ರಾಜ್‌ಕೋಟ್‌ನಲ್ಲಿ 73 ವರ್ಷಗಳ ಹಳೆಯ ದಾಖಲೆಯನ್ನು ಮುರಿದ ರೋಹಿತ್ ಶರ್ಮಾ; ಹಲವು ದಾಖಲೆಗಳ ಪಟ್ಟಿ ಇಲ್ಲಿದೆ
- Rohit Sharma: ರಾಜ್‌ಕೋಟ್‌ನ ನಿರಂಜನ್ ಶಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ 11ನೇ ಟೆಸ್ಟ್ ಶತಕ ಸಿಡಿಸಿದ ಭಾರತ ತಂಡದ ನಾಯಕ ರೋಹಿತ್ ಶರ್ಮಾ, ಸೌರವ್ ಗಂಗೂಲಿ ದಾಖಲೆ ಮುರಿದಿದ್ದಾರೆ.
- Rohit Sharma: ರಾಜ್‌ಕೋಟ್‌ನ ನಿರಂಜನ್ ಶಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ 11ನೇ ಟೆಸ್ಟ್ ಶತಕ ಸಿಡಿಸಿದ ಭಾರತ ತಂಡದ ನಾಯಕ ರೋಹಿತ್ ಶರ್ಮಾ, ಸೌರವ್ ಗಂಗೂಲಿ ದಾಖಲೆ ಮುರಿದಿದ್ದಾರೆ.
(1 / 9)
ಇಂಗ್ಲೆಂಡ್ ಎದುರಿನ ಮೂರನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಶತಕ ಸಿಡಿಸಿ ದಾಖಲೆ ಬರೆದಿದ್ದಾರೆ. 196 ಎಸೆತಗಳಲ್ಲಿ 14 ಬೌಂಡರಿ, 3 ಸಿಕ್ಸರ್ ಸಹಿತ 131 ರನ್ ಗಳಿಸಿ ಮಾರ್ಕ್ವುಡ್ ಬೌಲಿಂಗ್ನಲ್ಲಿ ಔಟಾದರು.
(2 / 9)
ರವೀಂದ್ರ ಜಡೇಜಾ ಜೊತೆಗೆ 204 ರನ್ಗಳ ಜೊತೆಯಾಟವಾಡಿದ ರೋಹಿತ್, ಸೌರವ್ ಗಂಗೂಲಿ ದಾಖಲೆಯನ್ನೂ ಮುರಿದಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್ನ ಮೂರು ಫಾರ್ಮೆಟ್ನಲ್ಲಿ ಭಾರತದ ಪರ ಅತ್ಯಧಿಕ ರನ್ ಗಳಿಸಿದ ನಾಲ್ಕನೇ ಆಟಗಾರ ಎನಿಸಿದ್ದಾರೆ.
(3 / 9)
ಐದರಿಂದ ನಾಲ್ಕನೇ ಸ್ಥಾನಕ್ಕೆ ಜಿಗಿತ ಕಂಡಿರುವ ರೋಹಿತ್ , ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾರತದ ನಾಲ್ಕನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾದರು. ಸೌರವ್ 18,575 ರನ್ ಗಳಿಸಿದ್ದರೆ, ರೋಹಿತ್ 𝟭𝟴𝟱𝟳𝟳* ರನ್ಗಳಿಸಿದ್ದಾರೆ. ಸಚಿನ್ ತೆಂಡೂಲ್ಕರ್ 34357, ವಿರಾಟ್ ಕೊಹ್ಲಿ 26733, ರಾಹುಲ್ ದ್ರಾವಿಡ್ 24208 ರನ್ ಕಲೆ ಹಾಕಿದ್ದಾರೆ.
