ ಗ್ಯಾಲರಿ ಸುದ್ದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಐಪಿಎಲ್​ ಹುಟ್ಟಿದ ದಿನವೇ ಅಪರೂಪದ ದಾಖಲೆ ನಿರ್ಮಿಸಿದ ರೋಹಿತ್​ ಶರ್ಮಾ; ಧೋನಿ ನಂತರ ಈ ಸಾಧನೆ ಮಾಡಿದ 2ನೇ ಆಟಗಾರ

ಐಪಿಎಲ್​ ಹುಟ್ಟಿದ ದಿನವೇ ಅಪರೂಪದ ದಾಖಲೆ ನಿರ್ಮಿಸಿದ ರೋಹಿತ್​ ಶರ್ಮಾ; ಧೋನಿ ನಂತರ ಈ ಸಾಧನೆ ಮಾಡಿದ 2ನೇ ಆಟಗಾರ

  • Rohit Sharma Record: 2008ರ ಏಪ್ರಿಲ್ 18ರಂದು ಐಪಿಎಲ್​ ಹುಟ್ಟಿತ್ತು. ಅದೇ ದಿನವಾದ 2024ರ ಏಪ್ರಿಲ್ 18ರಂದು ಮುಂಬೈ ಇಂಡಿಯನ್ಸ್ ಮಾಜಿ ನಾಯಕ ರೋಹಿತ್​ ಶರ್ಮಾ ಐಪಿಎಲ್​ನಲ್ಲಿ ವಿಶೇಷ ಮೈಲಿಗಲ್ಲು ತಲುಪಿದ್ದಾರೆ.

ರೋಹಿತ್ ಶರ್ಮಾ ಅವರು ಐಪಿಎಲ್​ನಲ್ಲಿ ನೂತನ ಮೈಲಿಗಲ್ಲೊಂದನ್ನು ತಲುಪಿದ್ದಾರೆ. ಪಂಜಾಬ್ ಕಿಂಗ್ಸ್ ವಿರುದ್ಧ ಕಣಕ್ಕಿಳಿಯುವ ಮೂಲಕ ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ 250 ಪಂದ್ಯಗಳನ್ನು ಆಡಿದ ಸಾಧನೆ ಮಾಡಿದ್ದಾರೆ. ಐಪಿಎಲ್​ನಲ್ಲಿ ಈ ಸಾಧನೆಗೈದ ಎರಡನೇ ಆಟಗಾರ ಎನಿಸಿದ್ದಾರೆ. ವಿಶೇಷ ಅಂದರೆ ಐಪಿಎಲ್​ ಹುಟ್ಟಿದ (2008ರ ಏಪ್ರಿಲ್ 18) ದಿನವೇ ಈ ದಾಖಲೆ ಬರೆದಿರುವುದು ವಿಶೇಷ.
icon

(1 / 7)

ಎಂಎಸ್ ಧೋನಿ ಅವರ ಎಲೈಟ್ ಕ್ಲಬ್​ಗೆ ಸೇರಿದ ರೋಹಿತ್​ ಶರ್ಮಾ ಅವರು ಗುರುವಾರ (ಏಪ್ರಿಲ್ 18) ಮುಲಾನ್ಪುರ ಕ್ರೀಡಾಂಗಣದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧದ ಕಣಕ್ಕಿಳಿಯುವ ಮೂಲಕ ವಿಶೇಷ ಮೈಲಿಗಲ್ಲು ತಲುಪಿದ್ದಾರೆ. ಮಾಹಿ ಐಪಿಎಲ್​ನಲ್ಲಿ 256 ಪಂದ್ಯಗಳನ್ನು ಆಡಿದ್ದಾರೆ.
icon

(2 / 7)

ಐಪಿಎಲ್​ನಲ್ಲಿ ಅತಿ ಹೆಚ್ಚು ಪಂದ್ಯಗಳನ್ನು ಆಡಿದವರ ಪಟ್ಟಿಯಲ್ಲಿ ಎಂಎಸ್ ಧೋನಿ ಮತ್ತು ರೋಹಿತ್ ನಂತರ ದಿನೇಶ್ ಕಾರ್ತಿಕ್ ಸ್ಥಾನ ಪಡೆದಿದ್ದಾರೆ. ಅವರು 249 ಐಪಿಎಲ್ ಪಂದ್ಯಗಳಲ್ಲಿ ಕಣಕ್ಕಿಳಿದಿದ್ದಾರೆ. ಈ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ನಾಲ್ಕನೇ ಸ್ಥಾನದಲ್ಲಿದ್ದು, 244 ಐಪಿಎಲ್ ಪಂದ್ಯಗಳಲ್ಲಿ ಕಣಕ್ಕಿಳಿದಿದ್ದಾರೆ.
icon

