ಮುಂಬೈ ರಣಜಿ ತಂಡದೊಂದಿಗೆ ಅಭ್ಯಾಸ ಆರಂಭಿಸಿದ ರೋಹಿತ್ ಶರ್ಮಾ; ಅಜಿಂಕ್ಯ ರಹಾನೆ ಜೊತೆ ಬ್ಯಾಟಿಂಗ್
- ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ, ಮುಂಬೈ ರಣಜಿ ಟ್ರೋಫಿ ತಂಡದೊಂದಿಗೆ ಅಭ್ಯಾಸ ನಡೆಸಿದ್ದಾರೆ. ಜನವರಿ 14ರ ಮಂಗಳವಾರ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಮುಂಬೈ ತಂಡದೊಂದಿಗೆ ತರಬೇತಿಗೆ ಹಿಟ್‌ಮ್ಯಾನ್ ಹಾಜರಾಗಿದ್ದಾರೆ. (file photos)
- ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ, ಮುಂಬೈ ರಣಜಿ ಟ್ರೋಫಿ ತಂಡದೊಂದಿಗೆ ಅಭ್ಯಾಸ ನಡೆಸಿದ್ದಾರೆ. ಜನವರಿ 14ರ ಮಂಗಳವಾರ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಮುಂಬೈ ತಂಡದೊಂದಿಗೆ ತರಬೇತಿಗೆ ಹಿಟ್‌ಮ್ಯಾನ್ ಹಾಜರಾಗಿದ್ದಾರೆ. (file photos)
(1 / 11)
ನಿರಂತರವಾಗಿ ಕೆಲವು ಪಂದ್ಯಗಳಿಂದ ಕಳಪೆ ಪ್ರದರ್ಶನ ನೀಡಿ ಟೀಕೆಗೆ ಗುರಿಯಾಗಿರುವ ಅವರು, ಇದೀಗ ದೇಶಿಯ ಕ್ರಿಕೆಟ್ ತಂಡದೊಂದಿಗೆ ಅಭ್ಯಾಸಕ್ಕೆ ಹಾಜರಾಗಿ ಗಮನ ಸೆಳೆದಿದ್ದಾರೆ. ದೇಶೀಯ ಕ್ರಿಕೆಟ್ ಅನ್ನು ನಿರ್ಲಕ್ಷಿಸಿದ್ದಕ್ಕಾಗಿ ಭಾರತ ನಾಯಕನಿಗೆ ಟೀಕೆಗಳು ವ್ಯಕ್ತವಾಗಿದ್ದವು.
(HT_PRINT)(2 / 11)
2024ರ ಅಕ್ಟೋಬರ್‌ನಿಂದ ಟೆಸ್ಟ್ ಕ್ರಿಕೆಟ್‌ನಲ್ಲಿ ರೋಹಿತ್ ಶರ್ಮಾ ಕಳಪೆ ಪ್ರದರ್ಶನ ನೀಡುತ್ತಿದ್ದಾರೆ. ಆಡಿರುವ ಎಂಟು ಪಂದ್ಯಗಳಲ್ಲಿ ಆರರಲ್ಲಿ ಸೋಲು ಕಂಡಿದ್ದಾರೆ. ನಾಯಕನಾಗಿ ಮಾತ್ರವಲ್ಲದೆ ಆಟಗಾರನಾಗಿಯೂ ವಿಫಲರಾಗಿದ್ದಾರೆ.
(HT_PRINT)(3 / 11)
ಮಂಗಳವಾರ ಬೆಳಗ್ಗೆ ವಾಂಖೆಡೆ ಕ್ರೀಡಾಂಗಣಕ್ಕೆ ಆಗಮಿಸಿದ ರೋಹಿತ್ ಅವರ ದೃಶ್ಯಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ.
