ರನ್ಚೇಸ್ನಲ್ಲಿ ಅರ್ಧಶತಕ, ನಾಯಕನಾಗಿ ಮತ್ತೊಂದು ದಾಖಲೆ; ಪಟೌಡಿ, ಗಂಗೂಲಿ ಎಲೈಟ್ ಕ್ಲಬ್ ಸೇರಿದ ರೋಹಿತ್ ಶರ್ಮಾ
- Rohit Sharma Record: ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್ ಎರಡನೇ ಇನ್ನಿಂಗ್ಸ್‌ನಲ್ಲಿ ಅರ್ಧಶತಕ ಸಿಡಿಸಿದ ಭಾರತ ತಂಡದ ನಾಯಕ ರೋಹಿತ್ ಶರ್ಮಾ ವಿಶೇಷ ದಾಖಲೆಯೊಂದನ್ನು ತನ್ನ ಹೆಸರಿಗೆ ಬರೆದುಕೊಂಡಿದ್ದಾರೆ.
- Rohit Sharma Record: ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್ ಎರಡನೇ ಇನ್ನಿಂಗ್ಸ್‌ನಲ್ಲಿ ಅರ್ಧಶತಕ ಸಿಡಿಸಿದ ಭಾರತ ತಂಡದ ನಾಯಕ ರೋಹಿತ್ ಶರ್ಮಾ ವಿಶೇಷ ದಾಖಲೆಯೊಂದನ್ನು ತನ್ನ ಹೆಸರಿಗೆ ಬರೆದುಕೊಂಡಿದ್ದಾರೆ.
(1 / 8)
ಇಂಗ್ಲೆಂಡ್ ವಿರುದ್ಧದ ಆರಂಭಿಕ ಟೆಸ್ಟ್ ಪಂದ್ಯದಲ್ಲಿ ಸೋಲು ಕಂಡಿದ್ದ ಭಾರತ, ವೈಜಾಗ್ ಟೆಸ್ಟ್ ಗೆದ್ದು ತಿರುಗೇಟು ನೀಡಿತ್ತು. ಬಳಿಕ ರಾಜ್ಕೋಟ್ ಮತ್ತು ರಾಂಚಿ ಕದನದಲ್ಲೂ ಗೆದ್ದು ಸರಣಿಯನ್ನು 3-1ರಲ್ಲಿ ಕೈವಶ ಮಾಡಿಕೊಂಡಿದೆ. ಇದರೊಂದಿಗೆ ಭಾರತದ ನೆಲದಲ್ಲಿ ಮತ್ತೊಂದು ಸರಣಿ ಗೆಲ್ಲುವ ಕನಸು ಕನಸಾಗೇ ಉಳಿದಿದೆ.
(2 / 8)
ಈ ಸರಣಿಯನ್ನು ವಶಪಡಿಸಿಕೊಳ್ಳುವುದರ ಜೊತೆಗೆ ರೋಹಿತ್ ಶರ್ಮಾ ದಾಖಲೆಯೊಂದನ್ನು ತನ್ನದಾಗಿಸಿಕೊಂಡಿದ್ದಾರೆ. ಈವರೆಗೂ ನಾಯಕನಾಗಿ ಒಂದೇ ಒಂದು ಸರಣಿಯನ್ನು ಸೋಲದ ಕ್ಯಾಪ್ಟನ್ ಎಂಬ ದಾಖಲೆಯನ್ನು ಸಹ ಉಳಿಸಿಕೊಂಡಿದ್ದಾರೆ. 2022ರಲ್ಲಿ ಟೆಸ್ಟ್ ನಾಯಕನಾದ ರೋಹಿತ್ ಈವರೆಗೂ ಒಂದು ಸರಣಿ ಸೋತಿಲ್ಲ.
(3 / 8)
ಹಿಟ್ಮ್ಯಾನ್ ಈವರೆಗೂ 5 ಸರಣಿಗಳಿಗೆ ನಾಯಕನಾಗಿದ್ದಾರೆ. ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯು ನಾಯಕ ರೋಹಿತ್ ಅವರ ಮೊದಲ ಟೆಸ್ಟ್ ಆಗಿತ್ತು. ಭಾರತ 2-0 ಅಂತರದಲ್ಲಿ ಸರಣಿ ವಶಪಡಿಸಿಕೊಂಡಿತ್ತು. 2023 ರಲ್ಲಿ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ 4 ಪಂದ್ಯಗಳ ಸರಣಿಯಲ್ಲಿ ಭಾರತ 2-1ರಿಂದ ಆಸ್ಟ್ರೇಲಿಯಾ ತಂಡವನ್ನು ಸೋಲಿಸಿತ್ತು.