(3 / 7)

ಐಪಿಎಲ್​​ನಲ್ಲಿ 10 ಆಟಗಾರರು ಮಾತ್ರ 200ಕ್ಕೂ ಹೆಚ್ಚು ಪಂದ್ಯಗಳನ್ನು ಆಡಿದ್ದಾರೆ. ಅವರೆಲ್ಲರೂ ಭಾರತೀಯರೇ ಎಂಬುದು ವಿಶೇಷ. ಐಪಿಎಲ್​​ನಲ್ಲಿ ವಿದೇಶಿ ಆಟಗಾರನಾಗಿ ಅತಿ ಹೆಚ್ಚು ಪಂದ್ಯಗಳನ್ನು ಆಡಿದ ದಾಖಲೆ ಕೀರನ್ ಪೊಲಾರ್ಡ್ ಹೆಸರಿನಲ್ಲಿದೆ. ಅವರು 189 ಐಪಿಎಲ್ ಪಂದ್ಯಗಳನ್ನು ಆಡಿದ್ದಾರೆ. ದಕ್ಷಿಣ ಆಫ್ರಿಕಾದ ಎಬಿ ಡಿವಿಲಿಯರ್ಸ್ 184 ಐಪಿಎಲ್ ಪಂದ್ಯಗಳನ್ನು ಆಡಿದ್ದಾರೆ.
icon

(4 / 7)

ಪಂಜಾಬ್ ಕಿಂಗ್ಸ್ ವಿರುದ್ಧ 36 ರನ್ ಬಾರಿಸಿದ ರೋಹಿತ್​ ಶರ್ಮಾ ಒಟ್ಟಾರೆ 250 ಪಂದ್ಯಗಳಲ್ಲಿ 6508 ರನ್ ಪೂರ್ಣಗೊಳಿಸಿದ್ದಾರೆ. ಐಪಿಎಲ್ ಇತಿಹಾಸದಲ್ಲಿ ಶತಕ ಮತ್ತು ಹ್ಯಾಟ್ರಿಕ್ ಗಳಿಸಿದ ಅಪರೂಪದ ಆಟಗಾರರಲ್ಲಿ ರೋಹಿತ್ ಕೂಡ ಒಬ್ಬರು. ಶೇನ್ ವ್ಯಾಟ್ಸನ್ ಮತ್ತು ಸುನಿಲ್ ನರೈನ್ ಕೂಡ ಈ ಸಾಧನೆ ಮಾಡಿದ್ದಾರೆ.
icon

(5 / 7)

ವಿರಾಟ್ ಕೊಹ್ಲಿ, ಶಿಖರ್ ಧವನ್ ಮತ್ತು ಡೇವಿಡ್ ವಾರ್ನರ್ ನಂತರ ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿದ 4ನೇ ಆಟಗಾರ ರೋಹಿತ್. ಮುಂಬೈಗೆ ಐದು ಟ್ರೋಪಿ ಗೆದ್ದುಕೊಟ್ಟಿರುವ ರೋಹಿತ್​, ಎಂಐ ತಂಡಕ್ಕೆ ಬರುವುದಕ್ಕೂ ಮುನ್ನ ಡೆಕ್ಕನ್ ಚಾರ್ಜರ್ಸ್​ ಪರ ಐಪಿಎಲ್ ಟ್ರೋಫಿ ಗೆದ್ದಿದ್ದರು.
icon

(6 / 7)

ಕ್ಷಣಕ್ಷಣದ ಕ್ರೀಡಾ ಅಪ್ಡೇಟ್ಸ್​ಗಾಗಿ ಹಿಂದೂಸ್ತಾನ್ ಟೈಮ್ಸ್ ಕನ್ನಡ ಓದಿ.
icon

(7 / 7)

ಇತರ ಗ್ಯಾಲರಿಗಳು