Rohit sharma: ಟೆಸ್ಟ್ ಕ್ರಿಕೆಟ್ನಲ್ಲಿ ಈ ದಾಖಲೆ ಬರೆಯಲು ರೋಹಿತ್ ಶರ್ಮಾಗೆ ಬೇಕು ಕೇವಲ 22 ರನ್
- India vs England 4th Test : ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಪಂದ್ಯದಲ್ಲಿ ಕೇವಲ 22 ರನ್ ಕಲೆ ಹಾಕಿದರೆ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ವಿಶೇಷ ಸಾಧನೆ ಮಾಡಲಿದ್ದಾರೆ.
- India vs England 4th Test : ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಪಂದ್ಯದಲ್ಲಿ ಕೇವಲ 22 ರನ್ ಕಲೆ ಹಾಕಿದರೆ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ವಿಶೇಷ ಸಾಧನೆ ಮಾಡಲಿದ್ದಾರೆ.
(1 / 5)
ಇಂಗ್ಲೆಂಡ್ ವಿರುದ್ಧದ ರಾಂಚಿ ಟೆಸ್ಟ್‌ನಲ್ಲಿ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ವಿಶೇಷ ಸಾಧನೆ ಬರೆಯಲು ಸಜ್ಜಾಗಿದ್ದಾರೆ. ಅದಕ್ಕಾಗಿ ಕೇವಲ 22 ರನ್ ಮಾತ್ರ ಬೇಕಿದೆ. ಆ ಮೂಲಕ 17ನೇ ಭಾರತೀಯ ಕ್ರಿಕೆಟಿಗನಾಗಿ ಈ ಅದ್ಭುತ ಮೈಲಿಗಲ್ಲನ್ನು ತಲುಪುತ್ತಾರೆ.(PTI)
(2 / 5)
ರೋಹಿತ್ ರಾಂಚಿಯಲ್ಲಿ ಎರಡು ಇನ್ನಿಂಗ್ಸ್‌ಗಳಲ್ಲಿ ಬ್ಯಾಟಿಂಗ್ ಮಾಡಿ ಕೇವಲ 22 ರನ್ ಗಳಿಸಿದರೆ ಟೆಸ್ಟ್ ವೃತ್ತಿಜೀವನದಲ್ಲಿ 4000 ರನ್‌ಗಳ ಮೈಲಿಗಲ್ಲನ್ನು ತಲುಪುತ್ತಾರೆ. ಹಾಗಾದಲ್ಲಿ ಟೆಸ್ಟ್‌ನಲ್ಲಿ ಭಾರತದ 17ನೇ ಕ್ರಿಕೆಟಿಗನಾಗಿ ರೋಹಿತ್ ಈ ಸಾಧನೆ ಮಾಡಲಿದ್ದಾರೆ.
(3 / 5)
ಪ್ರಸ್ತುತ, ರೋಹಿತ್ ಶರ್ಮಾ 57 ಟೆಸ್ಟ್‌ಗಳ 98 ಇನ್ನಿಂಗ್ಸ್‌ಗಳಲ್ಲಿ 3978 ರನ್ ಕಲೆ ಹಾಕಿದ್ದಾರೆ. ಅವರು ಟೆಸ್ಟ್‌ನಲ್ಲಿ 11 ಶತಕ ಮತ್ತು 16 ಅರ್ಧ ಶತಕಗಳನ್ನು ಗಳಿಸಿದ್ದಾರೆ. ಗರಿಷ್ಠ ವೈಯಕ್ತಿಕ ಇನ್ನಿಂಗ್ಸ್ 212 ರನ್. ಟೆಸ್ಟ್‌ನಲ್ಲಿ ಅವರ ಬ್ಯಾಟಿಂಗ್ ಸರಾಸರಿ 45.20 ಆಗಿದೆ.
(4 / 5)
ಇದುವರೆಗೆ ಭಾರತದ ಪರ ಟೆಸ್ಟ್‌ನಲ್ಲಿ 4000 ರನ್‌ಗಳ ಮೈಲುಗಲ್ಲನ್ನು ತಲುಪಿರುವ ಭಾರತೀಯ ಕ್ರಿಕೆಟಿಗರ ಪಟ್ಟಿ ಇಲ್ಲಿದೆ. ಸಚಿನ್ (15921), ದ್ರಾವಿಡ್ (13265), ಗವಾಸ್ಕರ್ (10122), ಕೊಹ್ಲಿ (8848), ಲಕ್ಷ್ಮಣ್ (8781), ಸೆಹ್ವಾಗ್ (8503), ಸೌರವ್ ( 7212), ಪೂಜಾರ (7195), ವೆಂಗ್ಸರ್ಕರ್ (6868), ಅಜರುದ್ದೀನ್ (6215), ವಿಶ್ವನಾಥ್ (6080), ಕಪಿಲ್ ದೇವ್ (5248), ರಹಾನೆ (5077), ಧೋನಿ (4876), ಅಮರನಾಥ್ (4378) ಮತ್ತು ಗಂಭೀರ್ (4154).
ಇತರ ಗ್ಯಾಲರಿಗಳು