(HT_PRINT)(4 / 11)
ಭಾರತದ ಅನುಭವಿ ಬ್ಯಾಟರ್ ಅಜಿಂಕ್ಯ ರಹಾನೆ ಅವರೊಂದಿಗೆ ರೋಹಿತ್ ಬ್ಯಾಟಿಂಗ್ ಮಾಡಿದ್ದಾರೆ. ತರಬೇತಿ ಅವಧಿಯಲ್ಲಿ ಬೆವರು ಹರಿಸುತ್ತಿರುವುದು ಕಂಡುಬಂದಿದೆ ಎಂದು ಸುದ್ದಿಸಂಸ್ಥೆ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
(HT_PRINT)(5 / 11)
37 ವರ್ಷದ ಆಟಗಾರ, ರಣಜಿ ತಂಡದೊಂದಿಗೆ ಅಭ್ಯಾಸದಲ್ಲಿ ಭಾಗವಹಿಸುವ ಬಗ್ಗೆ ಮುಂಬೈ ತಂಡದ ಮ್ಯಾನೇಜ್‌ಮೆಂಟ್‌ಗೆ ಮಾಹಿತಿ ನೀಡಿದ್ದಾರೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿತ್ತು.
(AFP)(6 / 11)
ಮುಂದೆ ಎಂಸಿಎ ಕ್ರಿಕೆಟ್ ಮೈದಾನದಲ್ಲಿ ಜಮ್ಮು ಮತ್ತು ಕಾಶ್ಮೀರ ವಿರುದ್ಧದ ಮುಂಬೈ ತಂಡದ ಮುಂಬರುವ ರಣಜಿ ಟ್ರೋಫಿ ಪಂದ್ಯದಲ್ಲಿ ರೋಹಿತ್ ಆಡುವ ಬಗ್ಗೆ ಇನ್ನೂ ಸ್ಪಷ್ಟ ಮಾಹಿತಿ ಸಿಕ್ಕಿಲ್ಲ.
(AFP)(7 / 11)
“ರೋಹಿತ್ ಶರ್ಮಾ ಇಂದು (ಮಂಗಳವಾರ) ರಣಜಿ ಟ್ರೋಫಿ ತಂಡದೊಂದಿಗೆ ತರಬೇತಿಗೆ ಬರಲಿದ್ದಾರೆ. ಅಜಿಂಕ್ಯ ರಹಾನೆ, ಶಾರ್ದೂಲ್ ಠಾಕೂರ್ ಮತ್ತು ಶ್ರೇಯಸ್ ಅಯ್ಯರ್ ಕೂಡ ತಂಡದಲ್ಲಿ ಇರಲಿದ್ದಾರೆ,” ಎಂದು ಎಂಸಿಎ ಮೂಲಗಳು ಹಿಂದೂಸ್ತಾನ್ ಟೈಮ್ಸ್‌ಗೆ ತಿಳಿಸಿವೆ.
(PTI)(8 / 11)
ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತ ಟೆಸ್ಟ್ ತಂಡವು ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ವೈಟ್‌ವಾಶ್ ಮುಖಭಂಗಕ್ಕೆ ಒಳಗಾಗಿತ್ತು. ಕಿವೀಸ್ ತಂಡ 3-1 ಅಂತರದಲ್ಲಿ ಸರಣಿ ಗೆದ್ದು ಬೀಗಿತ್ತು.
(PTI)(9 / 11)
ಭಾರತದ ನಾಯಕ ಆಸ್ಟ್ರೇಲಿಯಾದಲ್ಲಿ ನಡೆದ ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿಯಲ್ಲೂ ಮಿಂಚಲಿಲ್ಲ. ಆಡಿದ ಐದು ಇನ್ನಿಂಗ್ಸ್‌ಗಳಲ್ಲಿ 6.2ರ ಸರಾಸರಿಯಲ್ಲಿ ಕೇವಲ 31 ರನ್ ಗಳಿಸಿದರು.
(AFP)(10 / 11)
ಕಳಪೆ ಫಾರ್ಮ್‌ನಿಂದಾಗಿ ಸಿಡ್ನಿಯಲ್ಲಿ ನಡೆದ ಸರಣಿಯ ನಿರ್ಣಾಯಕ ಪಂದ್ಯದಿಂದ ಹೊರಗುಳಿದರು. ಸೆಪ್ಟೆಂಬರ್ ತಿಂಗಳಿನಿಂದ ಅವರು ಆಡಿದ ಎಂಟು ಪಂದ್ಯಗಳಲ್ಲಿ 10.93ರ ಸರಾಸರಿಯಲ್ಲಿ ಕೇವಲ 164 ರನ್ ಮಾತ್ರ ಗಳಿಸಿದ್ದಾರೆ.
(AFP File)ಇತರ ಗ್ಯಾಲರಿಗಳು