(4 / 9)
ಟೆಸ್ಟ್ನಲ್ಲಿ ಶತಕ ಸಿಡಿಸಿದ ಭಾರತದ ಹಿರಿಯ ನಾಯಕ ಎಂಬ ದಾಖಲೆಯು ಅವರ ಹೆಸರಿಗೆ ದಾಖಲಾಗಿದೆ. ಸದ್ಯ ರೋಹಿತ್ಗೆ 36 ವರ್ಷ 291 ದಿನಗಳಾಗಿವೆ. ಇದಕ್ಕೂ ಮುನ್ನ ಈ ದಾಖಲೆ ವಿಜಯ್ ಹಜಾರೆ ಹೆಸರಿನಲ್ಲಿತ್ತು. ಅವರು 1951ರಲ್ಲಿ ಇಂಗ್ಲೆಂಡ್ ವಿರುದ್ಧ 36 ವರ್ಷ ಮತ್ತು 278 ದಿನಗಳಲ್ಲಿ ಶತಕ ಬಾರಿಸಿದರು. ಇದೀಗ 73 ವರ್ಷಗಳ ದಾಖಲೆ ಮುರಿದಿದ್ದಾರೆ. ಇದೇ ವೇಳೆ ಇಂಗ್ಲೆಂಡ್ ವಿರುದ್ಧ 1000 ಟೆಸ್ಟ್ ರನ್ ಪೂರೈಸಿದ್ದಾರೆ. 23 ಇನ್ನಿಂಗ್ಸ್‌ಗಳಲ್ಲಿ 3 ಶತಕ ಮತ್ತು 4 ಅರ್ಧಶತಕ ಚಚ್ಚಿದ್ದಾರೆ.
(5 / 9)
2019 ರಿಂದ ಮೂರು ಆವೃತ್ತಿಗಳಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಆರಂಭಿಕ ಆಟಗಾರರ ಪೈಕಿ ಅತಿ ಹೆಚ್ಚು ಶತಕಗಳನ್ನು ಗಳಿಸಿದ ದಾಖಲೆಯನ್ನು ರೋಹಿತ್ ಹೊಂದಿದ್ದಾರೆ. 50 ಇನ್ನಿಂಗ್ಸ್‌ಗಳಲ್ಲಿ 8 ಶತಕ ಮತ್ತು 6 ಅರ್ಧಶತಕ ಗಳಿಸಿದ್ದಾರೆ.
(6 / 9)
ಇದು ಆರಂಭಿಕರಾಗಿ ರೋಹಿತ್ ಅವರ 42ನೇ ಅಂತಾರಾಷ್ಟ್ರೀಯ ಶತಕವಾಗಿದೆ. ಓಪನರ್ ಆಗಿ ಅಷ್ಟೇ ಸೆಂಚುರಿ ಸಿಡಿಸಿರುವ ಕ್ರಿಸ್ಗೇಲ್ ದಾಖಲೆ ಸರಿಗಟ್ಟಿದ್ದಾರೆ. ಡೇವಿಡ್ ವಾರ್ನರ್ (49), ಸಚಿನ್ ತೆಂಡೂಲ್ಕರ್ (45) ಆರಂಭಿಕರಾಗಿ ರೋಹಿತ್‌ಗಿಂತ ಹೆಚ್ಚು ಅಂತರರಾಷ್ಟ್ರೀಯ ಶತಕ ಗಳಿಸಿದ್ದಾರೆ.
(7 / 9)
ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ಭಾರತೀಯ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ರೋಹಿತ್ ಶರ್ಮಾ, ಎಂಎಸ್ ಧೋನಿ ಅವರನ್ನು ಹಿಂದಿಕ್ಕಿ ಎರಡನೇ ಸ್ಥಾನ ಗಳಿಸಿದ್ದಾರೆ. ಸೆಹ್ವಾಗ್ 91 ಸಿಕ್ಸರ್ ಬಾರಿಸಿ ಅಗ್ರಸ್ಥಾನದಲ್ಲಿದ್ದಾರೆ. 78 ಸಿಕ್ಸರ್ ಸಿಡಿಸಿರುವ ಧೋನಿ, 3ನೇ ಸ್ಥಾನಕ್ಕೆ ಕುಸಿದಿದ್ದಾರೆ. ರೋಹಿತ್ ಸಿಕ್ಸರ್‌ಗಳ ಸಂಖ್ಯೆ 80 ಆಗಿದೆ.(AFP)
(8 / 9)
ಅಲ್ಲದೆ, ನಾಯಕನಾಗಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ವಿಷಯವಲ್ಲೂ ರೋಹಿತ್, ಧೋನಿಯನ್ನು ಹಿಂದಿಕ್ಕಿದ್ದಾರೆ. ಧೋನಿ ಅವರ ಸಿಕ್ಸರ್‌ಗಳ ಸಂಖ್ಯೆ 211. ಈಗ ನಾಯಕ ರೋಹಿತ್ ಸಿಕ್ಸರ್‌ಗಳ ಸಂಖ್ಯೆ 212. ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಇಯಾನ್ ಮಾರ್ಗನ್ 233 ಸಿಕ್ಸರ್ ಸಿಡಿಸಿದ್ದಾರೆ.(AFP)
ಇತರ ಗ್ಯಾಲರಿಗಳು