(4 / 8)
ಆ ಬಳಿಕ ವೆಸ್ಟ್ ಇಂಡೀಸ್ ಪ್ರವಾಸ ಕೈಗೊಂಡಿದ್ದ ಟೀಂ ಇಂಡಿಯಾ 1-0 ಅಂತರದಲ್ಲಿ ಸರಣಿ ವಶಪಡಿಸಿಕೊಂಡಿತ್ತು. 2023 ದಕ್ಷಿಣ ಆಫ್ರಿಕಾದ ಕೊನೆಯಲ್ಲಿ ಟೆಸ್ಟ್ ಸರಣಿ ಡ್ರಾನಲ್ಲಿ ಅಂತ್ಯಗೊಂಡಿತು. ಏತನ್ಮಧ್ಯೆ, ಇಂಗ್ಲೆಂಡ್ ವಿರುದ್ಧದ ಸರಣಿಯನ್ನು ಭಾರತ ಒಂದು ಪಂದ್ಯ ಬಾಕಿ ಇರುವಂತೆಯೇ ಗೆದ್ದುಕೊಂಡಿತು.
(5 / 8)
ನಾಯಕನಾಗಿ ಮತ್ತೊಂದು ದಾಖಲೆಯನ್ನೂ ತನ್ನ ಹೆಸರಿಗೆ ಬರೆದುಕೊಂಡಿದ್ದಾರೆ. ರೋಹಿತ್ ಕ್ಯಾಪ್ಟನ್ ಆಗಿ ಮತ್ತು ಬ್ಯಾಟ್ಸ್‌ಮನ್ ಆಗಿ ದೊಡ್ಡ ಮೈಲಿಗಲ್ಲು ಮುಟ್ಟಿದ್ದಾರೆ. ಅವರು ಮನ್ಸೂರ್ ಅಲಿ ಖಾನ್ ಪಟೌಡಿ, ಸೌರವ್ ಗಂಗೂಲಿ ಅವರ ಎಲೈಟ್ ಕ್ಲಬ್‌ಗೆ ಸೇರಿದ್ದಾರೆ.
(6 / 8)
ನಾಲ್ಕನೇ ಟೆಸ್ಟ್‌ನ 4ನೇ ಇನ್ನಿಂಗ್ಸ್‌ನಲ್ಲಿ ಯಶಸ್ವಿ ರನ್ ಚೇಸ್ನಲ್ಲಿ ಅರ್ಧಶತಕ ಗಳಿಸಿದ ರೋಹಿತ್, 81 ಎಸೆತಗಳಲ್ಲಿ 5 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ 55 ರನ್ ಕಲೆ ಹಾಕಿದರು. ಅದೇ ಸಮಯದಲ್ಲಿ ಅ ಪಟೌಡಿ ಮತ್ತು ಸೌರವ್ ಗಂಗೂಲಿ ಕ್ಲಬ್‌ಗೆ ಸೇರಿದರು.
(REUTERS)(7 / 8)
ಇದಕ್ಕೂ ಮುನ್ನ 1964ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್‌ನ 4ನೇ ಇನ್ನಿಂಗ್ಸ್‌ನಲ್ಲಿ ಪಟೌಡಿ 53 ರನ್ ಗಳಿಸಿದ್ದರು. ಆಗ ಅವರು ಭಾರತ ತಂಡದ ನಾಯಕರಾಗಿದ್ದರು. 2000ರಲ್ಲಿ ನಾಯಕನಾಗಿದ್ದ ಗಂಗೂಲಿ, ಜಿಂಬಾಬ್ವೆ ಮತ್ತು 2001ರಲ್ಲಿ ಶ್ರೀಲಂಕಾ ವಿರುದ್ಧ ಕ್ರಮವಾಗಿ ಅಜೇಯ 65 ಮತ್ತು ಅಜೇಯ 98 ರನ್ ಗಳಿಸಿದರು. ಇದಾದ ಬಳಿಕ 2024ರಲ್ಲಿ ರೋಹಿತ್ ಕೂಡ ಇದೇ ಸಾಧನೆ ಮಾಡಿದ್ದಾರೆ.
(AP)ಇತರ ಗ್ಯಾಲರಿಗಳು





